Sex Island : ಅನ್ಲಿಮಿಟೆಡ್ ಸೆಕ್ಸ್ ಮತ್ತೆ ಡ್ರಗ್ಸ್… ಆಲ್ಕೋಹಾಲ್ ಪ್ರೇಮಿಗಳಿಗೆ ಸ್ವರ್ಗ..ಮತ್ತೆ ಶುರುವಾಗ್ತಿದೆ ಸೆಕ್ಸ್ ಐಲ್ಯಾಂಡ
ನಮ್ಮಲ್ಲಿ ಮಾದಕ ವಸ್ತು ಸೇವನೆ ಕಾನೂನು ಬಾಹಿರ. ಬೆತ್ತಲೆ ಓಡಾಡಿದ್ರೆ ಜನ ನಗ್ತಾರೆ. ಇನ್ನು ಸೆಕ್ಸ್ ವಿಷ್ಯದ ಬಗ್ಗೆ ಬಹಿರಂಗವಾಗಿ ಮಾತನಾಡೋಕೇ ಇಲ್ಲಿ ಅವಕಾಶವಿಲ್ಲ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಇದ್ಯಾವುದಕ್ಕೂ ಅಡ್ಡಿಯೇ ಇಲ್ಲ.
ಪ್ರಪಂಚದಲ್ಲಿ ದುರಾಚಾರ ನಡೆಸುದ ಅನೇಕ ಸ್ಥಳಗಳಿವೆ. ಅದ್ರಲ್ಲಿ ಸೆಕ್ಸ್ ಐಲ್ಯಾಂಡ್ ಕೂಡ ಸೇರಿದೆ. ಇದೊಂದು ರಹಸ್ಯವಾದ ಸ್ಥಳ. ಇಲ್ಲಿ ಏನೇನು ನಡೆಯುತ್ತೆ ಅನ್ನೋದು ಈವರೆಗೂ ಸ್ಪಷ್ಟವಾಗಿಲ್ಲ. ಸೆಕ್ಸ್ ಐಲ್ಯಾಂಡ್ ವರ್ಷದಲ್ಲಿ ಕೆಲವು ದಿನಗಳವರೆಗೆ ತೆರೆದಿರುತ್ತದೆ. ಈಗ ಮತ್ತೊಮ್ಮೆ ಈ ಸೆಕ್ಸ್ ಐಲ್ಯಾಂಡ್ ಸುದ್ದಿ ಮಾಡಲು ಹೊರಟಿದೆ. ಸೆಕ್ಸ್ ಐಲ್ಯಾಂಟ್ ಸಂಘಟಕರಾದ ಗುಡ್ ಗರ್ಲ್ ಕಂಪನಿಯು, ಜೂನ್‌ನಲ್ಲಿ ದುಬೈ, ಲಾಸ್ ವೇಗಾಸ್ ಮತ್ತು ಕೊಲಂಬಿಯಾದ ಕಾರ್ಟೇಜಿನಾ ಕರಾವಳಿಯಲ್ಲಿ ಸೆಕ್ಸ್ ಐಲ್ಯಾಂಡ್ ಪಾರ್ಟಿ ಆಯೋಜಿಸುವುದಾಗಿ ಹೇಳಿದೆ. ಈ ಪಾರ್ಟಿ ಪ್ರವಾಸಕ್ಕೆ ನೀವು ಒಂದು ವಾರ ಹೋಗ್ಬಹುದು. ಐವತ್ತು ಮಂದಿಗೆ ಇಲ್ಲಿ ಅವಕಾಶವಿರುತ್ತದೆ. ಇದಕ್ಕಾಗಿ ನೀವು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡ್ಬೇಕಾಗುತ್ತದೆ. ನಾವಿಂದು ಈ ಸೆಕ್ಸ್ ಐಲ್ಯಾಂಡ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
ಸೆಕ್ಸ್ ಐಲ್ಯಾಂಡ್ (Sex Island) ಅಂದ್ರೆ ಅಲ್ಲಿ ಸೆಕ್ಸ್ ಜೊತೆ ಡ್ರಗ್ಸ್ (Drugs) ಸಾಮಾನ್ಯ. ಡ್ರಗ್ಸ್ ಪಾರ್ಟಿ (Party) ಗಳಿಗೆ ಅತ್ಯಂತ ಪ್ರಸಿದ್ಧ ಸೆಕ್ಸ್ ಐಲ್ಯಾಂಡ್. ಇಲ್ಲಿಗೆ ಪ್ರಪಂಚದ ಅನೇಕ ಪ್ರಸಿದ್ಧಿ ವ್ಯಕ್ತಿಗಳು ಹೋಗಿ ಬಂದಿದ್ದಾರೆ. ಎಲ್ಲರೂ ಈ ಪ್ರವಾಸವನ್ನು ಎಂಜಾಯ್ ಮಾಡೋದಿಲ್ಲ. ಕೆಲವರು ಇದು ಅತ್ಯಂತ ಅಸಹ್ಯಕರ ಎಂದು ಹೇಳಿಕೆ ನೀಡಿದ್ದಿದೆ.
ಗೋವಾದ ಪ್ರಸಿದ್ಧ ತಾಣ ಕ್ಯಾಲಂಗುಟ್‌ಗೆ ಹೋಗೋಕೆ ಇನ್ನು ಮುಂದೆ ಪ್ರವಾಸಿಗರು ಕಟ್ಬೇಕು ಪ್ರವೇಶ ತೆರಿಗೆ
ಸೆಕ್ಸ್ ಐಲ್ಯಾಂಡ್ ಪ್ರವಾಸ ಕಾನೂನುಬದ್ಧವಾಗಿದೆ ಎಂದು ಸಂಘಟಕರು ಹೇಳ್ತಾರೆ. ಇಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಮಾದಕ ಬಟ್ಟೆ ಧರಿಸಿ ಸುಂದರ ಮಹಿಳೆಯರು ಓಡಾಡ್ತಾರೆ. ಲೈಂಗಿಕ ಕ್ರಿಯೆ, ಮಾದಕ ವಸ್ತುಗಳ ಸೇವನೆ ಕೂಡ ಇಲ್ಲಿ ಬಹಿರಂಗವಾಗಿ ನಡೆಯುತ್ತಿರುತ್ತದೆ. ಸೆಕ್ಸ್ ಐಲ್ಯಾಂಡ್ ನಡೆಯುವ ರೆಸಾರ್ಟ್ ನಲ್ಲಿ ಆಲ್ಕೋಹಾಲ್ ಸಂಪೂರ್ಣ ಉಚಿತವಾಗಿ ಸಿಗುತ್ತೆ.
ಸೆಕ್ಸ್ ಐಲ್ಯಾಂಡ್ ಬಗ್ಗೆ ವೆಬ್ಸೈಟ್ ನಲ್ಲಿರುವ ಮಾಹಿತಿ ಏನು? : ವೆಬ್ಸೈಟ್ ನಲ್ಲಿ ಸಂಘಟಕರು ಇದನ್ನು ಕುಡುಕರಿಗೆ ಭೂಮಿ ಮೇಲಿನ ಸ್ವರ್ಗ ಎಂದಿದ್ದಾರೆ. ಇಲ್ಲಿ ಮಹಿಳೆಯರನ್ನು ಬದಲಿಸಿಕೊಳ್ಳುವ ಅನುಮತಿ ನೀಡಲಾಗುತ್ತದೆ. ಇಲ್ಲಿ ಎಚ್ ಐವಿ, ಏಡ್ಸ್ ಪರೀಕ್ಷೆ ನಡೆಯುತ್ತದೆ. ಅದ್ರಿಂದ ದೂರವಿರುವ ಜನರಿಗೆ ಮಾತ್ರ ಸೆಕ್ಸ್ ಐಲ್ಯಾಂಡ್ ನಲ್ಲಿ ಪಾಲ್ಗೊಳ್ಳಲು ಅವಕಾಶ. ಬೀಚ್ ರೆಸಾರ್ಟ್ ನಲ್ಲಿ ಈ ಸೆಕ್ಸ್ ಐಲ್ಯಾಂಡ್ ನಡೆಯುತ್ತದೆ. ಪಾಲ್ಗೊಂಡ ಜನರು ನೆಗ್ನವಾಗಿ ಬೀಚ್ ಸುತ್ತಾಡುವ ಅನುಮತಿ ಇದೆ. ಈ ಪಾರ್ಟಿ ಬಗ್ಗೆ ಕಂಪನಿ ವಿಡಿಯೋ ಕೂಡ ಹಾಕಿದೆ. ಗುಡ್ ಗರ್ಲ್ ಕಂಪನಿ ಪ್ರಕಾರ, ಇದು ಕಪಲ್ ಫ್ರೆಂಡ್ಲಿ. ಇಲ್ಲಿ ನೀವು ಗರ್ಲ್ ಫ್ರೆಂಡ್ ಜೊತೆ ಆರಾಮವಾಗಿ ಸುತ್ತಾಡಬಹುದು. ಆದ್ರೆ ಇಲ್ಲಿ ಸಿಗುವ ಸೌಲಭ್ಯಗಳಿಂದ ಇದನ್ನು ದುರಾಚಾರದ ಪಾರ್ಟಿ ಎಂದೇ ಕರೆಯಲಾಗುತ್ತದೆ.
ಸೆಕ್ಸ್ ಐಲ್ಯಾಂಡ್ ಪಾರ್ಟಿಗೆ ಹೋದವನ ಅನುಭವ ಏನು? : ಇಲ್ಲಿಗೆ ಬಂದ ವ್ಯಕ್ತಿಯೊಬ್ಬ ತನ್ನ ಅನುಭವನ್ನು ಹಂಚಿಕೊಂಡಿದ್ದಾನೆ. ಆತ ಮನೆಯಲ್ಲಿ ಬ್ಯುಸಿನೆಸ್ ಟ್ರಿಪ್ ಅಂತ ಹೇಳಿ ಇಲ್ಲಿಗೆ ಬಂದಿದ್ದನಂತೆ. ದೋಣಿ ತುಂಬ ಸುಂದರ ಹುಡುಗಿಯರು ತುಂಬಿಕೊಂಡಿದ್ದರು. ಕೆಲ ಮಹಿಳೆಯರು ಡಾನ್ಸ್ ಮಾಡ್ತಿದ್ದರೆ ಮತ್ತೆ ಕೆಲವರು ಡ್ರಿಂಕ್ಸ್ ಮಾಡ್ತಿದ್ದರು. ನಾನು ಮುಂದೆ ಹೋಗ್ತಿದ್ದಂತೆ ನನಗೆ ಡ್ರಿಂಕ್ಸ್ ನೀಡಿದ್ರು. ನಾನು ಪಾರ್ಟಿ ಎಂಜಾಯ್ ಮಾಡಿದೆ. ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಬೇಕಿತ್ತು. ಅವರು ಪ್ರವಾಸ ಮುಗಿಯುವವರೆಗೂ ನಮ್ಮ ಜೊತೆಗಿರ್ತಿದ್ದರು ಎಂದಿದ್ದಾನೆ.
ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಕುರಿತು ನಿಮಗೆ ಗೊತ್ತಿರದ ಸಂಗತಿಗಳು
ಸೆಕ್ಸ್ ಐಲ್ಯಾಂಡ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಎಷ್ಟು ಖರ್ಚು ಮಾಡ್ಬೇಕು? : ಈ ಪಾರ್ಟಿ ಪ್ರವಾಸ ಎಲ್ಲರ ಕೈಗೆಟಕುವಂತಹದ್ದಲ್ಲ. ದುಬಾರಿ ಬೆಲೆ ತೆತ್ತು ನೀವು ಈ ಪ್ರವಾಸ ಎಂಜಾಯ್ ಮಾಡ್ಬೇಕು. ಲಾಸ್ ವೇಗಾಸ್‌ನಲ್ಲಿರುವ ಸೆಕ್ಸ್ ಐಲ್ಯಾಂಡ್‌ಗೆ ಭೇಟಿ ನೀಡುವವರು ಮೂರು ದಿನಗಳವರೆಗೆ 4,500 ಡಾಲರ್ ಅಂದ್ರೆ 3.75 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ.