ಭಾರತೀಯ ಪ್ರವಾಸಿಗರಿಗೆ ಗುಡ್ ನ್ಯೂಸ್ ಕೊಟ್ಟ ರಷ್ಯಾ: ವೀಸಾ ಫ್ರೀ ಟ್ರಿಪ್! ಇಲ್ಲಿದೆ ಸೂಪರ್ ಸುದ್ದಿ

ಟ್ರಾವೆಲ್ ಫ್ರೀಕ್ಸ್ ಆದ ಇಂಡಿಯನ್ನರಿಗೆ ಖುಷಿ ಸುದ್ದಿ. ಮುಂದಿನ ವರ್ಷದಿಂದ ರಷ್ಯಾಗೆ ವೀಸಾ ಇಲ್ಲದೆ ಹೋಗಬಹುದು!

Russia Visa Free Entry for Indians Likely in 2025 kvn

ಮಾಸ್ಕೋ: ಇಂಡಿಯನ್ನರಿಗೆ ಭರ್ಜರಿ ಗುಡ್ ನ್ಯೂಸ್. ಇಂಡಿಯನ್ನರು ವೀಸಾ ಇಲ್ಲದೆ ಭೇಟಿ ನೀಡಬಹುದಾದ ದೇಶಗಳ ಪಟ್ಟಿಗೆ ವಿಶ್ವದ ಅತಿ ದೊಡ್ಡ ದೇಶ ಕೂಡ ಸೇರ್ಪಡೆಯಾಗಲಿದೆ.

2025 ರಲ್ಲಿ ಇಂಡಿಯನ್ನರಿಗೆ ರಷ್ಯಾಗೆ ವೀಸಾ ರಹಿತ ಪ್ರಯಾಣ ಸಾಧ್ಯವಾಗಲಿದೆ ಎಂದು ವರದಿಗಳು ಹೇಳುತ್ತಿವೆ. ವೀಸಾ ಪ್ರಕ್ರಿಯೆಗಳನ್ನು ಸರಳಗೊಳಿಸುವ ಬಗ್ಗೆ ಜೂನ್‌ನಲ್ಲಿ ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಒಪ್ಪಂದದ ಕುರಿತು ಚರ್ಚೆ ನಡೆಸಿದ್ದವು. ವೀಸಾ ರಹಿತ ಪ್ರಯಾಣವನ್ನು ಸಾಧ್ಯವಾಗಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. 2023 ರ ಆಗಸ್ಟ್‌ನಿಂದ ಇಂಡಿಯನ್ನರಿಗೆ ರಷ್ಯಾಕ್ಕೆ ಪ್ರಯಾಣಿಸಲು ಇ-ವೀಸಾ ಸೌಲಭ್ಯ ಲಭ್ಯವಾಗಿದೆ. ಇ-ವೀಸಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ನಾಲ್ಕು ದಿನಗಳು ಬೇಕಾಗುತ್ತದೆ. ಕಳೆದ ವರ್ಷ ಹೆಚ್ಚಿನ ಇ-ವೀಸಾಗಳನ್ನು ನೀಡಲಾದ ಐದು ದೇಶಗಳಲ್ಲಿ ಭಾರತವೂ ಒಂದು. 9,500 ಇ-ವೀಸಾಗಳನ್ನು ಭಾರತೀಯರಿಗೆ ನೀಡಲಾಗಿದೆ.

ನಿಶ್ಚಿತಾರ್ಥದ ಬೆನ್ನಲ್ಲೇ ವಧುವಿನೊಂದಿಗೆ ಮೊದಲರಾತ್ರಿ ಮಿಲನ ಆಚರಿಸಿದ ವರ; ಈಗ ಮದುವೆ ಬೇಡವಂತೆ!

ಪ್ರಸ್ತುತ, ಇಂಡಿಯನ್ನರು ರಷ್ಯಾಕ್ಕೆ ಪ್ರವೇಶಿಸಲು, ಅಲ್ಲಿ ಉಳಿಯಲು ಮತ್ತು ರಷ್ಯಾದಿಂದ ಹೊರಹೋಗಲು ರಷ್ಯಾದ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ನೀಡುವ ವೀಸಾ ಅಗತ್ಯವಿದೆ. ಹೆಚ್ಚಿನ ಇಂಡಿಯನ್ನರು ವ್ಯಾಪಾರ ಮತ್ತು ಅಧಿಕೃತ ಕೆಲಸಗಳಿಗಾಗಿ ರಷ್ಯಾಕ್ಕೆ ಪ್ರಯಾಣಿಸುತ್ತಾರೆ. 2023 ರಲ್ಲಿ 60,000 ಭಾರತೀಯರು ಮಾಸ್ಕೋಗೆ ಭೇಟಿ ನೀಡಿದ್ದಾರೆ. ಇದು 2022 ಕ್ಕಿಂತ ಶೇ.26 ರಷ್ಟು ಹೆಚ್ಚು. ಪ್ರಸ್ತುತ, ವೀಸಾ ರಹಿತ ಪ್ರವಾಸಿ ವಿನಿಮಯ ಯೋಜನೆಯ ಮೂಲಕ ಚೀನಾ ಮತ್ತು ಇರಾನ್‌ನ ಪ್ರಯಾಣಿಕರಿಗೆ ರಷ್ಯಾಕ್ಕೆ ವೀಸಾ ರಹಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದು ಮಾಸ್ಕೋಗೆ ಲಾಭದಾಯಕವಾಗಿರುವುದರಿಂದ, ಇದೇ ರೀತಿಯ ಕ್ರಮವನ್ನು ಇಂಡಿಯನ್ನರಿಗೂ ಅನ್ವಯಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

Latest Videos
Follow Us:
Download App:
  • android
  • ios