ನಿಶ್ಚಿತಾರ್ಥದ ಬೆನ್ನಲ್ಲೇ ವಧುವಿನೊಂದಿಗೆ ಮೊದಲರಾತ್ರಿ ಮಿಲನ ಆಚರಿಸಿದ ವರ; ಈಗ ಮದುವೆ ಬೇಡವಂತೆ!

ನಿಶ್ಚಿತಾರ್ಥ ಮಾಡಿಕೊಂಡು ಮದುವೆ ನಿಶ್ಚಯ ಮಾಡಿಕೊಂಡ ಜೋಡಿ ಮದುವೆಗೂ ಮೊದಲೇ ಮೊದಲ ರಾತ್ರಿಯ ಮಿಲನ ಮಹೋತ್ಸವ ಆಚರಿಸಿದ್ದಾರೆ. ಆದರೆ, ಇದೀಗ ಯುವಕ ನನಗೆ ಮದುವೆ ಬೇಡ ಎಂದು ನಿರಾಕರಿಸಿದ್ದಾನೆ..

Rajasthan couple celebrates first night after engagement now groom refuses to marry sat

ರಾಜಸ್ಥಾನ (ಡಿ.15): ಸಾಮಾನ್ಯವಾಗಿ ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಹಿಂದಿನ ಕಾಲದಲ್ಲಿ ಮದುವೆಯಾದ ನಂತರವೇ ಹುಡುಗ-ಹುಡುಗಿ ನೋಡಬೇಕಿತ್ತು. ಆದರೆ, ಇದೀಗ ನಿಶ್ಚಿತಾರ್ಥವಾದ ತಕ್ಷಣ ಗಂಡ-ಹೆಂಡತಿ ಎಂಬಂತೆ ಎಲ್ಲವನ್ನೂ ಮಾಡುತ್ತಾರೆ. ಅದೇ ರೀತಿ ಇಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯೊಂದು ಮದುವೆಗೂ ಮುನ್ನವೇ ಮೊದಲ ರಾತ್ರಿಯ ಸುಖವನ್ನು ಅನುಭವಿಸಿದೆ. ನಂತರ, ಹುಡುಗ ತನಗೆ ಈ ಹುಡುಗಿಯೊಂದಿಗೆ ಮದುವೆ ಬೇಡ ಎಂದು ನಿರಾಕರಿಸಿದ್ದಾರೆ. ಆಗ ಯುವತಿ ಪಾಡು ಏನಾಗಿದೆ? ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರ ಇಲ್ಲಿದೆ ನೋಡಿ..

ರಾಜಸ್ಥಾನದ ಝುನ್ಝುನು ಜಿಲ್ಲೆಯಲ್ಲಿ ನಿಶ್ಚಿತಾರ್ಥದ ನಂತರ ಮದುವೆಯಾಗಲು ನಿರಾಕರಿಸಿದ್ದರಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ನಿಶ್ಚಿತಾರ್ಥದ ನಂತರ ಯುವಕ ಯುವತಿಗೆ ಮೋಸ ಮಾಡಿ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದು ಯುವತಿ ಈ ಮಾರಕ ಕ್ರಮ ಕೈಗೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಝುನ್ಝುನು ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಅಶೋಕ್ ಚೌಧರಿ ಘಟನೆಯ ವಿವರ ನೀಡಿದ್ದು, ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಯುವತಿ ಬಹಳ ಹೊತ್ತು ಕೋಣೆಯ ಬಾಗಿಲು ತೆರೆಯದಿದ್ದಾಗ ಕರೆದರೂ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೇಳೆಗೆ ವೈದ್ಯರು ಆಕೆಯನ್ನು ಮೃತ ಎಂದು ಘೋಷಿಸಿದರು.

ಇದನ್ನೂ ಓದಿ: ಈ ₹100 ನೋಟು ಇದ್ದರೆ, ನೀವು ಈಗಲೇ ಲಕ್ಷಾಧಿಪತಿ ಆಗಬಹುದು!

ಮದುವೆಗೂ ಮುನ್ನ ಯುವಕ ದೈಹಿಕ ಸಂಬಂಧ: ಯುವತಿಯ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದಂತೆ, ಒಂದೂವರೆ ತಿಂಗಳ ಹಿಂದೆ ಆಕೆಯ ನಿಶ್ಚಿತಾರ್ಥ ಗುಡಗೌಡ್ಜಿ ನಿವಾಸಿ ಯುವಕನೊಂದಿಗೆ ನಡೆದಿತ್ತು. ನಿಶ್ಚಿತಾರ್ಥದ ನಂತರ ಯುವಕ ಸಂಬಂಧದ ಲಾಭ ಪಡೆದು ಯುವತಿಯನ್ನು ಮೋಸಗೊಳಿಸಿ ದೈಹಿಕ ಸಂಬಂಧ ಹೊಂದಿದ್ದ. ನಂತರ ಯುವಕ ಮದುವೆಯಾಗಲು ನಿರಾಕರಿಸಿದ್ದ. ಈ ಮೋಸ ಮತ್ತು ಅವಮಾನದಿಂದ ಯುವತಿ ತೀವ್ರವಾಗಿ ಮನನೊಂದು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಕೊನೆಗೆ ಈ ಕಠಿಣ ಕ್ರಮ ಕೈಗೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಆರೋಪಿ ಯುವಕನ ಬಂಧನ: ಕುಟುಂಬಸ್ಥರ ದೂರಿನ ಮೇರೆಗೆ ನಿನ್ನೆ ರಾತ್ರಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಠಾಣಾ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಯುವತಿಯ ಸಾವಿಗೆ ಕಾರಣವಾದ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: ಪತ್ನಿ, ಮಕ್ಕಳು ಸಹಿತ ತೆರೆದ ಗುಂಡಿಗೆ ಬಿದ್ದ ಬೈಕ್‌ ಸವಾರ: ಶಾಕಿಂಗ್‌ ವಿಡಿಯೋ ಸಿಸಿವಿಟಿಯಲ್ಲಿ ಸೆರೆ!

Latest Videos
Follow Us:
Download App:
  • android
  • ios