Asianet Suvarna News Asianet Suvarna News

10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ

10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ
 

The Great Wall of China built on the graves of 10 lakh people DrBro revealed suc
Author
First Published Oct 25, 2023, 2:05 PM IST

ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳುವ ಡಾ.ಬ್ರೋ ಖ್ಯಾತಿಯ ಗಗನ್‌ ಅವರು ಇದೀಗ ಚೀನಾದ ಕೆಲವೊಂದು ಮಾಹಿತಿಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಗಮನ ಸೆಳೆದಿರುವುದು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಚೀನಾದ ಮಹಾಗೋಡೆ (ಗ್ರೇಟ್‌ ವಾಲ್‌ ಆಫ್‌ ಚೀನಾ) ವಿಷಯ. ಈ ಗೋಡೆಯನ್ನು ನೋಡುವ ಬಾಲ್ಯದ ಕನಸು ನನಸಾಗಿದೆ ಎನ್ನುತ್ತಲೇ ಡಾ.ಬ್ರೋ  ಅದರ ಕುತೂಹಲದ ಮಾಹಿತಿಯನ್ನು ಶೇರ್‌ ಮಾಡಿದ್ದಾರೆ. ಕೇಬಲ್‌ ಕಾರಿನ ಮೇಲೆ ಹೋಗುತ್ತ 21 ಸಾವಿರ ಕಿಲೋ ಮೀಟರ್‌ ಇರುವ ಗೋಡೆಯ  ವೀಕ್ಷಣೆ ಜೊತೆಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ ಡಾ. ಬ್ರೋ.   

2300 ವರ್ಷಗಳ ಹಿಂದೆ ಕಟ್ಟಿರುವ ಗೋಡೆ ಇದಾಗಿದ್ದು, ಆಕಾಶದಿಂದ ಕಾಣುತ್ತದೆ ಎಂದೇ ಜನಜನಿತವಾಗಿದೆ ಎಂದ ಡಾ.ಬ್ರೋ. ಅಸಲಿಗೆ ಇದು ಆಕಾಶದಿಂದ ಬರಿಯ ಕಣ್ಣಿನಿಂದ ಕಾಣುವುದಿಲ್ಲ. ಟೆಲಿಸ್ಕೋಪ್‌ನಿಂದ ಕಾಣಿಸುತ್ತದೆ ಎನ್ನುವ ಸತ್ಯ ಬಿಚ್ಚಿಟ್ಟಿದ್ದಾರೆ. ಈ ಗೋಡೆಯನ್ನು ಕಟ್ಟಲು ಶುರು ಮಾಡಿದ್ದು ಕ್ರಿಸ್ತ ಪೂರ್ವ 220ರಲ್ಲಿ. ನಂತರ ಬಂದ ರಾಜರು ಇದನ್ನು ಕಟ್ಟುತ್ತಾ ಬಂದರು. ಸದ್ಯ ಈ ಗೋಡೆ 8 ಸಾವಿರ ಕಿಲೋ ಮೀಟರ್‌  ಉಳಿದಿದೆ. ಈ ಗೋಡೆಗಳನ್ನು ಇಟ್ಟಿಗೆಗಳ ಬಳಕೆಗೆ ಮೊದಲು, ದಮ್ಮಸುಮಾಡಿದ ಮಣ್ಣು, ಕಲ್ಲುಗಳು, ಮತ್ತು ಮರದಿಂದ ಮಹಾನ್‌ ಗೋಡೆಯು ಪ್ರಮುಖವಾಗಿ ನಿರ್ಮಿಸಲ್ಪಟ್ಟಿತು. ಆದಾಗ್ಯೂ, ಮಿಂಗ್‌ ರಾಜವಂಶದ ಅವಧಿಯಲ್ಲಿ, ಹಾಸುಬಿಲ್ಲೆಗಳು, ಸುಣ್ಣಕಲ್ಲು, ಮತ್ತು ಕಲ್ಲಿನಂಥ ಸಾಮಗ್ರಿಗಳಂತೆ ಇಟ್ಟಿಗೆಗಳನ್ನು ಗೋಡೆಯ ಅನೇಕ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಯಿತು ಎನ್ನುವ ಮಾಹಿತಿ ನೀಡಿದ್ದಾರೆ.

ಇಲ್ಲಿ ರಾಜರಿಗೆ ಊರವರೆಲ್ಲ ಹೆಂಡ್ತಿಯರು! ಕಾಡಿನಲ್ಲಿ ಅಲೆದಾಡ್ತಿವೆ ಅವ್ರ ಆತ್ಮ...ಡಾ.ಬ್ರೋ ಬಿಚ್ಚಿಟ್ಟ ರಹಸ್ಯ

ಚೀನಾದ ಮಹಾಗೋಡೆಯ ಮೇಲೂ ಉಚಿತ ವೈಫೈ ಸಿಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅಷ್ಟಕ್ಕೂ ಈ ಮಹಾಗೋಡೆ ಕಟ್ಟಲು ಕಾರಣ ಏನು ಎನ್ನುವ ಮಾಹಿತಿಯನ್ನೂ ಅವರು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ,  ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಇದು ಸಹಕಾರಿಯಾಗಿದೆ. ಮಾತ್ರವಲ್ಲದೇ ಸೈನ್ಯಗಳನ್ನು ಎಚ್ಚರಿಸುವ ಹಾಗೂ ಸೈನ್ಯದ ಬಲವನ್ನು ಹೆಚ್ಚಿಸುವ ಸಾಮರ್ಥ್ಯವೂ ಸೇರಿದಂತೆ, ಮಹಾನ್‌ ಗೋಡೆಯ ಉದ್ದಕ್ಕೂ ಇರುವ ಸೇನಾ ತುಕಡಿಗಳ ನಡುವಿನ ಸಂವಹನೆಯು, ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.  ಪಕ್ಕದಲ್ಲಿ ಮಂಗೋಲಿಯಾದ ಬಲಶಾಲಿ ಸೈನಿಕರು ಪದೇ ಪದೇ ದಾಳಿ ಮಾಡುತ್ತಿದ್ದರು. ಅದನ್ನು ತಪ್ಪಿಸಲು ಈ ಮಹಾಗೋಡೆ ನಿರ್ಮಿಸಲಾಗಿದೆ. 25 ಸಾವಿರ ವಾಚ್‌ ಟವರ್‌ ಕಟ್ಟಲಾಗಿದ್ದು, ಇದು ಸೈನಿಕರು ಬಂದಾಗ ತಿಳಿಯುವುದಕ್ಕೋಸ್ಕರ ಎಂಬ ಮಾಹಿತಿ ನೀಡಿದರು. 

ಆದರೆ ಇದೇ ವೇಳೆ ಇನ್ನೊಂದು ಭಯಾನಕ ಮಾಹಿತಿಯನ್ನು ಡಾ.ಬ್ರೋ ತೆರೆದಿಟ್ಟಿದ್ದಾರೆ. ಅದೇನೆಂದರೆ, ಗೋಡೆ ಕಟ್ಟುವ ಸಮಯದಲ್ಲಿ ಸುಮಾರು 10 ಲಕ್ಷದಷ್ಟು ಕಾರ್ಮಿಕರು ಸಾವನ್ನಪ್ಪಿದ್ದರು. ಆದರೆ ಹೀಗೆ ಸಾಯುವವರನ್ನು ಅಲ್ಲಿಯೇ ಇಟ್ಟು ಅದರ ಮೇಲೆಯೇ ಗೋಡೆ ಕಟ್ಟಿದ್ದಾರೆ ಎಂದು ತಿಳಿಸಿದರು.  ಅಕ್ಕಿಗೆ ವಿಷ ಹಾಕಿ ಅದನ್ನು ಹಕ್ಕಿಗಳು ತಿನ್ನದಂತೆ ಎಚ್ಚರವಹಿಸಿ ಪೇಸ್ಟ್‌ ಮಾಡಿ ಗೋಡೆಗಳಿಗೆ ಅಂಟಿಸುತ್ತಿದ್ದ ವಿಶೇಷ ಮಾಹಿತಿಯನ್ನೂ ಡಾ.ಬ್ರೋ ನೀಡಿದ್ದಾರೆ. 

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

Follow Us:
Download App:
  • android
  • ios