ಚೀನಾದ ನೀಳ ಕೇಶಿಯರ ಗ್ರಾಮದ ಉದ್ದ ತಲೆಕೂದಲ ರಹಸ್ಯವಿದು!

ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದ ಹುವಾಂಗ್ಲುವೋ ಗ್ರಾಮದ ಯಾವೋ ಅಲ್ಪಸಂಖ್ಯಾತ ಮಹಿಳೆಯರು ತಮ್ಮ 2.1 ಮೀಟರ್ ಉದ್ದದ ಕಪ್ಪು ಕೂದಲಿಗೆ ಹೆಸರುವಾಸಿ. ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಇದನ್ನು "ವಿಶ್ವದ ಉದ್ದನೆಯ ತಲೆಕೂದಲ ಗ್ರಾಮ" ಎಂದು ಗುರುತಿಸಿದೆ. ಇವರ ಈ ನೀಳ ಕೇಶದ ರಹಸ್ಯ ತಿಳಿಯಬನ್ನಿ.

The Chinese Village of Long-Haired women

2023ರಲ್ಲಿ ಜಾಗತಿಕ ಶಾಂಪೂ ಮಾರುಕಟ್ಟೆ 3200 ಕೋಟಿ ಡಾಲರ್‌ ಅಂದಾಜು ಮೌಲ್ಯವನ್ನು ಹೊಂದಿತ್ತು. ಆದರೆ ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದ ಪರ್ವತಗಳ ನಡುವೆ ಇರುವ ಹುವಾಂಗ್ಲುವೋ ಗ್ರಾಮದ ಮಹಿಳೆಯರು ಈ ಶಾಂಪೂ ಉದ್ಯಮಕ್ಕೆ ಒಂದು ಬಿಡಿಗಾಸನ್ನೂ ನೀಡುವುದಿಲ್ಲ. ಯಾಕೆಂದರೆ ಇಲ್ಲಿಯವರಿಗೆ ಇದು ನೈಸರ್ಗಿಕ. ಇಲ್ಲಿನ ಯಾವೋ ಅಲ್ಪಸಂಖ್ಯಾತ ಜನಾಂಗದ ಮಹಿಳೆಯರಿಗೆ ತಲೆಕೂದಲೇ ಅವರ ಅತ್ಯಂತ ಅಮೂಲ್ಯವಾದ ಆಸ್ತಿ. ಚೀನಾದಾದ್ಯಂತ ಇದನ್ನು "ಲಾಂಗ್ ಹೇರ್ ವಿಲೇಜ್" ಎಂದೇ ಗುರುತಿಸಲಾಗುತ್ತದೆ. ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಇದನ್ನು "ವಿಶ್ವದ ಉದ್ದನೆಯ ತಲೆಕೂದಲ ಗ್ರಾಮ" ಎಂದು ಗುರುತಿಸಿದೆ. 

ಇಲ್ಲಿನವರು ತಮ್ಮ ಕಪ್ಪು ತಲೆಕೂದಲನ್ನು 2.1 ಮೀಟರ್ (6.8 ಅಡಿ) ಉದ್ದದವರೆಗೂ ಬೆಳೆಸುತ್ತಾರೆ. ತಮ್ಮ ವೃದ್ಧಾಪ್ಯದವರೆಗೂ ಅದನ್ನು ಆರೋಗ್ಯಕರವಾಗಿ ನೋಡಿಕೊಳ್ಳುತ್ತಾರೆ. ಹೆಚ್ಚಿನವರ ತಲೆಕೂದಲು ಬೆಳ್ಳಗೆ ಸಹ ಆಗುವುದಿಲ್ಲ. ಇದರ ರಹಸ್ಯವೇನು? ಉತ್ತರ ಸರಳ. ಇವರು ಗಂಜಿ ತಿಳಿ ಅಥವಾ ಗಂಜಿ ಕುದಿಸಿದ ನೀರಿನ ಇವರದೇ ಶಾಂಪೂ ಬಳಕೆ. ಪ್ರಾಚೀನ ಕಾಲದಿಂದಲೂ ಈ ಹಳ್ಳಿಯ ಮಹಿಳೆಯರಿಗೆ ಇದೇ ನೈಸರ್ಗಿಕ ಶಾಂಪೂ.

ಇಲ್ಲಿ 82 ಮನೆಗಳಿವೆ. ಜನಸಂಖ್ಯೆ ಸುಮಾರು 400. ಹುವಾಂಗ್ಲುವೊದ ರೆಡ್ ಯಾವೊ ಮಹಿಳೆಯರಿಗೆ ತಲೆಕೂದಲು ವ್ಯವಹಾರದ ಮೂಲವೂ ಹೌದು. ದಿನದ ಸಾಮಾನ್ಯ ಕೆಲಸಗಳ ಜೊತೆಗೆ ಈ ನೀಳಕೇಶಿಯರು ದಿನಕ್ಕೆ ಹಲವಾರು ಬಾರಿ ಗುಂಪುಗಳಲ್ಲಿ ಹಾಡುತ್ತಾರೆ ಮತ್ತು ಪ್ರದರ್ಶನ ನೀಡುತ್ತಾರೆ. ಪ್ರವಾಸಿಗರಿಗೆ ತಮ್ಮ ಉದ್ದನೆಯ ಕೂದಲನ್ನು ಪ್ರದರ್ಶಿಸುತ್ತಾರೆ. ಸೀಸನ್‌ನಲ್ಲಿ ಅವರು ತಿಂಗಳಿಗೆ 300 ಡಾಲರ್‌ ಗಳಿಸುತ್ತಾರೆ. ಸಾಂಪ್ರದಾಯಿಕ ಕೆಂಪು ಬಟ್ಟೆ ಧರಿಸಿ ರಂಗು ರಂಗಾಗಿರುತ್ತಾರೆ.  ಕೂದಲನ್ನು ಉದ್ದವಾಗಿ ಬೆಳೆಸುವುದು ದೀರ್ಘಾಯುಷ್ಯ, ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂಬುದು ಇವರ ಪ್ರಾಚೀನ ನಂಬಿಕೆ. ಕೂದಲು ಉದ್ದವಾದಷ್ಟೂ ಅದೃಷ್ಟ ಹೆಚ್ಚಂತೆ.

ಇವರಿಗೆ ತಮ್ಮ ತಲೆಕೂದಲೆಂದರೆ ಪರಮ ಪವಿತ್ರ. ಇತ್ತೀಚಿನವರೆಗೂ, ಇವರು ತಮ್ಮ ತಲೆಕೂದಲನ್ನು ತಮ್ಮ ಪತಿ ಮತ್ತು ಮಕ್ಕಳನ್ನು ಹೊರತುಪಡಿಸಿ ಯಾರಿಗೂ ತೋರಿಸುತ್ತಿರಲಿಲ್ಲ. ಸಾರ್ವಜನಿಕವಾಗಿ ಕೂದಲು ಕಾಣಿಸುವುದು ಇಲ್ಲವೇ ಇಲ್ಲ. ಹೊರಗಿನವರ ಅಥವಾ ವಿದೇಶಿಗರ ಕಣ್ಣಿಗೆ ಇವರ ತಲೆಕೂದಲು ಕಾಣಿಸಿದರೆ, ಅವರು ಆ ಮಹಿಳೆಯ ಕುಟುಂಬದೊಂದಿಗೆ ಮೂರು ವರ್ಷಗಳನ್ನು ಕಳೆಯಲು ಒತ್ತಾಯಿಸುತ್ತಿದ್ದರು. ಇದೇ ಇಲ್ಲಿನ ಸಂಪ್ರದಾಯದ ಕಾನೂನಾನಿತ್ತು. ಈ ಹಳತಾದ ನಿಯಮಗಳನ್ನು 1980ರ ದಶಕದ ಉತ್ತರಾರ್ಧದಲ್ಲಿ ರದ್ದುಗೊಳಿಸಲಾಯಿತು. ಈಗ ಈ ಪ್ರದೇಶಕ್ಕೆ ಪ್ರವಾಸೋದ್ಯಮವೇ ಆದಾಯದ ಮೂಲವಾಗಿದೆ. ಒಮ್ಮೆ ಈ ಪ್ರಾಂತ್ಯ ಅತ್ಯಂತ ಬಡತನದಲ್ಲಿತ್ತು. ಈಗ ಹಾಗಿಲ್ಲ.

ಹುವಾಂಗ್ಲುವೊದ ಮಹಿಳೆಯರು ತಮ್ಮ 18ನೇ ಹುಟ್ಟುಹಬ್ಬದಂದು, ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ತಮ್ಮ ಕೂದಲನ್ನು ಕತ್ತರಿಸಬಹುದು. ಆದರೆ ಕತ್ತರಿಸಿದ ಕೂದಲನ್ನು ಹುಡುಗಿಯ ಅಜ್ಜಿಗೆ ನೀಡಲಾಗುತ್ತದೆ ಮತ್ತು ಅಲಂಕಾರಿಕ ಶಿರಸ್ತ್ರಾಣವನ್ನಾಗಿ ಮಾಡಲಾಗುತ್ತದೆ. ಯುವತಿ ಮದುವೆಯಾದಾಗ, ಆ ಕತ್ತರಿಸಿದ ಕೂದಲಿನ ಚೌರಿಯನ್ನು ವರನಿಗೆ ಉಡುಗೊರೆಯಾಗಿ ನೀಡಲಾಗುತ್ತದೆ! 

ದಟ್ಟಾರಣ್ಯದಲ್ಲಿರೋ ಆದಿವಾಸಿಗಳ ಭೇಟಿಗೆ  ಹೋದ ಆಸ್ಟ್ರೇಲಿಯಾ ಯೂಟ್ಯೂಬರ್‌ಗೆ ಆಯ್ತು  ವಿಚಿತ್ರ ಅನುಭವ  

ಇಲ್ಲಿನ ಸ್ತ್ರೀಯರು ಕೂದಲನ್ನು ಮೂರು ಥರ ಕಟ್ಟುತ್ತಾರೆ. ಕೂದಲನ್ನು ಅವಳ ತಲೆಯ ಮೇಲೆ ವೃತ್ತಾಕಾರದ ತಟ್ಟೆಯಂತೆ ಸುತ್ತಿದರೆ, ಅವಳು ಮದುವೆಯಾಗಿದ್ದಾಳೆ ಆದರೆ ಮಕ್ಕಳಿಲ್ಲ ಎಂದರ್ಥ. ಅವಳು ತನ್ನ ತಲೆಗೂದಲನ್ನು ಮುಂಭಾಗದಲ್ಲಿ ಬನ್ ಥರ ಧರಿಸಿದರೆ ಮದುವೆಯಾಗಿದೆ, ಮಕ್ಕಳಿವೆ ಎಂದರ್ಥ. ತನ್ನ ತಲೆಯ ಸುತ್ತಲೂ ಸ್ಕಾರ್ಫ್ ಧರಿಸಿದರೆ, ಅವಳ ಕೂದಲನ್ನು ಮರೆಮಾಡಲಾಗಿದೆ, ಅವಳು ಗಂಡನನ್ನು ಹುಡುಕುತ್ತಿದ್ದಾಳೆ ಎಂದರ್ಥ. ಇತ್ತೀಚಿನ ದಿನಗಳಲ್ಲಿ, ಮಹಿಳೆ ಮದುವೆಯಾದ ನಂತರ, ತನ್ನ ಸೌಂದರ್ಯವನ್ನು ಪ್ರಪಂಚದೊಂದಿಗೆ ಆಕೆ ಹಂಚಿಕೊಳ್ಳುತ್ತಾಳೆ. 

ಇನ್ನು ಇವರ ಪ್ರಾಚೀನ ಶಾಂಪೂ ಬಗ್ಗೆ. ಇದು ಸ್ವಲ್ಪ ಹುಳಿಯಾಗಿ ಹೋಗಿರುವ ಹುದುಗಿಸಿದ ಅಕ್ಕಿ ನೀರು. ಇದು ಉತ್ಕರ್ಷಣ ನಿರೋಧಕಗಳು, ಖನಿಜಗಳು, ವಿಟಮಿನ್ ಇಗಳಿಂದ ಸಮೃದ್ಧ. ನಿಮ್ಮ ಕೂದಲನ್ನೂ ಇದರಿಂದ ಸದಾ ತೊಳೆದು ಹೊಳೆಪಾಗಿ, ಮೃದುವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಇದು ತಲೆಯ ಚರ್ಮಕ್ಕೂ ಆರೋಗ್ಯಕರ. ನೀವು ನಂಬುತ್ತೀರಾ? ಯಾವೋ ಮಹಿಳೆಯರಲ್ಲಿ ಹೆಚ್ಚಿನವರು 80 ವರ್ಷ ದಾಟುವವರೆಗೂ ಒಂದೇ ಒಂದು ಬಿಳಿ ಕೂದಲನ್ನು ಹೊಂದುವುದಿಲ್ಲ! 
 

ಕುಕ್ಕಿಂಗ್ ವೀಡಿಯೋಗಳಿಂದಲೇ ತಿಂಗಳಿಗೆ 10 ಲಕ್ಷ ಸಂಪಾದಿಸ್ತಾರಂತೆ ಈ ಟ್ರಕ್ ಡ್ರೈವರ್
 

Latest Videos
Follow Us:
Download App:
  • android
  • ios