Travel Tips: ಭಾರತದ ಈ ಸ್ಥಳಗಳಿಗೆ ಫ್ಯಾಮಿಲಿ ಜೊತೆ ತಪ್ಪಿಯೂ ಭೇಟಿ ನೀಡ್ಬೇಡಿ

ಟ್ರಾವೆಲ್ ಮಾಡೋದನ್ನು ಎಲ್ಲರೂ ಇಷ್ಟಪಡುತ್ತಾರೆ. ರೊಟೀನ್ ಲೈಫ್‌ನಿಂದ ಹೊರಬಂದು ಹೊಸ ಸ್ಥಳಗಳಿಗೆ ಭೇಟಿ ನೀಡುವುದು ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ನೀವು ಹೀಗೆ ಟ್ರಾವೆಲ್ ಮಾಡುವಾಗ ಹೋಗುವ ಸ್ಥಳಗಳ ಬಗ್ಗೆ ಸಹ ಗಮನಹರಿಸಬೇಕು.ಕೆಲವೊಂದು ಜಾಗಗಳು ಫ್ಯಾಮಿಲಿ ಜೊತೆ ಹೋಗಲು ಸೂಕ್ತವಾಗಿರುವುದಿಲ್ಲ. ಆ ಬಗ್ಗೆ ತಿಳ್ಕೊಳ್ಳಿ.

Travel Tips: Never Visit These Places In India With Family Vin

ಅನೇಕ ಬಾರಿ ನಾವು ಕುಟುಂಬದೊಂದಿಗೆ ಪ್ರವಾಸಗಳನ್ನು ಯೋಜಿಸುತ್ತೇವೆ, ಆದರೆ ಅಲ್ಲಿಗೆ ಹೋದ ನಂತರ ನಾವೇ ಅನಾನುಕೂಲತೆಯನ್ನು ಅನುಭವಿಸುವ ಕೆಲವು ಸ್ಥಳಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕುಟುಂಬ ಪ್ರವಾಸವನ್ನು ಯೋಜಿಸುತ್ತಿದ್ದರೆ, ನೀವು ಕೆಲವು ಸ್ಥಳಗಳಿಗೆ ಹೋಗಬಾರದು. ಇಂದಿನ ಲೇಖನದಲ್ಲಿ ನೀವು ಕುಟುಂಬ (Family) ಸಮೇತ ಹೋಗಬಾರದ ಸ್ಥಳಗಳ ಬಗ್ಗೆ ತಿಳಿಸಲಿದ್ದೇವೆ.

ಗೋವಾದ ಓಜ್ರಾನ್ ಬೀಚ್: ಅನೇಕರು ಕುಟುಂಬ ಸಮೇತ ಗೋವಾಕ್ಕೆ ಹೋಗಲು ಬಯಸುತ್ತಾರೆ. ಗೋವಾದಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ನೀವು ಇಂಥಾ ಹಲವು ಸ್ಥಳಗಳಿಗೆ (Place) ಭೇಟಿ ನೀಡಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲಿ ನೀವು ಓಜ್ರಾನ್ ಬೀಚ್‌ಗೆ ಹೋಗಬಾರದು. ವಿಶೇಷವಾಗಿ ನೀವು ಕುಟುಂಬದೊಂದಿಗೆ ಭೇಟಿ ನೀಡಿದಾಗ ನೀವು ಈ ಸ್ಥಳಕ್ಕೆ ಭೇಟಿ ನೀಡಬಾರದು. ಇದಲ್ಲದೆ ಗೋವಾದಲ್ಲಿ ಇನ್ನೂ ಅನೇಕ ಸ್ಥಳಗಳಿವೆ. ಅಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಸುಲಭವಾಗಿ ತಿರುಗಾಡಬಹುದು.

New Year 2023: ಕ್ರಿಸ್‌ಮಸ್‌ನಿಂದ ನ್ಯೂ ಇಯರ್‌ವರೆಗೆ ರಜೆ ಎಂಜಾಯ್ ಮಾಡಲು ಇಲ್ಲಿವೆ ಬೆಸ್ಟ್ ತಾಣಗಳು

ಹಿಮಾಚಲ ಪ್ರದೇಶದ ಕಸೋಲ್: ನಿಮ್ಮ ಕುಟುಂಬದೊಂದಿಗೆ ಈ ಸ್ಥಳಕ್ಕೆ ಎಂದಿಗೂ ಭೇಟಿ (Visit) ನೀಡಬೇಡಿ. ಪರ್ವತಗಳನ್ನು ಆನಂದಿಸಲು ಹಿಮಾಚಲ ಪ್ರದೇಶಕ್ಕೆ ಹೋಗಲು ಜನರು ಬಯಸುತ್ತಾರೆ. ಇಲ್ಲಿ ಟ್ರಕ್ಕಿಂಗ್ ಮಾಡಬಹುದಾದ ಹಲವಾರು ಪ್ರದೇಶಗಳಿವೆ. ನೀವು ಬೆಟ್ಟ-ಗುಡ್ಡದಲ್ಲಿ ಸಮಯ ಕಳೆಯಬಹುದು. ಆದರೆ ನೀವು ಕುಟುಂಬದೊಂದಿಗೆ ಹೋಗುತ್ತಿದ್ದರೆ ಹಿಮಾಚಲ ಪ್ರದೇಶದ ಕಸೋಲ್‌ಗೆ ಹೋಗಬಾರದು. ಈ ಸ್ಥಳವು ಕುಟುಂಬ ಸದಸ್ಯರು ಜೊತೆಯಾಗಿ ಹೋಗಲು ಸೂಕ್ತವಾಗಿಲ್ಲ.. ಹೆಚ್ಚು ವಿದೇಶಿಗರು (Foriegners) ಇಲ್ಲಿಗೆ ಬಂದು ಪಾರ್ಟಿ ಮಾಡುತ್ತಾರೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ನೀವು ಕಸೋಲ್ ಬಿಟ್ಟು ಉಳಿದ ಪ್ರದೇಶಗಳಿಗೆ ಭೇಟಿ ನೀಡಬಹುದು. 

ಹಿಮಾಚಲ ಪ್ರದೇಶದ ಮನಾಲಾ: ಹಿಮಾಚಲ ಪ್ರದೇಶದಲ್ಲಿರುವ ಮನಾಲಾಗೆ ನೀವು ಭೇಟಿ ನೀಡಬಹುದು. ಆದರೆ ನಿಮ್ಮ ಸ್ನೇಹಿತರೊಂದಿಗೆ ಮಾತ್ರ ನೀವು ಇಲ್ಲಿಗೆ ಹೋಗಬಹುದು. ನೀವು ಕುಟುಂಬದೊಂದಿಗೆ ಹೋಗಲು ಯೋಜಿಸುತ್ತಿದ್ದರೆ ನೀವು ಈ ಸ್ಥಳಕ್ಕೆ ಭೇಟಿ ನೀಡಬಾರದು. ಮನಾಲಕ್ಕೆ ವಿದೇಶಿಗರು ಮಾದಕ ವಸ್ತು ಸೇವನೆಗೆ ಬರುತ್ತಾರೆ. ಇಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು (Tpurist) ಹ್ಯಾಶ್ ಸೇವಿಸುವುದನ್ನು ಮರೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕುಟುಂಬದೊಂದಿಗೆ ಹೋಗುವುದು ಕೆಟ್ಟ ಅನುಭವಕ್ಕೆ ಕಾರಣವಾಗಬಹುದು. ಅಲ್ಲದೆ ಇದು ನಿಮ್ಮ ಕುಟುಂಬಕ್ಕೆ ಸುರಕ್ಷಿತ (Safe) ಸ್ಥಳವಾಗಿರುವುದಿಲ್ಲ.

Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು

ಗೋಕರ್ಣ, ಕರ್ನಾಟಕ: ಗೋಕರ್ಣವು ಇಲ್ಲಿನ ಪ್ರಸಿದ್ಧ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಉತ್ತಮ ಸ್ಥಳವೆಂದು ತೋರುತ್ತದೆ. ಆದರೆ ನಿಮ್ಮ ಕುಟುಂಬದೊಂದಿಗೆ ಗೋಕರ್ಣದ ಪ್ಯಾರಡೈಸ್ ಬೀಚ್‌ಗೆ ಭೇಟಿ ನೀಡುವ ಬಗ್ಗೆ ಯೋಚಿಸಬೇಡಿ. ಯಾಕೆಂದರೆ ಇದು ಚಾರಣದ ಮೂಲಕ ತಲುಪಬೇಕಾದ ಗುಪ್ತ ಬೀಚ್ ಆಗಿದೆ. ಅದರೊಂದಿಗೆ ಬೀಚ್ ತಾಣವನ್ನು ಇಷ್ಟಪಡುವ ಯುವ ಹಿಪ್ಪಿ ಜನರಿಂದ ತುಂಬಿದೆ. ನಿಮ್ಮ ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಹೋಗಲು ಪ್ರಯತ್ನಿಸಿ, ಅದು ಉತ್ತಮವಾಗಿರುತ್ತದೆ.

ಪಾಂಡಿಚೇರಿ: ಪುದುಚೇರಿ ಅಥವಾ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದ್ದು, ದೇಶದ ದಕ್ಷಿಣಾರ್ಧದಲ್ಲಿದೆ. ಇದು ಹಿಂದೆ ಫ್ರೆಂಚ್ ವಸಾಹತುವಾಗಿತ್ತು ಮತ್ತು ನೀವು ಇನ್ನೂ ಈ ಸ್ಥಳದಲ್ಲಿ ಬೇರೂರಿರುವ ಪ್ರಭಾವಗಳನ್ನು ಕಾಣಬಹುದು. ಇದು ವರ್ಷವಿಡೀ ಸಾಕಷ್ಟು ವಿದೇಶಿ ಹಾಗೂ ಭಾರತೀಯ ಪ್ರವಾಸಿಗರನ್ನು ಪಡೆಯುತ್ತದೆ. ಪಾಂಡಿಚೇರಿಯ ವೈಬ್ ಯುವ ಮತ್ತು ತಾಜಾ ಆಗಿದೆ. ಆದರೆ ಇಲ್ಲಿ ಹುಚ್ಚೆದ್ದು ಕುಣಿಯುವ ಯುವಸಮೂಹವನ್ನು ನೋಡಬಹುದು. ಇದು ಕುಟುಂಬಕ್ಕೆ ಸ್ವಲ್ಪ ಬೇಸರವನ್ನು ಉಂಟುಮಾಡಬಹುದು. ಪಾಂಡಿಚೇರಿಯಲ್ಲಿ ಯಾವುದೇ ಕುಟುಂಬ ಆಧಾರಿತ ಪ್ರವಾಸಿ ತಾಣಗಳಿಲ್ಲ. ಹಾಗಾಗಿ ಕೌಟುಂಬಿಕ ಪ್ರವಾಸ ಕೈಗೊಳ್ಳುವುದಕ್ಕಿಂತ ಏಕಾಂಗಿಯಾಗಿ ಪಾಂಡಿಚೇರಿಗೆ ಭೇಟಿ ನೀಡುವುದು ಉತ್ತಮ.

ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!

ಧರ್ಮಕೋಟ್, ಹಿಮಾಚಲ ಪ್ರದೇಶ: ಮೆಕ್ಲಿಯೋಡ್‌ಗಂಜ್ ಒಂದು ಆಕರ್ಷಕ ಗಿರಿಧಾಮವಾಗಿದೆ ಮತ್ತು ನೀವು ಪ್ರಕೃತಿಯ ಮಡಿಲಲ್ಲಿರುವಾಗ ನಿಮ್ಮ ಪ್ರವಾಸವು ಶಾಂತಿಯುತವಾಗಿರುತ್ತದೆ. ಧರಂಕೋಟ್ ಮೆಕ್ಲಿಯೋಡ್‌ಗಂಜ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಡೀ ಕುಟುಂಬಕ್ಕೆ ಸೂಕ್ತವಲ್ಲದ ಟ್ರೆಕ್ಕಿಂಗ್ ಟ್ರೇಲ್‌ಗಳಿಗೆ ಹೆಸರುವಾಸಿಯಾಗಿದೆ. ನೀವು ಏಕಾಂಗಿಯಾಗಿ ಪ್ರವಾಸ ಕೈಗೊಂಡಾಗ ಈ ಸ್ಥಳವು ಅತ್ಯುತ್ತಮವಾಗಿರಬಲ್ಲದು.

Latest Videos
Follow Us:
Download App:
  • android
  • ios