ಪ್ರತಿಯೊಬ್ಬ ವ್ಯಕ್ತಿಯೂ ಕೋಟ್ಯಾಧಿಪತಿಯಾಗಿರುವ ಒಂದು ದೇಶವಿದೆ ಎಂದು ನಿಮಗೆ ತಿಳಿದಿದೆಯೇ?
ಇದು ತಮಾಷೆಯಲ್ಲ, ನಿಜ. ಇದು ಯಾವ ದೇಶ ಅನ್ನೋದು ನಿಮಗೆ ಗೊತ್ತಾ? ಗೆಸ್ ಮಾಡಿ ನೋಡೋಣ.
ಈ ದೇಶದ ಹೆಸರು ಲಕ್ಸೆಂಬರ್ಗ್. ಲಕ್ಸೆಂಬರ್ಗ್ ಬಗ್ಗೆ ಕೇಳಿರಬೇಕು ಅಲ್ವಾ? ಇದು ಒಂದು ಸಣ್ಣ ಯುರೋಪಿಯನ್ ದೇಶ.
ಲಕ್ಸೆಂಬರ್ಗ್ ಜನಸಂಖ್ಯೆ ಸುಮಾರು 6 ಲಕ್ಷ ಅಷ್ಟೇ. ಆದರೆ ಇದರ ತಲಾ ಆದಾಯ (GDP capita) ವಿಶ್ವದಲ್ಲೇ ಅತ್ಯಧಿಕವಾಗಿದೆ.
ಇಲ್ಲಿನ ಸರಾಸರಿ ತಲಾ ಆದಾಯ 1.35 ಕೋಟಿ ರೂ.ಗಳಿಗಿಂತ ಹೆಚ್ಚು. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆಯ ಮನೆ, ಕಾರು ಮತ್ತು ಐಷಾರಾಮಿ ಜೀವನಶೈಲಿ ಇದೆ.
ಲಕ್ಸೆಂಬರ್ಗ್‌ನ ಆರ್ಥಿಕತೆಯು ಬ್ಯಾಂಕಿಂಗ್, ಹಣಕಾಸು ಮತ್ತು ತಂತ್ರಜ್ಞಾನ ಕೈಗಾರಿಕೆಗಳನ್ನು ಆಧರಿಸಿದೆ. ಹಾಗಾಗಿ ಇಲ್ಲಿನ ಜನರ ಜೀವನವೂ ಉತ್ತಮ ಗುಣಮಟ್ಟದಲ್ಲಿದೆ.
ತೆರಿಗೆ ಕಾನೂನುಗಳು ಸಹ ವ್ಯವಹಾರ ಸ್ನೇಹಿಯಾಗಿರುವುದರಿಂದ, ಅಂತರರಾಷ್ಟ್ರೀಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತವೆ.
ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಇಲ್ಲಿ ಉಚಿತ. ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೂ ಉನ್ನತ ಮಟ್ಟದ ಜೀವನ ಮಟ್ಟವನ್ನು ಒದಗಿಸುವುದರಿಂದ ಜನರ ಜೀವನವೂ ಉತ್ತಮವಾಗಿದೆ..
ಸಂಪತ್ತಿನ ಜೊತೆಗೆ, ಇಲ್ಲಿನ ಕಾನೂನು ಸುವ್ಯವಸ್ಥೆಯೂ ಅತ್ಯುತ್ತಮವಾಗಿದೆ. ಕೊಲೆ, ಸುಲಿಗೆ ಎನ್ನುವ ಅಪರಾಧಗಳು ಇಲ್ಲಿ ತುಂಬಾನೆ ಕಡಿಮೆ, ಇಲ್ಲ ಅಂತಾನೆ ಹೇಳಬಹುದು.
ಇಲ್ಲಿನ ಕಾನೂನು ವ್ಯವಸ್ಥೆ ಉತ್ತಮವಾಗಿರುವ ಕಾರಣಕ್ಕೆ ಲಕ್ಸೆಂಬರ್ಗ್ ವಿಶ್ವದ ಸುರಕ್ಷಿತ ರಾಷ್ಟ್ರಗಳಲ್ಲಿ ಒಂದಾಗಿದೆ.
ಈ ದೇಶಗಳ ಜೈಲುಗಳು ಐಷಾರಾಮಿ ಹೊಟೇಲ್’ನಷ್ಟೇ ಸೂಪರ್
ಪಾಕಿಸ್ತಾನದಿಂದ ಏನೇನೆಲ್ಲಾ ಖರೀದಿಸುತ್ತದೆ ಚೀನಾ?
ಭಾರತೀಯರು ಬಳಸುತ್ತಿರೋ ಈ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ?
ಭಾರತದ 7 ಮಳೆಗಾಲದ ಸಫಾರಿ: ಹಚ್ಚ ಹಸಿರಿನ ವನ್ಯಜೀವಿಗಳ ಲೋಕ ವೀಕ್ಷಿಸಿ