ಕೇದಾರನಾಥ ಪವರ್ ಫುಲ್ 'ಶಕ್ತಿ'ಧಾಮ: ತ್ರಿಕೋನ ಆಕಾರದ ಲಿಂಗದ ಮಹತ್ವ ಏನು?

ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಕೇದಾರನಾಥ ಧಾಮವು ಕೂಡ ಒಂದು. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನ ಒಂದು ರೂಪವನ್ನು ಇಲ್ಲಿ ಬೆಳಕಿನ ರೂಪದಲ್ಲಿ  ಪೂಜಿಸಲಾಗುತ್ತದೆ. ಇದು ಅನೇಕ ಶಕ್ತಿಯುತ ಧಾಮವಾಗಿದ್ದು, ಈ ಕುರಿತು ಕುತೂಹಲಕಾರಿ ಸಂಗತಿ ಇಲ್ಲಿದೆ.

Kedarnath powerful places Significance importance suh

ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಕೇದಾರನಾಥ ಧಾಮವು ಕೂಡ ಒಂದು. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನ ಒಂದು ರೂಪವನ್ನು ಇಲ್ಲಿ ಬೆಳಕಿನ ರೂಪದಲ್ಲಿ  ಪೂಜಿಸಲಾಗುತ್ತದೆ. ಇದು ಅನೇಕ ಶಕ್ತಿಯುತ ಧಾಮವಾಗಿದ್ದು, ಈ ಕುರಿತು ಕುತೂಹಲಕಾರಿ ಸಂಗತಿ ಇಲ್ಲಿದೆ.

ಕೈಲಾಸ ಪರ್ವತದ ನಂತರ ಕೇದಾರನಾಥ (kedarnath) ವನ್ನು ಶಿವನ ಎರಡನೇ ವಾಸಸ್ಥಾನವೆಂದು ನಂಬಲಾಗಿದೆ. ಈ ದೇವಾಲಯವು ನೈಸರ್ಗಿಕವಾಗಿ ಅಲೌಕಿಕ ದೃಶ್ಯಗಳಿಂದ ಕೂಡಿದೆ. ಈ ದೇವಾಲಯವು ಅತ್ಯಂತ ಮಹತ್ವ ಪಡೆದಿದ್ದು, ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಮಹಾಭಾರತದ ನಂಟು

ಕೇದಾರನಾಥ ದೇವಾಲಯಕ್ಕೂ ಹಾಗೂ ಮಹಾಭಾರತಕ್ಕೆ ನಂಟು ಇದೆ. ಕುರುಕ್ಷೇತ್ರ ಯುದ್ದದಲ್ಲಿ ಕೌರವರನ್ನು ಕೊಂದಿದ್ದ ದುಃಖವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಪಾಂಡವರು ಶಿವನ ದರ್ಶನ ಪಡೆದಿದ್ದರು ಎಂಬ ಪ್ರತೀತಿಯೂ ಇದೆ. ಹಿಂದೂಗಳು ಆರಾಧಿಸುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥ ಕೂಡ ಒಂದು. ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.

ಕೇದಾರನಾಥವು ನಾಲ್ಕು ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದರಲ್ಲಿ ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥವೂ ಸೇರಿದೆ. ವಾರ್ಷಿಕ ಚಾರ್ ಧಾಮ್ ಯಾತ್ರೆ (char dham yatra) ಯು ಹಿಂದೂಗಳಿಗೆ ಬಹಳ ಮುಖ್ಯವಾದ ತೀರ್ಥಯಾತ್ರೆಯಾಗಿದೆ.

Weekly Tarot Readings: ಈ ರಾಶಿಯವರು ಶೀಘ್ರದಲ್ಲೇ ಖ್ಯಾತಿ ಗಳಿಸುತ್ತಾರೆ..!

 

ತ್ರಿಕೋನ ಆಕಾರದ ಲಿಂಗ

ಕೇದಾರನಾಥ ದೇವಾಲಯದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದೆಷ್ಟೋ ವರ್ಷಗಳ ಹಿಂದೆ ಗರ್ಭ ಗುಡಿಯಲ್ಲಿ ಇರಿಸಲಾದ ಜ್ಯೋತಿರ್ಲಿಂಗವು ಇದೀಗ ಗಾತ್ರದಲ್ಲಿ ಕಡಿಮೆಯಾಗಿದೆ. ಮತ್ತು ಈಗ ತ್ರಿಕೋನದ ಆಕಾರವನ್ನು ಹೊಂದಿದೆ. ಸಾಮಾನ್ಯವಾಗಿ ಉಳಿದ ಜ್ಯೋತಿರ್ಲಿಂಗ ( Jyotirlinga) ವಿರುವ ಕ್ಷೇತ್ರಗಳಿಗಿಂತಲೂ ಈ ಕ್ಷೇತ್ರ ಭಿನ್ನವಾಗಿದ್ದು, ಕೇದಾರನಾಥ ಕ್ಷೇತ್ರದಲ್ಲಿ ಲಿಂಗ ತ್ರಿಕೋನ ಆಕಾರದಲ್ಲಿದ್ದು. ಈ ಎಲ್ಲಾ ಕಾರಣಗಳಿಂದ ಕೇದಾರನಾಥ ಯಾತ್ರೆ ಮಹತ್ವದ್ದಾಗಿದ್ದು ವಿಶೇಷವಾದ ತೀರ್ಥಕ್ಷೇತ್ರ ಎಂಬ ನಂಬಿಕೆ ಇದೆ.

ಆರು ತಿಂಗಳ ನಂತರವೂ ಉರಿಯುವ ನಂದಾದೀಪ

ಕಾರ್ತಿಕ ಮಾಸದಲ್ಲಿ ಹಿಮಪಾತದ ಕಾರಣ ಶ್ರೀ ಕೇದಾರೇಶ್ವರ ವಿಗ್ರಹವನ್ನು ತುಪ್ಪದ 'ನಂದಾ ದೀಪ' ಬೆಳಗಿಸಿದ ನಂತರ ದೇವಾಲಯದಿಂದ ಹೊರತರಲಾಗುತ್ತದೆ. ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ಕಾರ್ತಿಕ ಮಾಸದಿಂದ ಚೈತ್ರದವರೆಗೆ ಶ್ರೀ ಕೇದಾರೇಶ್ವರನ ನಿವಾಸವು ಕಣಿವೆಯಲ್ಲಿರುವ ಉರ್ವಿ ಮಠಕ್ಕೆ ಸ್ಥಳಾಂತರಗೊಳ್ಳುತ್ತದೆ. ವೈಶಾಖ ಮಾಸ (Vaisakha) ದಲ್ಲಿ ದೇವಸ್ಥಾನದ ಬಾಗಿಲು ತೆರೆದಾಗ ನಂದಾ ದೀಪ ಉರಿಯುತ್ತಲೇ ಇರುತ್ತದೆ. ವರ್ಷದಲ್ಲಿ ಆರು ತಿಂಗಳು ಮುಚ್ಚಲ್ಪಡುವ ದೇವಾಲಯದಲ್ಲಿ ದೇವತೆಗಳು ಬಂದು ತಮ್ಮ ದೇವರಾದ ಶಿವನನ್ನು ಪೂಜಿಸಿ, ದೀಪವನ್ನು ಬೆಳಗುತ್ತಾರೆ ಎಂಬ ನಂಬಿಕೆ ಇದೆ.

ಚಾಣಕ್ಯ ನೀತಿ: ಈ ವಿಷಯಗಳು ರಟ್ಟಾದರೆ ನಿಮ್ಮ ಗೌರವ ಮಣ್ಣುಪಾಲು..!

 

ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗ ಸೃಷ್ಟಿ

ಕೇದಾರನಾಥ ಶಿವನ ಕತೆ ಬಹಳ ವಿಶಿಷ್ಠವಾಗಿದ್ದು, ಆತನ ಮುಖ ಗೂಳಿ ರೂಪದಲ್ಲಿ ನೇಪಾಳದಲ್ಲಿದ್ದು, ದೇಹದ ಹಿಂಭಾಗ ಕೇದಾರದಲ್ಲಿದೆ. ಇಲ್ಲಿ ಗೂಳಿ  (bull) ಬೆನ್ನಿನಿಂದ ಜ್ಯೋತಿರ್ಲಿಂಗ ಸೃಷ್ಟಿಯಾಗಿದೆ. ಶಿವನ ವಾಸಸ್ಥಾನವಾದ ಕೇದಾರನಾಥ ದೇವಾಲಯವು ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios