Asianet Suvarna News Asianet Suvarna News

ಕರ್ನಾಟಕದ ಏಳು ಅದ್ಭುತಗಳಿಗೆ ಮತ ಚಲಾಯಿಸಿ: ಕಲಬುರಗಿಯಿಂದ ಬುದ್ಧ ವಿಹಾರ ನಾಮನಿರ್ದೇಶನ

ಕರ್ನಾಟಕದ ಏಳು ಅದ್ಬುಗಳನ್ನು ಗುರುತಿಸುವ ಸಲುವಾಗಿ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮೆಗಾ ಅಭಿಯಾನ 

Nomination of Buddha Vihara from Kalaburagi to 7 Wonders of Karnataka grg
Author
Bengaluru, First Published Aug 19, 2022, 1:14 PM IST

ಚವಡಾಪುರ(ಆ.19):  ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡುವ ಸುವರ್ಣಾವಕಾಶ ಬಂದಿದ್ದು ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ರಾಜ್ಯ ಏಳು ಅದ್ಭುತಗಳ ಸಾಲಿನಲ್ಲಿ ಕಲಬುರಗಿಯ ಹೆಮ್ಮೆಯ ಶ್ವೇತ ವರ್ಣದ ಬುದ್ಧ ವಿಹಾರವನ್ನು ಆಯ್ಕೆಯಾಗುವಂತೆ ಮಾಡುವ ಸವರ್ಣಾಣವಕಾಶವಿದೆ.

ಕಲಬುರಗಿಯಿಂದ ನಾಮನಿರ್ದೇಶನವಾದ ಬುದ್ಧ ವಿಹಾರ:

ರಾಜ್ಯದ ಏಳು ಅದ್ಬುತಗಳ ಸಾಲಿಗೆ ಕಲಬುರಗಿ ಜಿಲ್ಲೆಯಿಂದ ಅತೀ ಹೆಚ್ಚು ಮತ ಪಡೆದು ನಾಮನಿರ್ದೇಶನವಾಗಿದ್ದು ಬುದ್ಧ ವಿಹಾರ. ಈ ಹೆಮ್ಮೆಯ ಧಾರ್ಮಿಕ ತಾಣ ರಾಜ್ಯದ ಏಳು ಅದ್ಬುತಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಎಲ್ಲಾ ಅವಕಾಶಗಳಿವೆ. ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನದ ಆರಂಭದಲ್ಲಿ ಬುದ್ಧ ವಿಹಾರ ಟಾಪ್‌ 10 ಪಟ್ಟಿಯಲ್ಲಿತ್ತು. ಈಗ ಕಲಬುರಗಿಯ ಪ್ರಜೆಗಳಿಗೆ ಬುದ್ಧ ವಿಹಾರವನ್ನು ಅದ್ಬುತಗಳ ಪಟ್ಟಿಗೆ ಸೇರಿಸುವ ಸದಾವಕಾಶವಿದ್ದು ಎಲ್ಲರೂ www.7wondersofkarnataka.com ಈ ವೆಬ್‌ಸೈಟ್‌ನಲ್ಲಿ ನಾಮ ನಿರ್ದೇಶನಗೊಂಡಿರುವ ನೂರು ಅದ್ಬುತಗಳ ಸಾಲಿನಲ್ಲಿ ನಿಂತಿರುವ ನಮ್ಮ ಹೆಮ್ಮೆಯ ಕಲಬುರಗಿಯ ಬುದ್ಧ ವಿಹಾರವನ್ನು ನಿಮ್ಮ ಮತದಾನದ ಮೂಲಕ ಆಯ್ಕೆಯಾಗಲು ಸಹಕರಿಸಿ. ಒಬ್ಬರು ತಲಾ 10 ಮತಗಳನ್ನು ಚಲಾಯಿಸಲು ಅವಕಾಶವಿದೆ. ಪ್ರಸ್ತುತ 100 ಅದ್ಬುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತೀ ಹೆಚ್ಚು ಮತ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ 49 ಆಗಲಿವೆ. ನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆಯ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಬುತಗಳ ಸಾಲಿನಲ್ಲಿ ನಿಲ್ಲಲಿವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಪ್ರತಿಯೊಬ್ಬರು ನಿಮ್ಮ ಪಾಲಿನ 10 ಮತಗಳನ್ನು ಬುದ್ಧ ವಿಹಾರಕ್ಕೆ ನೀಡಿ ಮತ್ತು ಈ ಅಭಿಯಾನದ ಕುರಿತು ನಿಮ್ಮ ಸ್ನೇಹಿತರು, ಹಿತೈಷಿಗಳು, ಬಂಧು ಬಾಂಧವರಿಗೂ ತಿಳಿಸಿ ಮತದಾನ ಮಾಡಲು ಪ್ರೇರೆಪಿಸಿ.

ಕರ್ನಾಟಕದ ಏಳು ಅದ್ಭುತಗಳ ಆಯ್ಕೆಗೆ ಮತದಾನ ಬಿರುಸು: ನಿಮ್ಮ ಜಿಲ್ಲೆಯ ಸ್ಥಳ ಇದೆಯಾ ನೋಡಿ

ಏನಿದು ಅಭಿಯಾನ?:

ಈಗಾಗಲೇ ಪ್ರಪಂಚದಲ್ಲಿ ಏಳು ಅದ್ಬುತಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ತಾಜ್‌ ಮಹಲ್‌ ಕೂಡ ಇದೆ. ಅದೇ ರೀತಿ ಕರ್ನಾಟಕದ ಏಳು ಅದ್ಬುಗಳನ್ನು ಗುರುತಿಸುವ ಸಲುವಾಗಿ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಮೆಗಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ರಾಜ್ಯದ ಎಲ್ಲ ಪ್ರಜೆಗಳು ಪಾಲ್ಗೊಳ್ಳಲು ಅವಕಾಶವಿದ್ದು ಎಲ್ಲರು ತಮ್ಮ ಇಚ್ಚೆಯ ತಾಣವನ್ನು ಅದ್ಬುತಗಳ ಪಟ್ಟಿಗೆ ಸೇರಿಸಲು ಮತದಾನ ಮಾಡಬಹುದಾಗಿದೆ. ಮೇ ತಿಂಗಳಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರತಿದ್ದು ಸಧ್ಯ ಅಭಿಯಾನ 2ನೇ ಹಂತದಲ್ಲಿದೆ.

ಮತದಾನದ ನಿಯಮಗಳು

- ಆಯ್ಕೆಯಾಗಿರುವ ನೂರು ಅದ್ಬುತಗಳಿಗೂ ಮತದಾನ ಮಾಡಬಹುದಾಗಿದೆ
- ಪ್ರತಿಯೊಂದು ಅದ್ಬುತಕ್ಕೂ 10 ಸಲ ಮತದಾನ ಮಾಡಲು ಅವಕಾಶವಿದೆ
- ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು, ಬಂಧು ಬಳಗದವರಿಗೂ ತಿಳಿಸಿ
- ಹೆಚ್ಚಿನ ಮತವನ್ನು ನೀಡುವ ಮೂಲಕ ನಮ್ಮ ಜಿಲ್ಲೆಯ ಹೆಮ್ಮೆಯ ತಾಣವನ್ನು ಏಳು ಅದ್ಬುತವನ್ನಾಗಿಸಿ
 

Follow Us:
Download App:
  • android
  • ios