ಟ್ರಾವೆಲ್ ಪ್ರಿಯರಿಗೊಂದು ಸಿರಿ ಸುದ್ದಿ, ಯುರೋಪ್ ಹೀಗ್ ಸುತ್ತಬಹುದು ನೋಡಿ

ಪ್ರವಾಸಕ್ಕೆ ಪ್ಲಾನ್ ಮಾಡ್ತಿದ್ದರೆ ಹಣಬೇಕೇಬೇಕು. ಅದ್ರಲ್ಲೂ ವಿದೇಶಿ ಪ್ರವಾಸ ಅಂದ್ಮೇಲೆ ಕೇಳ್ಬೇಕಾ? ಇದೇ ಕಾರಣಕ್ಕೆ ಬಹುತೇಕರು ವಿದೇಶಿ ಪ್ರವಾಸದ ಕನಸು ಕಾಣೋದಿಲ್ಲ. ಆದ್ರೆ ಒಂದು ಲಕ್ಷ ರೂಪಾಯಿಯಲ್ಲಿ ಯುರೋಪ್ ಸುತ್ತಬಹುದು ನಿಮಗೆ ಗೊತ್ತಾ?
 

Beautiful Countries Of Europe Where You Can Travel In Budget

ವಿದೇಶಿ ಪ್ರವಾಸ ಎಂದಾಗ ಬಹುತೇಕರು ಯುರೋಪ್ ಹೆಸರನ್ನು ಮೊದಲು ಹೇಳ್ತಾರೆ. ಯುರೋಪ್ ಎಲ್ಲರಿಗೂ ಇಷ್ಟವಾಗುವ ಪ್ರದೇಶ.  ಯುರೋಪ್ ಗೆ ಪ್ರವಾಸಕ್ಕೆ ಹೋಗೋದು ಸುಲಭವಲ್ಲ. ಹಣ ಹೆಚ್ಚು ಖರ್ಚಾಗುತ್ತೆ ಅಂತಾ ಕೆಲವರು ಯುರೋಪ್ ಸುತ್ತುವ ಕನಸನ್ನು ದೂರ ಮಾಡ್ತಾರೆ. ಮತ್ತೆ ಕೆಲವರು ಜೀವನ ಪೂರ್ತಿ ದುಡಿದು, ಇದಕ್ಕಾಗಿ ಹಣ ಕೂಡಿಟ್ಟು ನಂತ್ರ ಪ್ರವಾಸದ ಪ್ಲಾನ್ ಮಾಡ್ತಾರೆ. ನೀವೂ ಯುರೋಪ್ ಸುತ್ತವ ಆಸೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ನೀವು ಕಡಿಮೆ ಖರ್ಚಿನಲ್ಲಿ ಯುರೋಪ್ ನೋಡಿ ಬರಬಹುದು. ಯುರೋಪ್ ನ ಎಲ್ಲ ದೇಶಗಳು ದುಬಾರಿಯಲ್ಲ. ಕೆಲ ದೇಶಗಳಿಗೆ ನೀವು ಕಡಿಮೆ ಹಣ ಹೊಂದಿಸಿದ್ರೆ ಸಾಕು. ಯಸ್, ಯುರೋಪ್ ನ ಕೆಲ ದೇಶಗಳಲ್ಲಿ ನೀವು ಒಂದು ಲಕ್ಷ ರೂಪಾಯಿಗೆ 4 ರಿಂದ 5 ದಿನಗಳನ್ನು ಆರಾಮವಾಗಿ ಕಳೆಯಬಹುದು.  ಇಂದು ನಾವು ಅಗ್ಗದ ಯುರೋಪ್ ಪ್ರವಾಸದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಕಡಿಮೆ ಖರ್ಚಿನಲ್ಲಿ ಯುರೋಪ್ (Europe) ಪ್ರವಾಸ (Trip) : 
ರೊಮೇನಿಯಾ (Romania) :
ರೊಮೇನಿಯಾ ಹೆಸರನ್ನು ಬಹುತೇಕರು ಕೇಳಿರ್ತಾರೆ. ಈ ದೇಶದಲ್ಲಿ ಕಲ್ಲಿನಿಂದ ಮಾಡಿದ ಹಳೆಯ ಮಠಗಳು ಮತ್ತು ಚರ್ಚುಗಳು ಸಾಕಷ್ಟಿವೆ. ಪ್ರವಾಸಕ್ಕೆ ಇದು ಸೂಕ್ತವಾದ ಪ್ರದೇಶ.  ರೊಮೇನಿಯಾ ಅಗ್ಗದ ದೇಶಗಳಲ್ಲಿ ಒಂದು. ಸುಂದರ ಮಠ, ಭೂ ಪ್ರದೇಶಗಳನ್ನು ವೀಕ್ಷಣೆ ಮಾಡುವ ಜೊತೆಗೆ ಕಡಿಮೆ ಬೆಲೆಯಲ್ಲಿ ಆಹಾರ ಸೇವನೆ ಮಾಡಬಹುದು. ಇಲ್ಲಿನ ಹೊಟೇಲ್ ರೂಮ್ ಬೆಲೆ ಕೂಡ ಹೆಚ್ಚು ದುಬಾರಿಯಾಗಿಲ್ಲ. 

ಜೀವನದಲ್ಲಿ ಒಮ್ಮೆ ನೋಡಿ ಕೊಡಗು, ಅಂಥದ್ದೇನಿದೆ ಅಲ್ಲಿ?

ಪೋರ್ಚುಗಲ್ (Portugal) : ಸ್ಟಾರ್ ಫುಟ್ಬಾಲ್ ಆಟಗಾರ ರೊನಾಲ್ಡೊ ತವರು   ಪೋರ್ಚುಗಲ್.  ಈ ದೇಶದಲ್ಲಿ ಸುಂದರವಾದ ಬೀಚ್‌ ಗಳಿವೆ. ಪೋರ್ಚುಗಲ್ ನೋಡಲು ನೀವು ಬ್ಯಾಂಕ್ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಇಟ್ಟಿದ್ರೆ ಸಾಕು. ಒಂದು ಲಕ್ಷ ರೂಪಾಯಿಗೆ ಈ ದೇಶವನ್ನು ಆರಾಮವಾಗಿ ಸುತ್ತಿ ಬರಬಹುದು. ಇಲ್ಲಿ ಕೂಡ ಆಹಾರ ಹಾಗೂ ವಸತಿ ಅಗ್ಗವಾಗಿದೆ.  

ಸ್ಲೋವಾಕಿಯಾ (Slovakia) : ಯುರೋಪ್‌ನ ಸುಂದರ ದೇಶಗಳಲ್ಲಿ ಸ್ಲೋವಾಕಿಯಾ ಒಂದು. ಕಡಿಮೆ ಬಜೆಟ್ ನಲ್ಲಿ ಸ್ಲೋವಾಕಿಯಾ ಸುತ್ತಾಡಬಹುದು. ಇಲ್ಲಿನ ಪ್ರಕೃತಿ ಎಲ್ಲರ ಕಣ್ಮನ ಸೆಳೆಯುತ್ತದೆ. ಆಹಾರ ಮತ್ತು ಸಾರಿಗೆ ಅಗ್ಗವಾಗಿರುವುದೇ ಈ ದೇಶದ ವಿಶೇಷತೆಗಳಲ್ಲಿ ಒಂದು.  

ಹಂಗೇರಿ (Hungary) : ಹಂಗೇರಿ, ಸಿನಿಮಾ ಚಿತ್ರೀಕರಣಕ್ಕೆ ಅತ್ಯುತ್ತಮ ದೇಶ. ಇದನ್ನು ವಾಸ್ತುಶಿಲ್ಪದ ನಿಧಿ ಎಂದು ಕರೆಯಲಾಗುತ್ತದೆ. ಕೇವಲ 3000 ರಿಂದ 4000 ರೂಪಾಯಿಗಳಲ್ಲಿ ನಿಮಗೆ ಹೊಟೇಲ್ ವ್ಯವಸ್ಥೆ ಆಗುತ್ತದೆ. ಸುಂದರ ಪ್ರವಾಸಿ ಸ್ಥಳಗಳು ಹಂಗೇರಿಯಲ್ಲಿವೆ. ಯುರೋಪ್ ಗೆ ಹೋಗುವ ಪ್ಲಾನ್ ಮಾಡಿದ್ದು, ಹಣ ಸಮಸ್ಯೆಯಾಗ್ತಿದೆ ಎನ್ನುವವರು ಹಂಗೇರಿಗೆ ಪ್ಲಾನ್ ಮಾಡಬಹುದು. ಕಡಿಮೆ ಬೆಲೆಗೆ ನೀವು ಪ್ರವಾಸ ಮುಗಿಸಬಹುದು.

ಅಕ್ಟೋಬರ್ ನ ಸಾಲು ಸಾಲು ರಜೆ ಎಂಜಾಯ್ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ

ಜೆಕ್ ರಿಪಬ್ಲಿಕ್ (Czech Republic) : ಯುರೋಪ್ ಪ್ರವಾಸ ಎಂಬ ವಿಷ್ಯ ಬಂದಾಗ ಅನೇಕರ ಬಾಯಿಯಿಂದ ಪ್ರೇಗ್ ಹೆಸರು ಕೇಳಿ ಬರುತ್ತದೆ. ಪ್ರೇಗ್ ಎಂದಾಗ ಇದು ದುಬಾರಿ ನಗರ ಎನ್ನುವವರೇ ಹೆಚ್ಚು. ಅದೇ ಕಾರಣಕ್ಕೆ ಪ್ರೇಗ್ ಪ್ಲಾನ್ ಕ್ಯಾನ್ಸಲ್ ಮಾಡ್ತಾರೆ. ಆದ್ರೆ ಪ್ರೇಗ್ ಗೆ ಹೋಗಲು ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ಜೆಕ್ ರಿಪಬ್ಲಿಕ್ ಅತ್ಯಂತ ಅಗ್ಗದ ದೇಶವಾಗಿದೆ. 1500 ರೂಪಾಯಿಯಿಂದ 2500 ರೂಪಾಯಿಯಲ್ಲಿ ನೀವು ಹೊಟೇಲ್ ರೂಮ್ ಪಡೆಯಬಹುದಾಗಿದೆ. ಇಲ್ಲಿ ವಾಸ ಹಾಗೂ ಆಹಾರ ಎರಡೂ ಅಗ್ಗವಾಗಿದ್ದು, ಒಂದು ಲಕ್ಷ ರೂಪಾಯಿಯಲ್ಲಿ ನೀವು ಆರಾಮವಾಗಿ ನಾಲ್ಕೈದು ದಿನ ಜೆಕ್ ಗಣರಾಜ್ಯ ಸುತ್ತಿಬರಬಹುದು. 

Latest Videos
Follow Us:
Download App:
  • android
  • ios