ಇನ್ಮುಂದೆ ಟೋಲ್‌ನಲ್ಲಿ ವಾಹನಗಳು ಕಾಯಬೇಕಿಲ್ಲ: ಜಿಪಿಎಸ್ ಆಧರಿತ ಟೋಲ್ 15 ದಿನದಲ್ಲಿ ಜಾರಿ: ಗಡ್ಕರಿ

Synopsis
ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆಯು ಇನ್ನು 15 ದಿನಗ ಲ್ಲಿ ಜಾರಿಗೆ ಬರಲಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನವದೆಹಲಿ: 'ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆಯು ಇನ್ನು 15 ದಿನಗ ಲ್ಲಿ ಜಾರಿಗೆ ಬರಲಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ, ಭಾರತದ ರಸ್ತೆ ಮೂಲ ಸೌಕರ್ಯವನ್ನು ಆಧುನೀಕರಿಸುವ ಸರ್ಕಾರದ ಹೊಸ ಯೋಜನೆ ಇದಾಗಿದೆ. ಎಂದರು ಟೋಲ್ ಬೂತ್‌ನಲ್ಲಿ ಉದ್ದನೆ ಸಾಲು, ನಿಲ್ಲುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆ ಅಡಿಯಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳು ನಿಲ್ಲುವ ಅಗತ್ಯವಿರುವುದಿಲ್ಲ. ಬದಲಿಗೆ ಸ್ಯಾಟಲೈಟ್ ಟ್ರ್ಯಾಕಿಂಗ್‌ನಿಂದ ವಾಹನ ಸವಾರರ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಹಣ ಕಟ್ ಆಗುತ್ತದೆ.
ಪೋಷಕರಿಗೆ ತಿಳಿಯದೇ ಕಾರು ಏರಿದ ಇಬ್ಬರು ಪುಟಾಣಿಗಳು ಉಸಿರುಕಟ್ಟಿ ಸಾವು
ತೆಲಂಗಾಣ: ಪೋಷಕರಿಗೆ ತಿಳಿಯದೇ ಕಾರು ಏರಿದ್ದ ಪುಟ್ಟ ಮಕ್ಕಳಿಬ್ಬರು, ಬಳಿಕ ಅಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. 4 ವರ್ಷದ ತನುಶ್ರೀ ಹಾಗೂ 5 ವರ್ಷದ ಅಭಿನೇತ್ರ ಮೃತಪಟ್ಟ ಮಕ್ಕಳು, ಈ ಇಬ್ಬರು ಮಕ್ಕಳ ಪೋಷಕರು ತಮ್ಮ ತಾಯಿಯ ಮನೆಗೆ ಅಂದರೆ ಮಕ್ಕಳ ಅಜ್ಜಿ ಮನೆಗೆ ತಮ್ಮ ಕುಟುಂಬದಲ್ಲಿ ಜರುಗಲಿದ್ದ ಮದುವೆಯೊಂದರ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಲು ಬಂದಿದ್ದರು. ಈ ವೇಳೆ ಪೋಷಕರು ಒಳಗೆ ಮಾತುಕತೆಯಲ್ಲಿ ತೊಡಗಿದ್ದ ವೇಳೆ ಮಕ್ಕಳು ಆಟವಾಡುತ್ತಾ ಮನೆಯಿಂದ ಹೊರಗಡೆ ಬಂದಿದ್ದು, ಮನೆ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಸೇರಿಕೊಂಡಿದ್ದಾರೆ. ನಂತರ ಕಾರಿನ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಮನೆ ಒಳಗಡೆ ಚರ್ಚಿಸುತ್ತಾ ಕುಳಿತಿದ್ದ ಪೋಷಕರಿಗೆ ಮಕ್ಕಳು ಕಾರಿನ ಒಳಗೆ ಸೇರಿಕೊಂಡಿದ್ದು ಗೊತ್ತೆ. ಇಲ್ಲ, ಇತ್ತ ಕಾರಿನ ಒಳಗೆ ಒಂದು ಗಂಟೆಗೂ ಹೆಚ್ಚು ಕಾಲ ಇದ್ದ ಮಕ್ಕಳು ನಂತರ ಪ್ರಜ್ಞೆ ತಪ್ಪಿ ಕಾರಿನೊಳಗೆ ಬಿದ್ದಿದ್ದಾರೆ.
2 ಪ್ರಮುಖ ಟೋಲ್ ವಿನಾಯಿತಿ ಬಗ್ಗೆ ಸಾರಿಗೆ ಇಲಾಖೆ ಪ್ರಸ್ತಾವಣೆ ಪರಿಗಣಿಸಿದ ನಿರ್ಮಲಾ ಸೀತಾರಾಮನ್!
ಸುಮಾರು ಒಂದು ಗಂಟೆಯ ನಂತರ ಪೋಷಕರಿಗೆ ಈ ವಿಚಾರ ತಿಳಿದಿದ್ದು, ಕೂಡಲೇ ಪ್ರಜ್ಞಾಶೂನ್ಯರಾದ ಮಕ್ಕಳನ್ನು ಕರೆದುಕೊಂಡು ಅವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ವೈದ್ಯರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಮಕ್ಕಳ ಈ ಸಾವಿನಿಂದಾಗಿ ಪೋಷಕರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೇವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ದಮರಗಿರಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೆಲ ಮೂಲಗಳ ಪ್ರಕಾರ ಕೀ ಬಳಸಿ ಕಾರಿನ ಒಳಗೆ ಹೋದ ಮಕ್ಕಳಿಗೆ ನಂತರ ಕಾರಿನ ಡೋರ್ ಅನ್‌ಲಾಕ್ ಮಾಡುವುದಕ್ಕೆ ಗೊತ್ತಾಗದೇ ಒಳಗೆ ಸಿಲುಕಿ ಈ ದುರಂತ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಮನೆಯೊಳಗೆ ಮಾತುಕತೆ ಮುಗಿಸಿ ಮನೆಯಿಂದ ಹೊರಗೆ ಬಂದು ಕಾರಿನೊಳಗೆ ನೋಡಿದಾಗ ಪೋಷಕರಿಗೆ ಈ ಆಘಾತಕಾರಿ ಘಟನೆ ನಡೆದಿರುವುದು ತಿಳಿದು ಬಂದಿದೆ.
ಇಂತಹ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆಯೂ ಮಕ್ಕಳು ಕಾರಿನ ಒಳಗೆ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಹಲಲು ನಡೆದಿವೆ. ಇಂತಹ ಘಟನೆಗಳು ಆಗದಂತೆ ತಡೆಯಲು ಪೋಷಕರು ಬಹಳ ಜಾಗರೂಕರಾಗಿರಬೇಕಿದೆ. ಪುಟ್ಟ ಮಕ್ಕಳ ಕೈಗೆ ಕಾರಿನ ಕೀ ಸಿಗದಂತೆ ಎತ್ತಿಡಿ. ಕಣ್ಣೆದುರಿಂದ ದೂರಾದ ಮಕ್ಕಳ ಕಡೆ ಸದಾ ಒಂದು ಗಮನ ಇರಲಿ. ಎಲ್ಲೋ ಹೊರಗೆ ಆಟ ಆಡ್ಕೊಂಡಿರ್ತಾರೆ ಬಿಡು ಅಂತ ನಿರ್ಲಕ್ಷ್ಯ ವಹಿಸಿದರೆ ಇಂತಹ ಅನಾಹುತಗಳಿಗೆ ಸಾಕ್ಷಿಯಾಗಬೇಕಾದಿತ್ತು.
'8-10 ದಿನ ಕಾದು ನೋಡಿ..' ಟೋಲ್ ದರ ಕಡಿತದ ಸುಳಿವು ನೀಡಿದ್ರಾ ನಿತಿನ್ ಗಡ್ಕರಿ?