ನ್ಯಾಷನಲ್ ಹೈವೇನಲ್ಲೇ ಮಹಿಳೆಯ ಬೆನ್ನಟ್ಟಿದ ಹುಡುಗರ ಗ್ಯಾಂಗ್, ವೀಡಿಯೋ ವೈರಲ್
ಇತ್ತೀಚಿಗೆ ನ್ಯಾಷನಲ್ ಹೈವೇನಲ್ಲೇ ಹುಡುಗರ ಗ್ಯಾಂಗ್ ಮಹಿಳೆಯ ಬೆನ್ನಟ್ಟಿದ ಘಟನೆ ನಡೆದಿದೆ. ಪಂಜಾಬ್‌ನಲ್ಲಿ ನಡೆದ ಘಟನೆಯ ಬಗ್ಗೆ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಗಲಾಗಿರಲಿ, ರಾತ್ರಿಯಾಗಿರಲಿ ಮಹಿಳೆ ಒಂಟಿಯಾಗಿ ಪ್ರಯಾಣಿಸಲು ಭಯಪಡುವಂಥಾ ಸನ್ನಿವೇಶ ಬಹುಶಃ ಯಾವತ್ತೂ ಬದಲಾಗುವುದಿಲ್ಲ. ಮಹಿಳೆ ತಾನೆಷ್ಟೇ ಸಬಲೆ ಎಂದು ಅನಿಸಿಕೊಂಡರೂ ಸಮಾಜದಲ್ಲಿ ನಡೆಯುವ ಕೆಟ್ಟ ಘಟನೆಗಳು ಮಹಿಳೆ ಒಂಟಿಯಾಗಿ ಪ್ರಯಾಣಿಸೋದನ್ನು ಹಿಂಜರಿಯುಂತೆ ಮಾಡುತ್ತದೆ. ಅದು ಅಕ್ಷರಶಃ ನಿಜ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿಗೆ ನ್ಯಾಷನಲ್ ಹೈವೇನಲ್ಲೇ ಹುಡುಗರ ಗ್ಯಾಂಗ್ ಮಹಿಳೆಯ ಬೆನ್ನಟ್ಟಿದ ಘಟನೆ ನಡೆದಿದೆ. ಪಂಜಾಬ್‌ನಲ್ಲಿ ನಡೆದ ಘಟನೆಯ ಬಗ್ಗೆ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಚಾಲನೆ ಮಾಡುತ್ತಿದ್ದಾಗ ಪುರುಷರ ಗುಂಪೊಂದು ತನ್ನನ್ನು ಹಿಂಬಾಲಿಸಿ ಭಯಪಡಿಸಿರುವುದರ ಬಗ್ಗೆ ಮಹಿಳೆಯೊಬ್ಬರು ವಿವರಿಸಿದ್ದಾರೆ. ಶಿಕ್ಷಕಿ ಎಂದು ಗುರುತಿಸಲಾದ ಹರ್ಮೀನ್ ಸೋಚ್ ಅವರು ದಿಲ್ವಾನ್ ಮತ್ತು ಸುಭಾನ್‌ಪುರ ನಡುವೆ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆಯನ್ನು ವೀಡಿಯೊ ಮಾಡಿದ್ದಾರೆ.
Woman Driver: ಬಸ್ ಚಾಲಕಿ ಸೀಟ್ ನಲ್ಲಿ ಯುವ ಮಹಿಳೆ, ಜನರೆಲ್ಲ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು
'7 ಕಿಮೀ ವರೆಗೆ ಸ್ಕಾರ್ಪಿರ್ಯೋದಲ್ಲಿ ಬಂದ ಹುಡುಗರ ಗ್ಯಾಂಗ್ ನನ್ನನ್ನು ಹಿಂಬಾಲಿಸುತ್ತಿತ್ತು. ಒಮ್ಮೆ ಸ್ಪೀಡ್ ಮತ್ತೊಮ್ಮೆ ನಿಧಾನವಾಗಿ ಹೋಗುವ ಮೂಲಕ ನನ್ನ ಡ್ರೈವ್‌ಗೆ ಅಡ್ಡಿಪಡಿಸುತ್ತಿದ್ದರು. ಅವರು ಹಿಂಬಾಲಿಸುವುದನ್ನು ತಪ್ಪಿಸಲು ಪೆಟ್ರೋಲ್ ಬಂಕ್‌ನಲ್ಲಿ ಕಾರು ನಿಲ್ಲಿಸಿದೆ. ಅಲ್ಲಿಂದ ಮುಂದುವರಿಯುವಾಗಲೂ ಅವರು ಹಿಂಬಾಲಿಸುವುದನ್ನು ಮುಂದುವರೆಸಿದರು' ಎಂದು ಮಹಿಳೆ ಹೇಳಿದರು.
'ಹೆದ್ದಾರಿಯಲ್ಲಿ ನಾನು ವೇಗವನ್ನು ಸಂಪೂರ್ಣವಾಗಿ ಕಡಿಮೆಗೊಳಿಸಿದೆ. ಪೊಲೀಸರಿಗೆ ಕರೆ ಮಾಡಬೇಕೇ ಅಥವಾ ಡ್ರೈವ್ ಮಾಡಿ ಮುಂದೆ ಹೋಗಬೇಕೆ ಎಂಬ ಬಗ್ಗೆ ಗೊಂದಲಕ್ಕೊಳಗಾಗಿದ್ದೆ. ಅವರು ವಾಹನದ ವೇಗವನ್ನು ಹೆಚ್ಚಿಸುವುದು ಮತ್ತು ಕಡಿಮೆಗೊಳಿಸುವುದು ಮಾಡುತ್ತಲೇ ಇದ್ದರು. ನಾನು ಕೊನೆಗೆ ಒಂದೆಡೆ ರೈಟ್ ರಸ್ತೆಯನ್ನು ತೆಗೆದುಕೊಂಡು ಮುಂದೆ ಹೋದೆ. ಅವರು ಹಿಂಬಾಲಿಸುವುದ್ನು ತಪ್ಪಿಸಿದೆ' ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ನಿದ್ದೆಗೆ ಜಾರಿದ ಉಬರ್ ಚಾಲಕ, ಪುಣೆಯಿಂದ ಮುಂಬೈಗೆ ತಾನೇ ಕಾರು ಚಲಾಯಿಸಿದ ಮಹಿಳೆ!
ಹುಡುಗರ ಗ್ಯಾಂಗ್‌ನ ಹಿಂಬಾಲಿಕೆ ನಿಂತ ಮೇಲೆ 'ನನ್ನ ಕಾಲುಗಳು ಅದೆಷ್ಟು ನಡುಗುತ್ತಿದೆ. ಹಾರ್ಟ್‌ಬೀಟ್ ಹೆಚ್ಚಾಗಿದೆ ಎಂಬುದನ್ನು ಅರಿತುಕೊಂಡೆ' ಎಂದು ಮಹಿಳೆ ಹೇಳಿದ್ದಾರೆ.'ಕೆಲವು ಪುರುಷರಿಗೆ ಮನರಂಜನೆ ಎಂದು ಅನಿಸುವ ವಿಷಯವು ಮಹಿಳೆಯರಿಗೆ ಅನೇಕ ದಿನಗಳವರೆಗೆ ಆಘಾತಕಾರಿ ಪರಿಣಾ ಬೀರಬಹುದು. ಪುರುಷರು ಇದನ್ನು ತಿಳಿದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ' ಎಂದು ಮಹಿಳೆ ತಿಳಿಸಿದ್ದಾರೆ.
ಮಹಿಳೆಯ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಬಹುಬೇಗನೆ ವೈರಲ್ ಆಯಿತು. ಪೊಲೀಸ್ ವರದಿಯನ್ನು ದಾಖಲಿಸಲು ಜನರು ಆಕೆಗೆ ಸಲಹೆ ನೀಡಿದರು. 'ದಯವಿಟ್ಟು ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕಿರುಕುಳ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಎಫ್‌ಐಆರ್ ಅನ್ನು ದಾಖಲಿಸಿ' ಎಂದಿದ್ದಾರೆ. ಇನ್ನೊಬ್ಬರು, "ಅಂತಹ ಸಂದರ್ಭಗಳಲ್ಲಿ ಒಂದು ಸೆಕೆಂಡ್‌ಗೂ ಕಾಯದೆ 100 ಅನ್ನು ಡಯಲ್ ಮಾಡಿ" ಎಂದು ಸಲಹೆ ನೀಡಿದರು. ಮತ್ತೊಬ್ಬರು, 'ವ್ಯಕ್ತಿಗಳು ತೊಂದರೆ ಕೊಡುವವರಾಗಿದ್ದಾರೆ ಪೊಲೀಸರಿಗೆ ತಪ್ಪದೇ ದೂರು ಕೊಡಬೇಕು. ಸಹಾಯಕ್ಕಾಗಿ ಹತ್ತಿರದ ಪೋಲೀಸ್ ಸ್ಟೇಷನ್ ಹೋಗಿ. ಯಾವತ್ತೂ ಇಂಥಾ ಘಟನೆಗಳು ನಡೆದಾಗ ಸಹಿಸಿ ಸುಮ್ಮನಿರಬೇಡಿ' ಎಂದು ಸಲಹೆ ನೀಡಿದ್ದಾರೆ.