ಟೋಕಿಯೋದ ಸ್ಪೆಷಾಲಿಟಿ ಟಾಯ್ಲೆಟ್ ಟೂರ್, ಹೈಟೆಕ್ ಶೌಚಾಲಯ ಟ್ರಾನ್ಸಪರೆಂಟ್ ಕೂಡಾ ಹೌದು!

ಯಾವಾಗಲೂ ಪ್ರಯಾಣದ ಸಂದರ್ಭದಲ್ಲಿ ಪಬ್ಲಿಕ್ ಟಾಯ್ಲೆಟ್ಸ್‌ ಜನರು ಸಾಮಾನ್ಯವಾಗಿ ತಪ್ಪಿಸಲು ಪ್ರಯತ್ನಿಸುವ ಸ್ಥಳಗಳಾಗಿವೆ. ಈ ರೀತಿಯ ಸ್ಥಳಗಳನ್ನು ಅತ್ಯಂತ ಅನೈರ್ಮಲ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಜಪಾನ್‌ನ ಶೌಚಾಲಯಗಳ ಪರಿಸ್ಥಿತಿ ಹೀಗಿಲ್ಲ. ಅಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪ್ರವಾಸಿ ಆಕರ್ಷಣೆಯ ಸ್ಥಳವಾಗಿ ಅಭಿವೃದ್ಧಿಪಡಿಸಿದ್ದಾರೆ. 

Tokyo Offers Curated Toilet Tours To Explore Japans Public Restrooms Vin

ಯಾವಾಗಲೂ ಪ್ರಯಾಣದ ಸಂದರ್ಭದಲ್ಲಿ ಪಬ್ಲಿಕ್ ಟಾಯ್ಲೆಟ್ಸ್‌ ಜನರು ಸಾಮಾನ್ಯವಾಗಿ ತಪ್ಪಿಸಲು ಪ್ರಯತ್ನಿಸುವ ಸ್ಥಳಗಳಾಗಿವೆ. ಈ ರೀತಿಯ ಸ್ಥಳಗಳನ್ನು ಅತ್ಯಂತ ಅನೈರ್ಮಲ್ಯವೆಂದು ಪರಿಗಣಿಸಲಾಗುತ್ತದೆ. ಇದು ಪ್ರವಾಸಿಗರು ಸಹ ಸೋಂಕುಗಳ ಭೀತಿಯಿಂದ ಇಂಥಾ ಸ್ಥಳಗಳಿಂದ ದೂರವಿರುತ್ತಾರೆ. ಆದರೆ ಜಪಾನ್‌ನ ಶೌಚಾಲಯಗಳ ಪರಿಸ್ಥಿತಿ ಹೀಗಿಲ್ಲ. ಅಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪ್ರವಾಸಿ ಆಕರ್ಷಣೆಯ ಸ್ಥಳವಾಗಿ ಅಭಿವೃದ್ಧಿಪಡಿಸಿದ್ದಾರೆ. 

ಜಪಾನ್‌ನಲ್ಲಿ ಎಲ್ಲದರಂತೆ, ಶೌಚಾಲಯಗಳನ್ನು ಸಹ ಹೈಟೆಕ್ ಆಗಿ ರಚಿಸಲಾಗಿದೆ. ಹೀಗಾಗಿ ಇಲ್ಲಿನ ಶೌಚಾಲಯಗಳು ಎಲ್ಲಾ ಪ್ರವಾಸೀ ತಾಣಗಳಂತೆ, ಟೂರಿಸ್ಟ್‌ಗಳನ್ನು ಸೆಳೆಯುತ್ತಿವೆ. ಇದು ಟೋಕಿಯೋ ಟಾಯ್ಲೆಟ್ ಪ್ರಾಜೆಕ್ಟ್‌ನ ಒಂದು ಭಾಗವಾಗಿದೆ ಎಂದು ಹೆಚ್ಚಿನ ವರದಿಗಳು ಹೇಳುತ್ತವೆ. ಜಪಾನ್‌ನ ಟೋಕಿಯೊದ ಶಿಬುಯಾ ಪ್ರದೇಶ  17 ಶೌಚಾಲಯಗಳನ್ನು ಒಳಗೊಂಡಿದೆ. ನಿಪ್ಪಾನ್ ಫೌಂಡೇಶನ್ 2020ರಲ್ಲಿ ಟಾಯ್ಲೆಟ್ ಪ್ರವೇಶವನ್ನು ಸುಧಾರಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಜಪಾನ್‌ನ ಉನ್ನತ ವಾಸ್ತುಶಿಲ್ಪಿಗಳ ಸಹಾಯದಿಂದ ಇದನ್ನು ಮರುವಿನ್ಯಾಸಗೊಳಿಸಲಾಯಿತು.

ಪಬ್ಲಿಕ್ ಟಾಯ್ಲೆಟ್‌ನಲ್ಲೇ ಸ್ವಯಂ ಮೂತ್ರ ಪರೀಕ್ಷೆ: ಏನಾದ್ರೂ ರೋಗವಿದ್ದರೆ ರಿಪೋರ್ಟ್ ತಕ್ಷಣವೇ ನಿಮ್ಮ ಕೈಗೆ!

ಜಪಾನ್‌ನಲ್ಲಿ ಸದ್ಯ ಪಬ್ಲಿಕ್ ಟಾಯ್ಲೆಟ್‌ ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಈ ಶೌಚಾಲಯಗಳು ಕೇವಲ ಸ್ವಚ್ಛವಾಗಿರುವುದನ್ನು ಹೊರತುಪಡಿಸಿ, ಹೈಟೆಕ್ ಸೌಲಭ್ಯಗಳನ್ನು ಒದಗಿಸುತ್ತವೆ. ಮಾತ್ರವಲ್ಲ ಟಾಯ್ಲೆಟ್‌ಗಳನ್ನು ಒಂದಕ್ಕಿಂತ ಒಂದು ವಿಭಿನ್ನವಾಗಿ ನಿರ್ಮಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಸಂಘದ ಸದಸ್ಯ ಯುಮಿಕೊ ನಿಶಿ ಮಾತನಾಡಿ, 'ಅನೇಕರು ಸುಂದರವಾದ ಪರಿಸರವನ್ನು ಆನಂದಿಸಲು ಪ್ರವಾಸಕ್ಕೆ ಬರುತ್ತಾರೆ. ಆದರೆ ಟಾಯ್ಲೆಟ್‌ ಸಹ ಇಷ್ಟು ವಿಭಿನ್ನವಾಗಿರಬಹುದು' ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ' ಎಂದು ಕಾಮೆಂಟ್ ಮಾಡಿದ್ದಾರೆ.

ಅಣಬೆ, ಕಾಡು, ಶಿಲೀಂಧ್ರ ಹೀಗೆ ಹಲವು ಥೀಮ್‌ಗಳ ಶೌಚಾಲಯಗಳನ್ನು ಇಲ್ಲಿ ನೋಡಬಹುದು. ಮಾತ್ರವಲ್ಲ ಬಣ್ಣಬಣ್ಣದ ಪಾರದರ್ಶಕ ಶೌಚಾಲಯಗಳನ್ನು ಸಹ ಇಲ್ಲಿ ನೋಡಬಹುದು. ಅದು ಬಾಗಿಲನ್ನು ಲಾಕ್ ಮಾಡಿದಾಗ ಅಪಾರದರ್ಶಕವಾಗಿರುತ್ತದೆ. ಆರ್ಕಿಟೆಕ್ಟ್ ಶಿಗೆರು ಬಾನ್ ಎರಡು ಲೂಸ್ ಇದನ್ನು ರಚಿಸಿದ ವ್ಯಕ್ತಿ. 

ಗಂಡಸರ ಬುದ್ಧಿ ಗೊತ್ತು ಮಾಡ್ಕೊಂಡ ದೇಶ, ಈ ಐಡಿಯಾದಿಂದ ಪಬ್ಲಿಕ್ ಟಾಯ್ಲೆಟ್ ಈಗ ಫುಲ್ ಕ್ಲೀನ್!

Latest Videos
Follow Us:
Download App:
  • android
  • ios