ಕಡಿಮೆ ಬೆಲೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಸಾರಿಗೆ ವ್ಯವಸ್ಥೆ ರೈಲು. ಹೀಗಾಗಿಯೇ ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಭಾರತೀಯ ರೈಲ್ವೇಯು ಪ್ರಯಾಣಿಕರಿಗಾಗಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸುವ ಹಾಗೆಯೇ ಹೊಸ ನಿಯಮಗಳನ್ನು ಸಹ ರೂಪಿಸುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಡಿಮೆ ಬೆಲೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಸಾರಿಗೆ ವ್ಯವಸ್ಥೆ ರೈಲು. ಹೀಗಾಗಿಯೇ ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಭಾರತೀಯ ರೈಲ್ವೇಯು ಪ್ರಯಾಣಿಕರಿಗಾಗಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸುವ ಹಾಗೆಯೇ ಹೊಸ ನಿಯಮಗಳನ್ನು ಸಹ ರೂಪಿಸುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಭಾರತೀಯ ರೈಲ್ವೆಯ ಕೆಲವು ಪ್ರಮುಖ ನಿಯಮಗಳನ್ನು ನೀವು ತಿಳಿದಿರಬೇಕು. ಈ ನಿಯಮಗಳನ್ನು ಅನುಸರಿಸದಿದ್ದರೆ, ದಂಡವನ್ನು ಪಾವತಿಸಬೇಕಾಗಬಹುದು. ಅದರಲ್ಲೂ ಭಾರತೀಯ ರೈಲ್ವೇ ಇತ್ತೀಚಿಗೆ ಹಲವು ಹೊಸ ನಿಯಮಗಳನ್ನು ಅಳವಡಿಸಿಕೊಂಡಿದೆ. ಈ ಬಗ್ಗೆ ತಿಳಿದುಕೊಳ್ಳದಿದ್ದರೆ ನೀವು ತಪ್ಪದೇ ದಂಡ ಪಾವತಿಸಬೇಕಾಗಬಹುದು.

ಪ್ರಯಾಣಿಕರಿಗೆ ಗುಡ್‌ನ್ಯೂಸ್, ರೈಲಿನಲ್ಲಿ ಇನ್ಮುಂದೆ ಈ ಎಲ್ಲಾ ಸೌಲಭ್ಯ ಸಂಪೂರ್ಣ ಉಚಿತ

ಭಾರತೀಯ ರೈಲ್ವೇಯ ಹೊಸ ನಿಯಮಗಳು

ಟಿಕೆಟ್ ಇಲ್ಲದೆ ಪ್ರಯಾಣಿಸಬಾರದು
ರೈಲ್ವೇ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ, ಅವನಿಗೆ ಗರಿಷ್ಠ 1000 ರೂ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ದಂಡ ಕನಿಷ್ಠ 250 ರೂ. ಆಗಿದೆ.

ಕೋಚ್‌ ಬದಲಾಯಿಸಿದರೆ ದಂಡ
ಇನ್ನೊಂದು ಕೋಚ್‌ನಿಂದ ಟಿಕೆಟ್ ಪಡೆದು ಮತ್ತೊಂದು ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರೂ ಸಹ ದಂಡ ಪಾವತಿಸಬೇಕಾಗುತ್ತದೆ. ಪ್ರಯಾಣಿಕನು ಬೇರೆ ಕೋಚ್‌ನ ಟಿಕೆಟ್ ತೆಗೆದುಕೊಂಡು ಬೇರೆ ಯಾವುದೇ ಕೋಚ್‌ನಲ್ಲಿ ಪ್ರಯಾಣಿಸಿದರೆ. ನಂತರ ಟಿಕೆಟ್ ನಡುವಿನ ವ್ಯತ್ಯಾಸವನ್ನು ವಿಧಿಸಲಾಗುತ್ತದೆ. ಇದರಲ್ಲಿ ಹೆಚ್ಚುವರಿ ಶುಲ್ಕವನ್ನು ಟಿಟಿಇ ವಿಧಿಸಬಹುದು. ಒಬ್ಬ ಪ್ರಯಾಣಿಕನು ಸ್ಲೀಪರ್ ಕೋಚ್ ಟಿಕೆಟ್ ತೆಗೆದುಕೊಂಡು ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದಾದರೆ ಆತ ಹೆಚ್ಚುವರಿ ಹಣವನ್ನು ಪಾವತಿಸಬೇಕು. ಪ್ಯಾಸೆಂಜರ್‌ ಎರಡು ಟಿಕೆಟ್‌ಗಳ ನಡುವಿನ ವ್ಯತ್ಯಾಸವನ್ನು ಪಾವತಿಸಬೇಕಾಗುತ್ತದೆ.

ಟ್ರೈನ್ ಮಿಸ್ ಆಯ್ತಾ? ಟಿಕೆಟ್‌ ಹಣ ರಿಫಂಡ್ ಮಾಡ್ಕೊಳ್ಳೋಕೆ ಇಲ್ಲಿದೆ ಟಿಪ್ಸ್‌

ಕುಡಿದು ಪ್ರಯಾಣಿಸುವುದು ತಪ್ಪು
ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸಿದರೂ ಅವನಿಗೆ ದಂಡ ವಿಧಿಸಲಾಗುತ್ತದೆ. 500 ರೂ. ದಂಡ ಹಾಕುವುದರ ಜೊತೆಗೆ ಆತನನ್ನು ರೈಲಿನಿಂದ ಕೆಳಗಿಳಿಸಲಾಗುತ್ತದೆ.. ಕುಡಿದ ಅಮಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗೆ ಆರು ತಿಂಗಳು ಜೈಲು ಶಿಕ್ಷೆ ಸಹ ವಿಧಿಸಬಹುದು.

ಗುರುತಿನ ಚೀಟಿ ಇಲ್ಲದೆ ಪ್ರಯಾಣಿಸಿದರೆ ದಂಡ
ಒಬ್ಬ ವ್ಯಕ್ತಿಯು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊಂಡೊಯ್ಯದಿದ್ದರೆ, ಟಿಟಿಇ ಟಿಕೆಟ್ ಇಲ್ಲದ ಪ್ರಯಾಣಿಕರನ್ನು ಪರಿಗಣಿಸಿ ದಂಡ ವಿಧಿಸಬಹುದು.

ವಿನಾಕಾರಣ ಚೈನ್ ಎಳೆಯುವುದು
ಯಾವುದೇ ತುರ್ತು ಕಾರಣವಿಲ್ಲದೆ ಅಥವಾ ಯಾವುದೇ ಸರಿಯಾದ ಕಾರಣವಿಲ್ಲದೆ ಯಾರಾದರೂ ರೈಲಿನ ಚೈನ್‌ನ್ನು ಎಳೆದರೆ, ಅಂತಹ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಲಾಗುತ್ತದೆ. ಅವನಿಗೆ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ರೂ 1,000 ದಂಡ ವಿಧಿಸಬಹುದು. ಅಥವಾ ಈ ಎರಡನ್ನೂ ವಿಧಿಸಬಹುದು.

ಧೂಮಪಾನ ಮಾಡಿದರೆ ದಂಡ
ರೈಲಿನಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಹೀಗಾಗಿ ಯಾರಾದರೂ ಧೂಮಪಾನ ಮಾಡಿ ಸಿಕ್ಕಿಬಿದ್ದರೆ 200 ರೂಪಾಯಿ ದಂಡ ತೆರಬೇಕಾಗುತ್ತದೆ.