ಕರ್ನಾಟಕದ ಏಳು ಅದ್ಭುತಗಳ ಆಯ್ಕೆಗೆ ಮತದಾನ ಬಿರುಸು: ನಿಮ್ಮ ಜಿಲ್ಲೆಯ ಸ್ಥಳ ಇದೆಯಾ ನೋಡಿ
ನೀವೂ ಮತ ಹಾಕಿ ನಿಮ್ಮೂರನ್ನು 7 ಅದ್ಭುತಗಳ ಸಾಲಿಗೆ ಸೇರಿಸಿ
ಬೆಂಗಳೂರು(ಜು.27): ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಆರಂಭಿಸಿರುವ ಸೆವೆನ್ ವಂಡರ್ಸ್ ಆಫ್ ಕರ್ನಾಟಕ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ. ನಾಮನಿರ್ದೇಶನ ಹಂತ ಮುಗಿದು, ಈಗ ವೋಟಿಂಗ್ ಹಂತ ಆರಂಭವಾಗಿದ್ದು, ಬಿರುಸಿನ ವೋಟಿಂಗ್ ನಡೆಯುತ್ತಿದೆ. ತಮ್ಮ ಜಿಲ್ಲೆಯ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಬೇಕು ಎಂದು ಜಿಲ್ಲೆಗಳ ನಡುವೆಯೂ ಪೈಪೋಟಿ ಆರಂಭವಾಗಿದೆ. ಈ ಸ್ಪರ್ಧಾತ್ಮಕ ಮನೋಭಾವ ಮತ ಹಾಕುವ ಮೂಲಕ ವ್ಯಕ್ತವಾಗುತ್ತಿದೆ.
ಮಂಗಳವಾರ ಸಂಜೆಯ ಹೊತ್ತಿಗೆ ದಕ್ಷಿಣ ಕನ್ನಡದ ಕಾರಿಂಜ ಕ್ಷೇತ್ರ ಸುಮಾರು ಮೂವತ್ತು ಸಾವಿರ ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ ಐತಿಹಾಸಿಕ ತಾಣ ಹಿರೇಬೆಣಕಲ್ 11,488 ಸ್ಥಾನಗಳಿಂದ ಎರಡನೇ ಸ್ಥಾನ ಪಡೆದುಕೊಂಡಿದೆ. ಜೋಗ ಜಲಪಾತಕ್ಕೆ 7140 ಮತಗಳು ಬಿದ್ದಿವೆ, ಗತವೈಭವದ ಹಂಪೆಗೆ 7006 ಮತಗಳಿವೆ.
ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆ
ನಿಮ್ಮ ಜಿಲ್ಲೆಯ ಅದ್ಭುತಗಳನ್ನು ಗುರುತಿಸಿ, ನಿಮ್ಮ ಮೆಚ್ಚಿನ ಅದ್ಭುತಕ್ಕೆ ಮತ ಹಾಕುವ ಮೂಲಕ ನಿಮ್ಮ ಜಿಲ್ಲೆಯ ಅದ್ಭುತವೊಂದು ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಬರುವಂತೆ ನೋಡಿಕೊಳ್ಳಿ. ನೀವು ಮತ ಹಾಕಲು ಈ ಕೊಂಡಿಯನ್ನು ಕ್ಲಿಕ್ ಮಾಡಿ: ಡಿಡಿಡಿ.www.7wondersofkarnataka.com ಸದ್ಯದ ಟಾಪ್ 10 ಅದ್ಭುತಗಳು
ಸ್ಥಳ ಮತ
1. ಕಾರಿಂಜೇಶ್ವರ ದೇವಸ್ಥಾನ, ದಕ್ಷಿಣ ಕನ್ನಡ 29,817
2. ಹಿರೇಬೆಣಕಲ್, ಕೊಪ್ಪಳ 11,488
3. ಜೋಗ ಜಲಪಾತ, ಶಿವಮೊಗ್ಗ 7,140
4. ಹಂಪಿ, ವಿಜಯನಗರ 7,006
5. ಮೈಸೂರು ಅರಮನೆ, ಮೈಸೂರು 5,509
6. ಗೋಲ್ ಗುಂಬಜ್, ವಿಜಯಪುರ 4,765
7. ಚನ್ನಕೇಶವ ದೇವಾಲಯ, ಹಾಸನ 4,296
8. ಶ್ರವಣ ಬೆಳಗೊಳ, ಹಾಸನ 3,369
9. ಬಸವಣ್ಣ ಮೂರ್ತಿ, ಗದಗ 3060
10. ಹಳೇಬೀಡು ದೇವಾಲಯ, ಹಾಸನ 1,352