Bengaluru ಹತ್ತಿರದಲ್ಲಿರೋ ಈ ಫಾಲ್ಸ್ ನೋಡಿದ್ದೀರಾ? ವೀಕೆಂಡ್‌ನಲ್ಲಿ ಪ್ಲ್ಯಾನ್ ಮಾಡ್ಬಹುದು!

ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ. ಹಚ್ಚಹಸಿರು, ಮಳೆ, ಹರಿಯುವ ನೀರನ್ನು ಕಣ್ತುಂಬಿಕೊಳ್ಳಲು ಜನರು ಬಯಸ್ತಾರೆ. ಇದಕ್ಕಾಗಿ ಫಾಲ್ಸ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ನಾವಿಂದು ಬೆಂಗಳೂರಿಗೆ ಹತ್ತಿರವಿರುವ ಫಾಲ್ಸ್ ಮಾಹಿತಿ ನೀಡ್ತೇವೆ.
 

Travel Guide Must Visit  Perandapalli Forest Waterfall near Bengaluru roo

ವೀಕೆಂಡ್ ನಲ್ಲಿ ಹೊರಗೆ ಸುತ್ತಾಡುವ, ಪ್ರಕೃತಿ ಸೌಂದರ್ಯ ಸವಿಯುವ ಮನಸ್ಸಾಗುತ್ತೆ. ಆದ್ರೆ ಎಲ್ಲಿಗೆ ಹೋಗ್ಬೇಕು ಎನ್ನುವ ಪ್ರಶ್ನೆ ಬೆಂಗಳೂರಿಗರನ್ನು ಕಾಡೋದು ಸಾಮಾನ್ಯ. ಬಹುತೇಕ ಬೆಂಗಳೂರಿಗರಿಗೆ ಸಿಟಿಯಲ್ಲಿರುವ ಮಾಲ್ ಗಳ ಪರಿಚಯವಿದೆಯೇ ಹೊರತು, ಸುತ್ತಮುತ್ತ ಇರುವ ಸುಂದರ ನೈಸರ್ಗಿಕ ತಾಣಗಳ ಬಗ್ಗೆ ಪರಿಚಯವಿಲ್ಲ. ಬೆಂಗಳೂರಿನ ಸುತ್ತಮುತ್ತ ಅನೇಕ ಸುಂದರ ಪ್ರವಾಸಿ ತಾಣಗಳಿವೆ. ಅದನ್ನು ತಲುಪಲು ನೀವು ನಾಲ್ಕೈದು ಗಂಟೆ ಪ್ರಯಾಣ ಬೆಳೆಸಬೇಕಾಗಿಲ್ಲ. ಒಂದೆರಡು ಗಂಟೆಯಲ್ಲಿ ಗಮ್ಯ ಸ್ಥಾನ ತಲುಪುವ ಸುಂದರ ಪ್ರದೇಶಗಳು ಬೆಂಗಳೂರಿನ ಆಸುಪಾಸಿದೆ. 

ವೀಕೆಂಡ್ (Weekend)  ನಲ್ಲಿ ಒತ್ತಡ, ಕೆಲಸದ ಕಿರಿಕಿರಿ, ವಾಹನಗಳ ಶಬ್ಧದಿಂದ ಮುಕ್ತವಾಗಿ, ಆರಾಮವಾಗಿ ಸಮಯ ಕಳೆಯಲು ಅವು ಹೇಳಿ ಮಾಡಿಸಿದ ಜಾಗಗಳಾಗಿವೆ. ಈ ಪಟ್ಟಿಯಲ್ಲಿ ಪೆರಂಡಪಲ್ಲಿ (Perandapalli) ಅರಣ್ಯ ಜಲಪಾತ ಕೂಡ ಸೇರುತ್ತೆ. ನಾವಿಂದು ಪೆರಂಡಪಲ್ಲಿ ಅರಣ್ಯ ಜಲಪಾತದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಕೇದಾರನಾಥ ಪವರ್ ಫುಲ್ 'ಶಕ್ತಿ'ಧಾಮ: ತ್ರಿಕೋನ ಆಕಾರದ ಲಿಂಗದ ಮಹತ್ವ ಏನು?

ಪೆರಂಡಪಲ್ಲಿ ಅರಣ್ಯ ಜಲಪಾತ (Waterfall) ಎಲ್ಲಿದೆ? : ಪೆರಂಡಪಲ್ಲಿ ಅರಣ್ಯ ಜಲಪಾತ ತಮಿಳುನಾಡಿನಲ್ಲಿದೆ. ಪೆರಂಪಲ್ಲಿ ಅರಣ್ಯ ಜಲಪಾದ ಗೋಪಸಂದ್ರಂ ಬಳಿ ಇದೆ. ಬೆಂಗಳೂರಿನಿಂದ ಕೇವಲ 55 ಕಿಲೋಮೀಟರ್ ದೂರದಲ್ಲಿ ಪೆರಂಡಪಲ್ಲಿ ಜಲಪಾತವಿದೆ. ವೀಕೆಂಡ್ ಗೆ ಭೇಟಿ ನೀಡಲು ಇಲ್ಲವೆ ಕುಟುಂಬದವರ ಜೊತೆ ಪಿಕ್ನಿಕ್ ಗೆ ನೀವು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ನೀವು ಎನ್ ಎಚ್ 44 ಅಥವಾ ಎನ್ ಎಚ್ 48 ಇಲ್ಲವೆ ಹೊಸೂರು ಮೂಲಕ ನಿಮ್ಮ ಗಮ್ಯ ಸ್ಥಾನವನ್ನು ತಲುಪಬಹುದು. ಗೋಪಸಂದ್ರಂನ ದಕ್ಷಿಣ ತಿರುಪತಿಯಲ್ಲಿ ಡೈವರ್ಷನ್ ಪಡೆಯಬೇಕಾಗುತ್ತದೆ. 

ಪೆರಂಡಪಲ್ಲಿ ಅರಣ್ಯ ಜಲಪಾತಕ್ಕೆ ನೀವು ಬೈಕ್  ತೆಗೆದುಕೊಂಡ್ರೆ ಒಳ್ಳೆಯದು. ಸುಮಾರು ಎರಡು ಗಂಟೆ ಪ್ರಯಾಣ ಬೆಳೆಸಿದ್ರೆ ನೀವು ಪೆರಂಡಪಲ್ಲಿ ಅರಣ್ಯ ಜಲಪಾತವನ್ನು ತಲುಪಬಹುದು. ಪೆರಂಡಪಲ್ಲಿ ಅರಣ್ಯ ಜಲಪಾತಕ್ಕೆ ತೆರಳುವ ರಸ್ತೆ ಕೊನೆಯವರೆಗೂ ಆರಾಮದಾಯಕವಾಗಿದೆ. ಆದ್ರೆ ಮೂರು ಕಿಲೋಮೀಟರ್ ದೂರ ಮಾತ್ರ ನೀವು ಸ್ವಲ್ಪ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಪೆರಂಡಪಲ್ಲಿ ಅರಣ್ಯ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಒಂದು ಕಡೆ ನೀರು ಇನ್ನೊಂದು ಕಡೆ ಪೈರು ನಿಮ್ಮನ್ನು ಆಕರ್ಷಿಸುತ್ತದೆ. ಹಚ್ಚ ಹಸಿರಿನ ಪರಿಸರ, ಬಂಡೆಯ ಮೇಲೆ ಹರಿಯುವ ನೀರು ಪ್ರವಾಸಿಗರನ್ನು ಸೆಳೆಯುತ್ತದೆ. 

Travel Guide : ಮದುವೆಗೆ ದಿ ಬೆಸ್ಟ್ ಪ್ಲೇಸ್, ಈ ಹೊಟೇಲ್ ಗೆ ವಿಶ್ವದ ಟಾಪ್ 10 ಪಟ್ಟಿಯಲ್ಲಿ ಸ್ಥಾನ

ಬೈಕ್ ನಲ್ಲಿ ನೀವು ಪ್ರಯಾಣ ಬೆಳೆಸಿದ್ದರೆ 100 ಮೀಟರ್ ಹಿಂದೆಯೇ ಬೈಕ್ ಪಾರ್ಕ್ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ಅಥವಾ ಮಳೆಗಾಲದ ಕೊನೆಯಲ್ಲಿ ಪೆರಂಡಪಲ್ಲಿ ಜಲಪಾತಕ್ಕೆ ಭೇಟಿ ನೀಡುವುದು ಒಳ್ಳೆಯದು. ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ನಿಮಗೆ ಜಲಪಾತನದ ಸಂಪೂರ್ಣ ಸೌಂದರ್ಯ ಸವಿಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹಸಿರು ಕೂಡ ಆ ಸಮಯದಲ್ಲಿ ಕಾಣೋದಿಲ್ಲ. ಹಸಿರು ಮತ್ತು ನೀರನ್ನು ಆನಂದಿಸುತ್ತೀರಿ ಎನ್ನುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಬಂಡೆಯ ಮೇಲೆ ನೀರು ಹರಿಯುವುದನ್ನು ನೋಡ್ತ ಕುಳಿತ್ರೆ ಸಮಯ ಸರಿದದ್ದು ತಿಳಿಯೋದಿಲ್ಲ. 

ನೀರಿನಲ್ಲಿ ಆಟವಾಡ್ಬೇಕು, ಜಲಪಾತದಲ್ಲಿ ಮಿಂದೇಳಬೇಕು ಎನ್ನುವವರಿಗೆ ಇದು ಸೂಕ್ತ ಸ್ಥಳವಲ್ಲ. ಪೆರಂಡಪಲ್ಲಿ ಅರಣ್ಯ ಜಲಪಾತಕ್ಕೆ ತೆರಳುವ ಪ್ರವಾಸಿಗರು ನೀರಿನಲ್ಲಿ ಇಳಿಯುವುದು ಕಷ್ಟ. ನೀರಿನ ಹರಿಯುವಿಕೆ ಹಾಗೇ ಶಬ್ಧವನ್ನು ಕೇಳ್ತಾ ನೀವು ದಡದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ನೀರು ಸ್ವಚ್ಛವಿಲ್ಲದ ಕಾರಣ ಹಾಗೇ ನೀರಿನಿಂದ ಸ್ವಲ್ಪ ವಾಸನೆ ಬರುವ ಕಾರಣಕ್ಕೆ ಪ್ರವಾಸಿಗರು ನೀರಿನಲ್ಲಿ ಇಳಿಯದಿರುವುದು ಒಳ್ಳೆಯದು. 

ನೀವು ಮಳೆಗಾಲದಲ್ಲಿ ಪ್ರಯಾಣದ ಪ್ಲಾನ್ ಮಾಡಿದ್ದರೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಬಂಡೆಗಳು ಜಾರುವ ಕಾರಣ, ಬಂಡೆಯ ಮೇಲೆ ಓಡಾಡುವ ಸಾಹಸಕ್ಕೆ ಕೈ ಹಾಕಬೇಡಿ. ಅರಣ್ಯ ಪ್ರದೇಶದಲ್ಲಿ ಜಲಪಾತವಿರುವ ಕಾರಣ ನೀವು ಅಗತ್ಯ ವಸ್ತು, ಆಹಾರವನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.
 

Latest Videos
Follow Us:
Download App:
  • android
  • ios