Asianet Suvarna News Asianet Suvarna News

New Year 2024 : ಹೊಸ ವರ್ಷಕ್ಕೆ ರೆಡಿಯಾದ ಬುರ್ಜ್ ಖಲೀಫಾ, ರೂಮ್ ರೆಂಟ್ ಕೇಳಿದ್ರಾ?

ಬುರ್ಜ್ ಖಲೀಫಾ ಮೊದಲೇ ದುಬಾರಿ. ಇನ್ನು ವರ್ಷಾಂತ್ಯದ ಸಮಯದಲ್ಲಿ ಕೇಳ್ಬೇಕಾ? ಹಣ ಇದ್ದೋರು ಕೂಡ ಅಲ್ಲಿ ರೂಮ್ ಬುಕ್ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಯಾಕೆಂದ್ರೆ ಅಲ್ಲಿನ ರೂಮ್ ಬೆಲೆ ಗಗನಕ್ಕೇರಿದೆ. 
 

Room Rates Increased In Burj Khalifa On New Year roo
Author
First Published Dec 16, 2023, 4:44 PM IST

ಹೊಸ ವರ್ಷಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದೆ. 2024 ಅನ್ನು ಸ್ವಾಗತಿಸಲು ಅನೇಕ ಮಂದಿ ಈಗಲೇ ಪ್ಲಾನ್ ಮಾಡುತ್ತಿದ್ದಾರೆ. ಹೊಸ ವರ್ಷದ ತಮ್ಮ ರೆಸೊಲ್ಯುಷನ್ ಬಗ್ಗೆ ಯೋಚಿಸುತ್ತಿದ್ದಾರೆ. ಎಲ್ಲರೂ ಹೊಸವರ್ಷವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸುತ್ತಾರೆ. ಅದರಲ್ಲೂ ಜಗತ್ತಿನ ಅತೀ ಎತ್ತರದ ಕಟ್ಟಡವೆಂಬ ಬಿರುದು ಹೊತ್ತ ಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟುತ್ತದೆ.

ದುಬೈ (Dubai) ನ ಬುರ್ಜ್ ಖಲೀಫಾದಲ್ಲಿ ಪ್ರತಿ ವರ್ಷವೂ ಹೊಸ ವರ್ಷದ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಹೊಸ ವರ್ಷದಂದು ಅಲ್ಲಿ ನಡೆಯುವ ಲೇಸರ್ ಲೈಟ್ ನ ವಿಸ್ಮಯವನ್ನು ನೋಡಲು ಲಕ್ಷ ಲಕ್ಷ ಮಂದಿ ಸೇರುತ್ತಾರೆ. ವಿನೂತನವಾದ ಹೊಸ ವರ್ಷದ ಆಚರಣೆಯಿಂದಲೇ ಬುರ್ಜ್ ಖಲೀಫಾ (Burj Khalifa) ಗಿನ್ನಿಸ್ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಆಚರಣೆ ಅತಿ ವಿಜ್ರಂಬಣೆಯಿಂದ ನಡೆಯಲಿದೆ. ಅದನ್ನು ಕಣ್ತುಂಬಿಕೊಳ್ಳಲು ಬುರ್ಜ್ ಖಲೀಫಾ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ರೂಮ್ ಬುಕ್ ಮಾಡಲಾಗುತ್ತಿದೆ.

ಬಂಡೀಪುರದಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವನ್ಯಮೃಗಗಳು..!

ಬುರ್ಜ್ ಖಲೀಫಾ ನೋಡಲು ಲಕ್ಷಾಂತರ ರೂಪಾಯಿ ಖರ್ಚು : ಡಿಸೆಂಬರ್ ಮೂವತ್ತೊಂದರ  ರಾತ್ರಿ ಸರಿಯಾಗಿ 12 ಗಂಟೆಗೆ ಬುರ್ಜ್ ಖಲೀಫಾದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿಗಳು, ಲೇಸರ್ ಲೈಟ್ ಗಳ ಚಿತ್ತಾರ ಮೂಡುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಜನರು ಬುರ್ಜ್ ಖಲೀಫಾ ಮತ್ತು ಸುತ್ತ ಮುತ್ತಲಿನ ಪೆಂಟ್ ಹೌಸ್ ಮತ್ತು ಕೊಠಡಿಗಳನ್ನು ಬುಕ್ ಮಾಡುತ್ತಿದ್ದಾರೆ. ಹೊಸ ವರ್ಷದ ಒಂದು ರಾತ್ರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ಬುರ್ಜ್ ಖಲೀಫಾದ ಕೆಲವು ಕೊಠಡಿಗಳಿಂದ ಹೊರಗಿನ ಸುಂದರ ದೃಶ್ಯ ಅತ್ಯಂತ ಸುಂದರವಾಗಿ ಕಾಣುತ್ತದೆ. ಹಾಗಾಗಿ ಅಂತಹ ಕೊಠಡಿಗಳ ದರವು ಕೂಡ ಒಂದು ರಾತ್ರಿಗೆ ಲಕ್ಷಗಟ್ಟಲೆ ಬೆಲೆಬಾಳುತ್ತದೆ. ಬುರ್ಜ್ ಖಲೀಪಾದಲ್ಲಿ ಹೊಸ ವರ್ಷದ ದಿನದಂದು ಒಂದು ರೂಮ್ ಬೆಲೆ ಸುಮಾರು 2,71,334 ಇಂದ 8,36,614 ರೂಪಾಯಿಗಳಷ್ಟಿದೆ. Booking.com ನಲ್ಲಿ ಪೆಂಟ್ ಹೌಸ್ ಗಳನ್ನು ಕೂಡ ಬುಕ್ ಮಾಡಬಹುದು. ಹೊಸ ವರ್ಷದಲ್ಲಿ ಪೆಂಟ್ ಹೌಸ್ ನ ಒಂದು ರಾತ್ರಿಯ ಬಾಡಿಗೆ 15 ಲಕ್ಷದಿಂದ 18 ಲಕ್ಷವಾಗಿದೆ. ಬುರ್ಜ್ ಖಲೀಫಾ ಬಳಿ ಇರುವ ಅಪಾರ್ಟ್ ಮೆಂಟ್ ಗಳಲ್ಲಿಯೂ ಕೂಡ ಬಾಡಿಗೆಗೆ ರೂಮ್ ಗಳು ದೊರೆಯುತ್ತವೆ. ಆದರೆ ಎಲ್ಲ ಜಾಗದ ಬಾಡಿಗೆಗಳು ಕೂಡ ಡಿಸೆಂಬರ್ 30ರಿಂದ ಜನವರಿ 1ರ ನಡುವೆ ಗಗನಕ್ಕೇರುತ್ತವೆ.

ಹೆಲ್ಮೆಟ್ ಧರಿಸಿದ ಎಮ್ಮೆ ಮೇಲೆ ಕುಳಿತು ಪ್ರಯಾಣಿಸಿದ ಕೋಣ..! ನೆಟ್ಟಿಗರ ತೀವ್ರ ಆಕ್ರೋಶ!

ಪ್ರಾಪರ್ಟಿ ಬೆಲೆಯೂ ಹೆಚ್ಚು : Dubizzle ಮತ್ತು Airbnb ಯಲ್ಲಿ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಲು ಮೊದಲೇ ಈ ಸ್ಥಳಗಳು ಬುಕ್ ಆಗುತ್ತವೆ. ಆ ಸಮಯದಲ್ಲಿ ಎಲ್ಲ ಪ್ರಾಪರ್ಟಿಗಳ ಬೆಲೆ ಏರುತ್ತದೆ. ವರ್ಷದಿಂದ ವರ್ಷಕ್ಕೆ ಪ್ರತಿಶತ 20ರಿಂದ 30 ರಷ್ಟು ಬೆಲೆ ಏರಿಕೆಯಾಗುತ್ತದೆ ಎಂದು ಹಾಲಿಡೆ ಹೋಮ್ ಸಿಇಒ ವಿನಾಯಕ ಮೆಹ್ತಾನಿ ಹೇಳಿದ್ದಾರೆ. 4500 ಚದರ ಅಡಿಯ ಅಪಾರ್ಟ್ ಮೆಂಟ್ ನಲ್ಲಿ ಹೌಸ್ ಕೀಪರ್ ಮತ್ತು ಶೆಫ್ ಸೌಲಭ್ಯಗಳು ಇರುತ್ತವೆ. ಇದಕ್ಕೆ ಸುಮಾರು 6,78,336 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಅವರು ಹೇಳಿದ್ದಾರೆ. Drehomes Real Estate ನ ಮುಖ್ಯಸ್ಥರಾದ ಮುಸ್ತಾಫಾ ಹಮ್ಮಾದ್ ಅವರು ಕಳೆದ ಕೆಲವು ವರ್ಷದಿಂದ ದುಬೈ ಕೆಲವು ಸ್ಥಳಗಳಲ್ಲಿ ಜಾಗದ ಕೊರತೆಯಾಗಿದೆ. ಆದ್ದರಿಂದ ಬೆಲೆಯೂ ಹೆಚ್ಚಾಗಿದೆ.  

Follow Us:
Download App:
  • android
  • ios