ಟೈಟಾನಿಕ್ 2.0: ಮಂಜುಗಡ್ಡೆಗೆ ಅಪ್ಪಳಿಸಿದ ಹಡಗು: ವಿಡಿಯೋ ವೈರಲ್
ಒಂಬತ್ತು ರಾತ್ರಿಯ ಪ್ರವಾಸಕ್ಕೆ ಹೊರಟ ನಾರ್ವೇಜಿಯನ್ ಕ್ರೂಸ್ ಹಡಗೊಂದು ಅಲಾಸ್ಕಾ ಬಳಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದಿದೆ. ಇದು ಹಡಗಿನಲ್ಲಿದ್ದ ಪ್ರಯಾಣಿಕರಿಗೆ 1912 ರಲ್ಲಿ ನಡೆದ ಅತ್ಯಂತ ಐಷಾರಾಮಿ ಹಡಗು ಟೈಟಾನಿಕ್ ಅನ್ನು ಮುಳುಗಿಸಿದ ದುರಂತ ಘಟನೆಯನ್ನು ನೆನಪಿಸಿದೆ.
ನಾರ್ವೆ: ಸತ್ಯಕತೆ ಆಧರಿಸಿದ 1997ರ ಬ್ಲಾಕ್ ಬಾಸ್ಟರ್ ಇಂಗ್ಲೀಷ್ ಸಿನಿಮಾ 'ಟೈಟಾನಿಕ್ ' ಯಾರೂ ನೋಡಿಲ್ಲ ಹೇಳಿ. 1912 ರಲ್ಲಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಹಡಗು ಸಂಪೂರ್ಣ ಮುಳುಗಿ ಪ್ರಯಾಣಿಕರೆಲ್ಲರೂ ಜಲಸಮಾಧಿಯಾಗುವ ದುರಂತಕ್ಕೀಡಾದ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಈಗ ಆ ವಿಷಯ ಏಕೆ ಎಂಬ ಕುತೂಹಲ ನಿಮ್ಮಲಿ ಮೂಡಿರಬಹುದು. ಹೀಗೆಯೇ ಒಂಬತ್ತು ರಾತ್ರಿಯ ಪ್ರವಾಸಕ್ಕೆ ಹೊರಟ ನಾರ್ವೇಜಿಯನ್ ಕ್ರೂಸ್ ಹಡಗೊಂದು ಈಗ ಅಲಾಸ್ಕಾ ಬಳಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದಿದೆ. ಇದು ಹಡಗಿನಲ್ಲಿದ್ದ ಪ್ರಯಾಣಿಕರಿಗೆ 1912 ರಲ್ಲಿ ನಡೆದ ಅತ್ಯಂತ ಐಷಾರಾಮಿ ಹಡಗು ಟೈಟಾನಿಕ್ ಅನ್ನು ಮುಳುಗಿಸಿದ ದುರಂತ ಘಟನೆಯನ್ನು ನೆನಪಿಸಿದೆ.
ಒಂಬತ್ತು ರಾತ್ರಿಯ ಪ್ರವಾಸಕ್ಕೆ ಹೊರಟ ನಾರ್ವೇಜಿಯನ್ ಕ್ರೂಸ್ ಹಡಗೊಂದು ಮಂಜುಗಡ್ಡೆಗೆ ಅಪ್ಪಳಿಸಿದ್ದು, ಇದರಲ್ಲಿದ್ದ ಪ್ರಯಾಣಿಕರು ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟೈಟಾನಿಕ್ 2.0 (ನಾರ್ವೆ ಕ್ರೂಸ್ ಹಡಗು) ದೊಡ್ಡ ಕ್ರೂಸ್ ಹಡಗು ಶನಿವಾರ ಅಲಾಸ್ಕಾದಲ್ಲಿ ಹಠಾತ್ತನೆ 'ಗ್ರೋಲರ್' ಮಂಜುಗಡ್ಡೆಗೆ ಅಪ್ಪಳಿಸಿದಾಗ ಅದರಲ್ಲಿದ್ದ ಪ್ರಯಾಣಿಕರು ಜೋರಾಗಿ ಕೂಗಿಕೊಳ್ಳುತ್ತಾರೆ. ಇದು 1912 ರಲ್ಲಿ ಕೆನಡಾದ ನ್ಯೂಫೌಂಡ್ಲ್ಯಾಂಡ್ (Newfoundland) ಬಳಿ ಮಂಜುಗಡ್ಡೆಗೆ ಅಪ್ಪಳಿಸಿ ನಂತರ ಮುಳುಗಿದ RMS ಟೈಟಾನಿಕ್ ಹಡಗಿನ ನೆನಪುಗಳನ್ನು ಮರುಕಳಿಸಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಹಡಗಿನ ಬದಿಯು ಮಂಜುಗಡ್ಡೆಗೆ ತಾಗಿ ಮುಂದೆ ಸಾಗುತ್ತಿರುವಾಗ ನೀರಿನ ಮೇಲೆ ಮಂಜುಗಡ್ಡೆಯ ತುಂಡುಗಳು ಮೇಲೆ ಕೆಳಗೆ ಹೋಗುತ್ತಾ ನೀರಿನಲ್ಲಿ ಬೂದು ಬಣ್ಣದ ನೊರೆ ಏಳುವುದನ್ನು ಕಾಣಬಹುದು. ಅಲ್ಲದೇ ಈ ವೇಳೆ ಹಡಗಿನಲ್ಲಿದ್ದ ಪ್ರಯಾಣಿಕರು ಭಯಗೊಂಡು ಜೋರಾಗಿ ಕಿರುಚಿಕೊಳ್ಳುತ್ತಾರೆ.
ಇದು ಎರಡು ಮೀಟರ್‌ಗಿಂತ ಕಡಿಮೆ ಅಗಲವಾಗಿದ್ದು ಹಾಗೂ ನೀರಿನ ಮೇಲೆ ಒಂದು ಮೀಟರ್‌ಗಿಂತ ಸ್ವಲ್ಪ ಕಡಿಮೆ ಕಾಣಿಸುತ್ತಿತ್ತು. ಘಟನೆಯ ಬಳಿಕ ನಾರ್ವೇಜಿಯನ್ ಕ್ರೂಸ್ ಕಂಪನಿಯು ತನ್ನ ಪ್ರವಾಸವನ್ನು ಮಧ್ಯಕ್ಕೆ ಸ್ಥಗಿತಗೊಳಿಸಿದೆ. ಅಲ್ಲದೇ ಹಡಗನ್ನು ಸುರಕ್ಷತಾ ಮೌಲ್ಯಮಾಪನಕ್ಕಾಗಿ ಜುನೌ ಬಂದರಿಗೆ (port of Juneau) ತರಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಜುನೌನ ಕೋಸ್ಟ್ ಗಾರ್ಡ್ ಸೆಕ್ಟರ್ ಹಾಗೂ ಗುತ್ತಿಗೆ ಪಡೆದ ಡೈವರ್‌ಗಳು ಹಡಗಿನ ಬಲ ಮುಂಭಾಗವನ್ನು ಪರಿಶೀಲಿಸಿದಾಗ, ಹಡಗು ಹಾನಿಗೊಳಗಾಗಿರುವುದು ಕಂಡು ಬಂದಿದೆ ಮತ್ತು ಹಡಗಿನ ಹೆಚ್ಚಿನ ದುರಸ್ತಿಗಾಗಿ ಅದರ ತವರು ಬಂದರು ಸಿಯಾಟಲ್‌ಗೆ (Seattle) ಹಿಂತಿರುಗಲಿದೆ ಎಂದು ತಿಳಿದು ಬಂದಿದೆ.
ಕರಗುತ್ತಿವೆ ಟಿಬೆಟ್‌ನ ಹಿಮಗಡ್ಡೆಗಳು, ಪತ್ತೆಯಾಯ್ತು 1000 ಹೊಸ ಬ್ಯಾಕ್ಟೀರಿಯಾಗಳು, ಭಾರತ-ಚೀನಾಗೆ ಅಪಾಯ!
ನಾರ್ವೇಜಿಯನ್ ಕ್ರೂಸ್ ಲೈನ್ (NCL) ಹಡಗಿಗೆ ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ ಮತ್ತು ಇತರ ಸ್ಥಳೀಯ ಕಡಲ ಅಧಿಕಾರಿಗಳು ಕಡಿಮೆ ವೇಗದಲ್ಲಿ ಸಿಯಾಟಲ್‌ಗೆ ಮರಳಲು ಅನುಮತಿ ನೀಡಿದ್ದಾರೆ ಪ್ರಸ್ತುತ ಹಡಗಿನಲ್ಲಿರುವ ಎಲ್ಲಾ ಅತಿಥಿಗಳು ಮೂಲತಃ ಯೋಜಿಸಿದಂತೆ ಸಿಯಾಟಲ್‌ನಲ್ಲಿ ಇಳಿಯುತ್ತಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ಅನಾಹುತದ ಸಮಯದಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ , ಆದರೆ ಹಡಗಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
1912 ರಲ್ಲಿ ಮುಳುಗಡೆಯಾದ ಟೈಟಾನಿಕ್ ತನ್ನ ಮೊದಲ ಪ್ರಯಾಣವನ್ನು ಆರಂಭಿಸಿದ ಹಡಗಾಗಿತ್ತು, ಆ ಸಮಯದಲ್ಲಿ ಲಭ್ಯವಿರುವ ಅದರ ಸುಧಾರಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳ ಕಾರಣದಿಂದಾಗಿ ಮುಳುಗಲಾರದು ಎಂದು ಪರಿಗಣಿಸಲಾಗಿತ್ತು. ಆಗ ಅದು ವಿಶ್ವದ ಅತಿ ದೊಡ್ಡ ಮತ್ತು ಐಷಾರಾಮಿ ಹಡಗು ಆಗಿತ್ತು. ಆದರೆ ಮಂಜುಗಡ್ಡೆಗೆ ಬಡಿದ ನಂತರ ಹಡಗು ಮುಳುಗಿತು. ಮಂಜುಗಡ್ಡೆಯೊಮದಿಗಿನ ಘರ್ಷಣೆಯು ಹಡಗು ಮತ್ತು ಅದರ ಜಲನಿರೋಧಕ ವಿಭಾಗಗಳನ್ನು ಹಾನಿಗೊಳಿಸಿತು. ಸೀಮಿತ ಸಂಖ್ಯೆಯ ಲೈಫ್‌ಬೋಟ್‌ಗಳಿಂದಾಗಿ ಅನೇಕ ಪ್ರಯಾಣಿಕರು ಹಡಗಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಘರ್ಷಣೆಯ ಕೆಲವೇ ಗಂಟೆಗಳ ನಂತರ ಟೈಟಾನಿಕ್ ಹಡಗು ಮುಳುಗಿತು, ಸುಮಾರು 1,500 ಪ್ರಯಾಣಿಕರರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡರು.
ಚೀನಾ to ಲೆಬನಾನ್ ಹಡಗು ಮಂಗ್ಳೂರಿಗೆ ಬಂದಿದ್ದೇಕೆ?: ಕರಾವಳಿ ಸಮುದ್ರದಲ್ಲಿ ಹೈ ಅಲರ್ಟ್..!
ವರ್ಷಗಳ ನಂತರ, ಜೇಮ್ಸ್ ಕ್ಯಾಮರೂನ್ ಅವರು ಈ ದುರಂತ ಕತೆಯನ್ನು ಆಧರಿಸಿ 'ಟೈಟಾನಿಕ್' ಚಲನಚಿತ್ರವನ್ನು ನಿರ್ದೇಶಿಸಿದರು, ಇದರಲ್ಲಿ ಕೇಟ್ ವಿನ್ಸ್ಲೆಟ್ (Kate Winslet) ಮತ್ತು ಲಿಯೊನಾರ್ಡೊ ಡಿ ಕ್ಯಾಪ್ರಿಯೊ (Leonardo Di Caprio) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.