Karnataka Govt Holidays 2026ರಲ್ಲಿ ಕೇವಲ ಕೆಲವು ದಿನಗಳ ಹೆಚ್ಚುವರಿ ರಜೆ (Optional/Sick Leave) ಬಳಸುವ ಮೂಲಕ ಹೇಗೆ ಹತ್ತಾರು ದಿನಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಬಹುದು ಎಂಬ ಟಿಪ್ಸ್ ಇಲ್ಲಿದೆ.

ಬೆಂಗಳೂರು (ಡಿ.23): ಹೊಸ ವರ್ಷದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಜಗತ್ತಿನ ಎಲ್ಲಾ ನಗರಗಳು ಹೊಸ ವರ್ಷವನ್ನು ವಿಜೃಂಭಣೆಯಿಂದ ಸ್ವಾಗತಿಸಲು ಸಜ್ಜಾಗಿವೆ. ಕರ್ನಾಟಕ ಕೂಡ ಇದಕ್ಕೆ ಹೊರತಲ್ಲ. ಇದರ ನಡುವೆ ಮುಂದಿನ ವರ್ಷದ ಅಧಿಕೃತ ರಜಾ ದಿನಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿವೆ. ಈ ಬೆನ್ನಲ್ಲಿಯೇ ಮುಂದಿನ ವರ್ಷ ಕುಟುಂಬ ಸಮೇತ ಯಾವಾಗ ರಜೆಯನ್ನು ಪ್ಲ್ಯಾನ್‌ಮಾಡಬಹುದು ಅನ್ನೋ ಲೆಕ್ಕಾಚಾರ ನಿಮ್ಮಲ್ಲಿ ಇರಬಹುದು. ಅದರ ಮಾಹಿತಿ ಇಲ್ಲಿದೆ. ಲಾಂಗ್‌ ವೀಕೆಂಡ್‌ ಅನ್ನು ಯಾವಾಗ ಪ್ಲ್ಯಾನ್‌ ಮಾಡಬಹುದು, ಕಡಿಮೆ ರಜೆ ಬಳಸಿ ಹೆಚ್ಚಿನ ದಿನ ಕುಟುಂಬದ ಜೊತೆ ಹೇಗೆ ಕಳೆಯಬಹುದು ಎನ್ನುವ ಪ್ಲ್ಯಾನರ್‌ ಇಲ್ಲಿದೆ.

2026ರ ರಜೆ ಪ್ಲ್ಯಾನರ್‌

ಜನವರಿ

4 ದಿನಗಳ ಆಫ್‌ (1 ದಿನ ಲೀವ್‌)

  • ಜ.1 (ಗುರುವಾರ): ಹೊಸ ವರ್ಷದ ದಿನ
  • ಜ.2 (ಶುಕ್ರವಾರ): ರಜೆ ತೆಗೆದುಕೊಳ್ಳಿ
  • ಜ.3-4: ವೀಕೆಂಡ್‌

ಒಟ್ಟು 4 ದಿನದ ನಿರಂತರ ರಜೆ

4 ದಿನಗಳ ಆಫ್‌(1 ದಿನ ಲೀವ್‌)

  • ಜ.15 (ಗುರುವಾರ): ಸಂಕ್ರಾಂತಿ, ಪೊಂಗಲ್‌
  • ಜ.16 (ಶುಕ್ರವಾರ): ರಜೆ ತೆಗೆದುಕೊಳ್ಳಿ
  • ಜ.17-18: ವೀಕೆಂಡ್‌

ಒಟ್ಟು 4 ದಿನಗಳ ನಿರಂತರ ರಜೆ

4 ದಿನಗಳ ರಜೆ (1 ದಿನ ಲೀವ್‌)

  • ಜ.24-25: ವೀಕೆಂಡ್‌
  • ಜ.26 (ಸೋಮವಾರ): ಗಣರಾಜ್ಯೋತ್ಸವ
  • ಜ.27 (ಮಂಗಳವಾರ): ರಜೆ ತೆಗೆದುಕೊಳ್ಳಿ

ಒಟ್ಟು 4 ದಿನಗಳ ಲಾಂಗ್‌ ವೀಕೆಂಡ್‌

ಇದರಿಂದಾಗಿ ಜನವರಿಯಲ್ಲಿ ಕೇವಲ 3 ದಿನಗಳ ರಜೆ ಬಳಸಿ 12 ದಿನ ಕೆಲಸದಿಂದ ವಿಶ್ರಾಂತಿ ಪಡೆಯಬಹುದು

ಏಪ್ರಿಲ್‌

10 ದಿನಗಳ ಆಫ್‌ (5 ದಿನ ಲೀವ್‌)

  • ಮಾ.30-31 (ಸೋಮವಾರ-ಮಂಗಳವಾರ): ರಜೆ ತೆಗೆದುಕೊಳ್ಳಿ
  • ಏಪ್ರಿಲ್‌ 1-2 (ಬುಧವಾರ-ಗುರುವಾರ): ರಜೆ ತೆಗೆದುಕೊಳ್ಳಿ
  • ಏಪ್ರಿಲ್‌ 3 (ಶುಕ್ರವಾರ): ಗುಡ್‌ಫ್ರೈಡೇ
  • ಏಪ್ರಿಲ್‌ 4-5: ವೀಕೆಂಡ್‌
  • ಏಪ್ರಿಲ್‌ 6-9 (ಸೋಮವಾರ-ಮಂಗಳವಾರ): ರಜೆ ತೆಗೆದುಕೊಳ್ಳಿ
  • ಏಪ್ರಿಲ್‌ 10 (ಶುಕ್ರವಾರ): ಕೆಲಸದ ದಿನ
  • ಏಪ್ರಿಲ್‌ 11-12: ವೀಕೆಂಡ್‌

ಒಟ್ಟು 14 ದಿನಗಳ ಮೆಗಾ ಲೀವ್‌ (10 ಆಫ್‌ ಹಾಗೂ 4 ವೀಕೆಂಡ್‌ ರಜಾ)

ಅಥವಾ ಈ ರೀತಿ ಪ್ಲ್ಯಾನ್‌ ಮಾಡಿ

4 ದಿನಗಳ ಆಫರ್‌ (1 ದಿನ ಲೀವ್‌)

  • ಏಪ್ರಿಲ್‌ 3 (ಶುಕ್ರವಾರ): ಗುಡ್‌ಫ್ರೈಡೇ
  • ಏಪ್ರಿಲ್‌ 4-5: ವೀಕೆಂಡ್‌
  • ಏಪ್ರಿಲ್‌ 6 (ಸೋಮವಾರ): ರಜೆ ತೆಗೆದುಕೊಳ್ಳಿ

ಒಟ್ಟು 4 ದಿನಗಳ ಈಸ್ಟರ್‌ ವೀಕೆಂಡ್‌

5 ದಿನಗಳ ರಜೆ (2 ದಿನ ಲೀವ್‌)

  • ಏಪ್ರಿಲ್‌ 13 (ಸೋಮವಾರ): ರಜೆ ತೆಗೆದುಕೊಳ್ಳಿ
  • ಏಪ್ರಿಲ್‌ 14 (ಮಂಗಳವಾರ): ಅಂಬೇಡ್ಕರ್‌ ಜಯಂತಿ
  • ಏಪ್ರಿಲ್‌ 15: ಬುಧವಾರ: ರಜೆ ತೆಗೆದುಕೊಳ್ಳಿ
  • ಏಪ್ರಿಲ್‌ 16-17: ಕೆಲಸದ ದಿನ
  • ಏಪ್ರಿಲ್‌ 18-19: ವೀಕೆಂಡ್‌
  • ಏಪ್ರಿಲ್‌ 20 (ಸೋಮವಾರ): ಬಸವ ಜಯಂತಿ

ಒಟ್ಟು 6 ದಿನಗಳ ರಜೆ

ಮೇ

4 ದಿನಗಳ ರಜೆ (1 ದಿನ ಲೀವ್‌)

  • ಮೇ 1 (ಶುಕ್ರವಾರ): ಮೇ ದಿನ
  • ಮೇ 2-3: ವೀಕೆಂಡ್‌
  • ಮೇ 4 (ಸೋಮವಾರ): ರಜೆ ತೆಗೆದುಕೊಳ್ಳಿ

ಒಟ್ಟು 4 ದಿನಗಳ ಲಾಂಗ್‌ ವೀಕೆಂಡ್‌

4 ದಿನಗಳ ಆಫ್‌ (1 ದಿನ ಲೀವ್‌)

  • ಮೇ 28 (ಗುರುವಾರ): ಬಕ್ರೀದ್‌
  • ಮೇ 29 (ಶುಕ್ರವಾರ): ರಜೆ ತೆಗೆದುಕೊಳ್ಳಿ
  • ಮೇ 30-31: ವೀಕೆಂಡ್‌

ಒಟ್ಟು 4 ದಿನಗಳ ಲಾಂಗ್‌ ವೀಕೆಂಡ್‌

ಆಗಸ್ಟ್‌

5 ದಿನಗಳ ಆಫ್‌ (2 ದಿನ ಲೀವ್‌)

  • ಆಗಸ್ಟ್‌ 24-25 (ಸೋಮವಾರ-ಮಂಗಳವಾರ): ರಜೆ ತೆಗೆದುಕೊಳ್ಳಿ
  • ಆಗಸ್ಟ್‌ 26 (ಬುಧವಾರ): ಮೊಹರಂ, ಓಣಂ
  • ಆಗಸ್ಟ್‌ 27-28 (ಗುರುವಾರ, ಶುಕ್ರವಾರ): ರಜೆ ತೆಗೆದುಕೊಳ್ಳಬಹುದು (ನಿಮ್ಮ ಆಯ್ಕೆ)
  • ಆಗಸ್ಟ್‌ 29-30: ವೀಕೆಂಡ್‌

ಒಟ್ಟು 7 ದಿನಗಳ ಮೊಹರಂ, ಓಣಂ ಸಂಭ್ರಮ

ಅಥವಾ ಹೀಗೆ ಮಾಡಬಹುದು

5 ದಿನಗಳ ಆಫ್‌ (2 ದಿನ ರಜೆ)

  • ಆಗಸ್ಟ್‌ 26 (ಬುಧವಾರ): ಮೊಹರಂ
  • ಆಗಸ್ಟ್‌ 27-28 (ರಜೆ ತೆಗೆದುಕೊಳ್ಳಿ)
  • ಆಗಸ್ಟ್‌ 29-30: ವೀಕೆಂಡ್‌

ಒಟ್ಟು 5 ದಿನಗಳ ಲಾಂಗ್‌ ವೀಕೆಂಡ್‌

ಸೆಪ್ಟೆಂಬರ್‌

5 ದಿನಗಳ ಆಫ್‌ (2 ದಿನ ರಜೆ ತೆಗೆದುಕೊಳ್ಳಿ)

  • ಸೆ.12-13: ವೀಕೆಂಡ್‌
  • ಸೆ. 14 (ಸೋಮವಾರ): ಗಣೇಶ ಚತುರ್ಥಿ
  • ಸೆ. 15-16 (ಮಂಗಳವಾರ, ಬುಧವಾರ): ರಜೆ ತೆಗೆದುಕೊಳ್ಳಿ
  • ಸೆ.17-18 (ಗುರುವಾರ, ಶುಕ್ರವಾರ): ಕೆಲಸ ಮಾಡುವ ದಿನ
  • ಸೆ. 19-20: ವೀಕೆಂಡ್‌

ಅಕ್ಟೋಬರ್‌

4 ದಿನಗಳ ಆಫ್‌ (1 ದಿನ ರಜೆ)

  • ಅ.2 (ಶುಕ್ರವಾರ): ಗಾಂಧಿ ಜಯಂತಿ
  • ಅ.3-4: ವೀಕೆಂಡ್‌
  • ಅ.5 (ಸೋಮವಾರ): ರಜೆ ತೆಗೆದುಕೊಳ್ಳಿ

ಒಟ್ಟು 4 ದಿನಗಳ ಲಾಂಗ್‌ ವೀಕೆಂಡ್‌

11 ದಿನಗಳ ರಜೆ (6 ದಿನ ಲೀವ್‌)

  • ಅ. 10-11: ವೀಕೆಂಡ್‌
  • ಅ.12-16: (ಸೋಮವಾರ-ಶುಕ್ರವಾರ): ರಜೆ ತೆಗೆದುಕೊಳ್ಳಿ
  • ಅ. 17-18: ವೀಕೆಂಡ್‌
  • ಅ.19 (ಸೋಮವಾರ): ರಜೆ ತೆಗೆದುಕೊಳ್ಳಿ
  • ಅ.20 (ಮಂಗಳವಾರ): ಆಯುಧ ಪೂಜೆ
  • ಅ.21 (ಬುಧವಾರ): ವಿಜಯದಶಮಿ
  • ಅ.22-23 (ಗುರುವಾರ-ಶುಕ್ರವಾರ): ಕೆಲಸದ ದಿನ
  • ಅ. 24-25: ವೀಕೆಂಡ್‌

ಒಟ್ಟು 16 ದಿನಗಳ ಆಫ್‌ (11 ಆಫ್‌, 5 ವೀಕೆಂಡ್‌)

ಅಥವಾ ಹೀಗೆ ಮಾಡಬಹುದು

5 ದಿನಗಳ ಆಫ್‌ (1 ದಿನ ಲೀವ್‌)

  • ಅ. 17-18: ವೀಕೆಂಡ್‌
  • ಅ.19 (ಸೋಮವಾರ): ರಜೆ ತೆಗೆದುಕೊಳ್ಳಿ
  • ಅ.20 (ಮಂಗಳವಾರ): ಆಯುಧ ಪೂಜೆ
  • ಅ.21 (ಬುಧವಾರ): ವಿಜಯದಶಮಿ

ಒಟ್ಟು 5 ದಿನಗಳ ರಜೆ

ನವೆಂಬರ್‌

9 ದಿನಗಳ ರಜೆ (4 ದಿನ ಲೀವ್‌)

  • ನ.7-8: ವೀಕೆಂಡ್‌
  • ನ.9 (ಸೋಮವಾರ): ರಜೆ ತೆಗೆದುಕೊಳ್ಳಿ
  • ನ.10 (ಮಂಗಳವಾರ): ದೀಪಾವಳಿ
  • ನ.11-13 (ಬುಧವಾರ-ಶುಕ್ರವಾರ): ರಜೆ ತೆಗೆದುಕೊಳ್ಳಿ
  • ನ.14-15: ವೀಕೆಂಡ್‌
  • ಒಟ್ಟು 9 ದಿನಗಳ ದೀಪಾವಳಿ ಸಂಭ್ರಮ
  • 3 ದಿನಗಳ ರಜೆ (ಯಾವುದೇ ಲೀವ್‌ ಅಗತ್ಯವಿಲ್ಲ)
  • ನ.27 (ಶುಕ್ರವಾರ): ಕನಕದಾಸ ಜಯಂತಿ
  • ನ.28-29: ವೀಕೆಂಡ್‌

ಡಿಸೆಂಬರ್‌

3 ದಿನಗಳ ರಜೆ (ಯಾವುದೇ ಲೀವ್‌ ಅಗತ್ಯವಿಲ್ಲ)

  • ಡಿ.25 (ಶುಕ್ರವಾರ): ಕ್ರಿಸ್‌ಮಸ್‌
  • ಡಿ.26-27: ವೀಕೆಂಡ್‌

ಒಟ್ಟು 3 ದಿನಗಳ ರಜೆ

ಅಥವಾ

11 ದಿನಗಳ ಆಫ್‌ (4 ದಿನ ಲೀವ್‌)

  • ಡಿ. 19-20: ವೀಕೆಂಡ್‌
  • ಡಿ.21-24 (ಸೋಮವಾರ-ಗುರುವಾರ): ರಜೆ ತೆಗೆದುಕೊಳ್ಳಿ
  • ಡಿ.25 (ಶುಕ್ರವಾರ): ಕ್ರಿಸ್‌ಮಸ್‌
  • ಡಿ.26-27: ವೀಕೆಂಡ್‌
  • ಡಿ.28-31 (ಸೋಮವಾರ-ಗುರುವಾರ): ಸಾಧ್ಯವಿದ್ದರೆ ರಜೆ ತೆಗೆದುಕೊಳ್ಳಬಹುದು

ಒಟ್ಟು 11-13 ದಿನಗಳ ರಜೆಯೊಂದಿಗೆ 2027ರ ವರ್ಷಕ್ಕೆ ಎಂಟ್ರಿ