ಮುಂಬೈ ಲೋಕಲ್ ಟ್ರೈನ್‌ ಮಹಿಳಾ ಬೋಗಿಯಲ್ಲಿ ಬೆತ್ತಲೆ ಪ್ರಯಾಣಿಸಿದ ಪುರುಷ : ವೀಡಿಯೋ ವೈರಲ್

ಮುಂಬೈ ಲೋಕಲ್‌ನ ಮಹಿಳಾ ಬೋಗಿಯಲ್ಲಿ ಬೆತ್ತಲೆ ವ್ಯಕ್ತಿಯೊಬ್ಬ ನುಗ್ಗಿ ಮಹಿಳೆಯರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

man travels Mumbai Local train women's compartment without dress

ರೈಲಿನಲ್ಲಿರುವ ಮಹಿಳಾ ಭೋಗಿ ಮಹಿಳೆಯರಿಗೆ ಮಾತ್ರ ಮೀಸಲು ಅದರಲ್ಲಿ ಪುರುಷರು ಪ್ರಯಾಣಿಸುವಂತಿಲ್ಲ, ಆದರೆ ಇಲ್ಲೊಬ್ಬ ವ್ಯಕ್ತಿ ಬೆತ್ತಲೆಯಾಗಿ ಮಹಿಳಾ ಲೇಡೀಸ್ ಬೋಗಿಯೊಳಗೆ ನುಗ್ಗಿದ್ದು, ಈತನನ್ನು ನೋಡಿ ಮಹಿಳೆಯರು ಗಾಬರಿಗೊಳಗಾಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ಲೋಕಲ್‌ ಟ್ರೈನ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಮುಂಬೈ ಲೋಕಲ್ ಎಸಿ ರೈಲು ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಕಲ್ಯಾಣ್‌ಗೆ ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ಮಹಿಳಾ ಬೋಗಿಯೊಳಗೆ ಬಂದಿದ್ದಾನೆ.  ರೈಲ್ವೆ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದು ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ರೈಲಿನ ಬೋಗಿಯೊಳಗೆ ಗೊತ್ತಿಲ್ಲದೆ ಹತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. 

ಘಟ್ಕೊಪರ್ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಈ ಘಟನೆ ನಡೆದಿದೆ. ಈತ ರೈಲಿನ ಬೋಗಿಯೊಳಗೆ ಹತ್ತಿದಂತೆ ಅಲ್ಲಿದ್ದ ಮಹಿಳೆಯರು ಗಾಬರಿಯ ಜೊತೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ಸ್ಥಳದಿಂದ ಹೊರ ಹೋಗುವಂತೆ ಆಗ್ರಹಿಸಿದ್ದಾರೆ ಆದರೆ ಆತ ಅಲ್ಲಿಂದ ತೆರಳಲು ನಿರಾಕರಿಸಿದ್ದಾನೆ. ಇದರಿಂದ ರೈಲಿನ ಮಹಿಳಾ ಬೋಗಿಯಳಗೆ ಕೋಲಾಹಲ ಬೊಬ್ಬೆ ಶುರುವಾಗಿದೆ. ಹೀಗಾಗಿ ಕೂಡಲೇ ಮೋಟಾರ್‌ ಮ್ಯಾನ್ ರೈಲನ್ನು ನಿಲ್ಲಿಸಿದ್ದಾರೆ. 

ಅಲ್ಲದೇ ಮಹಿಳೆಯೊಬ್ಬರು ಪಕ್ಕದ ಬೋಗಿಯಲ್ಲಿದ್ದ ಟಿಕೆಟ್ ಪರಿಶೀಲಕರನ್ನು ಕರೆದಿದ್ದಾರೆ. ನಂತರ ಟಿಸಿ ಈ ಬೆತ್ತಲೆ ವ್ಯಕ್ತಿಯನ್ನು ಮುಂದಿನ ನಿಲ್ದಾಣದಲ್ಲಿ ಇಳಿಯುವಂತೆ ಮಾಡಿದ್ದಾರೆ.  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.  ಅದರಲ್ಲಿ ಮಹಿಳೆಯೊಬ್ಬರು ಆ ಬೆತ್ತಲೆ ವ್ಯಕ್ತಿಗೆ ಕೆಳಗೆ ಇಳಿ ಎಂದು ಬೊಬ್ಬೆ ಹೊಡೆದು ಹೇಳುತ್ತಿರುವುದು ವೈರಲ್ ಆಗಿದೆ. ಈ ವೇಳೆ ಆ ಬೆತ್ತಲೆ ವ್ಯಕ್ತಿ ಬಾಗಿಲಿನ ಪಕ್ಕದಲ್ಲಿ ನಿಂತಿದ್ದಾನೆ. 

ಅಲ್ಲದೇ ರೈಲ್ವೆ ಸಿಬ್ಬಂದಿಯೊಬ್ಬರು ಆ ಬೆತ್ತಲೆ ವ್ಯಕ್ತಿಯನ್ನು ರೈಲಿನಿಂದ ಕೆಳಗೆ ದೂಡುತ್ತಿರುವ ದೃಶ್ಯವೂ ವೈರಲ್ ಆಗಿದೆ. ಅನೇಕರು ಆತ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ್ದಾರೆ. ಮುಂಬೈ ಘಟನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ರೈಲ್ವೆ ಕಾರ್ಯಕರ್ತೆ ಲತಾ ಅರ್ಗಡೆ ಅವರಿಗೆ ಕಳುಹಿಸಿದ್ದು,ಈ ಬಗ್ಗೆ ಮಾತನಾಡಿದ ಲತಾ ಅರ್ಗಡೆ, ಈ ಘಟನೆಯು ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ . ಆ ವ್ಯಕ್ತಿ ಘಾಟ್‌ಕೋಪರ್‌ನಂತಹ ಜನನಿಬಿಡ ನಿಲ್ದಾಣದಿಂದ ಯಾವುದೇ ತೊಂದರೆಯಿಲ್ಲದೆ ರೈಲು ಹತ್ತಲು ಸಾಧ್ಯವಾಗಿದ್ದು ಹೇಗೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ಸಿಬ್ಬಂದಿ ಈ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಸರ್ಕಾರಿ ರೈಲ್ವೇ ಪೊಲೀಸರು (ಜಿಆರ್‌ಪಿ) ತಕ್ಷಣ ಆತನನ್ನು ಹಿಡಿದು ಬಟ್ಟೆ ತೊಡಿಸಿ ನಿಲ್ದಾಣದಿಂದ ಹೊರಗೆ ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. 

 

Latest Videos
Follow Us:
Download App:
  • android
  • ios