Travel Tips : 18 ದೇಶ ನೋಡುವ ಅವಕಾಶ.. ಈ ಬಸ್ ಹೋಗ್ತಿದೆ ದೆಹಲಿ ಟು ಲಂಡನ್!

ಪ್ರವಾಸ ಯಾರಿಗೆ ಇಷ್ಟವಿಲ್ಲ ಹೇಳಿ? ಅವಕಾಶ ಸಿಕ್ಕಾಗ ಊರು ಸುತ್ತಬೇಕು. ಅದ್ರಲ್ಲೂ ಬಸ್ ಪ್ರಯಾಣ ಖುಷಿ ನೀಡುತ್ತದೆ. ಒಂದಲ್ಲ ಎರಡಲ್ಲ 70 ದಿನಗಳ ಕಾಲ ಬಸ್ ನಲ್ಲಿ ಹೋಗುವ ಮಜವೇ ಬೇರೆ ಅಲ್ವಾ?
 

This Bus Service Will Take You From Delhi to London Via 18 Countries in 70 days

ಕೊರೊನಾ (Corona) ಕಾರಣಕ್ಕೆ ಮನೆ (Home) ಯಲ್ಲಿಯೇ ಬಂಧಿಯಾಗಿದ್ದ ಜನರಿಗೆ ಈಗ ಸ್ವಲ್ಪ ಬಿಡುಗಡೆ ಸಿಕ್ಕಿದೆ. ಜನರ ಓಡಾಟ ಹೆಚ್ಚಾಗ್ತಿದೆ. ಎರಡು ವರ್ಷಗಳ ಕಾಲ ಪ್ರವಾಸ (Tour)ವನ್ನು ಸಂಪೂರ್ಣ ರದ್ದು ಮಾಡಿದ್ದ ಅನೇಕರು ಈಗ ಟೂರ್ ಪ್ಲಾನ್ ಮಾಡ್ತಿದ್ದಾರೆ. ವಿದೇಶಿ (Abroad)ಪ್ರವಾಸಕ್ಕೂ ಅನೇಕರು ಮನಸ್ಸು ಮಾಡ್ತಿದ್ದಾರೆ. ಸಾಮಾನ್ಯವಾಗಿ ಹತ್ತಿರದ ಪಿಕ್ನಿಕ್,ಪ್ರವಾಸಕ್ಕೆ ಜನರ ಆಯ್ಕೆ ಕಾರ್,ಬಸ್ ಆಗಿರುತ್ತದೆ. ದೂರದ ಪ್ರಯಾಣಕ್ಕೆ ರೈಲು ಹಾಗೂ ವಿಮಾನ (Flight) ವನ್ನು ಆಯ್ಕೆ ಮಾಡಿಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದೆರಡು ತಾಸಿನ ಪ್ರಯಾಣಕ್ಕೂ ಜನರು ವಿಮಾನವನ್ನು ಆಶ್ರಯಿಸುತ್ತಿದ್ದಾರೆ.  ದೇಶ ಸುತ್ತು ಕೋಶ ಓದು ಎನ್ನುವ ಗಾದೆಯಂತೆ ಪ್ರತಿಯೊಬ್ಬ ಮನುಷ್ಯನು ಹೊಸ ಹೊಸ ನಗರ,ದೇಶಕ್ಕೆ ಭೇಟಿ ನೀಡಬೇಕು. ಅಲ್ಲಿನ ಜನರು,ಅವರ ಪದ್ಧತಿ,ಅವರ ಆಹಾರವನ್ನು ತಿಳಿದುಕೊಳ್ಳಬೇಕು. ಪ್ರಯಾಣ ಇಷ್ಟಡುವ ಜನರಿಗೆ ಹೊಸ ಅವಕಾಶವೊಂದು ತೆರೆದುಕೊಳ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi)ಯಿಂದ ಲಂಡನ್ (London) ಗೆ ಬಸ್ ನಲ್ಲಿ ಪ್ರಯಾಣ ಬೆಳೆಸುವ ಅವಕಾಶ ಸಿಗ್ತಿದೆ.   

ದೆಹಲಿಯಿಂದ ಲಂಡನ್ ಗೆ ಬಸ್  : ದೆಹಲಿಯಿಂದ ಲಂಡನ್‌ಗೆ ಬಸ್ ಸೇವೆ ಶೀಘ್ರದಲ್ಲಿ ಶುರುವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಐಷಾರಾಮಿ ಬಸ್ ಸೇವೆ ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.  ಇಂಡೋ-ಮ್ಯಾನ್ಮಾರ್ ಗಡಿಯ ಪರಿಸ್ಥಿತಿಯನ್ನು ಅವಲೋಕಿಸಿ ನಂತ್ರ ತೀರ್ಮಾನ ತೆಗೆದುಕೊಳ್ಳಲಾಗುವುದು.  

ABANDONED TOWNS: ಒಂದು ಕಾಲದಲ್ಲಿ ವೈಭವದಿಂದ ಮೆರೆಯುತ್ತಿದ್ದ ಈ ಪ್ರದೇಶವೀಗ ಖಾಲಿ ಖಾಲಿ

ದೆಹಲಿ ಟು ಲಂಡನ್ ಬಸ್ ಪ್ರಯಾಣದ ಇತಿಹಾಸ : 46 ವರ್ಷಗಳ ಹಿಂದೆ ಇಂತಹ ಸೇವೆಯನ್ನು ಭಾರತದಿಂದ ಪ್ರಾರಂಭಿಸಲಾಗಿತ್ತು. ಆದ್ರೆ ಇದು ಬಹುಕಾಲ ಉಳಿಯಲಿಲ್ಲ. 1957 ರಲ್ಲಿ, ಬ್ರಿಟಿಷ್ ಕಂಪನಿಯು ದೆಹಲಿ-ಲಂಡನ್-ಕೋಲ್ಕತ್ತಾ ನಡುವೆ ಬಸ್ ಸೇವೆಯನ್ನು ಪ್ರಾರಂಭಿಸಿತ್ತು. ಕೆಲವು ವರ್ಷಗಳ ನಂತರ ಈ ಬಸ್ ಅಪಘಾತಕ್ಕೀಡಾಯಿತು. ನಂತರ ಈ ಸೇವೆಯನ್ನು ನಿಲ್ಲಿಸಲಾಯಿತು. 

ಪ್ರಯಾಣದ ವೆಚ್ಚ : ದೆಹಲಿಯಿಂದ ಲಂಡನ್ ಗೆ ಬಸ್ ನಲ್ಲಿ ಪ್ರಯಾಣ ಬೆಳೆಸುವ ಆಸಕ್ತಿ ನಿಮಗಿದ್ದರೆ ಈಗ್ಲೇ ಹಣದ ವ್ಯವಸ್ಥೆ ಶುರು ಮಾಡಿದೆ. ಇದಕ್ಕೆ 20 ಸಾವಿರ ಡಾಲರ್ ಅಂದರೆ ಸುಮಾರು 15 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಟಿಕೆಟ್‌, ವೀಸಾ ಮತ್ತು ವಸತಿ ಮುಂತಾದ ಎಲ್ಲಾ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. 

ಬಸ್ ನಲ್ಲಿ ಎಷ್ಟು ದಿನ ಪ್ರಯಾಣ : ವಿಮಾನದಲ್ಲಿ ಬಹುಬೇಗ ಪ್ರಯಾಣ ಮಾಡಬಹುದು ಎಂಬುದು ನಿಮಗೆ ಗೊತ್ತು. ಬಸ್ ನಲ್ಲಿ ಎಷ್ಟು ದಿನ ಪ್ರಯಾಣ ಮಾಡಿದ್ರೆ ಲಂಡನ್ ತಲುಪಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. ಬಸ್ ನಲ್ಲಿ ನೀವು ಸತತ 70 ದಿನಗಳವರೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಈ ಸಮಯದಲ್ಲಿ ಬಸ್ ಸುಮಾರು 20 ಸಾವಿರ ಕಿಲೋಮೀಟರ್ ದೂರ ಕ್ರಮಿಸಲಿದೆ. ವಿಶೇಷವೆಂದ್ರೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ನೀವು 18 ದೇಶಗಳನ್ನು  ನೋಡಬಹುದಾಗಿದೆ.   

ಯಾರ್ಯಾವ ದೇಶವನ್ನು ಹಾದು ಹೋಗಲಿದೆ ಬಸ್? : ಬಸ್, ದೆಹಲಿಯಿಂದ ಕೋಲ್ಕತ್ತಾ ಮೂಲಕ ಮ್ಯಾನ್ಮಾರ್ ತಲುಪಲಿದೆ. ನಂತರ ಥೈಲ್ಯಾಂಡ್, ಲಾವೋಸ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್ ನಂತರ ಲಂಡನ್ ತಲುಪಲಿದೆ. ಈ ಪ್ರಯಾಣದಲ್ಲಿ ಕ್ರೂಸ್ ಹಾಗೂ ದೋಣಿ ಪ್ರಯಾಣವೂ ಇರಲಿದೆ.  

Honeymoon ಸದಾ ನೆನಪಿನಲ್ಲಿರಬೇಕೆಂದ್ರೆ ತಯಾರಿ ಹೀಗಿರಲಿ..

ಬಸ್ ನಲ್ಲಿದೆ ಈ ಎಲ್ಲ ಸೌಲಭ್ಯ : ಈ ಐಷಾರಾಮಿ ಬಸ್ ನಲ್ಲಿ 20 ಸೀಟುಗಳಿವೆ. ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ಆಹಾರ ಸೇವನೆಯಿಂದ ಹಿಡಿದು ಮಲಗುವವರೆಗೆ ಎಲ್ಲ ಸೌಲಭ್ಯವೂ ಇದ್ರಲ್ಲಿದೆ.  

Latest Videos
Follow Us:
Download App:
  • android
  • ios