ರಾಮನಿಗಾಗಿ ಶಬರಿ ಕಾದ ಜಾಗದಲ್ಲಿ ಈಗಲೂ ಚಿಮ್ಮುತ್ತೆ ನೀರು!

ಬೆ ಳಗಾವಿ ಅರೆ ಮಲೆನಾಡು. ಸರ್ವಕಾಲಕ್ಕೂ ತಂಪು ಸೂಸುವ ನೆಲ. ಇನ್ನೂ ಮಳೆಗಾಲ ಬಂತೆಂದರೆ ಸಾಕು, ಸುತ್ತಲೆಲ್ಲ ಜಲಧಾರೆಗಳ ಸೊಬಗು. ಇವುಗಳಲ್ಲಿ ಸುರೇಬಾನದ ಶಬರಿಕೊಳ್ಳವು ಒಂದು. 

 

story of sureban shabari kola in belgaum district

ಮಂಜುನಾಥ ಗದಗಿನ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಸುರೇಬಾನ ಗ್ರಾಮದ ಈ ಜಲಧಾರೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಸುರೇಬಾನ ಗ್ರಾಮ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆಯ ಕ್ಷೇತ್ರ. ಶಬರಿ ರಾಮನಿಗಾಗಿ ಇಲ್ಲೇ ಕಾದಿದ್ದಳಂತೆ. ಹಾಗಾಗಿ ಇದಕ್ಕೆ ಶಬರಿಕೊಳ್ಳ ಎಂಬ ಹೆಸರು.

ಸುರೇಬಾನ ಗ್ರಾಮದಿಂದ ಮೂರು ಕಿಮೀ ದೂರದಲ್ಲಿ ಸುಮಾರು 200 ಅಡಿಯಿಂದ ಧುಮ್ಮಿಕ್ಕು ಅಂತರಗಂಗೆಯಿದು. ಈ ಸ್ಥಳದ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. ಆ ಕಾರಣಕ್ಕೋ ಏನೋ ಪ್ರವಾಸಿಗರ ಗಜಿಬಿಜಿ ಇಲ್ಲದೇ, ಕಸ, ಪ್ಲಾಸ್ಟಿಕ್‌ಗಳ ರಾಶಿಯಿಲ್ಲದೇ ಧ್ಯಾನಸ್ಥವಾಗಿ ಕಳೆಯುವಂತಿದೆ ಈ ಶಬರಿ ಕೊಳ್ಳ. ಸುತ್ತಲೂ ಬೆಟ್ಟಗುಡ್ಡ, ನಡುವೆ ಹರಿವ ಜಲಧಾರೆ, ಕಾಡಿನ ನಡುವೆ ಹರಿವ ನೀರಿನ ಶಬ್ದ.. ಒಟ್ಟಿನಲ್ಲಿ ಶಬರಿಕೊಳ್ಳ ಸೌಂದರ್ಯ ಅನನ್ಯ.

ಜಗತ್ತಿನ ವನ್ಯಜೀವಿಗಳು ಎದುರಿಸುತ್ತಿರುವ ಐದು ಅಪಾಯಗಳು! .

ಶಬರಿ ದೇವಿ ಸುರೇಬಾನದ ಗ್ರಾಮದೇವತೆ.

ಈ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳು ಸಂಧಿಸುವ ಕಣಿವೆಯಲ್ಲಿ ಹುಟ್ಟಿ ಧುಮ್ಮಿಕ್ಕುತ್ತಾಳೆ. ಈ ಕಣಿವೆಯ ಇನ್ನೊಂದು ಭಾಗದಲ್ಲಿ ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯುತ್ತಿವೆ. ಆದರೆ ಬೇಸಿಗೆ ಕಾಲದಲ್ಲಿ ಈ ಎರಡು ಹೊಂಡಗಳ ನೀರು ಒಣಗಿ ಭಣಗುಡುತ್ತಿದ್ದವು. ಆದರೆ ಇದೀಗ ಮಳೆಯಾಗಿದ್ದರಿಂದ ಅಂತರಗಂಗೆ ಹಾಗೂ ಹೊಂಡಗಳು ಭರಪೂರ ನೀರಿನಿಂದ ಕಂಗೊಳಿಸುತ್ತಿವೆ.

ಇನ್ನೂ ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳ ದೃಶ್ಯವಿದೆ.

ಕಸವೆಲ್ಲ ಎಸೆಯಬೇಕಾಗಿಲ್ಲ; ಎವರೆಸ್ಟ್‌ ಅಂಗಳದ ಅಂದಗೆಡಿಸಿದ ಕಸಗಳಿಗೆ ಮರುಜನ್ಮ!

ಶಬರಿ ಕೊಳ್ಳದ ಐತಿಹ್ಯ:

ಶ್ರೀರಾಮನ ಭಕ್ತಳಾದ ಶಬರಿ, ರಾಮ ಲಕ್ಷ ಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಕಾದು ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ ಕಥೆ ರಾಮಾಯಣದಲ್ಲಿದೆ. ಅದು ಇದೇ ಸ್ಥಳ ಎನ್ನಲಾಗುತ್ತಿದೆ. ಹಣ್ಣನ್ನು ಸ್ವೀಕರಿಸಿದ ಶ್ರೀರಾಮ, ಈಕೆ ಭಕ್ತಿಗೆ ಮೆಚ್ಚಿ ಏನು ವರ ಬೇಕೆಂದು ಕೇಳಿದಾಗ, ರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ಪ್ರಾಣ ಹೋಗುವ ಸಂದರ್ಭದಲ್ಲಿ ಬಾಯಿಗೆ ನೀರು ಬಿಡಲು ರಾಮ ಸುತ್ತಲೂ ನೋಡುತ್ತಾನೆ. ನೀರ ಸೆಲೆ ಕಾಣದಿದ್ದಾಗ ಬಾಣ ಪ್ರಯೋಗ ಮಾಡಿ ನೀರು ಚಿಮ್ಮಿಸಿದ.

ಜಗತ್ತಿನ ಟಾಪ್ 10 ಹಾಟ್‌ಸ್ಪಾಟ್; 2020ಯಲ್ಲಿ ಸ್ಥಾನ ಪಡೆದ ಜೋಧ್‌ಪುರ!

ಹೀಗೆ ನೀರು ಚಿಮ್ಮಿದ ಎರಡು ಹೊಂಡಗಳು ಇಲ್ಲಿ ಸಾಕ್ಷಿಯಾಗಿ ಉಳಿದುಕೊಂಡಿವೆ. ಗಣಪತಿ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲ ಎಂದು ಭಕ್ತರು ಹೇಳುತ್ತಾರೆ. ಜಕಣಾಚಾರಿ ಕೆತ್ತನೆ: ಶಿಲ್ಪಿ ಜಕಣಾಚಾರಿ ಕೆತ್ತಿದ ಶಬರಿದೇವಿಯ ದೇಗುಲ ಇಲ್ಲಿದೆ. ವಿಶಾಲ ಮುಖ ಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿ ಮೂರ್ತಿಯು ಸುಮಾರು ಐದು ಅಡಿ ಎತ್ತರದ ಕಲ್ಲಿನ ಪ್ರಭಾವಳಿಗೆ ಹೊಂದಿಕೊಂಡ ಮೂರ್ತಿಯಾಗಿದೆ. ದೇವಾಲಯದ ಎದುರಿಗೆ ದೀಪಮಾಲಿಕಾ ಕಂಬವಿದೆ.

 

Latest Videos
Follow Us:
Download App:
  • android
  • ios