Asianet Suvarna News Asianet Suvarna News

ನಯಾಗರದ ಜಲಧಾರೆಗೆ ಬಣ್ಣಗಳ ಚಿತ್ತಾರ ಮೂಡಿಸಿದ ಕಾಮನಬಿಲ್ಲು: viral video

ನಯಾಗರ ಜಲಪಾತವೂ ನಮ್ಮ ನಾಡಿನ ವಿಶ್ವ ವಿಖ್ಯಾತ ಜೋಗ ಜಲಪಾತದಂತೆ ಜಲ ಸೌಂದರ್ಯದಿಂದ ಕಂಗೊಳಿಸುವ ವಿಶ್ವದ ಮತ್ತೊಂದು ಅದ್ಭುತ. ಈ ಅದ್ಭುತಕ್ಕೆ ಮತ್ತಷ್ಟು ರಂಗು ನೀಡಿದೆ ಕಾಮನಬಿಲ್ಲು.

rainbow over Niagara Falls  watch viral video akb
Author
Bangalore, First Published Jul 17, 2022, 5:42 PM IST

ನಯಾಗರ ಜಲಪಾತವೂ ನಮ್ಮ ನಾಡಿನ ವಿಶ್ವ ವಿಖ್ಯಾತ ಜೋಗ ಜಲಪಾತದಂತೆ ಜಲ ಸೌಂದರ್ಯದಿಂದ ಕಂಗೊಳಿಸುವ ವಿಶ್ವದ ಮತ್ತೊಂದು ಅದ್ಭುತ. ಈ ಅದ್ಭುತಕ್ಕೆ ಮತ್ತಷ್ಟು ರಂಗು ನೀಡಿದೆ ಕಾಮನಬಿಲ್ಲು. ಹೌದು ಸುತ್ತಲು ಧುಮ್ಮಿಕ್ಕುವ ನೀರಿನ ಮೇಲೆ ಕಾಮನಬಿಲ್ಲಿನ ಬಣ್ಣಗಳು ಚಿತ್ತಾರ ಮೂಡಿಸಿದ್ದು, ಇವು ಜಲಪಾತದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ನಯಾಗರ ಜಲಪಾತವು ಉತ್ತರ ಅಮೆರಿಕಾದ ಈಶಾನ್ಯದಲ್ಲಿರುವ ನಯಾಗರ ನದಿಯ ಮೇಲಿನ ಅದ್ಭುತವಾದ ಜಲಪಾತವಾಗಿದೆ. ಈ ನಯನ ಮನೋಹರವಾದ ಜಲಪಾತವನ್ನು ಕಣ್ಣಾರೆ ಕಂಡು ಆನಂದಿಸಲು ವಿಶ್ವದ ಅನೇಕ ಪ್ರವಾಸಿಗರು ಇಲ್ಲಿಗೆ ಪ್ರತಿವರ್ಷ ಭೇಟಿ ನೀಡುತ್ತಾರೆ.
 
ಪೃಕೃತಿಯ ನೈಜ ಸೌಂದರ್ಯದ ಮುಂದೆ ಮಾನವ ನಿರ್ಮಿತ ಕಲಾಕೃತಿಗಳು ಏನೇನೂ ಅಲ್ಲ. ಪ್ರಕೃತಿ ತನ್ನ ವೈಭವ ಸೌಂದರ್ಯದಿಂದ ಸದಾಕಾಲ ಎಲ್ಲರನ್ನು ಬೆರಗುಗೊಳಿಸುತ್ತದೆ. ಅದೇ ರೀತಿ ನಯಾಗಾರ ಜಲಪಾತದ ಮೇಲೆ ಈ ಕಾಮನಬಿಲ್ಲಿನ ಚಿತ್ತಾರದ ವಿಡಿಯೋ ಈಗ ಕಣ್ಣಿಗೆ ಹಬ್ಬ ನೀಡುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಈ ವಿಡಿಯೋವನ್ನು ಶಂಪಾ ಎಂಬ ಇನ್ಸ್ಟಾಗ್ರಾಮ್‌ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 32 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಅಮೆರಿಕಾದ ಈ ನಯಾಗರ ಜಲಪಾತದ ಸೌಂದರ್ಯಕ್ಕೆ ಬೆರಗಾಗಿದ್ದಾರೆ. 'ಅಪರೂಪದ ದೃಶ್ಯ. ಜಲಪಾತದ ಮೇಲೆ ಪೂರ್ಣ ಮಳೆಬಿಲ್ಲು. ಸುಂದರವಾದ ದೃಶ್ಯ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. 

 

ಈ ಸುಂದರವಾದ ಜಲಪಾತವು ಒಂಟಾರಿಯೊ, ಕೆನಡಾ ಮತ್ತು ನ್ಯೂಯಾರ್ಕ್, ಯುಎಸ್ ನಡುವಿನ ಗಡಿಯಲ್ಲಿದೆ. ಈ ಸುಂದರವಾದ ಜಲಪಾತವು ಅಮೆರಿಕ ಹಾಗೂ ಕೆನಡಾ ದೇಶಗಳ ಅತಿದೊಡ್ಡ ಹಾಗೂ ಸುಂದರವಾದ ಜಲಪಾತವಾಗಿದೆ. ಈ ಅತ್ಯದ್ಭುತವಾದ ಜಲಪಾತವು ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಈ ಎರಡು ದೇಶಗಳ ನಡುವೆ ನಯಾಗರ ನದಿಯು ಹರಿಯುತ್ತದೆ. ನಯಾಗರವು ಅಮೇರಿಕನ್ ಜಲಪಾತ, ಬ್ರೈಡಲ್ ಜಲಪಾತ, ಕೆನಡಿಯನ್ ಜಲಪಾತ ಹೀಗೆ ಮೂರು ಜಲಪಾತಗಳನ್ನು ಸೃಷ್ಟಿಸಿದೆ. 

ಈ ಸೊಗಸಾದ ಜಲಪಾತವು 173 ಅಡಿಯಿಂದ ಕೆಳಗೆ ಧುಮ್ಮಿಕ್ಕುತ್ತದೆ. ಈ ಜಲಪಾತ ಸೊಬಗನ್ನು ವೀಕ್ಷಿಸಲು ಪ್ರತಿ ವರ್ಷ 12 ದಶ ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಲಪಾತದೊಂದಿಗೆ ಇಲ್ಲಿ ಅನೇಕ ಆಕರ್ಷಣೆಗಳು ಇವೆ. ಇದರ ಸಮೀಪದಲ್ಲಿ ಲೇಕ್ ಈರಿ, ಲೇಕ್ ಆಂಟೇರಿಯೋ ತಮ್ಮ ಜಲಧಾರೆಯನ್ನು ಸುರಿಸುತ್ತದೆ. ಈ ಸೊಗಸಾದ ಸ್ಥಳವನ್ನು ಕಣ್ತುಂಬಿಕೊಳ್ಳಲು ಮೇ ತಿಂಗಳು ಸೂಕ್ತವಾದುದು. ಉತ್ತರ ಅಮೆರಿಕಾ ಮತ್ತು ಕೆನಡಾ ರಾಷ್ಟ್ರಗಳ ಕಡೆಯಿಂದ ಈ ಜಲಪಾತವನ್ನು ಮೇ ತಿಂಗಳ ಸಮಯದಲ್ಲಿ ಚೆನ್ನಾಗಿ ವೀಕ್ಷಿಸಬಹುದು.

Follow Us:
Download App:
  • android
  • ios