Abandoned Towns: ಒಂದು ಕಾಲದಲ್ಲಿ ವೈಭವದಿಂದ ಮೆರೆಯುತ್ತಿದ್ದ ಈ ಪ್ರದೇಶವೀಗ ಖಾಲಿ ಖಾಲಿ
ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿದೆ. ಪ್ರವಾಸದಲ್ಲಿ ಆಸಕ್ತಿಯಿರುವವರು ಕೇವಲ ಪ್ರಸಿದ್ಧ ತಾಣಗಳ ವೀಕ್ಷಣೆ ಮಾಡಬೇಕೆಂದೇನಿಲ್ಲ. ನಿರ್ಜನ ಪ್ರದೇಶ, ಪಾಳು ಬಿದ್ದ ಧಾರ್ಮಿಕ ಸ್ಥಳಗಳಿರುವ ನಗರವನ್ನೂ ಸುತ್ತಿ ಬರಬಹುದು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಾಲಿಡಲು ಜಾಗವಿಲ್ಲ. ಜನ,ಕಟ್ಟಡ,ವಾಹನಗಳಿಂದ ಉದ್ಯಾನನಗರಿ ಗಿಜಿಬಿಜಿ ನಗರವಾಗಿದೆ. ಪ್ರಪಂಚದಲ್ಲಿ ಬೆಂಗಳೂರಿನಂತಹ ಅನೇಕ ನಗರಗಳಿವೆ. ಆದ್ರೆ ಒಂದೇ ಒಂದು ಜನರಿಲ್ಲದ ಪ್ರದೇಶಗಳೂ ಪ್ರಪಂಚದಲ್ಲಿವೆ. ಹಿಂದೆ ಆ ಪ್ರದೇಶಗಳಲ್ಲಿ ಸಾಕಷ್ಟು ಜನರಿದ್ದರು. ದೊಡ್ಡ ದೊಡ್ಡ ಕಟ್ಟಡಗಳಿತ್ತು. ಐಷಾರಾಮಿ ವಾಹನಗಳಲ್ಲಿ ಜನರು ಸಂಚರಿಸುತ್ತಿದ್ದರು. ಆದ್ರೀಗ ಆ ನಗರಗಳು ಬಣಗುಡುತ್ತಿವೆ. ಒಂದೇ ಒಂದು ಜನರ ಸುಳಿವಿಲ್ಲ. ಹಳೆ ಕಟ್ಟಡ,ನಿಂತಲ್ಲೇ ನಿಂತ ಅನೇಕ ವಾಹನಗಳನ್ನು ನಾವಲ್ಲಿ ಕಾಣಬಹುದು. ಎಲ್ಲ ಸೌಲಭ್ಯವಿದ್ದರೂ ಆ ನಗರಗಳು ಬರಿದಾಗಿರಲು ಕಾರಣವೇನು? ದಶಕಗಳಿಂದ ಮೌನವಾಗಿರುವ ನಗರಗಳು ಯಾವವು? ಯಾಕೆ ಅಲ್ಲಿ ಜನರಿಲ್ಲ ಎಂಬುದನ್ನು ನಾವಿಂದು ಹೇಳ್ತೆವೆ.ಒರಡೋರ್-ಸುರ್-ಗ್ಲೇನ್, ಫ್ರಾನ್ಸ್ (Oradour-Sur-Glane, France) : ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಮೀನುಗಾರಿಕೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಎರಡನೆಯ ಮಹಾಯುದ್ಧದ ಭೀಕರತೆಗೆ ಈ ನಗರ ಬಲಿಯಾಯ್ತು. ಈ ನಗರದಲ್ಲಿ 1944 ರ ಜೂನ್ 10 ರಂದು ಹತ್ಯಾಕಾಂಡ ನಡೆಯಿತು. ಆ ಸಮಯದಲ್ಲಿ ಇಲ್ಲಿನ ಹೆಚ್ಚಿನ ಜನರನ್ನು ಮನಸ್ಸಿಗೆ ಬಂದಂತೆ ಹತ್ಯೆ ಮಾಡಲಾಯ್ತು. ಮಕ್ಕಳು,ಮಹಿಳೆಯರನ್ನು ಚರ್ಚ್ ಒಳಗೆ ಹಾಕಿ ಬೆಂಕಿ ಹಚ್ಚಲಾಯ್ತು. 1999 ರ ನಂತರ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ.
ವಾರ್ರಾ ಪರ್ಸಿ, ಯುಕೆ (Wharram Percy, United Kingdom) : ಈ ಪ್ರದೇಶವು ಇನ್ನೂ ಇಂಗ್ಲೆಂಡ್‌ನ ಅತ್ಯಂತ ಪ್ರಸಿದ್ಧ, ನಿರ್ಜನ ಮತ್ತು ಮಧ್ಯಕಾಲೀನ ಗ್ರಾಮವಾಗಿದೆ. ಈ ಪ್ರದೇಶವು ಒಂದು ಕಾಲದಲ್ಲಿ ಜನಸಂದಣಿಯಿಂದ ಗಿಜಿಗುಡುತ್ತಿತ್ತು. ಕುರಿ ಸಾಕಾಣಿಕೆಗೆ ಸ್ಥಳಾಂತರಗೊಂಡ ನಂತ್ರ ಗ್ರಾಮದ ಜನಸಂಖ್ಯೆಯು ವರ್ಷಗಳವರೆಗೆ ಕ್ಷೀಣಿಸಿತು. 1500 ರ ನಂತರ ಕೊನೆಯದಾಗಿ ಉಳಿದ ನಿವಾಸಿಗಳನ್ನು ಹೊರಹಾಕಲಾಯ್ತು. ಈ ತಾಣವು ಪುರಾತತ್ವಶಾಸ್ತ್ರಜ್ಞರು ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.
BIZARRE HOUSE : ಒಂದೇ ಬಾತ್ರೂಮ್ನಲ್ಲಿ ನಾಲ್ಕು ಟಾಯ್ಲೆಟ್ ಇರೋ ಈ ಮನೆಯ ವಿಶೇಷಗಳೇನು ಗೊತ್ತಾ?
ಬೆಲ್ಚೈಟ್, ಸ್ಪೇನ್ (Belchite, Spain) : ಈ ಪ್ರದೇಶವು ಸ್ಪ್ಯಾನಿಷ್ ಅಂತರ್ಯುದ್ಧದ ಸಮಯದಲ್ಲಿ ರಿಪಬ್ಲಿಕನ್ ಮತ್ತು ಫ್ಯಾಸಿಸ್ಟ್ ಪಡೆಗಳ ನಡುವೆ 1937ರ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವಿನ ವಾರದಲ್ಲಿ ಮುತ್ತಿಗೆ ಹಾಕು ಕೇಂದ್ರವಾಗಿತ್ತು. 1939 ರಲ್ಲಿ ನಿರ್ಮಿಸಲಾದ ಈ ಗ್ರಾಮವು ಯುದ್ಧದಿಂದಾಗಿ ಸರ್ವನಾಶವಾಯಿತು. ಇಂದು ಈ ಪ್ರದೇಶವು ಸ್ಪೇನ್ ಪ್ರವಾಸೋದ್ಯಮದಲ್ಲಿ ಪ್ರಮುಖ ಕೇಂದ್ರವಾಗಿದೆ. ಬಿದ್ದ ಸ್ಮಾರಕಗಳು,ಚರ್ಚ್ ಅವಶೇಷಗಳನ್ನು ನಾವಿಲ್ಲಿ ನೋಡಬಹುದು. ಒಂದು ದಿನದ ಪ್ರವಾಸಕ್ಕೆ ಇಲ್ಲಿಗೆ ಅನೇಕರು ಬಂದು ಹೋಗ್ತಾರೆ.
ಕ್ರಾಕೊ ಇಟಲಿ : ಇಟಲಿಯ ದಕ್ಷಿಣ ಭಾಗದಲ್ಲಿದೆ. ಕ್ರಾಕೊ ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಪಂಚದಲ್ಲೇ ಹೆಚ್ಚು ಭೇಟಿ ನೀಡಿದ ನಿರ್ಜನ ನಗರಗಳಲ್ಲಿ ಒಂದಾಗಿದೆ. 1960 ರ ದಶಕದಲ್ಲಿ ಒಳಚರಂಡಿ ಸಮಸ್ಯೆ ಮತ್ತು ನೀರಿನ ಕೊರತೆಯ ನಂತರ ಭೂಕುಸಿತದ ಘಟನೆಗಳು ಹೆಚ್ಚಾದವು. ಈ ಸಮಸ್ಯೆಯಿಂದಾಗಿ ಜನರು ನಗರ ತೊರೆಯಲು ಪ್ರಾರಂಭಿಸಿದರು.1980 ರಲ್ಲಿ ಪ್ರದೇಶವು ಸಂಪೂರ್ಣವಾಗಿ ನಿರ್ಜನವಾಯಿತು.
National Tourism Day : ದೇಶದ ಆರ್ಥಿಕ ವೃದ್ಧಿಗೆ ನೆರವಾಗೋ ದಿನದ ಮಹತ್ವ, ಇತಿಹಾಸ
ಪಶ್ಚಿಮ ಆಫ್ರಿಕಾದ ಗ್ರ್ಯಾಂಡ್-ಬಾಸಮ್ : ಒಂದು ಕಾಲದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಹೊಂದಿದ್ದ ಈ ಪ್ರದೇಶಕ್ಕೆ ಯಾರ ಕಣ್ಣು ಬಿತ್ತೋ ತಿಳಿಯದು. ಜನರು ಈ ಪ್ರದೇಶದಿಂದ ದೂರವುಳಿದಿದ್ದಾರೆ. ಈ ಪ್ರದೇಶದಲ್ಲಿ ಉತ್ತಮ ಕಟ್ಟಡಗಳು ಹಲವು ದಶಕಗಳಿಂದ ಖಾಲಿಯಾಗಿವೆ. ಈ ರೆಸಾರ್ಟ್ ನಗರವು ಈಗ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ. 15 ನೇ ಶತಮಾನದವರೆಗೆ ಇದು ಅತ್ಯಂತ ಸಮೃದ್ಧ ಮತ್ತು ಪೂರ್ಣ ಜನಸಂಖ್ಯೆಯ ಪ್ರದೇಶವಾಗಿತ್ತು.
ಹಶಿಮಾ ದ್ವೀಪ, ಜಪಾನ್ : 1887 ಮತ್ತು 1974 ರ ನಡುವೆ ಇಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ನೈಸರ್ಗಿಕ ಸಂಪತ್ತು ಖಾಲಿಯಾದ ನಂತರ, ಈ ಸುಂದರ ಪ್ರದೇಶವು ನಿರ್ಜನವಾಯಿತು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶವು ಪ್ರಮುಖ ಪ್ರವಾಸಿ ತಾಣವಾಗಿದೆ.