ನಗುಮೊಗದ ಬಾಲಕ ಟ್ಯೂಷನ್ ಗಾಗಿ ಸೈಕಲ್ ಜತೆ ಮೆಟ್ರೋ ಏರ್ತಾನೆ
ಮುಂಬೈ ಬಾಲಕನೊಬ್ಬ ಮೆಟ್ರೋದಲ್ಲಿ ಪ್ರಯಾಣಿಸಿ ಟ್ಯೂಷನ್ ಗೆ ಹೋಗ್ತಾನೆ. ಜತೆಗೆ ತನ್ನ ಸೈಕಲ್ ಕೂಡ ಬಳಕೆ ಮಾಡ್ತಾನೆ. ದಿನವೂ ಹೀಗೆ ಸಾಹಸ ಮಾಡುವ ಈತ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಮಕ್ಕಳು ಟ್ಯೂಷನ್ ಗೆ ಸಾಮಾನ್ಯವಾಗಿ ಸೈಕಲ್ ಹತ್ತಿ ಹೋಗೋದು ಕಾಮನ್. ಶಾಲೆಯಿಂದ ಸಂಜೆ ಮನೆಗೆ ಬಂದು ಸಮೀಪದ ಟ್ಯೂಷನ್ ಕೇಂದ್ರ ಅಥವಾ ಮನೆಗೆ ಸೈಕಲ್ ನಲ್ಲಿ ಹೋಗುವುದು ಕಂಡುಬರುತ್ತದೆ. ಇನ್ನು ಕೆಲವರು ಮೆಟ್ರೋ ರೈಲಿನಲ್ಲೂ ಪ್ರಯಾಣಿಸಬಹುದು. ಮೆಟ್ರೋ ಸೌಲಭ್ಯ ಸಮೀಪದಲ್ಲೇ ಇದ್ದು, ಟ್ಯೂಷನ್ ಗೆ ಹೋಗಲು ಅನುಕೂಲವಾಗುವಂತಿದ್ದರೆ ಮೆಟ್ರೋದಲ್ಲೂ ಹೋಗಬಹುದು. ಆದರೆ, ಮುಂಬೈನಲ್ಲಿ ಒಬ್ಬ ಹುಡುಗ ಟ್ಯೂಷನ್ ಗಾಗಿ ಮೆಟ್ರೋವನ್ನೂ ಏರುತ್ತಾನೆ, ಜತೆಗೇ ಸೈಕಲ್ ಅನ್ನೂ ಕೊಂಡೊಯ್ಯುತ್ತಾನೆ. ಇನ್ನೂ ಸಣ್ಣ ಬಾಲಕ ಮಟ್ರೋದಲ್ಲಿ ತನ್ನ ಸೈಕಲ್ ಜತೆಗೆ ಟ್ಯೂಷನ್ ಹೋಗುವ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.
ನಿವೃತ್ತ ಐಎಎಸ್ ಅಧಿಕಾರಿ ಆರ್.ಎ.ರಾಜೀವ್ ಅವರು ಈ ಬಾಲಕನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.
ಮುಂಬೈ ಮೆಟ್ರೋದಲ್ಲಿ (Mumbai Metro) ನಿತ್ಯವೂ ಲಕ್ಷಾಂತರ ಜನ ಓಡಾಡುತ್ತಾರೆ. ಎಲ್ಲರೂ ಗಮನ ಸೆಳೆಯುವುದಿಲ್ಲ. ಆದರೆ, ಈ ಬಾಲಕ (Boy) ನಿವೃತ್ತ ಐಎಎಸ್ ಅಧಿಕಾರಿಯ ಗಮನ ಸೆಳೆದಿದ್ದಾನೆ. ಏಕೆಂದರೆ, ಈ ಪುಟ್ಟ ಬಾಲಕ ತನ್ನೊಂದಿಗೆ ಸೈಕಲ್ (Bicycle) ಅನ್ನೂ ಒಯ್ಯುತ್ತಾರೆ. ನಿರ್ದಿಷ್ಟ ನಿಲ್ದಾಣದಲ್ಲಿ ಇಳಿದ ಬಳಿಕ ಸೈಕಲ್ ಏರಿ ಟ್ಯೂಷನ್ (Tution) ಕೇಂದ್ರಕ್ಕೆ ಹೋಗುತ್ತಾನೆ. ಅಲ್ಲಿಂದ ಮತ್ತೆ ಅದೇ ಮಾರ್ಗದಲ್ಲಿ ಮೆಟ್ರೋ ಮತ್ತು ಸೈಕಲ್ ಮೂಲಕ ಮನೆಗೆ ಮರಳುತ್ತಾನೆ.
ಟ್ವಿಟರ್ ನಲ್ಲಿ ಈ ಫೋಟೊವನ್ನು ಹಂಚಿಕೊಂಡಿರುವ ನಿವೃತ್ತ ಅಧಿಕಾರಿ, “ಈ ಬಾಲಕ ಮೆಟ್ರೋದಲ್ಲಿ ಸುಲಭವಾಗಿ ತನ್ನ ಸೈಕಲ್ ನಿಭಾಯಿಸುವುದನ್ನು ಕಂಡು ಖುಷಿ ಎನಿಸುತ್ತದೆ. ಮೆಟ್ರೋ ಸರ್ವೀಸ್ (Service) ನಲ್ಲಿ ಆತ ಭಾರಿ ಕಂಫರ್ಟ್ (Comfort) ಆಗಿದ್ದಾನೆ ಎನಿಸುತ್ತದೆ. ಈತನಿಗೆ ಒಳ್ಳೆಯದಾಗಲಿʼ ಎಂದು ಬರೆದಿದ್ದಾರೆ. ಈ ಚಿತ್ರದಲ್ಲಿ ಬಾಲಕ ಹೆಲ್ಮೆಟ್ (Helmet) ಧರಿಸಿ ತನ್ನ ಪಕ್ಕದಲ್ಲಿ ಬೈಸಿಕಲ್ ಇರಿಸಿಕೊಂಡಿರುವುದು ಕಂಡುಬರುತ್ತದೆ.
ಮಕ್ಕಳ ಲಸಿಕಾ ಅಭಿಯಾನಕ್ಕೆ ಕೋವಿನ್ ರೀತಿ ‘ಯು-ವಿನ್’: ಸಾರ್ವತ್ರಿಕ ಲಸಿಕಾಕರಣದ ಡಿಜಿಟಲ್ ಪ್ರಕ್ರಿಯೆಗೆ ಚಾಲನೆ
ಹಲವರು ಈ ಟ್ವೀಟ್ ಗೆ ಕಾಮೆಂಟ್ (Comments) ಮಾಡಿದ್ದಾರೆ. ಇದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ ದೀಪ್ ಸಿಂಗ್ ಪುರಿ (Hardeep Singh Puri) ಅವರನ್ನೂ ಸೆಳೆದಿದೆ. ಅವರು “ಇದು ಅಮೃತಕಾಲ. ಸ್ಮಾರ್ಟ್ (Smart) ಮತ್ತು ಅನ್ವೇಷಣಾತ್ಮಕ (Innovative) ಯುವ ಜನರು ಹೀಗೆ ಆತ್ಮವಿಶ್ವಾಸದಿಂದ ಮುಂಬೈನಲ್ಲಿ ಪ್ರಯಾಣಿಸುತ್ತಾರೆ. ದಿನವೂ ಟ್ಯೂಷನ್ ಗಾಗಿ ಹೀಗೆ ಮೆಟ್ರೋದೊಂದಿಗೆ ಬೈಸಿಕಲ್ ಅನ್ನೂ ಬಳಕೆ ಮಾಡುವ ಇಂತಹ ಯುವ ಜನರು ಭವಿಷ್ಯದ ನಿರ್ಮಾತೃರು. ಕೊನೆಯ ಹಂತದವರೆಗೂ ಸಂಪರ್ಕ ಸಾಧಿಸಲು ಈತನ ಉತ್ಸಾಹ ಅಪರಿಮಿತʼ ಎಂದು ಹೇಳಿದ್ದಾರೆ.
ಸೈಕ್ಲಿಸ್ಟ್ (Cyclists) ಗಳಿಗೆ ಉತ್ತೇಜನ ಅಗತ್ಯ
ನೆಟ್ಟಿಗರು ಈ ಬಾಲಕದ ಕತೆ ಕೇಳಿ ಭಾರೀ ಇಂಪ್ರೆಸ್ ಆಗಿದ್ದಾರೆ. ಒಬ್ಬರು, “ಕೊನೆಯ ಪಕ್ಷ ಮೆಟ್ರೋದಲ್ಲಿ ಬೈಸಿಕಲ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದು. ಲೋಕಲ್ ಟ್ರೇನ್ ನಲ್ಲಿ ಇದಕ್ಕೆ ೨೦೦ ರೂಪಾಯಿ ವೆಚ್ಚವಾಗುತ್ತದೆ. ಲೋಕಲ್ ಟ್ರೇನ್ (Local Train) ನಲ್ಲಿ ಸೈಕಲ್ ಕೊಂಡೊಯ್ಯುವುದಕ್ಕೆ ಅವಕಾಶ ನೀಡಬೇಕು. ಸೈಕಲ್ ಗೆ ಉತ್ತೇಜನ ದೊರೆಯಬೇಕು, ಸೈಕ್ಲಿಸ್ಟ್ ಗಳಿಗಾಗಿಯೇ ಪ್ರತ್ಯೇಕ ಕೋಚ್ (Coach) ಒಂದನ್ನು ನೀಡಬೇಕು. ಇದರಿಂದ ಬೈಸಿಕಲ್ ಬಳಸುವ ಜನರಿಗೆ ಸಾಕಷ್ಟು ಆದ್ಯತೆ, ಉತ್ತೇಜನ ನೀಡಿದಂತೆ ಆಗುತ್ತದೆʼ ಎಂದು ಹೇಳಿದ್ದಾರೆ.
ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ
ಚಿತ್ರ ಯುರೋಪ್ ನದ್ದೇ?
ಮತ್ತೋರ್ವ ಬಳಕೆದಾರ, ಆತ್ಮವಿಶ್ವಾಸಿ, ತನ್ನ ದಕ್ಷತೆಯ ಕುರಿತು ಅರಿವಿರುವ, ಅನುಕೂಲದ ಬಗ್ಗೆ ಅರಿತಿರುವ ಬಾಲಕನ ಈ ಪ್ರಯಾಣ ಸುಖಕರವಾಗಿರಲಿ. ಯಾವುದೇ ಆಟೋ, ಕಾರು, ಹೆವಿ ವಾಹನಗಳಿಂದ ಸಮಸ್ಯೆ ಆಗದಿರಲಿ. ಸೈಕ್ಲಿಸ್ಟ್ ಗಳನ್ನು ಗೌರವಿಸಬೇಕು. ಚೀರ್ಸ್ ಲ್ಯಾಡ್ (Cheers Lad)ʼಎಂದು ಉತ್ತೇಜನ ನೀಡಿದ್ದಾರೆ.
ಮತ್ತೊಬ್ಬರು ಮಾಡಿರುವ ಕಾಮೆಂಟ್ ಗಮನಾರ್ಹವಾಗಿದೆ. “ಈ ಚಿತ್ರ ಯುರೋಪ್ ನದ್ದು ಎಂದುಕೊಂಡೆ. ಇದು ಭಾರತದಲ್ಲೂ ಸಂಭವಿಸಬಹುದು ಎಂದು ಅಂದುಕೊಂಡಿರಲಿಲ್ಲ. ದಿಸ್ ಇಸ್ ಕೂಲ್, ಈ ಸರ್ವೀಸ್ ದೆಹಲಿ ಮೆಟ್ರೋದಲ್ಲೂ ಆರಂಭವಾಗಲಿʼ ಎಂದು ಹೇಳಿದ್ದಾರೆ.