ರೈಟ್..ರೈಟ್..ಟೂರಿಸ್ಟ್ ಪ್ಲೇಸ್‌ಗೆ ನಿಗಮದ ವಿಶೇಷ ಬಸ್ ಪ್ಯಾಕೇಜ್
ಬೆಂಗಳೂರು-ಜೋಗ್‌ಫಾಲ್ಸ್ ಮಾತ್ರವಲ್ಲ, ರಾಜ್ಯದ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೂ ಇದೆ ವಿಶೇಷ ಬಸ್ ಪ್ಯಾಕೇಜ್. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಯೋಜನೆ ಪ್ರಕಟಿಸಿದೆ.
ಕರ್ನಾಟಕ ಅದ್ಭುತ, ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯ. ಶತಮಾನಗಳಷ್ಟು ಹಳೆಯ ದೇವಾಲಯ, ಸ್ಮಾರಕ, ಗುಡಿಗೋಪುರ, ಕೋಟೆಗಳು ಇಲ್ಲಿವೆ. ರಾಜ್ಯದಲ್ಲಿರುವ ಅದ್ಭುತ ಪ್ರವಾಸಿ ತಾಣಗಳನ್ನು ನೋಡಲು ದೇಶ-ವಿದೇಶದಿಂದಲೂ ಜನರು ಬರುತ್ತಾರೆ. ಸರ್ಕಾರ ಪ್ರವಾಸೋದ್ಯಮಿಂದಲೂ ಹೆಚ್ಚಿನ ಆದಾಯವನ್ನು ಗಳಸುತ್ತಿದೆ. ಹೀಗಿರುವಾಗ್ಲೇ ಕರ್ನಾಟಕ ಸರ್ಕಾರ, ರಾಜ್ಯ ಟೂರಿಸಂ ಡೆವಲಪ್ ಮಾಡಲು ಯೋಜನೆ ಸಿದ್ದಪಡಿಸಿದೆ. ಇತ್ತೀಚಿಗೆ ರಾಜ್ಯ ಸರ್ಕಾರ (State government) ಆರಂಭಿಸರುವ ವಿಶೇಷ ಬೆಂಗಳೂರು-ಜೋಗ ಫಾಲ್ಸ್ ವಿಶೇಷ ಬಸ್ ಪ್ಯಾಕೇಜ್‌ನಂತೆಯೇ ಬೇರೆ ಪ್ರವಾಸಿ ತಾಣಗಳಿಗೂ ಈ ವ್ಯವಸ್ಥೆ ಮಾಡಲಾಗುತ್ತಿದೆ.
ರಾಜ್ಯದ ಪ್ರವಾಸಿತಾಣಗಳಿಗೆ ವಿಶೇಷ ಬಸ್ ಪ್ಯಾಕೇಜ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸಂಸ್ಥೆಯು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 'ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕ' ಮಾರ್ಗದಲ್ಲಿ ಕರ್ನಾಟಕ ಸಾರಿಗೆ ಬಸ್‌ನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನದ/ ರಾತ್ರಿ ಊಟವನ್ನು ಹೊರತುಪಡಿಸಿ) ದಿನಾಂಕ 23/07/2022ರಿಂದ ಪ್ರಾರಂಭಿಸಿ, ಈ ಕೆಳಕಂಡ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುತ್ತದೆ.
ಮಳೆಗಾಲದ ಪ್ರವಾಸದ ಮಜಾನೇ ಬೇರೆ, ಆದರೆ ಇವನ್ನೆಲ್ಲ ಮರೀಬೇಡಿ!
ಪ್ರಯಾಣದ ವಿವರ: ಬೆಂಗಳೂರಿನಿಂದ ತೆರಳುವ ಸಮಯ 6.30, ಉಪಾಹಾರದ ಸಮಯ 8.30, ಮದ್ದೂರಿನಿಂದ ಸೋಮನಾಥಪುರ 9.00-9.45, ಸೋಮನಾಥೇಶ್ವರ ದರ್ಶನ 9.45-10.45, ಸೋಮನಾಥಪುರದಿಂದ ತಲಕಾಡು 10.45-11.30, ತಲಕಾಡು ಪಂಚಲಿಂಗ ದರ್ಶನ-ಮಧ್ಯಾಹ್ನದ ಊಟ 11.30-3.00, ತಲಕಾಡಿನಿಂದ ಮಧ್ಯರಂಗ 3.00-3.45, ರಂಗನಾಥ ಸ್ವಾಮಿ ದರ್ಶನ 3.45-3.55, ಮಧ್ಯರಂಗದಿಂದ ಭರಚುಕ್ಕಿ 3.55-4.05, ಭರಚುಕ್ಕಿ ವೀಕ್ಷಣೆ 4.05-5.00, ಭರಚುಕ್ಕಿಯಿಂದ ಗಗನಚುಕ್ಕಿ 5.00-5.15, ಗಗನಚುಕ್ಕಿ ವೀಕ್ಷಣೆ 5.15-6.15, ಗಗನಚುಕ್ಕಿಯಿಂದ ಹೊರಟು 9 ಗಂಟೆಗೆ ತಲುಪಲಿದೆ .
ಪ್ಯಾಕೇಜ್ ಟೂರ್ ಸಾರಿಗೆ ಪ್ರಯಾಣ ದರದ ವಿವರ ಹೀಗಿದೆ. ವಯಸ್ಕರಿಗೆ 400 ರೂ, ಮಕ್ಕಳಿಗೆ (6ರಿಂದ 12) 250 ರೂ. ನಿಗದಿಪಡಿಸಲಾಗಿದೆ. ನಿಗಮದ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲು ನಿಗಮ ಕೋರಿದೆ. ksrtc.karnataka.gov.in
ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಸ್ಪೆಷಲ್ ಪ್ಯಾಕೇಜ್ ಟೂರ್
ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಸಣ್ಣಪುಟ್ಟಜಲಪಾತಗಳೂ ಉಕ್ಕುಕ್ಕಿ ಹರಿಯುತ್ತವೆ. ವಿಶ್ವ ಪ್ರಸಿದ್ಧ ಜೋಗ ಜಲಪಾತವು ಭೋರ್ಗರೆಯುತ್ತಿದೆ. ಜೋರು ಮಳೆಗೆ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಕರಿ ಮೋಡ ಸಹಿತ ಮಳೆ, ಶೀತ ಗಾಳಿಯು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದಿಂದ 'ಬೆಂಗಳೂರು-ಜೋಗ ಜಲಪಾತ' ಪ್ಯಾಕೇಜ್ ಟೂರ್ ಆರಂಭಿಸಿದೆ. ಜುಲೈ 22ರಿಂದ ಆರಂಭವಾಗುತ್ತಿರುವ ಈ ಪ್ಯಾಕೇಜ್ ಶುಕ್ರವಾರ ಮತ್ತು ಶನಿವಾರದಂದು ಕಾರ್ಯಚರಣೆ ಮಾಡುತ್ತಿದೆ. ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ.
Karnataka Rain Updates; ಜಲಪಾತ, ಜಲಾಶಯ ನೋಡಲು ಜನಸಾಗರ
ಟೂರ್ ವಿವರ, ಎಲ್ಲೆಲ್ಲಿಗೆ ಹೋಗಬಹುದು ?: ಪ್ರತಿ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭವಾಗಲಿದ್ದು, ಕೆಳದಿ, ಇಕ್ಕೇರಿ, ಸಾಗರ, ಜೋಗ ಜಲಪಾತವನ್ನು ನೋಡಬಹುದಾಗಿದೆ. ಪ್ರಯಾಣಿಕರಿಗೆ ತಿಂಡಿ ಮತ್ತು ಊಟ ಸೌಲಭ್ಯವನ್ನು ನಿಗಮವೇ ವಹಿಸಲಿದೆ. ಪ್ರಯಾಣ ದರ ವಯಸ್ಕರಿಗೆ - 2300 ರೂ. ಮಕ್ಕಳಿಗೆ (6 ರಿಂದ 12 ವರ್ಷ) 2100 ರೂ.ಗಳನ್ನು ನಿಗದಿ ಪಡಿಸಲಾಗಿದೆ