Bizarre house : ಒಂದೇ ಬಾತ್ರೂಮ್ನಲ್ಲಿ ನಾಲ್ಕು ಟಾಯ್ಲೆಟ್ ಇರೋ ಈ ಮನೆಯ ವಿಶೇಷಗಳೇನು ಗೊತ್ತಾ?
ಕೆಲವೊಂದು ವಿಷಯಗಳು ಯಾವ್ಯಾವುದೋ ಕಾರಣಕ್ಕೆ ಸುದ್ದಿಯಾಗುತ್ತದೆ. ಕೆಲವೊಮ್ಮೆ ಎಷ್ಟೊಂದು ವಿಚಿತ್ರ ಕಾರಣಕ್ಕೆ ಸುದ್ದಿಯಾಗುತ್ತದೆ ಎಂದರೆ ಹೀಗೂ ಉಂಟೆ ಎಂದು ಅನಿಸಿ ಬಿಡುತ್ತದೆ. ಇಲ್ಲಿದೆ ಅಂತಹ ವಿಚಿತ್ರ ಸುದ್ದಿ(bizzare news). ಸುದ್ದಿ ಏನಪ್ಪಾ ಅಂದ್ರೆ ಒಂದು ಮನೆಯ ಬಾತ್ರೂಮ್ನಲ್ಲಿ ನಾಲ್ಕು ಟಾಯ್ಲೆಟ್ ಇರೋ ಸುದ್ದಿ.
ಹೌದು, ಬಾತ್ರೂಂನಲ್ಲಿ ನಾಲ್ಕು ಟಾಯ್ಲೆಟ್ (4 toilet in one bathroom) ಇದ್ದ ಕಾರಣಕ್ಕೆ ಸುದ್ದಿಯಾಗಿದ್ದ ಮನೆ $450,000 (3.36 ಕೋಟಿ ರೂ.) ಮಾರಾಟವಾಗುತ್ತಿದೆ. ವಿಸ್ಕಾನ್ಸಿನ್ ನ ಸೌತ್ ಮಿಲ್ವಾಕೀಯಲ್ಲಿರುವ ಈ ಮನೆಯಲ್ಲಿ ಆರು ಮಲಗುವ ಕೋಣೆಗಳು, ಎರಡು ಪೂರ್ಣ ಸ್ನಾನಗೃಹಗಳು, ಒಂದು ಅರ್ಧ ಸ್ನಾನ ಗೃಹವಿದೆ.
ಒಂದು ಮನೆಯ ಬಾತ್ರೂಮಲ್ಲಿ ಸಾಮಾನ್ಯವಾಗಿ ಒಂದು ಟಾಯ್ಲೆಟ್ ಇರುತ್ತದೆ. ಒಟ್ಟಾಗಿ ಮನೆಯಲ್ಲಿ ಬೇರೆ ಬೇರೆಯಾಗಿ ನಾಲ್ಕು ಐದು ಟಾಯ್ಲೆಟ್ ಇರುತ್ತದೆ. ಆದರೆ ಈ ಮನೆಯಲ್ಲಿ ಒಂದೇ ಕಡೆಯಲ್ಲಿ ಒಂದೇ ಬಾತ್ರೂಮ್‌ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಟಾಯ್ಲೆಟ್ ಗಳು ಇವೆ.
ಶೌಚಾಲಯಗಳಲ್ಲಿರುವ ನಾಲ್ಕು ಕಮೋಡ್‌ಗಳ ಮಧ್ಯೆ ಅಂತರವೂ ಇಲ್ಲ, ಮಧ್ಯೆ ತಡೆಗೋಡೆ ಸಹ ಇಲ್ಲ. ಈ ಕಮೋಡ್‌ಗಳು ಕೇವಲ ಇಂಚುಗಳ ಅಂತರದಲ್ಲಿ ಸಾಲಾಗಿ ನಿಂತಿದೆ. ಬಾತ್ ರೂಮ್ ವಿರುದ್ಧ ಗೋಡೆಯ ಮೇಲೆ ನಾಲ್ಕು ಸಿಂಕ್ ಗಳು ಸಹ ಇವೆ.
ಆಸಕ್ತಿದಾಯಕ ವಿಷಯ ಏನೆಂದರೆ ಈ ಮನೆಯಲ್ಲಿರುವ ಇತರ ಸ್ನಾನಗೃಹಗಳು ಸಾಮಾನ್ಯವಾಗಿರುತ್ತವೆ. ಈ ಕುರಿತು ಮಾಹಿತಿ ನೀಡಿದ ಮಹ್ಲರ್ ಸೋಥೆಬಿ 'ಈ ಸ್ಟೇಟ್ಲಿ ಮಿಲ್ವಾಕೀ ಹೋಮ್ ಹಾಥಾರ್ನ್ ಆವೆಯಲ್ಲಿ ಮೊದಲು ನಿರ್ಮಾಣಗೊಂಡ ಮನೆಯಾಗಿದೆ. 1851ರಲ್ಲಿ ಫೌಲ್ ಕುಟುಂಬ ಈ ಮನೆಯನ್ನು ನಿರ್ಮಿಸಿದ್ದಾರೆ. ಮನೆ ಇತಿಹಾಸವಿದ್ದು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಆಧುನಿಕ ಸ್ಪರ್ಶಗಳನ್ನು (modern touch)ಸೇರಿಸಿ ಅದನ್ನು ನಿರ್ವಹಿಸಲಾಗಿದೆ. '
171 ವರ್ಷಗಳ ಹಳೆಯ ಮನೆಯನ್ನು 1851ರ ನಂತರ 70 ರಿಂದ 80 ವರ್ಷಗಳ ಕಾಲ ಫಾರ್ಮ್ ಹೌಸ್ ಆಗಿ ಬಳಸಲಾಗುತ್ತಿತ್ತು. ಫೌಲ್ ಕುಟುಂಬ ಇದನ್ನು ನಿರ್ಮಿಸಿತ್ತು. 1920 ಮತ್ತು 30ರ ದಶಕದಲ್ಲಿ, ದಿ ಹೋಮ್ ವಾಸ್ ಡನ್ ಟು ದಿ ಗರ್ಲ್ ಸ್ಕೌಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಎಂಬ ಯುವ ತಂಡ, ಈ ಮನೆಯನ್ನು ಸುಂದರಗೊಳಿಸಿ, ಮರು ನಿರ್ಮಾಣ ಮಾಡಿ ವಿಚಿತ್ರ ಸ್ನಾನಗೃಹವನ್ನು ನಿರ್ಮಿಸಿದರು.
ಈ ಮನೆಯಲ್ಲಿರುವ ವಿಶೇಷ ಕೋಣೆಗಳನ್ನು ಹಾರ್ಡ್‌ವುಡ್ ಮಹಡಿಗಳು ಮತ್ತು ಬೆಮೆಡ್ ಸೀಲಿಂಗ್ ಮತ್ತು ಲಿವಿಂಗ್ ಏರಿಯಾವನ್ನು ದೊಡ್ಡ ಪರದೆಯ ಮುಖಮಂಟಪ ಮತ್ತು ಮುಚ್ಚಿದ ಡಾಬಾ ಬಿಲೋಗೆ ವಿಸ್ತರಿಸಲಾಗಿದೆ. ಮನೆಯ ಹೆಚ್ಚಿನ ಒಳಭಾಗವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಕಿಚನ್ ಮತ್ತು ಬಾತ್ ರೂಮ್ ಪ್ರಮುಖ ನವೀಕರಣಗಳನ್ನು ಪಡೆದುಕೊಂಡಿದೆ.
ಈ ಮನೆಯನ್ನು ನಿರ್ಮಿಸಿದಾಗ, ನಾಲ್ಕು ಶೌಚಾಲಯದ ಸ್ನಾನಗೃಹವನ್ನು ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. ಇದನ್ನು ಗರ್ಲ್ ಸ್ಕೌಟ್ಸ್ ಸೇರಿಸಿತು. ಮನೆ ಮಾಲೀಕರು 1920 ಮತ್ತು 1930 ರ ಸುಮಾರಿಗೆ ಮನೆಯನ್ನು ನವೀಕರಣ ಮಾಡಿದ್ದಾರೆ.
ಯಾಕೆ ಈ ನಾಲ್ಕು ಟಾಯ್ಲೆಟ್ ನಿರ್ಮಾಣ ಮಾಡಲಾಗಿದೆ ಎಂಬುದಕ್ಕೆ ಸರಿಯಾದ ಮಾಹಿತಿ ಇಲ್ಲವಾದುದರಿಂದ, ಸದ್ಯಕ್ಕೆ ನಾಲ್ಕು ಟಾಯ್ಲೆಟ್ ಹೊಂದಿರುವ ಈ ಮನೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನೆಟಿಜನ್ ಗಳು ಈ ಕುರಿತು ಬೇರೆ ಬೇರೆ ರೀತಿಯ ಆಲೋಚನೆಗಳನ್ನು ಹಂಚಿಕೊಳ್ಳಲು ಕಾಮೆಂಟ್ಸ್ ಮಾಡುತ್ತಿದ್ದಾರೆ.