ವಿಶ್ವದ ಅತಿ ಎತ್ತರದ ಹಿಮ ಶಿಖರವಾದ ಎವರೆಸ್ಟ್​ ಅನ್ನು ಹಿರಿಯ ಶೆರ್ಪಾ ಕಾಮಿ ರೀಟಾ ಶೆರ್ಪಾ ಅವರು 27 ನೇ ಬಾರಿಗೆ ಹತ್ತುವ ಮಾಡುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಠ್ಮಂಡು: ನೇಪಾಳದ ಪರ್ವತಾರೋಹಿ ಕಮಿ ರಿಟಾ ಎಂಬ ಶೆರ್ಪಾ 27ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ದಾಖಲೆಯನ್ನು (Record) ತಮ್ಮ ಹೆಸರಿಗೆ ಮತ್ತೊಮ್ಮೆ ಬರೆದುಕೊಂಡಿದ್ದಾರೆ. ಭಾನುವಾರ ಪಸಾಂಗ್‌ ದಾವಾ ಎಂಬ ಶೆರ್ಪಾ 26ನೇ ಬಾರಿ ಎವರೆಸ್ಟ್‌ ಏರುವ ಮೂಲಕ ಕಮಿ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಇದಾದ ಮೂರೇ ದಿನಕ್ಕೆ ಕಮಿ ಅವರು 27ನೇ ಸಲ ಜಗತ್ತಿನ ಅತಿ ಎತ್ತರದ ಶಿಖರ (Everest) ಏರಿ ದಾಖಲೆ ಮರುವಶ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಶಕಗಳಿಂದ ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ರಿಟಾ ಅವರು, 1994ರಲ್ಲಿ ಮೊದಲ ಬಾರಿಗೆ ಪರ್ವತ ತುತ್ತತುದಿಗೆ (8,848 ಮೀ.) ಏರಿದ್ದರು. ಇದಾದ ಬಳಿಕ ಪ್ರತಿ ವರ್ಷ ಎವರೆಸ್ಟ್‌ ಶಿಖರ ಏರುವ ಮೂಲಕ ಈವರೆಗೆ 27 ಬಾರಿ ಈ ಸಾಧನೆ ಮಾಡಿದ್ದಾರೆ.

Achiever : 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ವ್ಯಕ್ತಿದ ಸಾಧನೆಗೆ ಬೇಷೆ ಎಂದ ನೆಟ್ಟಿಗರು!

‘ಈ ಸಾಧನೆಯನ್ನು ವೈಯಕ್ತಿಕವಾಗಿ ಮಾಡಲೇಬೇಕು ಎಂದೇನೂ ಮಾಡುತ್ತಿಲ್ಲ. ನಾನು ಮಾರ್ಗದರ್ಶಕನಾಗಿರುವ ಕಾರಣ ಇದು ನಡೆಯುತ್ತಿದೆ’ ಎಂದು ಕಮಿ ರಿಟಾ ಹೇಳಿದ್ದಾರೆ. 2019ರಲ್ಲಿ ಇವರು 6 ದಿನಗಳ ಅವಧಿಯಲ್ಲಿ 2 ಬಾರಿ ಪರ್ವತಾರೋಹಣ ಮಾಡಿದ್ದರು. ಹೆಚ್ಚಾಗಿ ಕಮಿ ಹಾಕಿಕೊಟ್ಟಮಾರ್ಗದಲ್ಲೇ ಇಂದು ಪರ್ವತಾರೋಹಿಗಳು ಶಿಖರ ಏರುತ್ತಾರೆ.

ಕಳೆದ ಭಾನುವಾರ ಮತ್ತೊಬ್ಬ ತರಬೇತುದಾರಾಗಿರುವ ಪಸಾಂಗ್‌ ದಾವಾ ಅವರು 26ನೇ ಬಾರಿ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್‌ ಎವರೆಸ್ಟ್‌ ಏರಿದವರಲ್ಲಿ ಕಮಿ ಜತೆ ಜಂಟಿ ದಾಖಲೆ ನಿರ್ಮಾಣ ಮಾಡಿದ್ದರು. 1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ ಮತ್ತು ಶೆರ್ಪಾ ತೇನ್‌ಸಿಂಗ್‌ ಎವರೆಸ್ಟ್‌ ಶಿಖರ ಏರಿದ್ದರು.

ಮೌಂಟ್ ಎವರೆಸ್ಟ್‌ನಿಂದ ರಾತ್ರಿ ಹೊತ್ತು ಕೇಳಿ ಬರುತ್ತೆ ವಿಚಿತ್ರ ಶಬ್ದ, ಏನದು?