ಹಗಲೆಲ್ಲೂ ಇಲ್ಲಿ ಭೂತ ಓಡಾಡುತ್ತೆ! ಭಯಾನಕವಾಗಿದೆ ದೆವ್ವಗಳಿರೋ ಈ ಹಳ್ಳಿ
ನಮ್ಮ ಮುಂದೆ ಬಂದ ವ್ಯಕ್ತಿ , ವ್ಯಕ್ತಿಯೇ ಅಲ್ಲ, ಭೂತ ಅಂತಾ ಗೊತ್ತಾದ್ರೆ ಏನಾಗ್ಬೇಡ? ಭಯಕ್ಕೆ ಜ್ವರ ಬರೋದು ಗ್ಯಾರಂಟಿ. ಆದ್ರೆ ಈ ಹಳ್ಳಿಗರಿಗೆ ಇದು ಕಾಮನ್. ದೆವ್ವದೆ ಜೊತೆಯೇ ವಾಸ ಮಾಡ್ತಿರುವ ಇವರನ್ನು ಮೆಚ್ಚಲೇಬೇಕು.
ಭೂತ, ದೆವ್ವಗಳನ್ನು ನಂಬುವ, ನಂಬದ ಎರಡೂ ಬಗೆಯ ಜನರಿದ್ದಾರೆ. ಕೆಲವರು ದೇವರಿದ್ದಾನೆ ಅಂದ್ಮೇಲೆ ಭೂತವೂ ಇದೆ ಎನ್ನುತ್ತಾರೆ. ಮತ್ತೆ ಕೆಲವರು ಯಾವುದೂ ಇಲ್ಲ ಎನ್ನುತ್ತಾರೆ. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. ದೆವ್ವವಿದೆ ಎಂದು ನಂಬುವ ಜನರ ಮನಸ್ಸಿನಲ್ಲಿ ಅದ್ರ ಬಗ್ಗೆ ಭಯವೊಂದು ಇರುತ್ತದೆ. ದೆವ್ವ ಓಡಾಡುವ ಜಾಗ, ದೆವ್ವದ ಮನೆ ಎಂದೆಲ್ಲ ಹೆಸರು ಪಡೆದಿರುವ ಜಾಗಕ್ಕೆ ಅವರು ಹೋಗೋದಿಲ್ಲ. ಎಲ್ಲೋ ಒಂದು ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಕೇಳಿದ್ರೆ ಗಡ ಗಡ ನಡಗುವ ಜನರಿಗೆ ಇಡೀ ಹಳ್ಳಿಯೇ ದೆವ್ವಗಳ ವಾಸ ಎಂಬ ಸುದ್ದಿ ಎಷ್ಟು ಭಯಹುಟ್ಟಿಸೋದಿಲ್ಲ. ಆ ಹಳ್ಳಿಯಲ್ಲಿ ಬರಿ ಒಂದು ದೆವ್ವ ಓಡಾಡೋದಿಲ್ಲ. ೧೫ಕ್ಕೂ ಹೆಚ್ಚು ಭೂತಗಳ ಚೇಷ್ಟೆಯನ್ನು ನೀವು ಕಾಣ್ಬಹುದು. ಗಿನ್ನಸ್ ದಾಖಲೆಯನ್ನು ಸೇರಿರುವ ಆ ಭೂತಗಳ ಹಳ್ಳಿ ವಿವರ ಇಲ್ಲಿದೆ.
ಭೂತ (Ghost) ದ ಹಳ್ಳಿ ಯಾವುದು? : ಗಿನ್ನಿಸ್ (Guinness) ದಾಖಲೆಯನ್ನು ಸೇರಿರುವ ಇಡೀ ಹಳ್ಳಿಗೆ ಹಳ್ಳಿಯೇ ಭೂತಗಳ ಕಪಿಮುಷ್ಠಿಯಲ್ಲಿರುವ ಹಳ್ಳಿ ಇಂಗ್ಲೆಂಡ್ (England) ನಲ್ಲಿದೆ. ಕೆಂಟ್‌ನಲ್ಲಿರುವ ಪ್ಲಕ್ಲಿ ಭೂತಗಳ ಹಳ್ಳಿ. ಈ ಪ್ರದೇಶವನ್ನು ವಿಶ್ವದ ಅತ್ಯಂತ ಭಯಾನಕ ಗ್ರಾಮ ಎಂದು ಹೇಳಲಾಗುತ್ತದೆ. ಈ ಗ್ರಾಮದಲ್ಲಿ 12 ಕ್ಕೂ ಹೆಚ್ಚು ಭಯಾನಕ ಸ್ಥಳಗಳಿವೆ. ಇಲ್ಲಿ ದೆವ್ವಗಳು ಸ್ವಚ್ಛಂದವಾಗಿ ಓಡಾಡುತ್ತವೆ. ಬರೀ ರಾತ್ರಿ ಮಾತ್ರವಲ್ಲ ಹಗಲಿನಲ್ಲೂ ದೆವ್ವ ಕಾಣಿಸುತ್ತದೆ ಎಂದು ಜನರು ಹೇಳ್ತಾರೆ.
ಭಾರತೀಯರು ಈ ದೇಶಕ್ಕೆ ಕಾಲಿಟ್ರೂ ಕೊಡ್ಬೇಕು 94 ಸಾವಿರ ರೂ. ತೆರಿಗೆ!
ಗಿನ್ನಿಸ್ ದಾಖಲೆಯಲ್ಲಿ ಹೆಸರು ಪಡೆಯೋದು ಸುಲಭವಲ್ಲ. ಜನರು ಇದಕ್ಕೆ ಸಾಕಷ್ಟು ಕಷ್ಟಪಡಬೇಕು. ಈ ಹಳ್ಳಿ ಕೂಡ ಗಿನ್ನಿಸ್ ದಾಖಲೆ ಸೇರಿರೋದ್ರಿಂದ ಅಲ್ಲಿ ದೆವ್ವವಿಲ್ಲ ಎನ್ನುವುದು ಅಷ್ಟು ಸಮಂಜಸವಲ್ಲ. 1989ರಲ್ಲಿಯೇ ಈ ಹಳ್ಳಿ ಗಿನ್ನಿಸ್ ದಾಖಲೆ ಸೇರಿದೆ. ಇಲ್ಲಿ ಓಡಾಡುವ ಎಲ್ಲರೂ ಜೀವಂತವಾಗಿರುವ ಮನುಷ್ಯರು ಎಂದು ನಂಬಲು ಸಾಧ್ಯವಿಲ್ಲ. ಎಷ್ಟೋ ವರ್ಷಗಳ ಹಿಂದೆ ಸತ್ತ ವ್ಯಕ್ತಿ ಕೂಡ ನಿಮ್ಮ ಕಣ್ಣಿಗೆ ಕಾಣ್ಬಹುದು.
ಇಲ್ಲಿ ಭೂತಗಳ ಬಗ್ಗೆ ಅನೇಕ ಕಥೆಗಳಿವೆ. ಹೈವೇ ಹಾಂಟಿಂಗ್ ಒಂದು. 18 ನೇ ಶತಮಾನದಲ್ಲಿ ಆತ ಸಾವನ್ನಪ್ಪಿದ್ದ. ಆತನನ್ನು ಮರಕ್ಕೆ ನೇಣು ಹಾಕಲಾಗಿತ್ತು. ಆತ ಈಗ್ಲೂ ಅಲ್ಲಲ್ಲಿ ಕಾಣಿಸಿಕೊಳ್ತಾನೆ.
10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ
ಆಗಾಗ ಅಲ್ಲಿನ ಜಾಗವೊಂದರಲ್ಲಿ ಶಿಕ್ಷಕಿ ಶವ ಕಾಣಿಸಿಕೊಳ್ಳುತ್ತದೆಯಂತೆ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಳು. ಸೇಂಟ್ ನಿಕೋಲಸ್ ಚರ್ಚ್ ನಲ್ಲಿ 1100ರಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಆಕೆಯನ್ನು ರೆಡ್ ಲೇಡಿ ಎಂದು ಕರೆಯಲಾಗುತ್ತದೆ. ಆಕೆಯೂ ಆಗಾಗ ಜನರ ಕಣ್ಣಿಗೆ ಕಾಣಿಸಿಕೊಳ್ತಾಳೆ. ಇಲ್ಲಿ ಜೀವನ ನಡೆಸೋದು ಸುಲಭವಲ್ಲ. ಸದ್ಯ ಈ ಹಳ್ಳಿಯಲ್ಲಿ ಸಾವಿರ ಮಂದಿ ವಾಸವಾಗಿದ್ದಾರೆ. ರಾತ್ರಿಗೂ ಮೊದಲೇ ಇಲ್ಲಿ ಕೆಲವರು ಅಳುವ, ನಗುವ ಶಬ್ಧ ಕೇಳುತ್ತದೆಯಂತೆ.
ಪ್ರವಾಸಿ ತಾಣವಾಗಿದೆ ಪ್ಲಕ್ಲಿ: ಸಾಹಸವನ್ನು ಇಷ್ಟಪಡುವ ಜನರು ಪ್ಲಕ್ಲಿ ಹಳ್ಳಿಗೆ ಬರ್ತಾರೆ. ಈಗಿನ ದಿನಗಳಲ್ಲಿ ಇದು ಪ್ರವಾಸಿ ತಾಣವಾಗಿದೆ. ಇಲ್ಲಿ ಎಲ್ಲ ಸೌಲಭ್ಯವೂ ಇದೆ. ಚರ್ಚ್‌ಗಳು, ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಅನೇಕ ಅಂಗಡಿ ಇಲ್ಲಿದೆ. ಈ ಗ್ರಾಮ ಬಹಳ ಸುಂದರವಾಗಿದೆ. ಈ ಗ್ರಾಮದ ಇತಿಹಾಸ ಸಾಕಷ್ಟು ಹಳೆಯದು. ಮೊದಲನೆಯ ಮಹಾಯುದ್ಧದ ಅನೇಕ ಸೈನಿಕರು ಇಲ್ಲಿ ವಾಸಿಸುತ್ತಿದ್ದರು. ಸಾವಿನ ನಂತರ ಈ ಸೈನಿಕರು ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ದೆವ್ವವಾಗಿ ಇಲ್ಲಿಗೆ ಬಂದರು ಮತ್ತು ಮತ್ತೆ ಹಿಂತಿರುಗಲಿಲ್ಲ ಎಂದು ಹೇಳಲಾಗುತ್ತದೆ. ಬರೀ ಮನುಷ್ಯ ದೆವ್ವ ಮಾತ್ರವಲ್ಲ ಬೀದಿಗಳಲ್ಲಿ ದೆವ್ವವಾಗಿ ಓಡಾಡುವ ನಾಯಿಯನ್ನೂ ನೀವು ನೋಡ್ಬಹುದು.