ಹಿಂದುಗಳಿಗೆ ಶ್ರಾವಣ ಮಾಸ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ಸಮಯದಲ್ಲಿ ಜ್ಯೋತಿರ್ಲಿಂಗ ದರ್ಶನ ಮಾಡ್ಬೇಕು ಅಂದ್ಕೊಂಡವರಿಗೆ ಇಲ್ಲೊಂದು ಅವಕಾಶವಿದೆ.
ಮುಂದಿನ ತಿಂಗಳು ಅಂದ್ರೆ ಜುಲೈನಲ್ಲಿ ಶ್ರಾವಣ ಮಾಸ (Shravan month) ಶುರುವಾಗ್ತಿದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಮಹತ್ವದ ಸ್ಥಾನವಿದೆ. ಶ್ರಾವಣ ಮಾಸದಲ್ಲಿ ಶಿವನ ದೇವಸ್ಥಾನಕ್ಕೆ ತೆರಳಿ ಭಕ್ತರು ಪೂಜೆ, ವೃತದಲ್ಲಿ ನಿರತರಾಗ್ತಾರೆ. ಶ್ರಾವಣ ಮಾಸದಲ್ಲಿ 12 ಜ್ಯೋತಿರ್ಲಿಂಗ ದರ್ಶನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಎಲ್ಲ ಜ್ಯೋತಿರ್ಲಿಂಗಗಳ ದರ್ಶನ ಪಡೆಯೋದು ಸುಲಭವಲ್ಲ. ಆದ್ರೀಗ, ಶಿವನ ಭಕ್ತರಿಗೆ ಭಾರತೀಯ ರೈಲ್ವೆ (Indian Railways) ವಿಶೇಷ ಅವಕಾಶ ಕಲ್ಪಿಸುತ್ತಿದೆ. ಐಆರ್ ಸಿಟಿಸಿ (IRCTC) ಒಂದು ವಿಶೇಷ ಪ್ರವಾಸದ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಅಡಿ ನೀವು ಶ್ರಾವಣ ಮಾಸದಲ್ಲಿ 7 ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗ್ಬಹುದು.
ಶ್ರಾವಣ ಮಾಸದಲ್ಲಿ ಜ್ಯೋತಿರ್ಲಿಂಗ ದರ್ಶನ ಮಾಡ್ಬೇಕು ಎನ್ನುವವರು ಇದ್ರ ಪ್ರಯೋಜನ ಪಡೆಯಬಹುದು. ಐಆರ್ ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ನಲ್ಲಿ, ನೀವು ಅನೇಕ ಉತ್ತಮ ಸೌಲಭ್ಯಗಳನ್ನು ಪಡೆಯುತ್ತೀರಿ. ಈ ಪ್ರವಾಸದಲ್ಲಿ, ನೀವು 12 ವಿಶ್ವಪ್ರಸಿದ್ಧ ಜ್ಯೋತಿರ್ಲಿಂಗ (Jyotirlinga)ಗಳಲ್ಲಿ 7 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಅವಕಾಶ ಸಿಗಲಿದೆ. . ಐಆರ್ ಸಿಟಿಸಿ ಈ ಪ್ರವಾಸ ಪ್ಯಾಕೇಜ್ ಗೆ ಹರ ಹರ ಮಹಾದೇವ! ಸಾತ್ ಜ್ಯೋತಿರ್ಲಿಂಗ ದರ್ಶನ ಯಾತ್ರೆ ಅಂತ ನಾಮಕರಣ ಮಾಡಿದೆ.
ಯಾವೆಲ್ಲ ಜ್ಯೋತಿರ್ಲಿಂಗದ ದರ್ಶನ? : ಐಆರ್ ಸಿಟಿಸಿಯ 7 ಜ್ಯೋತಿರ್ಲಿಂಗ ಯಾತ್ರೆಯ ಈ ಪ್ರವಾಸದಲ್ಲಿ, ಪ್ರವಾಸಿಗರು ದ್ವಾರಕ, ಸೋಮನಾಥ, ನಾಸಿಕ್, ಶಿರಡಿ, ಔರಂಗಾಬಾದ್, ಪಾರ್ಲಿ, ಪರ್ಭಾನಿ, ಪುಣೆ ಮತ್ತು ಕೆವಾಡಿಯಾದಂತಹ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಐಆರ್ ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ 11 ಹಗಲು ಮತ್ತು 10 ರಾತ್ರಿ ಒಳಗೊಂಡಿದೆ. ಈ ಪ್ರವಾಸ ಪ್ಯಾಕೇಜ್ ಪಡೆದ ಪ್ರಯಾಣಿಕರ ವಾಸ್ತವ್ಯ ಮತ್ತು ಆಹಾರದ ವ್ಯವಸ್ಥೆಯನ್ನು ಐಆರ್ ಸಿಟಿಸಿಯೇ ಮಾಡಲಿದೆ. ಪ್ರವಾಸಿಗರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರಲಿದೆ. ಈ ಪ್ರಯಾಣ ಜುಲೈ 18, 2023 ರಂದು ಪ್ರಾರಂಭವಾಗಲಿದೆ.
ಜ್ಯೋತಿರ್ಲಿಂಗ ಪ್ರವಾಸದ ದರ ಎಷ್ಟು? : ಈ ಪ್ರವಾಸ ಪ್ಯಾಕೆಜ್ ದರ ಒಂದೇ ರೀತಿ ಇಲ್ಲ. ನೀವು ಯಾವ ಬೋಗಿ ಆಯ್ಕೆ ಮಾಡಿಕೊಳ್ತೀರಿ ಎಂಬುದರ ಮೇಲೆ ದರ ನಿರ್ಧಾರವಾಗುತ್ತದೆ. ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರೆ ಒಬ್ಬ ವ್ಯಕ್ತಿಗೆ 19,300 ರೂಪಾಯಿ ಚಾರ್ಚ್ ಮಾಡಲಾಗುತ್ತದೆ. ಮೂರನೇ ಎಸಿಯಲ್ಲಿ ಪ್ರಯಾಣಿಸ್ತಿದ್ರೆ 31,500 ರೂಪಾಯಿ ಶುಲ್ಕ ಪಾವತಿಸಬೇಕು.
ಟಿಕೆಟ್ ಬುಕ್ ಮಾಡೋದು ಹೇಗೆ? : ಶ್ರಾವಣ ಂಆಸದಲ್ಲಿ ಯಾವುದೇ ಸಮಸ್ಯೆ ಇಲ್ಲದೆ, ಆರಾಮವಾಗಿ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕು ಎನ್ನುವವರು ಈ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಈ ಪ್ರವಾಸದ ಮೇಲೆ ಆಸಕ್ತಿ ಇದ್ರೆ ಟಿಕೆಟ್ ಬುಕ್ ಮಾಡಲು ಬಯಸಿದರೆ, ನೀವು IRCTC ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನೀವು ಈ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ. ಅಲ್ಲಿಯೇ ಟಿಕೆಟ್ ಬುಕ್ ಮಾಡಿ, ಪ್ರಯಾಣಕ್ಕೆ ಸಿದ್ಧವಾಗ್ಬಹುದು.
12 ಜ್ಯೋತಿರ್ಲಿಂಗಗಳು ಯಾವುವು? : ಭಾರತದಲ್ಲಿ 12 ಜ್ಯೋತಿರ್ಲಿಂಗಗಳಿವೆ.
1 ಸೋಮನಾಥ ಜ್ಯೋತಿರ್ಲಿಂಗ, ಗುಜರಾತ್
2 ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಆಂಧ್ರ ಪ್ರದೇಶ
3 ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಧ್ಯ ಪ್ರದೇಶ
4 ಓಂಕಾರೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ
5 ಬೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್
6 ಭೀಮಾಶಂಕರ ಜ್ಯೋತಿರ್ಲಿಂಗ, ಮಹಾರಾಷ್ಟ್ರ
7 ರಾಮೇಶ್ವರ ಜ್ಯೋತಿರ್ಲಿಂಗ, ತಮಿಳುನಾಡು
8 ನಾಗೇಶ್ವರ ಜ್ಯೋತಿರ್ಲಿಂಗ, ಗುಜರಾತ್
9 ಕಾಶಿ ವಿಶ್ವನಾಥ, ವಾರಣಾಸಿ
10 ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ನಾಸಿಕ್
11 ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ
12 ಗ್ರೀಷ್ನೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್
