Travel Guide : ಮದುವೆಗೆ ದಿ ಬೆಸ್ಟ್ ಪ್ಲೇಸ್, ಈ ಹೊಟೇಲ್ ಗೆ ವಿಶ್ವದ ಟಾಪ್ 10 ಪಟ್ಟಿಯಲ್ಲಿ ಸ್ಥಾನ

ಭಾರತ ಸೇರಿದಂತೆ ವಿಶ್ವದಾದ್ಯಂತ ಸಾಕಷ್ಟು ಹೊಟೇಲ್ ಗಳಿವೆ. ಕೆಲ ಹೊಟೇಲ್ ಗಳು ತಮ್ಮ ಸೌಂದರ್ಯ, ಆಹಾರ, ಆಕರ್ಷಕ ಕೊಠಡಿಗಳಿಂದ  ಎಲ್ಲರನ್ನು ಸೆಳೆಯುತ್ತವೆ. ದುಬಾರಿಯಾದ್ರೂ ಭಾರತದಲ್ಲಿರುವ ಹೊಟೇಲ್ ಒಂದು ವಿಶ್ವ ಸ್ತರದಲ್ಲಿ ಸದ್ದು ಮಾಡಿದೆ. 
 

Oberoi Udaivilas Ranks Third Best Hotel In The World Know roo

ಜಗತ್ತಿನಲ್ಲಿ ಸಾಕಷ್ಟು ಪ್ರಸಿದ್ಧ ಹೊಟೇಲ್ ಗಳಿವೆ. ಜನಸಾಮಾನ್ಯರು  ಕೆಲ ಹೊಟೇಲ್ ಗೆ ಹೋಗೋದು ಕನಸಿನ ಮಾತು. ಯಾಕೆಂದ್ರೆ ಅಲ್ಲಿನ ಒಂದು ದಿನದ ರೇಟ್, ನಮ್ಮ ಒಂದು ತಿಂಗಳ ಖರ್ಚಿಗಿಂತ ಹೆಚ್ಚಿರುತ್ತೆ. ಆದ್ರೆ ಕೆಲ ಪ್ರಸಿದ್ಧ ಹೊಟೇಲ್ ನಲ್ಲಿ ಮದ್ಯಮ ವರ್ಗದವರು ಆರಾಮವಾಗಿ ತಂಗಬಹುದು. ನಾವಿಂದು ವಿಶ್ವದ ಫೇಮಸ್ ಹೋಟೆಲ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಹೊಟೇಲ್ ಒಂದರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 

ಫ್ರಾನ್ಸ್ (France) ಕಂಪನಿಯಾದ ಲಾ ಲಿಸ್ಟೆ ಇತ್ತೀಚೆಗೆ ವಿಶ್ವದ ಟಾಪ್ 1000 ಹೊಟೇಲ್ (Hotel) ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಲಾ ಲಿಸ್ಟೆ ಬುಕಿಂಗ್ ವೆಬ್ ಸೈಟ್ ಗಳಲ್ಲಿ ಗ್ರಾಹಕರ ರೇಟಿಂಗ್, ಪತ್ರಿಕೆಗಳು, ಜಾಗತಿಕ ಮಾದ್ಯಮಗಳಲ್ಲಿನ ಗ್ರಾಹಕರ ರೇಟಿಂಗ್ ಅನ್ನು ಒಟ್ಟುಗೂಡಿಸಿ ಸರ್ವಶ್ರೇಷ್ಠ ಹೋಟೆಲ್ ಗಳ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಭಾರತದ ಉದಯಪುರದಲ್ಲಿರುವ ಓಬೆರಾಯ್ ಉದಯವಿಲಾಸ ಹೋಟೆಲ್ ಗೆ ಮೂರನೇ ಸ್ಥಾನ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪ್ರಪಂಚದ ಅತ್ಯಂತ ಸಣ್ಣ ಶಾಲೆ, ಇಲ್ಲಿ ಒಬ್ಬಳೇ ವಿದ್ಯಾರ್ಥಿ

ಉದಯವಿಲಾಸ (Udayavilasa) ಹೋಟೆಲ್ ವಿಶೇಷತೆ ಏನು? : ಶ್ರೀ ರಾಯ್ ಬಹದ್ದೂರ್ ಮೋಹನಸಿಂಹ ಓಬೆರಾಯ್ ಅವರು ಓಬೆರಾಯ್ ಸಮೂಹದ ಸಂಸ್ಥಾಪಕರಾಗಿದ್ದಾರೆ. ಉದಯವಿಲಾಸ ಹೋಟೆಲ್ ನಲ್ಲಿ ಮೂರು ರೆಸ್ಟೋರೆಂಟ್ ಗಳು, ಎರಡು ಸ್ವಿಮಿಂಗ್ ಫೂಲ್, 89 ಕೋಣೆಗಳು, ಸ್ಪಾ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇದರ ಹೊರತಾಗಿ ಇದು ಮದುವೆಗೆ ಕೂಡ ಅತ್ಯುತ್ತಮ ಸ್ಥಳವಾಗಿದೆ. ಯೇ ಜವಾನಿ ಹೇ ದಿವಾನಿ ಮೂವಿಯಲ್ಲಿ ಮದುವೆಯ ಶೂಟಿಂಗ್ ಅನ್ನು ಉದಯವಿಲಾಸದ ಭವ್ಯ ಹೋಟೆಲ್ ನಲ್ಲಿಯೇ ಚಿತ್ರಿಸಲಾಗಿದೆ.
ಉದಯವಿಲಾಸ ಹೋಟೆಲ್ ಬರೋಬ್ಬರಿ 50 ಎಕರೆ ವಿಸ್ತೀರ್ಣದಲ್ಲಿದೆ. ಇಶಾ ಅಂಬಾನಿಯವರ ಫೋಟೋ ಶೂಟ್ ಕೂಡ ಇಲ್ಲೇ ನಡೆದಿತ್ತು. ಸರೋವರದ ದಡದಲ್ಲಿರುವ ಈ ಪಂಚತಾರಾ ಹೋಟೆಲ್ ನಲ್ಲಿ ಬೆಸ್ಟ್ ಹೋಟೆಲ್ ಗೆ ಬೇಕಾಗುವಂತಹ ಎಲ್ಲ ಸೌಲಭ್ಯಗಳೂ ಇವೆ. ಸುಂದರವಾದ ಹುಲ್ಲು ಹಾಸುಗಳು, ಕಾರಂಜಿಗಳು, ಮೇವಾರಿ ಶೈಲಿಯ ಅಂಗಳ, ದೊಡ್ಡ ಕೋಣೆಗಳು ಹೋಟೆಲ್ ನ ವಿಶೇಷತೆಯನ್ನು ಹೆಚ್ಚಿಸುತ್ತವೆ. ಇಲ್ಲಿನ ಒಂದು ಕೋಣೆಯ ಬಾಡಿಗೆ ಒಂದು ದಿನಕ್ಕೆ ಸುಮಾರು 35000 ರೂಗಳು. ಇನ್ನು ಮದುವೆ ಮುಂತಾದ ಸಮಾರಂಭಗಳಲ್ಲಿ ಲಕ್ಷಗಟ್ಟಲೆ ಖರ್ಚುಮಾಡಬೇಕಾಗುತ್ತದೆ. ವಿಶ್ವದ ಮೂರನೇ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೊದಲೇ ಉದಯವಿಲಾಸ ಹೋಟೆಲ್ ಅನೇಕ ಬಿರುದುಗಳನ್ನು ಪಡೆದಿತ್ತು.

ಹೀಗೂ ಪ್ರಪಂಚ ಸುತ್ತಾಡ್ಬಹುದು : ಏರ್‌ಲೈನ್ ಪಾಸ್ ತಗೊಂಡು ಎಷ್ಟು ದೇಶ ಸುತ್ತಿದ ನೋಡಿ?

ಪ್ರಪಂಚದ ಪ್ರಸಿದ್ಧ ಹೋಟೆಲ್ ಪಟ್ಟಿ ಇಲ್ಲಿದೆ : ಲಾ ಲಿಸ್ಟೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಸ್ಕೋರ್ ಗಳನ್ನು ಪರಿಶೀಲಿಸಿ ಪ್ರಸಿದ್ಧ ಹೋಟೆಲ್ ಗಳ ಪಟ್ಟಿಯನ್ನು ತಯಾರಿಸಿದೆ.  
1. ಇಟಲಿಯ ವೆನಿಸ್ ನಲ್ಲಿರುವ ಬೆಲ್ಮಂಡ್ ಹೋಟೆಲ್ ಸಿಪ್ರಿಯಾನಿ 99.75 ಅಂಕವನ್ನು ಪಡೆದು ಪ್ರಥಮ ಸ್ಥಾನ ಪಡೆದಿದೆ.
2. ಮೆಕ್ಸಿಕೋದ ಕಾಬೋ ಸಾನ್ ಲುಕಾಸ್ ನಲ್ಲಿರುವ ವಾಲ್ಡೋರ್ಪ್ ಎಸ್ಟೋರಿಯಾ ಲಾಸ್ ಕ್ಯಾಬೋಸ್ ಪೆಡ್ರೆಗಲ್ 99.5 ಅಂಕವನ್ನು ಸ್ಕೋರ್ ಮಾಡಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.
3. ಶಿಕಾಗೋದ ದ ಪೆನಿನ್ಸುಲಾ ಮತ್ತು ಫ್ರಾನ್ಸ್ ನ ಸೇಂಟ್ ಬಾರ್ತೆಲೆಮಿಯ ಚೆವಲ್ ಬ್ಲಾಂಕ್ ಸೇಂಟ್ – ಬಾರ್ತ್ ಐಲ್ ಡಿ ಫ್ರಾನ್ಸ್ ಹೋಟೆಲ್ ಗಳೂ ಕೂಡ ಎರಡನೇ ಸ್ಥಾನ ಪಡೆದಿವೆ.
4. ಅಮೆರಿಕದ ಬೇವರ್ಲಿ ಹಿಲ್ಸ್ ನ ಎಲ್ ಹರ್ಮಿಟೇಜ್ ಬೆವರ್ಲಿ ಹಿಲ್ಸ್, ಲಂಡನ್ನಿನ ಸೆವಾಯ್, ಪ್ಯಾರಿಸ್ ನ ಲಾ ರಿಜರ್ವ್ ಪ್ಯಾರಿಸ್ ಹಾಗೂ ಲೆ ಮ್ಯೂರಿಸ್, ಇಟಲಿಯ ಪೋಸಿಟಾನೋದಲ್ಲಿರುವ ಇಲ್ ಸೈನ್ ಪಿಯಾತ್ರೊ ಡಿ ಪೋಸಿಟಾನೋ ಮತ್ತು ಭಾರತದ ಉದಯಪುರದ ಓಬೇರಾಯ್ ಉದಯವಿಲಾಸ ಹೋಟೆಲ್ ಗಳು ಮೂರನೇ ಸ್ಥಾನದಲ್ಲಿವೆ.
 

Latest Videos
Follow Us:
Download App:
  • android
  • ios