20 ರೂ. ಚಹಾಕ್ಕೆ 70 ರೂ. ಬಿಲ್ : ಸೇವಾ ಶುಲ್ಕ ಎಂದ ರೈಲ್ವೇ ಇಲಾಖೆ
ರೈಲ್ವೆ ಪ್ರಯಾಣಿಕರೊಬ್ಬರಿಗೆ 20 ರೂ ಚಹಾಕ್ಕೆ ರೈಲಿನಲ್ಲಿ 70 ರೂಪಾಯಿ ವಸೂಲಿ ಮಾಡಲಾಗಿದೆ. ಚಹಾದ ಬಿಲ್‌ನ ಫೋಟೋವನ್ನು ರೈಲ್ವೆ ಪ್ರಯಾಣಿಕ ಬಾಲ್ ಗೋವಿಂದ್ ವರ್ಮಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.
ಸಾಮಾನ್ಯವಾಗಿ ರೈಲು ಪ್ರಯಾಣ ಮಾಡುವಾಗ ನಮಗೆ ಇಷ್ಟವಾಗದಿರುವ ವಿಷಯ ಎಂದರೆ ರೈಲಿನಲ್ಲಿ ಸಿಗುವ ಆಹಾರ. ಎಷ್ಟೇ ದುಡ್ಡು ನೀಡಿದರೂ ರೈಲಿನಲ್ಲಿ ಸಿಗುವ ಆಹಾರ ತಿನ್ನುವಂತಿರುವುದಿಲ್ಲ ಎಂಬುದು ಅನೇಕರ ಆರೋಪ. ಅದು ಸತ್ಯವೂ ಹೌದು. ಈಗ ರೈಲ್ವೆ ಪ್ರಯಾಣಿಕರೊಬ್ಬರಿಗೆ 20 ರೂ ಚಹಾಕ್ಕೆ ರೈಲಿನಲ್ಲಿ 70 ರೂಪಾಯಿ ವಸೂಲಿ ಮಾಡಲಾಗಿದೆ. ಚಹಾದ ಬಿಲ್‌ನ ಫೋಟೋವನ್ನು ರೈಲ್ವೆ ಪ್ರಯಾಣಿಕ ಬಾಲ್ ಗೋವಿಂದ್ ವರ್ಮಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, ಅನೇಕರು ಈ ದುಬಾರಿ ಬೆಲೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೈಲ್ವೆ ಇಲಾಖೆ ಕೂಡ ಈ ಫೋಟೊಗೆ ಪ್ರತಿಕ್ರಿಯಿಸಿದೆ.
ಏಕೆ ಇಷ್ಟೊಂದು ದುಬಾರಿ ಎಂಬುದಕ್ಕೆ ರೈಲ್ವೆ ಇಲಾಖೆ ಕಾರಣ ತಿಳಿಸಿದೆ. 2018 ರ ಭಾರತೀಯ ರೈಲ್ವೆಯ ಸುತ್ತೋಲೆಯ ಪ್ರಕಾರ, ಪ್ರಯಾಣಿಕರು ರಾಜಧಾನಿ, ಶತಾಬ್ದಿ ಮತ್ತು ದುರಂತೋ ಮುಂತಾದ ರೈಲು ಸೀಟುಗಳಿಗೆ ಕಾಯ್ದಿರಿಸುವಾಗ ಆಹಾರವನ್ನು ಮುಂಚಿತವಾಗಿ ಕಾಯ್ದಿರಿಸದಿದ್ದರೆ, ಪ್ರಯಾಣದ ಸಮಯದಲ್ಲಿ ಅವರು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಐಟಂ ಯಾವುದೇ ಆಗಿರಬಹುದು. ಕೇವಲ ಒಂದು ಕಪ್ ಚಹಾವಾಗಿದ್ದರೂ ಸರಿ ಸೇವಾ ಶುಲ್ಕ 50 ರೂಪಾಯಿಯನ್ನು ನೀವು ಪಾವತಿಸಲೇಬೇಕು.
ಪ್ರಯಾಣಿಕ ಬಾಲಗೋವಿಂದ್ ವರ್ಮಾ ಅವರು ಜೂನ್ 28 ರಂದು ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ದೆಹಲಿಯಿಂದ (Delhi)ಭೋಪಾಲ್‌ಗೆ ಪ್ರಯಾಣಿಸುತ್ತಿದ್ದಾಗ ಚಹಾ ಆರ್ಡರ್ ಮಾಡಿದ್ದು, ಅವರಿಂದ 70 ರೂ ವಸೂಲಿ ಮಾಡಲಾಗಿದೆ. ಅದನ್ನು ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ದೇಶದ ಅರ್ಥಶಾಸ್ತ್ರವು ನಿಜವಾಗಿಯೂ ಬದಲಾಗಿದೆ. ಇಲ್ಲಿಯವರೆಗೂ ಇತಿಹಾಸ ಮಾತ್ರ ಬದಲಾಗಿದೆ ಎಂದುಕೊಂಡಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮುಸ್ಲಿಂ ಪ್ರಯಾಣಿಕರಿಗೆ ಇಫ್ತಾರ್ ಟ್ರೀಟ್ ನೀಡಿದ ಭಾರತೀಯ ರೈಲ್ವೆ: ನೆಟ್ಟಿಗರಿಂದ ಶ್ಲಾಘನೆ
ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರು ಇದು 50 ರೂ. ಸೇವಾ ಶುಲ್ಕ (service charge), ಬಿಲ್‌ನಲ್ಲಿ ಉಲ್ಲೇಖಿಸಿದಂತೆ ತೆರಿಗೆ ಅಲ್ಲ ಎಂದು ಹೇಳಿದ್ದಾರೆ. ಈ ಮೊದಲು ರಾಜಧಾನಿ ಮತ್ತು ಶತಾಬ್ದಿಯಂತಹ ರೈಲುಗಳಲ್ಲಿ ಆಹಾರ ಸೇವೆಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ನಂತರ ಅದನ್ನು ಆಯ್ಕೆಗೆ ಬಿಡಲಾಗಿತ್ತು. ಹೀಗಾಗಿ ಊಟ ಬೇಡದ ಪ್ರಯಾಣಿಕರು ಪ್ರಯಾಣದ ಟಿಕೆಟ್‌ಗೆ ಮಾತ್ರ ಹಣ ನೀಡಬೇಕಾಗುತ್ತದೆ.
ಅಬ್ಬಬ್ಬಾ! 35ಕಿ. ಮೀ. ನಷ್ಟು ಹಿಂದಕ್ಕೋಡಿದ ರೈಲು, ವೈರಲ್ ಆಯ್ತು ವಿಡಿಯೋ!
ಕೆಲ ದಿನಗಳ ಹಿಂದೆ ಶತಾಬ್ದಿ ರೈಲಿನಲ್ಲಿ ಹೇಗೆ ಇಫ್ತಾರ್ ಟ್ರೀಟ್ ನೀಡಲಾಯಿತು ಎಂಬುದನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿತ್ತು. ಅಲ್ಲದೇ ಭಾರತೀಯ ರೈಲ್ವೆಯ (Indian Railway) ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ (social media) ಶ್ಲಾಘನೆ ವ್ಯಕ್ತವಾಗಿತ್ತು. ಪ್ರಯಾಣಿಕರೊಬ್ಬರ ಪೋಸ್ಟ್‌ಗೆ ಭಾರತೀಯ ರೈಲ್ವೆಯ ರಾಜ್ಯ ಸಚಿವ ದರ್ಶನಾ ಜರ್ದೋಶ್ (Darshana Jardosh) ಮತ್ತು ಇತರ ನೆಟ್ಟಿಗರು ಮೆಚ್ಚುಗೆಯ ಸಂದೇಶಗಳನ್ನು ಕಳುಹಿಸಿದ್ದರು.
ಇಫ್ತಾರ್‌ಗಾಗಿ ಭಾರತೀಯ ರೈಲ್ವೆಗೆ ಧನ್ಯವಾದಗಳು. ನಾನು ಧನ್‌ಬಾದ್‌ನಲ್ಲಿ (Dhanbad) ಹೌರಾ ಶತಾಬ್ದಿ ಹತ್ತಿದ ತಕ್ಷಣ, ನನಗೆ ತಿಂಡಿ ಸಿಕ್ಕಿತು. ನಾನು ಉಪವಾಸ ಮಾಡುತ್ತಿರುವುದರಿಂದ ಸ್ವಲ್ಪ ತಡವಾಗಿ ಚಹಾ ತರಲು ಪ್ಯಾಂಟ್ರಿ ಮ್ಯಾನ್‌ಗೆ ವಿನಂತಿಸಿದೆ. ಅವರು ಆಗ ಆಪ್ ರೋಜಾ ಹೈ ಎಂದು ಕೇಳುವ ಮೂಲಕ ವಿಚಾರ ಖಚಿತಪಡಿಸಿದರು. ನಾನು ಹೌದು ಎಂದ ನಂತರ ಬೇರೊಬ್ಬರು ಇಫ್ತಾರ್ ನೊಂದಿಗೆ ಬಂದರು ಎಂದು ಶಹನವಾಜ್ ಅಖ್ತರ್ ಎಂಬುವವರು ತಮಗೆ ರೈಲ್ವೆಯಿಂದ ನೀಡಿದ ಇಫ್ತಾರ್ ಟ್ರೀಟ್‌ನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.