Travelling Tips: ಪ್ರವಾಸದ ವೇಳೆ ಪಂಚಾಮೃತದಂತೆ ಕೆಲಸ ಮಾಡುವ ಆಹಾರವಿದು..

ಪ್ರವಾಸಕ್ಕೆ ಹೋಗುವ ವೇಳೆ ಕೆಲವೊಂದು ವಸ್ತುಗಳು ಬ್ಯಾಗ್ ನಲ್ಲಿರಬೇಕಾಗುತ್ತೆ. ಅದ್ರಲ್ಲಿ ನೀರು, ಆಹಾರ ಕೂಡ ಸೇರಿದೆ. ಹಸಿವಾದ ತಕ್ಷಣ ರೆಸ್ಟೋರೆಂಟ್ ಸಿಗುತ್ತೆ ಎನ್ನಲು ಸಾಧ್ಯವಿಲ್ಲ. ಸಾರ್ವಜನಿಕ ವಾಹನದಲ್ಲಿ ಸಂಚರಿಸುವಾಗ ಬೇಕಾದ ಸ್ಥಳದಲ್ಲಿ ವಾಹನ ನಿಲ್ಲುವುದಿಲ್ಲ. ಹಾಗಾಗಿ, ಬಹಳ ಸಮಯ ಹಾಳಾಗದೆ ಇರುವ ಆಹಾರವನ್ನು ಪ್ಯಾಕ್ ಮಾಡ್ಲೇಬೇಕು. 
 

Ultimate Guide To Packing Healthy Travel Food

ಕೊರೊನಾ (Corona ) ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಕೊರೊನಾಗಿಂತ ಮೊದಲು ಬೀದಿ ಬದಿಯಿಂದ ಹಿಡಿದು ಎಲ್ಲ ರೆಸ್ಟೋರೆಂಟ್ (Restaurant) ಗಳಲ್ಲಿ ಆಹಾರ (Food)ಸೇವನೆ ಮಾಡ್ತಿದ್ದ ಜನರು ಈಗ ಆರೋಗ್ಯ (Health) ದ ಬಗ್ಗೆ ಕಾಳಜಿ ವಹಿಸಲು ಶುರು ಮಾಡಿದ್ದಾರೆ. ಅನಿವಾರ್ಯವೆನಿಸುವ ಸಂದರ್ಭವನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಮನೆ ಆಹಾರವನ್ನೇ ಸೇವಿಸಲು ಆದ್ಯತೆ ನೀಡ್ತಿದ್ದಾರೆ. ಆರೋಗ್ಯ, ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುವ ಜನರು ಪ್ರಯಾಣ (Travel)ದ ವೇಳೆ ಅಗತ್ಯವಿರುವ ಆಹಾರವನ್ನು ಪ್ಯಾಕ್ ಮಾಡಲು ಮರೆಯುವುದಿಲ್ಲ.

ಪ್ರಯಾಣದ ವೇಳೆ ಆಹಾರ ಹಾಳಾಗುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ಪ್ಯಾಕಿಂಗ್ ಸರಿಯಾಗದೆ ಹೋದ್ರೆ ಎಲ್ಲ ಆಹಾರ ಚೆಲ್ಲುವುದಿದೆ. ಹಾಗಾಗಿ ಪ್ರವಾಸಕ್ಕೆ ಯೋಗ್ಯವಾದ, ಆರೋಗ್ಯಕರವಾದ, ತುಂಬಾ ಸಮಯ ಹೊಟ್ಟೆ ತಂಪಾಗಿರುವ ಆಹಾರ ಸೇವನೆ ಆಡಬೇಕು. ಮಕ್ಕಳ ಜೊತೆ ಪ್ರಯಾಣ ಮಾಡ್ತಿದ್ದರೆ ಆಹಾರ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಪ್ರಯಾಣದ ವೇಳೆ ಯಾವ ಆಹಾರವನ್ನು ಪ್ಯಾಕ್ ಮಾಡ್ಬೇಕೆಂಬುದನ್ನು ನಾವಿಂದು ಹೇಳ್ತೆವೆ. 

ಅವಲಕ್ಕಿ : ಪ್ರಯಾಣದ ವೇಳೆ ಒಗ್ಗರಣೆ ಹಾಕಿದ ಅವಲಕ್ಕಿ ಬೆಸ್ಟ್. ಅವಲಕ್ಕಿಗೆ ಕಡಲೆಕಾಯಿ, ಉಪ್ಪು, ಸ್ವಲ್ಪ ಖಾರ ಹಾಕಿ ಮಿಕ್ಸ್ ಮಾಡಿ, ಪ್ಯಾಕ್ ಮಾಡಿಕೊಂಡ್ರೆ ಬೇಕಾದಾಗ ಇದನ್ನು ಸೇವಿಸಬಹುದು. ಇದನ್ನು ತೆಗೆದುಕೊಂಡು ಹೋಗುವುದು ಸುಲಭ. ಜೊತೆಗೆ ಇದು ಬಹಳ ಬೇಗ ಹಾಳಾಗುವುದಿಲ್ಲ.

TRAVEL TIPS : 18 ದೇಶ ನೋಡುವ ಅವಕಾಶ.. ಈ ಬಸ್ ಹೋಗ್ತಿದೆ ದೆಹಲಿ ಟು ಲಂಡನ್!

ಒಣ ತರಕಾರಿ : ಪ್ರಯಾಣ ದೀರ್ಘವಾಗಿದ್ದರೆ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಗ್ರೇವಿ ಅಥವಾ ಕರಿ ತೆಗೆದುಕೊಂಡು ಹೋಗುವ ಬದಲು ಒಣ ತರಕಾರಿಗಳನ್ನು ಪ್ಯಾಕ್ ಮಾಡಿ. ಹಾಗಲಕಾಯಿ ಕರಿ, ಆಲೂಗಡ್ಡೆ ಕರಿ, ಬೆಂಡೆಕಾಯಿ ಕರಿ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬೇಕು. ಒಣ ತರಕಾರಿಗಳನ್ನು ಬೇಯಿಸುವಾಗ ಅದಕ್ಕೆ ನೀರನ್ನು ಸೇರಿಸಬೇಡಿ.ಎಣ್ಣೆ ಹೆಚ್ಚಾಗಿರಲಿ. 

ಪರಾಠಾ : ತರಕಾರಿಗಳೊಂದಿಗೆ ಪರಾಠಾ ಅಥವಾ ಪೂರಿಗಳನ್ನು ಪ್ಯಾಕ್ ಮಾಡಬಹುದು. ಪರಾಠಾ, ಪುರಿ ಮಾಡಲು ಹಿಟ್ಟನ್ನು ಕಲಸುವಾಗ ನೀರಿನ ಬದಲು ಹಾಲನ್ನು ಬಳಸಿ. ಇದರಿಂದ ಪರಾಠಾ ಬೇಗ ಹಾಳಾಗುವುದಿಲ್ಲ. 

ಸಿಹಿ : ಸಿಹಿತಿಂಡಿಗಳು ನಿಮಗೆ ಇಷ್ಟವಾಗಿದ್ದರೆ  ಹಾಲು ಅಥವಾ ಖೋವಾದಿಂದ ಮಾಡದಂತಹ ಸಿಹಿಯನ್ನು ನೀವು ಪ್ಯಾಕ್ ಮಾಡಬಹುದು.ಎಳ್ಳುಂಡೆ,ಚಿಕ್ಕಿ  ಬಹಳ ಕಾಲ ಉಳಿಯುತ್ತದೆ. ರವಾ ಲಡೂಗಳನ್ನು ಕೂಡ ನೀವು ತೆಗೆದುಕೊಂಡು ಹೋಗಬಹುದು.

ಪಿಸ್ತಾ : ಪಿಸ್ತಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫೈಬರ್, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳು ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ನೀವು ಪ್ರವಾಸದ ವೇಳೆ ಪ್ಯಾಕ್ ಮಾಡಬಹುದು.

ಬಾದಾಮಿ : ಬಾದಾಮಿಯು ಬಹಳಷ್ಟು ಫೈಬರ್,ಪೊಟ್ಯಾಸಿಯಮ್, ಪ್ರೊಟೀನ್ ಮತ್ತು ವಿಟಮಿನ್ ಬಿ ಮತ್ತು ಇ ಯನ್ನು ಒಳಗೊಂಡಿದೆ.ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಪ್ಯಾಕ್ ಮಾಡುವುದು ಸುಲಭ. ಹಾಗೆ ವಾಹನ ಚಲಿಸುತ್ತಿರುವಾಗ್ಲೇ ಇದನ್ನು ನೀವು ತಿನ್ನಬಹುದು. ತುರ್ತು ಹಸಿವನ್ನು ಇದು ನೀಗಿಸುತ್ತದೆ.

Bizarre house : ಒಂದೇ ಬಾತ್ರೂಮ್ನಲ್ಲಿ ನಾಲ್ಕು ಟಾಯ್ಲೆಟ್ ಇರೋ ಈ ಮನೆಯ ವಿಶೇಷಗಳೇನು ಗೊತ್ತಾ?

ಒಣಗಿದ ಹಣ್ಣುಗಳು : ಪಿಸ್ತಾ,ಬಾದಾಮಿ ಮಾತ್ರವಲ್ಲ ನೀವು ಇನ್ನೂ ಬೇರೆಯ ಒಣ ಹಣ್ಣುಗಳನ್ನು ಪ್ರವಾಸದ ವೇಳೆ ಇಟ್ಟುಕೊಳ್ಳಿ. ಇದ್ರಲ್ಲಿ ಹೆಚ್ಚಿನ ಪೋಷಕಾಂಶವಿರುವ ಕಾರಣ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಕ್ಯಾರೆಟ್ ಹಾಗೂ ತರಕಾರಿ : ಕೆಲ ಹಸಿ ತರಕಾರಿಗಳನ್ನು ನೀವು ಪ್ರವಾಸದ ವೇಳೆ ತೆಗೆದುಕೊಂಡು ಹೋಗಬಹುದು. ಉದ್ದಗೆ ಕತ್ತರಿಸಿದ ಕ್ಯಾರೆಟನ್ನು ನೀವು ಸರಿಯಾಗಿ ಪ್ಯಾಕ್ ಮಾಡಿಕೊಂಡು ಹೋದಲ್ಲಿ,ಪ್ರವಾಸದ ಮಧ್ಯೆ ಸೇವಿಸಬಹುದು. 

ಹಣ್ಣುಗಳು : ಪ್ರವಾಸದ ವೇಳೆ ಹಣ್ಣುಗಳು ಬಹಳ ಪ್ರಯೋಜನಕಾರಿ. ಸೇಬು ಹಣ್ಣು,ಕಿತ್ತಳೆ ಹಣ್ಣುಗಳನ್ನು ನೀವು ಕೊಂಡೊಯ್ಯಬಹುದು. ಪ್ರವಾಸದ ವೇಳೆ ಇವು ನಿಮ್ಮ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಸಿವನ್ನು ನೀಗಿಸುತ್ತವೆ.

ಮನೆಯಲ್ಲಿ ಮಾಡಿದ ಚಿಪ್ಸ್,ಕುಕ್ಕೀಸ್ : ಮನೆಯಲ್ಲಿ ಮಾಡಿದ,ಕಡಿಮೆ ಎಣ್ಣೆಯಿರುವ ಚಿಪ್ಸ್ ಗಳು ಹಾಗೂ ಕುಕ್ಕೀಸ್ ಗಳನ್ನು ನೀವು ಪ್ರವಾಸದ ವೇಳೆ ತೆಗೆದುಕೊಂಡು ಹೋಗಬಹುದು. 

Latest Videos
Follow Us:
Download App:
  • android
  • ios