Asianet Suvarna News Asianet Suvarna News

Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು

ಧಾರ್ಮಿಕ ಸ್ಥಳಗಳ ದರ್ಶನ ಪಡೆಯಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡೋದು ಸುಲಭವಲ್ಲ. ಕೈಕಾಲು ನೆಟ್ಟಗಿರಬೇಕು, ದೇಹದಲ್ಲಿ ಶಕ್ತಿ ಬೇಕು ಎಂದುಕೊಳ್ತೆವೆ. ಆದ್ರೆ ಕೆಲ ಧಾರ್ಮಿಕ ಸ್ಥಳಗಳು ಭಕ್ತರ ಕೆಲಸ ಸುಲಭ ಮಾಡಿವೆ. ವೃದ್ಧರು ಕೂಡ ಭೇಟಿ ನೀಡಲು ಯೋಗ್ಯವಾಗುವಂತೆ ಸೌಲಭ್ಯ ಶುರು ಮಾಡಿವೆ.
 

Holy Places With Helicopter Facilities
Author
First Published Dec 3, 2022, 1:28 PM IST

ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವದ ಸ್ಥಾನವಿದೆ. ಮನೆಯಲ್ಲಿ ಮಾತ್ರವಲ್ಲ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ದೇಶದಲ್ಲಿ ಸಾಕಷ್ಟು ಧಾರ್ಮಿಕ ಸ್ಥಳಗಳಿವೆ. ಅಲ್ಲಿಗೆ ದೂರದೂರುಗಳಿಂದ ಬರುವ ಭಕ್ತರು, ಭಕ್ತಿಯಿಂದ ದೇವರ ಆರಾಧನೆ ಮಾಡ್ತಾರೆ. ನಮ್ಮಲ್ಲಿ  ಹೆಚ್ಚಿನ ಧಾರ್ಮಿಕ ಸ್ಥಳಗಳು ಪರ್ವತಗಳ ಮೇಲೆ ನೆಲೆಗೊಂಡಿದೆ. ಅಲ್ಲಿಗೆ ಹೋಗುವುದು ಸುಲಭವಲ್ಲ. ವಯಸ್ಸಾದವರಿರಲಿ ಯುವಕರಿಗೆ ಕೂಡ ಈ ಪರ್ವತ ಪ್ರದೇಶಗಳಿಗೆ ಭೇಟಿ ನೀಡುವುದು ಕಷ್ಟದ ಕೆಲಸ.  ವಯಸ್ಸಾಗಿದೆ, ಧಾರ್ಮಿಕ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲವೆಂದು ನೀವು ನಿರಾಸೆಯಾಗಬೇಕಾಗಿಲ್ಲ. ಹೆಲೆಕಾಪ್ಟರ್ ಪ್ರಯಾಣ ನಿಮ್ಮ ಆಸೆಯನ್ನು ಪೂರೈಸಲು ನೆರವಾಗುತ್ತದೆ.  ನಮ್ಮ ದೇಶದ ಅನೇಕ ಧಾರ್ಮಿಕ ಸ್ಥಳಗಳಿವೆ ಹೆಲಿಕಾಪ್ಟರ್ ಸೇವೆ ಲಭ್ಯವಿದ್ದರೆ. ಇದರ ಪ್ರಯಾಣ  ಆರಾಮದಾಯಕ ಮಾತ್ರವಲ್ಲದೆ ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇಂದು ನಾವು ಹೆಲಿಕಾಪ್ಟರ್ ಸೌಲಭ್ಯವಿರುವ ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳ ಬಗ್ಗೆ ನಿಮಗೆ ಹೇಳ್ತೆವೆ.

ವೈಷ್ಣೋ ದೇವಿ (Vaishno Devi): ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಧಾಮವು ಭಾರತದ ಅತ್ಯಂತ ಜನಪ್ರಿಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು 5200 ಅಡಿ ಎತ್ತರದಲ್ಲಿದೆ. ಈ ದೇವಸ್ಥಾನ ಎತ್ತರದಲ್ಲಿ ಇರುವುದರಿಂದ ಇಲ್ಲಿಗೆ ತಲುಪುವುದು ತುಂಬಾ ಕಷ್ಟ. ವೈಷ್ಣೋ ದೇವಿ ಪ್ರವಾಸವೆಂದ್ರೆ ಹಿಂದೆ ಜನರು ಹೆದರುತ್ತಿದ್ದರು. ಅಲ್ಲಿಗೆ ಹೋದವರು ಸುರಕ್ಷಿತವಾಗಿ ವಾಪಸ್ ಬರ್ತಾರೆ ಎನ್ನುವ ನಂಬಿಕೆಯಿರಲಿಲ್ಲ. ಆದ್ರೀಗ ವೈಷ್ಣೋ ದೇವಿಗೆ ಪ್ರಯಾಣ ಬೆಳೆಸುವುದು ಸುಲಭ. ಈ ಹಿಂದೆ ದೇವಾಲಯವನ್ನು ತಲುಪಲು ಕಟ್ರಾದ ಮೂಲ ಶಿಬಿರದಿಂದ ಸುಮಾರು 12 ಕಿ.ಮೀ ದೂರದವರೆಗೆ ಟ್ರ್ಯಾಕ್ ನಲ್ಲಿ ಹೋಗಬೇಕಾಗಿತ್ತು. ಆದರೆ ಈಗ ನೀವು ಟ್ರ್ಯಾಕ್ ಮೂಲಕ ಹೋಗಬೇಕಾಗಿಲ್ಲ. ಇಲ್ಲಿ ಹೆಲಿಕಾಪ್ಟರ್ ಸೇವೆ ಲಭ್ಯವಿದೆ. ಆರಾಮವಾಗಿ ನೀವು ಪ್ರಯಾಣ ಬೆಳೆಸಬಹುದು.  

ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!

ಗಂಗೋತ್ರಿ (Gangotri) : ಗಂಗೋತ್ರಿ ಭಾರತದ ನಾಲ್ಕು ಪ್ರಮುಖ ಧಾಮಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೋಗುವುದು ಹಿಂದೆ ಸುಲಭದ ಕೆಲಸವಾಗಿರಲಿಲ್ಲ. ಆದ್ರೀಗ  ಗಂಗೋತ್ರ ಧಾಮಕ್ಕೆ ಹೆಲಿಕಾಪ್ಟರ್ ಸೇವೆ ಲಭ್ಯವಿದೆ. ನಿಮ್ಮ ಪ್ರಯಾಣ  ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಪ್ರಾರಂಭವಾಗುತ್ತದೆ.  ಹರ್ಸಿಲ್‌ ವರೆಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದೆ. ಅಲ್ಲಿಂದ ಭಕ್ತರನ್ನು ದೇವಸ್ಥಾನಕ್ಕೆ ಹೋಗಬೇಕು.

ಕೇದಾರನಾಥ (Kedarnath): ಕೇದಾರನಾಥ ದೇವಾಲಯವು ದೇಶದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಲು ಇಲ್ಲಿಗೆ ಬರುತ್ತಾರೆ. ಇಲ್ಲಿನ ಪ್ರಯಾಣವು ಭಾರತದ ಅತ್ಯಂತ ಕಷ್ಟಕರವಾದ ತೀರ್ಥಯಾತ್ರೆಯಾಗಿದೆ.  ಆದರೆ ಈಗ ದೇವಾಲಯವನ್ನು ತಲುಪುವುದು ಸ್ವಲ್ಪ ಸುಲಭವಾಗಿದೆ. ಈಗ ನೀವು ಹೆಲಿಕಾಪ್ಟರ್ ಪ್ರಯಾಣದ ಮೂಲಕ ಕೇದಾರನಾಥದ ದರ್ಶನ ಪಡೆಯಬಹುದು ಮಾಡಬಹುದು. ಅಲ್ಲಿ ನಿಮಗೆ ಖಾಸಗಿ ಮತ್ತು ಸರ್ಕಾರಿ ಹೆಲಿಕಾಪ್ಟರ್ ಸೇವೆ ಸಿಗುತ್ತದೆ. ನಿಮಗೆ ಅನುಕೂಲವಾಗುವ ಹೆಲಿಕಾಪ್ಟರ್ ಸೇವೆಯನ್ನು ನೀವು ಪಡೆಯಬಹುದು.

Travel Tips: ಭೂತಾನ್ ಪ್ರವಾಸಕ್ಕೆ ಹೋದಾಗ ಈ ಖಾದ್ಯ ತಿನ್ನದೆ ಬರ್ಬೇಡಿ

ಅಮರನಾಥ (Amarnath): ಅಮರನಾಥ ಯಾತ್ರೆಯು ಅತ್ಯಂತ ಪ್ರಸಿದ್ಧವಾದ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಹಿಮದಿಂದ ಆವೃತವಾದ ಪರ್ವತಗಳ ಮೂಲಕ ನೀವು ಈ ಪ್ರಯಾಣದ ಅಧ್ಬುತ ಅನುಭವ ಪಡೆಯಬಹುದು. ಅಮರನಾಥದ ಗುಹೆಯಲ್ಲಿ ಪಾರ್ವತಿ ದೇವಿಗೆ ಶಿವನು ಜೀವನ ಮತ್ತು ಶಾಶ್ವತತೆಯ ರಹಸ್ಯವನ್ನು ವಿವರಿಸಿದ್ದಾನೆ ಎಂದು ನಂಬಲಾಗಿದೆ. ದೇಶದ ಎಲ್ಲೆಡೆಯಿಂದ ಜನರು ಅವಕಾಶ ಸಿಕ್ಕಾಗಲೆಲ್ಲಾ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಅಮರನಾಥ ದೇಗುಲ ಮಂಡಳಿಯು ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ಸೇವೆಯನ್ನು ಏರ್ಪಡಿಸಿದೆ. ಇದಕ್ಕಾಗಿ ನೀವು ಮುಂಗಡವಾಗಿ ಆಸನವನ್ನು ಕಾಯ್ದಿರಿಸಬೇಕು.

Follow Us:
Download App:
  • android
  • ios