ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಸಂಸ್ಥೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫರ್ ಮೂಲಕ ಟಿಕೆಟ್ ಬೆಲೆ ಕೇವಲ 999 ರೂಪಾಯಿ ಮಾತ್ರ.  ವಿಶೇಷ ಅಂದರೆ 7 ದಿನಗಳ ಬುಕಿಂಗ್ ಅವಧಿ ಹಾಗೂ 7 ತಿಂಗಳ ಪ್ರಯಾಣ ಅವಧಿಯನ್ನು ನೀಡಲಾಗಿದೆ.

ಬೆಂಗಳೂರು(ಮಾ.11) ಸಿಲಿಕಾನ್ ಸಿಟಿ ಬೆಂಗಳೂರಿನಿಂದ ವಿಮಾನ ಪ್ರಯಾಣ ಆರಂಭಿಸಿದ ಭಾರತದ ಸ್ಟಾರ್ ಏರ್ ಸಂಸ್ಥೆ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಿದೆ. ಇದೀಗ ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮದಲ್ಲಿದೆ. ಮಾರ್ಚ್ 14ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ಹಬ್ಬದ ಹಿನ್ನಲೆಯಲ್ಲಿ ಸ್ಟಾರ್ ಏರ್ ವಿಮಾನ ಸಂಸ್ಥೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಇದೀಗ ಸ್ಟಾರ್ ಏರ್ ಮೂಲಕ ವಿಮಾನ ಪ್ರಯಾಣ ಮಾಡಲು ಬಸ್‌ಗಿಂತ ಕಡಿಮೆ ಬೆಲೆ. ಹೌದು, ಕೇವಲ 999 ರೂಪಾಯಿಗೆ ಸ್ಟಾರ್ ಏರ್ ವಿಮಾನ ಪ್ರಯಾಣ ನೀಡುತ್ತಿದೆ.

ಕೇವಲ ಎಕಾನಮಿ ಕ್ಲಾಸ್ ಮಾತ್ರ ಅಲ್ಲ, ಬ್ಯೂಸಿನೆಸ್ ಕ್ಲಾಸ್‌ನಲ್ಲೂ ಆಫರ್ ನೀಡುತ್ತಿದೆ. ಹೋಳಿ ಹಬ್ಬದ ಈ ಆಫರ್ ಅಧಿತಕೃತವಾಗಿ ಸ್ಟಾರ್ ಏರ್ ಘೋಷಿಸಿದೆ. ಹೋಳಿ ಹಬ್ಬದ ಡಿಸ್ಕೌಂಟ್ ಆಫರ್ ಮೂಲಕ ಆರಂಭಿಕ 999 ರೂಪಾಯಿಂದ ವಿಮಾನ ಪ್ರಯಾಣ ಮಾಡಲು ನೀವು ಮಾರ್ಟ್ 11 ರಿಂದ ಮಾರ್ಟ್ 17, 2025ರೊಳಗೆ ಬುಕಿಂಗ್ ಮಾಡಬೇಕು. ಅದರೆ 7 ದಿನಗಳ ಬುಕಿಂಗ್ ಕಾಲಾವಕಾಶ ನೀಡಲಾಗಿದೆ. 7 ದಿನಗಳಲ್ಲಿ ಡೋಮೆಸ್ಟಿಕ್ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಹೀಗೆ ಬುಕಿಂಗ್ ಮಾಡುವಾಗ ಹೋಳಿ ಆಫರ್ ಮೂಲಕ ಟಿಕೆಟ್ ಬುಕಿಂಗ್ ಮಾಡುವ ಅವಕಾಶ ನೀಡಲಾಗಿದೆ. 

Kodagu News: ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!

ಮಾರ್ಚ್ 11 ರಿಂದ 17ರ ವರೆಗೆ ಬುಕಿಂಗ್ ಕಾಲಾವಕಾಶ ನೀಡಲಾಗಿದ್ದರೆ, ಪ್ರಯಾಣದ ಅವಧಿ ಮಾರ್ಚ್ 11 ರಿಂದಲೇ ಆರಂಭಗೊಳ್ಳುತ್ತದೆ. ಇದು ಸರಿಸುಮಾರು 7 ತಿಂಗಳ ವರೆಗೆ ನೀಡಲಾಗಿದೆ. ಮಾರ್ಚ್ 11 ರಿಂದ ಸೆಪ್ಟೆಂಬರ್ 30, 2025ರ ವರೆಗೆ ಹೋಳಿ ಹಬ್ಬದ ಆಫರ್ ಪ್ರಯಾಣ ಮಾಡಬಹುದು. ಹೀಗಾಗಿ ಪ್ರಯಾಣಿಕರು ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ಪಡೆಯಲಿದ್ದಾರೆ.

ಸ್ಟಾರ್ ಏರ್ ಹೋಳಿ ಆಫರ್
ಎಕಾನಮಿ ಕ್ಲಾಸ್ ಟಿಕೆಟ್ ಬೆಲೆ , 999 ರೂಪಾಯಿಯಿಂದ ಆರಂಭ
ಬ್ಯೂಸಿನೆಸ್ ಕ್ಲಾಸ್ ಟಿಕೆಟ್ ಬೆಲೆ, 3099 ರೂಪಾಯಿಯಿಂದ ಆರಂಭ
ಬುಕಿಂಗ್ ಅವಧಿ, 11 ಮಾರ್ಚ್ ನಿಂದ 17 ಮಾರ್ಚ್
ಪ್ರಯಾಣ ಅವಧಿ, 11 ಮಾರ್ಚ್‌ನಿದ ಸೆಪ್ಟೆಂಬರ್ 30, 2025

ಎಕಾನಾಮಿ ಕ್ಲಾಸ್ ಟಿಕೆಟ್ ಬೆಲೆ 999 ರೂಪಾಯಿಯಿಂದ ಆರಂಭಗೊಳ್ಳಲಿದೆ. ನಿಮ್ಮ ಪ್ರಯಾಣದ ಅನುಸಾರ ಟಿಕೆಟ್ ಬೆಲೆ ಬದಲಾಗಲಿದೆ.

ಬೆಂಗಳೂರು ಹೈದರಾಬಾದ್, ಬೆಳಗಾವಿ ನಾಗ್ಪುರ, ಹೈದರಾಬಾದ್ ಗೋವಾ ಶಿವಮೊಗ್ಗ, ತಿರುಪತಿ ಹೈದರಾಬಾದ್ ಸೇರಿದಂತೆ ಹಲವು ಕಡೆಗಳಿಗೆ ಸ್ಟಾರ್ ಏರ್ ವಿಮಾನ ಸೇವೆ ನೀಡುತ್ತಿದೆ. 2019ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸ್ಟಾರ್ ಏರ್ ತನ್ನ ಸೇವೆ ಆರಂಭಿಸಿದೆ. ಸ್ಟಾರ್ ಏರ್ ಬೇಸ್ ನಿಲ್ದಾಣ ಬೆಂಗಳೂರು. ಕರ್ನಾಟಕದಿಂದ ವಿಮಾನ ಸೇವೆ ಆರಂಭಿಸಿದ ಸ್ಟಾರ್ ಏರ್ ಬಳಿಕ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಮೂಲಕ ಹಂತ ಹಂತವಾಗಿ ಇತರ ರಾಜ್ಯಗಳಿಗೆ ಸೇವೆ ವಿಸ್ತರಿಸಿದೆ. 

2017ರಲ್ಲಿ ಸ್ಟಾರ್ ಏರ್ ಸಂಸ್ಥೆ ಕೇಂದ್ರ ಸರ್ಕಾರದಿಂದ ಪರವಾನಗೆ ಪಡೆದುಕೊಂಡಿದ್ದಾರೆ. ಎರಡು ವರ್ಷಗಳ ತಯಾರಿ ಬಳಿಕ ಸ್ಟಾರ್ ಏರ್ ಸೇವೆ ಆರಂಭಿಸಿತು.

ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಅನುದಾನ, ರೈಲ್ವೆ, ಜಲಸಾರಿಗೆ ಕ್ಷೇತ್ರಕ್ಕೆ ಎಷ್ಟು ಸಿಕ್ತು?