ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಚುಕ್ಕಿ ಜಿಂಕೆ, ಸಾರಂಗ ಮುಂತಾದವುಗಳು ಸಾಮಾನ್ಯವಾಗಿ  ಕಾಣಿಸಿಗುತ್ತವೆ. ಆದರೆ ಬಿಳಿ ಬಣ್ಣದ ಜಿಂಕೆಗಳನ್ನು ಎಲ್ಲದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ...

very rare white colour deer found in Katarniya Ghat Wildlife Sanctuary photos goes viral akb

ಲಕ್ನೋ: ಚುಕ್ಕಿ ಜಿಂಕೆ, ಸಾರಂಗ ಮುಂತಾದವುಗಳು ಸಾಮಾನ್ಯವಾಗಿ  ಕಾಣಿಸಿಗುತ್ತವೆ. ಆದರೆ ಬಿಳಿ ಬಣ್ಣದ ಜಿಂಕೆಗಳನ್ನು ಎಲ್ಲದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ... ಸಾಮಾನ್ಯವಾಗಿ ಕಾಣ ಸಿಗುವ ಚುಕ್ಕಿ ಜಿಂಕೆಯ ಜೊತೆ ಇಲ್ಲೊಂದು ಕಡೆ ಬಿಳಿಜಿಂಕೆಯೊಂದು ಪತ್ತೆಯಾಗಿದೆ. ಉತ್ತರಪ್ರದೇಶದ ಕತರ್ನಿಯಾ ಘಾಟ್‌ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ದೃಶ್ಯ ಕಂಡು ಬಂದಿದೆ.  ಭಾರತೀಯ ಅರಣ್ಯ ಸೇವೆ ಅಧಿಕಾರಿ ಆಕಾಶ್ ದೀಪ್ ಬಧವಾನ್ (Akash Deep Badhawan) ಎಂಬುವವರು ಈ ಅಪರೂಪದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಜಿಂಕೆಗೆ ಅಲ್ಬಿನೋ ಜಿಂಕೆ ಎಂದು ಕರೆಯಲಾಗುತ್ತದೆ.  

ಆಕಾಶ್ ದೀಪ್ ಬಧವಾನ್ ಅವರು ಈ ಅಪರೂಪದ ಫೋಟೋದ ಜೊತೆ 'ಕತಾರ್ನಿಯಾ ಘಾಟ್ ಎಂಬ ಹೆಸರಿಗೆ ಬದ್ಧವಾಗಿರುವಂತೆ ಇಲ್ಲಿ ಅಪರೂಪವಾದವುಗಳು ಕಾಣಸಿಗುವುದು ಸಾಮಾನ್ಯ ಎನಿಸಿದೆ.  ಇಲ್ಲಿ ಇಂದು ಅಲ್ವಿನೋ ಜಿಂಕೆ ಕಾಣಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಹುಲ್ಲಿನ ಮಧ್ಯೆ ಚುಕ್ಕಿ ಜಿಂಕೆ ಜೊತೆಗೆ ಈ ಬಿಳಿ ಬಣ್ಣದ ಜಿಂಕೆ ಓಡಾಡುತ್ತಿರುವುದು ಕಾಣಿಸಿದೆ. 

ಸಿನಿಮಾದ ಕ್ಲೈಮ್ಯಾಕ್ಸ್ ಮೀರಿಸ್ತಿದೆ ಈ ದೃಶ್ಯ: ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್

ಈ ಅಪರೂಪದ ಫೋಟೋಗೆ ಹಲವು ಬಳಕೆದಾರರ ಜೊತೆ ದೇಶದ ಹಲವು ಐಎಫ್‌ಎಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.   ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್‌ ಈ ಫೋಟೋಗೆ ಪ್ರತಿಕ್ರಿಯಿಸಿ, ಅಪರೂಪದವುಗಳನ್ನು ಪ್ರಕೃತಿಯಿಂದ ಬೇಗ ತೆಗೆದು ಹಾಕಲಾಗುತ್ತದೆ., ಈ ಪ್ರಕೃತಿಗೆ ಅವುಗಳು ಹೊಂದಿಕೊಳ್ಳುವುದು ಕಷ್ಟ ಎಂದು ಬರೆದುಕೊಂಡಿದ್ದಾರೆ.  ಹಾಗೆಯೇ  ಮತ್ತೊಬ್ಬ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ (Susanta Nanda) ಪ್ರತಿಕೃಯಿಸಿ,  ರಾಮಾಯಣದಲ್ಲಿ (Ramayana) ಬಂಗಾರದ ಬಣ್ಣದ ಜಿಂಕೆಯ (Golden deer) ಉಲ್ಲೇಖವಿರುವುದು ನಿಮಗೆ ಗೊತ್ತು. ಒಡಿಶಾ ಅಂಗುಲ್ ಜಿಲ್ಲೆಯಲ್ಲಿ 15 ವರ್ಷಗಳ ಹಿಂದೆ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು.  ಅಲ್ಲಿನ ಲಬಂಗಿ  ಅತಿಥಿ ಗೃಹದ (Labangi guest house) ಬಳಿ ಇದನ್ನು ನೋಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. 

ವಾಹ್ ಈ ದೃಶ್ಯ ತುಂಬಾ ಚೆನ್ನಾಗಿದೆ.  ಅಪರೂಪವಾದುವುಗಳು ಸಾಮಾನ್ಯವಾಗಿರುವ ಕತಾರ್ನಿಘಾಟ್‌ಗೆ (Katarniaghat) ಮತ್ತೆ ಶೀಘ್ರದಲ್ಲೇ ಭೇಟಿ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಗೆಯೇ ಇನ್ನೊಬ್ಬ ಬಳಕೆದಾರರು ಇದು ಅದ್ಭುತ ಎಂದು ಕಾಮೆಂಟ್ ಮಾಡಿದರು.  ಹಾಗೆಯೇ  ಮತ್ತೊಬ್ಬ ನೋಡುಗರು, ಇದು ಪರಭಕ್ಷಕಗಳಿಗೆ ಕುಳಿತುಕೊಳ್ಳುವ ಬಾತುಕೋಳಿ ಎಂದು ಅದರ ಉಳಿಯುವಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. 

Wildlife: ಜಿಂಕೆ ಮರಿ‌ಸಾಕಲು ಹೋಗಿ ಪೇಚಿಗೆ ಸಿಲುಕಿದ ಕಾಫಿ ಎಸ್ಟೇಟ್ ಮಾಲೀಕ!

ನ್ಯಾಷನಲ್ ಜಿಯಾಗ್ರಾಫಿಕ್ (National Geographic) ಪ್ರಕಾರ, ಅಲ್ಬಿನೋ ಪ್ರಾಣಿಗಳಲ್ಲಿ ವರ್ಣದ್ರವ್ಯತೆಯೂ ಭಾಗಶಃ ಅಥವಾ ಸ್ವಲ್ಪವೂ ಇರುವುದಿಲ್ಲ.  ಒಬ್ಬ ವ್ಯಕ್ತಿಯ ದೇಹದಲ್ಲಿ ಎರಡೂ ಪೋಷಕರಿಂದ  ಮೆಲನಿನ್‌ ಉತ್ಪಾದನೆಗೆ ಅಡ್ಡಿಪಡಿಸುವ ಒಂದು ಅಥವಾ ಹೆಚ್ಚು ರೂಪಾಂತರಿತ ಜೀನ್‌ಗಳನ್ನು ಪಡೆದಾಗ ಆಲ್ಬಿನಿಸಂ ಸಂಭವಿಸುತ್ತದೆ. ಹಾಗೆಯೇ ಪ್ರಾಣಿಗಳಲ್ಲಿ ಈ ರೀತಿಯ ವರ್ಣ ಬದಲಾವಣೆಗೆ ಕಾರಣವಾಗಿದೆ. 

ಅಲ್ಬಿನೋ ವನ್ಯಜೀವಿಗಳು (Albino wildlife) ನಿಸರ್ಗದಲ್ಲಿ ಅಡೆತಡೆಗಳನ್ನು ತೊಂದರೆಗಳನ್ನು ಎದುರಿಸುತ್ತವೆ ಏಕೆಂದರೆ ಅವುಗಳು ಕಳಪೆ ದೃಷ್ಟಿಯನ್ನು ಹೊಂದಿರುತ್ತವೆ. ಸ್ಪಷ್ಟ ದೃಷ್ಟಿಯ ಕೊರತೆಯಿಂದಾಗಿ ಇತರ ಪರಭಕ್ಷಕ ಪ್ರಾಣಿಗಳಿಗೆ ಇವು ಸುಲಭವಾಗಿ ಆಹಾರವಾಗುತ್ತದೆ.  ತಮಗೆ ಎದುರಾಗುವ ಅಪಾಯವನ್ನು ಗೃಹಿಸುವಲ್ಲಿ ಅವುಗಳು ವಿಫಲವಾಗುತ್ತವೆ.  ಅಲ್ಲದೇ ಸಂಗಾತಿಯ ಹುಡುಕಾಟಕ್ಕೂ ಇವುಗಳ ಬಣ್ಣ ಇವುಗಳಿಗೆ ತೊಡಕಾಗುತ್ತದೆ. ಈ ಎಲ್ಲಾ ಅಸಮರ್ಥತೆ ಅವುಗಳನ್ನು ಪರಭಕ್ಷಕ (predators) ಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುತ್ತವೆ. 


 

Latest Videos
Follow Us:
Download App:
  • android
  • ios