Asianet Suvarna News Asianet Suvarna News

Viral Video: ತಂದೆಯನ್ನು ಮೊದಲ ಬಾರಿ ವಿಮಾನದಲ್ಲಿ ಕೊಂಡೊಯ್ದ ಮಗ, ಅಪ್ಪನ ರಿಯಾಕ್ಷನ್ ನೋಡಿ..

ಹೆತ್ತವರ ಕನಸನ್ನು ಈಡೇರಿಸುವುದು ಪ್ರತಿಯೊಬ್ಬ ಪೋಷಕರ ಪಾಲಿಗೂ ಹೆಮ್ಮೆಯ ಕ್ಷಣವಾಗಿದೆ. ಅದು ಪುಟ್ಟ ಕನಸಾಗಿರಲಿ ಅಥವಾ ಯಾವುದೋ ದೊಡ್ಡ ಕನಸಾಗಿರಲಿ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕೊಂಡೊಯ್ದಿದ್ದು ಅವರ ರಿಯಾಕ್ಷನ್ ಹೇಗಿತ್ತು ನೋಡಿ.

Son takes dad on his First flight, Priceless reaction of father melts numerous hearts Vin
Author
First Published May 12, 2023, 3:37 PM IST | Last Updated May 12, 2023, 3:40 PM IST

ದೂರ ಪ್ರಯಾಣಕ್ಕೆ ಹೆಚ್ಚಿನವರು ರೈಲು ಅಥವಾ ವಿಮಾನ ಪ್ರಯಾಣವನ್ನು ಆರಿಸುತ್ತಾರೆ. ಜನಸಾಮಾನ್ಯರು ಸಂಚಾರಕ್ಕೆ ಸಾಮಾನ್ಯವಾಗಿ ರೈಲು ಮಾರ್ಗವನ್ನು ಬಳಸುತ್ತಾರೆ. ಇದಲ್ಲದೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂಚರಿಸಬೇಕಾದವರು ವಿಮಾನಯಾನವನ್ನು ಆಯ್ದುಕೊಳ್ಳುತ್ತಾರೆ. ಆದರೆ ವಿಮಾನ ಪ್ರಯಾಣ ಎಲ್ಲರ ಕೈಗೆಟುಕುವಂತಿಲ್ಲ. ಜನಸಾಮಾನ್ಯರಿಗಂತೂ ವಿಮಾನದಲ್ಲಿ ಸಂಚರಿಸುವುದು ಕನಸಿನ ಮಾತು. ಕೆಲವೊಬ್ಬರು ಚಿಕ್ಕಂದಿನಲ್ಲೇ ವಿಮಾನ ಪ್ರಯಾಣ ಮಾಡಿರುತ್ತಾರೆ. ಇನ್ನು ಕೆಲವರು ಉದ್ಯೋಗ ಸಿಕ್ಕ ಬಳಿಕ ತಮ್ಮ ಸ್ಯಾಲರಿಯಲ್ಲಿ ವಿಮಾನ ಪ್ರಯಾಣ ಮಾಡುತ್ತಾರೆ. ವಿಮಾನಯಾನ ದರ ತುಂಬಾ ಕಡಿಮೆಯಿಲ್ಲದ ಕಾರಣ ಹೆಚ್ಚಿನವರು ಫ್ಲೈಟ್ ಹತ್ತುವುದು ಒಂದು ಕನಸು ಎಂಬಂತೆಯೇ ಅಂದುಕೊಳ್ಳುತ್ತಾರೆ.

ರೆಕ್ಕೆ ಬಿಚ್ಚಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುವ ವಿಮಾನ (Flight)ವನ್ನು ನೋಡುವುದೇ ಚೆಂದ. ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಯಲ್ಲಿ ಸಂಚರಿಸಬೇಕೆಂಬುದು ಪ್ರತಿಯೊಬ್ಬರ ಕನಸು. ಆದ್ರೆ ಹಣಕಾಸಿನ ಸಮಸ್ಯೆಯಿಂದ ಎಲ್ಲರಿಂದಲೂ ಅದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಕನಸಿನಂತೆ (Dream) ಅವರನ್ನು ವಿಮಾನದಲ್ಲಿ ಕೊಂಡೊಯ್ದಿದ್ದಾನೆ. ಅವರ ರಿಯಾಕ್ಷನ್ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

106ನೇ ವಯಸ್ಸಿನಲ್ಲಿ ಫ್ಲೈಟ್ ಹತ್ತಿದ ಅಜ್ಜಿ, ಶತಾಯುಷಿಯ ಕನಸಿಗೆ ರೆಕ್ಕೆ ಕಟ್ಟಿ ಹಾರಾಡಿಸಿದವರಾರು ಗೊತ್ತಾ ?

ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಖುಷಿ
ಹೆತ್ತವರ ಆಸೆಗಳನ್ನು ಪೂರೈಸುವುದು ಪ್ರತಿಯೊಬ್ಬ ಮಕ್ಕಳಿಗೂ (Children) ಖುಷಿಯ ಕ್ಷಣವಾಗಿದೆ. ಹೀಗಾಗಿಯೇ ಆಗಾಗ ಅವರಿಗೆ ಹೊರಗಿನ ಪ್ರಪಂಚವನ್ನು ತೋರಿಸಲು ಪ್ರಯತ್ನಿಸುತ್ತಾರೆ. ಇತ್ತೀಚಿಗೆ ದೆಹಲಿಯಲ್ಲಿ ಯುವಕನೊಬ್ಬ ತನ್ನ ತಂದೆಯನ್ನು (Father) ವಿಮಾನದಲ್ಲಿ ಕೊಂಡೊಯ್ದಿದ್ದು ಸದ್ಯ ಆ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಮೊದಲ ಬಾರಿಗೆ ವಿಮಾನದಲ್ಲಿ ಕುಳಿತ ತಂದೆಯ ಪ್ರತಿಕ್ರಿಯೆ (Reaction) ಎಲ್ಲರ ಮನಸ್ಸು ಗೆಲ್ಲುತ್ತಿಎ.

@jatin_lamba_ ಅವರು Instagram ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಅವರು ತಮ್ಮ ಮೊದಲ ವಿಮಾನದಲ್ಲಿ ತಮ್ಮ ತಂದೆಯನ್ನು ಕರೆದೊಯ್ಯುತ್ತಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ವೀಡಿಯೊದಲ್ಲಿ ಕಾಣಬಹುದು. ಅವರು ವಿಮಾನ ಹತ್ತುವಾಗ ಅವರ ತಂದೆ ನಗುತ್ತಿದ್ದಾರೆ ಮತ್ತು ಸೆಲ್ಫಿಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೋಗೆ 'ನೀವು ಮಗನಾಗಿ ಹೆಮ್ಮೆ ಪಡುತ್ತೀರಿ' ಎಂದು ಶೀರ್ಷಿಕೆ ನೀಡಲಾಗಿದೆ.

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ತ್ಯಾಜ್ಯ ಏನಾಗುತ್ತೆ ಗೊತ್ತಾ?

ಮಗನ ಕೆಲಸಕ್ಕೆ ವಾವ್ಹ್‌ ಎಂದ ನೆಟ್ಟಿಗರು
ಏಪ್ರಿಲ್ 10ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಕ್ಲಿಪ್ ಇಪ್ಪತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು ಸಾಕಷ್ಟು ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು 'ವಿಡಿಯೋ ಅದ್ಭುತವಾಗಿದೆ' ಎಂದಿದ್ದಾರೆ. ಮತ್ತೊಬ್ಬರು 'ಏಕೆ ಎಂದು ನನಗೆ ಗೊತ್ತಿಲ್ಲ ಆದರೆ ಈ ವೀಡಿಯೊ ನನ್ನನ್ನು ಭಾವನಾತ್ಮಕಗೊಳಿಸುತ್ತದೆ' ಎಂದು ತಿಳಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು 'ಅಣ್ಣಾ, ನೀವು ನನ್ನ ದಿನವನ್ನು ಇನ್ನಷ್ಟು ಬ್ರೈಟ್‌ ಮಾಡಿದ್ದೀ. ನೀವು ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೀರಿ. ಅಪ್ಪ-ಅಮ್ಮನಿಗೆ ಪ್ರಪಂಚದ ಎಲ್ಲಾ ಖುಷಿಯನ್ನು ನೀಡಬೇಕೆಂದು ಬಯಸುವವರು ಅತ್ಯುತ್ತಮ ವ್ಯಕ್ತಿಗಳಾಗಿರುತ್ತಾರೆ' ಎಂದು ಹೊಗಳಿದ್ದಾರೆ. ಮತ್ತೊಬ್ಬ ವ್ಯಕ್ತಿ 'ನೀನು ಜೀವನದಲ್ಲಿ ನೀನು ಗೆದ್ದೆ ಗೆಳೆಯಾ... ಅದನ್ನೇ ನಾನು ನನ್ನ ಅಪ್ಪ ಅಮ್ಮನಿಗೆ ಮಾಡಬೇಕೆಂದಿದ್ದೇನೆ' ಎಂದು ಬರೆದಿದ್ದಾರೆ.

Latest Videos
Follow Us:
Download App:
  • android
  • ios