ಮುಸ್ಲಿಂ ಪ್ರಯಾಣಿಕರಿಗೆ ಇಫ್ತಾರ್ ಟ್ರೀಟ್‌ ನೀಡಿದ ಭಾರತೀಯ ರೈಲ್ವೆ: ನೆಟ್ಟಿಗರಿಂದ ಶ್ಲಾಘನೆ

  • ಭಾರತೀಯ ರೈಲ್ವೆ ಕಾರ್ಯಕ್ಕೆ ಶ್ಲಾಘನೆ
  • ಮುಸ್ಲಿಂ ಪ್ರಯಾಣಿಕನಿಗೆ ಇಫ್ತಾರ್ ಟ್ರೀಟ್‌ 
  • ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್
Indian Railway arranged Iftar for passenger in Shatabdi train akb

ನವದೆಹಲಿ: ಶತಾಬ್ದಿ ರೈಲಿನಲ್ಲಿ ಹೇಗೆ ಇಫ್ತಾರ್  ಟ್ರೀಟ್‌ ನೀಡಲಾಯಿತು ಎಂಬುದನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದೆ. ಅಲ್ಲದೇ ಭಾರತೀಯ ರೈಲ್ವೆಯ (Indian Railway) ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ (social media) ಶ್ಲಾಘನೆ ವ್ಯಕ್ತವಾಗಿದೆ. ಪ್ರಯಾಣಿಕರೊಬ್ಬರ ಪೋಸ್ಟ್‌ಗೆ ಭಾರತೀಯ ರೈಲ್ವೆಯ ರಾಜ್ಯ ಸಚಿವ ದರ್ಶನಾ ಜರ್ದೋಶ್ (Darshana Jardosh) ಮತ್ತು ಇತರ ನೆಟ್ಟಿಗರು ಮೆಚ್ಚುಗೆಯ ಸಂದೇಶಗಳನ್ನು ಕಳುಹಿಸಿದ್ದಾರೆ.

ಇಫ್ತಾರ್‌ಗಾಗಿ ಭಾರತೀಯ ರೈಲ್ವೆಗೆ ಧನ್ಯವಾದಗಳು. ನಾನು ಧನ್‌ಬಾದ್‌ನಲ್ಲಿ (Dhanbad) ಹೌರಾ ಶತಾಬ್ದಿ ಹತ್ತಿದ ತಕ್ಷಣ, ನನಗೆ ತಿಂಡಿ ಸಿಕ್ಕಿತು. ನಾನು ಉಪವಾಸ ಮಾಡುತ್ತಿರುವುದರಿಂದ ಸ್ವಲ್ಪ ತಡವಾಗಿ ಚಹಾ ತರಲು ಪ್ಯಾಂಟ್ರಿ ಮ್ಯಾನ್‌ಗೆ ವಿನಂತಿಸಿದೆ. ಅವರು ಆಗ ಆಪ್ ರೋಜಾ ಹೈ ಎಂದು ಕೇಳುವ ಮೂಲಕ ವಿಚಾರ ಖಚಿತಪಡಿಸಿದರು. ನಾನು ಹೌದು ಎಂದೇ ನಂತರ ಬೇರೊಬ್ಬರು ಇಫ್ತಾರ್ ನೊಂದಿಗೆ ಬಂದರು ಎಂದು ಶಹನವಾಜ್ ಅಖ್ತರ್ ಎಂಬುವವರು ತಮಗೆ ರೈಲ್ವೆಯಿಂದ ನೀಡಿದ ಇಫ್ತಾರ್‌ ಟ್ರೀಟ್‌ನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ಪ್ರಪಂಚದಾದ್ಯಂತದ ಮುಸ್ಲಿಮ್‌ ಸಮುದಾಯದವರು ರಂಜಾನ್ ತಿಂಗಳ ಉಪವಾಸವನ್ನು ಆಚರಿಸುತ್ತಿದ್ದಾರೆ. ಈ ಉಪವಾಸವನ್ನು ಆತ್ಮಾವಲೋಕನಕ್ಕಾಗಿ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ  ಒಟ್ಟಿಗೆ ಊಟಕ್ಕೆ ಸೇರುವ ಸಮಯ ಎಂದು ಮುಸ್ಲಿಂ ಸಮುದಾಯ ಪರಿಗಣಿಸುತ್ತದೆ. ಇಫ್ತಾರ್ ಉಪವಾಸದ ನಂತರ ತಿನ್ನುವ ಆಹಾರವಾಗಿದ್ದು,  ಅದು ಉಪವಾಸವನ್ನು ಮುರಿಯುವುದನ್ನು ಸೂಚಿಸುತ್ತದೆ.

IRCTC Confirm Ticket App: ರೇಲ್ವೇ ತತ್ಕಾಲ್‌ ಟಿಕೇಟ್ ಪಡೆಯುವುದು ಈಗ ಇನ್ನೂ ಸುಲಭ: ಬುಕ್‌ ಮಾಡುವುದು ಹೇಗೆ?
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ದರ್ಶನಾ ಜರ್ದೋಶ್, ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಮತ್ತು ಸಬ್‌ಕಾ ವಿಶ್ವಾಸ್ ಎಂಬ ಧ್ಯೇಯವಾಕ್ಯದೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಇದು ಪರಿಪೂರ್ಣ ಉದಾಹರಣೆ ಎಂದು ಬಣ್ಣಿಸಿದರು. ನಿಮ್ಮ ಕಾಮೆಂಟ್‌ಗಳಿಂದ ಇಡೀ ಭಾರತೀಯ ರೈಲ್ವೆ ಕುಟುಂಬವು ಭಾವುಕವಾಗಿದೆ ಮತ್ತು ನೀವು ಉತ್ತಮ ಊಟವನ್ನು ಹೊಂದಿದ್ದೀರಿ ಎಂದು ಭಾವಿಸುತ್ತೇವೆ ಎಂದು ಅವರು ಬರೆದಿದ್ದಾರೆ.

ಆದಾಗ್ಯೂ ಭಾರತೀಯ ರೈಲ್ವೇಯು ವಿವಿಧ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲು ಆಹಾರ ರಿಯಾಯಿತಿಗಳನ್ನು ನೀಡಿರುವುದು ಇದೇ ಮೊದಲಲ್ಲ. ನವರಾತ್ರಿಯ ಉಪವಾಸವನ್ನು ಆಚರಿಸುವ ಭಕ್ತರಿಗೆ ಅವರ ಪ್ರಯಾಣದ ಸಮಯದಲ್ಲಿ ಶುದ್ಧ ಮತ್ತು ಸಾತ್ವಿಕ ಆಹಾರವನ್ನು ನೀಡಲಾಗುತ್ತಿದೆ ಎಂದು  ತಿಳಿಸಲು ರೈಲ್ವೆ ಸಚಿವಾಲಯವು ಈ ಹಿಂದೆ ಏಪ್ರಿಲ್‌ನಲ್ಲಿ ವೀಡಿಯೊವನ್ನು ಟ್ವೀಟ್ ಮಾಡಿತ್ತು.

ಸರಕು ಸಾಗಾಣಿಕೆಯಿಂದ ಬರೊಬ್ಬರಿ 4160 ಕೋಟಿ ರೂ. ಲಾಭ ಗಳಿಸಿದ ನೈಋತ್ಯ ರೈಲ್ವೆ
 

ಇಫ್ತಾರ್ (Iftar) ಲಭ್ಯತೆಯ ಬಗ್ಗೆ ಇದೇ ರೀತಿಯ ಪೋಸ್ಟ್‌ಗಳನ್ನು ಕಳೆದ ವರ್ಷವೂ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 12020 ಸಂಖ್ಯೆಯ ರಾಂಚಿ ಹೌರಾ ಶತಾಬ್ದಿಯಲ್ಲಿ (Ranchi Howrah Satabdi) ಸಾಮಾನ್ಯ ಮೆನು ಆಹಾರದ ಜೊತೆಗೆ ಇಫ್ತಾರ್ ಅನ್ನು ಬಡಿಸಿದ್ದಕ್ಕಾಗಿ ಭಾರತೀಯ ರೈಲ್ವೇಯ  ಬಗ್ಗೆ ಮುಸ್ಲಿಂ ಹುಡುಗಿ ಸಂತೋಷ ವ್ಯಕ್ತಪಡಿಸಿದ್ದರು.
 

Latest Videos
Follow Us:
Download App:
  • android
  • ios