ತಿರುಗಾಡಲು ವಿದೇಶಕ್ಕೆ ಹೋಗ್ಬೇಕಾಗಿಲ್ಲ: ಇದು ಅಮೆರಿಕಾ ಅಲ್ಲ ನಮ್ಮ ಅರುಣಾಚಲ...

ನಮ್ಮ ಕರ್ನಾಟಕದಲ್ಲೇ ನೂರಾರು ಮನ ಸೆಳೆಯುವ ರಮಣೀಯ ಪ್ರಕೃತಿ ಸೌಂದರ್ಯದ ತಾಣಗಳಿವೆ. ಅದೇ ರೀತಿ ಈಗ ಈಶಾನ್ಯ ರಾಜ್ಯವೆನಿಸಿದ ನಮ್ಮ ಅರುಣಾಚಲ ಪ್ರದೇಶದ ಸುಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕಣ್ಮನ ಸೆಳೆಯುತ್ತಿದೆ.

Paradise of the earth, mesmerising beauty of Northeast India video goes viral in Social Media akb

ಸಿಕ್ಕಿಂ: ನಮ್ಮ ದೇಶದಲ್ಲಿ ಅನೇಕ ಶ್ರೀಮಂತರು, ಸೆಲೆಬ್ರಿಟಿಗಳು ದೂರದ ದೇಶಗಳಿಗೆ ಭೇಟಿ ನೀಡಿ ಮನೋಹರವಾದ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ನಮ್ಮಲೇ ನಮ್ಮ ದೇಶದಲ್ಲೇ ಹಲವು ರಮಣೀಯ ಕಣ್ಮನ ಸೆಳೆಯುವ ಪ್ರದೇಶಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದರಲ್ಲೂ ನಮ್ಮ ದೇಶದ ಒಂದೊಂದು ರಾಜ್ಯದ ಒಂದೊಂದು ಪ್ರದೇಶವೂ ಒಂದಕ್ಕಿಂತ ಒಂದು ಭಿನ್ನ, ಸುಂದರ ಅಮೋಘ. ನಮ್ಮ ಕರ್ನಾಟಕದಲ್ಲೇ ನೂರಾರು ಮನ ಸೆಳೆಯುವ ರಮಣೀಯ ಪ್ರಕೃತಿ ಸೌಂದರ್ಯದ ತಾಣಗಳಿವೆ. ಅದೇ ರೀತಿ ಈಗ ಈಶಾನ್ಯ ರಾಜ್ಯವೆನಿಸಿದ ನಮ್ಮ ಅರುಣಾಚಲ ಪ್ರದೇಶದ ಸುಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕಣ್ಮನ ಸೆಳೆಯುತ್ತಿದೆ.

ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸನ್ನಿ ಕೆ. ಸಿಂಗ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕರ್ಷಕ ಭೂ ದೃಶ್ಯ, ಚಾಂಗ್ಲಾಂಗ್ ಜಿಲ್ಲಾ ಆಡಳಿತದಿಂದ 2ನೇ ಮುಗಾಫಿ ದಂಡಯಾತ್ರೆ. ಮುಗಾಫಿ  4050M (13288 ಅಡಿ) ಎತ್ತರ, ವಿಜಯನಗರದಿಂದ 30 ಕಿಮೀ ಚಾರಣ,  ಆಲ್ಪೈನ್ ಮೆಡೋಸ್, ಆರ್ಕಿಡ್ ಟ್ರೇಲ್ಸ್, ಸಸ್ಯಶಾಸ್ತ್ರೀಯ ಸ್ವರ್ಗ, ಪಕ್ಷಿಗಳ ಸ್ವರ್ಗ ಎಂದು ವಿವರ ನೀಡಿದ್ದಾರೆ. ಭಾರತದ ಈಶಾನ್ಯ ರಾಜ್ಯಗಳು ರುದ್ರ ರಮಣೀಯವಾಗಿದ್ದು,  ಸಾಹಸವನ್ನು ಬಯಸುವ ಪ್ರವಾಸಿಗರ ಪಾಲಿನ ಸ್ವರ್ಗವೆನಿಸಿದೆ. ಆದರೆ ಅವುಗಳಲ್ಲಿ ಕೆಲವು ಇನ್ನೂ ಪ್ರದೇಶಗಳ ಬಗ್ಗೆ ಜನರಿಗೆ ಇನ್ನು ತಿಳಿದಿಲ್ಲ. ಈ ರಾಜ್ಯಗಳ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.

 

ಈ ಪೋಸ್ಟ್‌ನ್ನು ಐಎಎಸ್ ಅಧಿಕಾರಿ ಸನ್ನಿ ಕೆ. ಸಿಂಗ್ ಅವರು ಮುಖ್ಯಮಂತ್ರಿ ಫೇಮಾ ಖಂಡು, ನಗರಾಭಿವೃದ್ಧಿ ಸಚಿವ (Urban Development Minister) ಕಮ್ಲುಂಗ್ ಮೊಸಾಂಗ್, ಸೋನಮ್ ಚೋಂಬೇ (Sonam Chombay) ಹಾಗೂ ಅರುಣಾಚಲ ಪ್ರವಾಸೋದ್ಯಮ (Arunachal Tourism)ಇಲಾಖೆಗೆ ಟ್ಯಾಗ್ ಮಾಡಿದ್ದಾರೆ. ಎರಡು ನಿಮಿಷಗಳ ಈ ವಿಡಿಯೋ ಭವ್ಯವಾದ ಆಲ್ಪೈನ್ ಹುಲ್ಲುಗಾವಲುಗಳು, ವರ್ಣರಂಜಿತ ಆರ್ಕಿಡ್ ಮಾರ್ಗಗಳು, ನಾಮದಾಫಾ ರಾಷ್ಟ್ರೀಯ ಉದ್ಯಾನವನದ  ಜೀವವೈವಿಧ್ಯ ಮತ್ತು ಚಾಂಗ್ಲಾಂಗ್ ಜಿಲ್ಲೆಯ ವಿಜಯನಗರ ಎಂಬ ಹಳ್ಳಿಯನ್ನು ತೋರಿಸುತ್ತದೆ.

Travel Tips in Kannada: ಅತ್ಯಂತ ಕಡಿಮೆ ಬಜೆಟ್ ನಲ್ಲಿ ಭಾರತದ ಸುಂದರ ತಾಣಗಳನ್ನ ನೋಡಿ

ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್‌ಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರುಣಾಚಲ ಸರ್ಕಾರವು ಚಾಂಗ್ಲಾಂಗ್ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಯಸಿದೆ. ವಿಜಯನಗರವು ಪರಿಣಾಮಕಾರಿ ರಸ್ತೆ ಸಂಪರ್ಕ, ಇಂಟರ್ನೆಟ್ (internet) ಸೌಲಭ್ಯ ಮುಂತಾದವುಗಳ ಕೊರತೆಯಿಂದಾಗಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿದೆ ಎಂದು  ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಇತ್ತೀಚೆಗೆ, ಯಮೆಂಗ್ ಜಲಪಾತದ ಅದ್ಭುತ ಸೌಂದರ್ಯವನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ (Chief Minister) ಪೆಮಾ ಖಂಡು (Pema Khandu) ಅವರು ಟ್ವಿಟರ್‌ನಲ್ಲಿ ಈ ಮೋಡಿ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಟ್ರಾವೆಲ್ ಪ್ರಿಯರಿಗೊಂದು ಸಿರಿ ಸುದ್ದಿ, ಯುರೋಪ್ ಹೀಗ್ ಸುತ್ತಬಹುದು ನೋಡಿ

ಅರುಣಾಚಲ ಪ್ರದೇಶದ (Arunachal Pradesh) ಪ್ರವಾಸೋದ್ಯಮವನ್ನು (tourism industry) ಪುನಶ್ಚೇತನಗೊಳಿಸಲು ಮುಖ್ಯಮಂತ್ರಿ ಖಂಡು ಅವರು ಕಳೆದ ವರ್ಷ 'ದೇಖೋ ಅಪ್ನಾ ಪ್ರದೇಶ್' ಎಂಬ ಅಭಿಯಾನವನ್ನು ಪ್ರಾರಂಭಿಸಿದರು, ಇದು ಕೋವಿಡ್ -19 ಬಳಿಕ ಸ್ಥಗಿತಗೊಂಡ ಪ್ರವಾಸಿಗರ ಭೇಟಿ ಹಾಗೂ ಹಲವು ನಿರ್ಬಂಧಗಳ ಪರಿಣಾಮವಾಗಿ ಗಮನಾರ್ಹ ನಷ್ಟವನ್ನು ಅನುಭವಿಸಿತು. ಇದೀಗ ಈ ಅಭಿಯಾನವನ್ನು ರಾಜ್ಯದ ವಿವಿಧ ಸಚಿವರು ಮತ್ತು ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ಪ್ರಚಾರ ಮಾಡುತ್ತಿದ್ದಾರೆ.
 

Latest Videos
Follow Us:
Download App:
  • android
  • ios