Asianet Suvarna News Asianet Suvarna News

ಹೆಲ್ಮೆಟ್ ಧರಿಸಿದ ಎಮ್ಮೆ ಮೇಲೆ ಕುಳಿತು ಪ್ರಯಾಣಿಸಿದ ಕೋಣ..! ನೆಟ್ಟಿಗರ ತೀವ್ರ ಆಕ್ರೋಶ!

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವು ವಿಚಿತ್ರವೆನಿಸಿದ ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಯುವಕನೋರ್ವ ಟ್ರಾಫಿಕ್‌ನಲ್ಲಿ ಎಮ್ಮೆಯ ಮೇಲೆ ಕುಳಿತು ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

Man riding buffalo with Bunny helmet in Delhis Busy road, netizens call it nonsense Animal Abuse akb
Author
First Published Dec 15, 2023, 6:45 PM IST

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವು ವಿಚಿತ್ರವೆನಿಸಿದ ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಯುವಕನೋರ್ವ ಟ್ರಾಫಿಕ್‌ನಲ್ಲಿ ಎಮ್ಮೆಯ ಮೇಲೆ ಕುಳಿತು ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಲ್ ರೈಡರ್ 077 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ವಾಹನ ದಟ್ಟಣೆಯ ರಸ್ತೆಯಲ್ಲಿ ಯುವಕನೋರ್ವ ಮೊಲದಂತಿರುವ ಹೆಲ್ಮೆಟ್ ಧರಿಸಿ ಎಮ್ಮೆ ಮೇಲೆ ಸಾಗುವುದನ್ನು ಕಾಣಬಹುದಾಗಿದೆ.  ಇದೇ ವೀಡಿಯೋದಲ್ಲಿ ವಾಹನ ಸವಾರರು ತಮ್ಮ ವಾಹನವನ್ನು ಪಕ್ಕಕ್ಕೆ ಹಾಕಿ ಈತ ಎಮ್ಮೆ ಮೇಲೆ ಸಾಗುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದಾಗಿದೆ. 

ಆದರೆ ವೀಡಿಯೋ ನೋಡಿದ ಕೆಲವರು ಪ್ರಾಣಿಗೇಕೆ ಹಿಂಸೆ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಸಾರ್ವಜನಿಕ ಕಿರುಕುಳ ಎಂದು ಮತ್ತೊಬ್ಬರು ದೂರಿದ್ದಾರೆ.  ದೆಹಲಿಯಲ್ಲಿ ವಾಹನ ದಟ್ಟಣೆಯ ರಸ್ತೆಯಲ್ಲಿ ಈ ಎಮ್ಮೆ ಸವಾರಿ ನಡೆದಿದೆ. ಇನ್ನು ಎಮ್ಮೆ ಸವಾರಿ ಮಾಡಿದ ಈತನನ್ನು ಪೊಲೀಸರು ತಡೆಯದೇ ಇರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಅಮ್ಮನಂತಹ ಮನೆಕೆಲಸದಾಕೆಗೆ ಮೊಬೈಲ್‌ ತೆಗೆಸಿಕೊಟ್ಟ ಬಾಲಕ

ಪೆಟ್ರೋಲ್ ಬೆಲೆ ಏರಿಕೆಯಾದ ಕಾರಣಕ್ಕೆ ನಾನು ಅದಕ್ಕೆ ಬೇರೆ ಜಾಗ ನೀಡಿದ್ದೇನೆ ಎಂದು ವೀಡಿಯೋದಲ್ಲಿ ಬರೆದಿದ್ದಾನೆ. ಆದರೆ ಈ ವೀಡಿಯೋವನ್ನು 3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  193,000 ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಮ್ಮೆಗಳು ಕಿರುಕುಳ ನೀಡುವುದಕ್ಕೆ ಇರುವುದಲ್ಲ,  ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈತನಿಗೆ ಕೆಲಸವೂ ಇಲ್ಲ ಬುದ್ದಿಯೂ ಇಲ್ಲ ಎಂದು ತೋರುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಪ್ರಾಣಿಗಳನ್ನು ಗೌರವಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದಾಕೆಗೆ ಶಾಕ್‌: ಗರ್ಭದ ಬದಲು ಕರುಳಿನಲ್ಲಿ ಬೆಳೆದ ಭ್ರೂಣ
 

 
 
 
 
 
 
 
 
 
 
 
 
 
 
 

A post shared by Bull Rider (@bull_rider_077)

 

 

Follow Us:
Download App:
  • android
  • ios