ಭಾರತದ ಇದೀಗ ಜಲ ಮಾರ್ಗ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದೀಗ ಗೋವಾಗೆ ಫೆರಿ ಬೋಟ್ ಸೇವೆ ಆರಂಭಗೊಳ್ಳುತ್ತಿದೆ. ಕೇವಲ 6.5 ಗಂಟೆ ಅವಧಿಯಲ್ಲಿ ಗೋವಾ ತಲುಪಬಹುದು. ವಿಶೇಷ ಅಂದರೆ ಈ ಫೆರಿ ಹಡಗು ನಿಮ್ಮ ಜೊತೆ ಕಾರನ್ನು ಒಯ್ಯುವ ಅವಕಾಶವಿದೆ.
ಗೋವಾ(ಮಾ.2) ಗೋವಾ ಪ್ರವಾಸೋದ್ಯಮ ಮತ್ತಷ್ಟು ಉತ್ತೇಜಿಸಲು ಇದೀಗ ಹಲವು ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿದೆ. ವಿಶೇಷವಾಗಿ ಭಾರತ ಇದೀಗ ಜಲ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ ಹಲವು ಕರಾವಳಿ ತೀರದ ಭಾಗಗಳಿಗೆ ಬೋಟ್ ಸೇವೆ ಆರಂಭಗೊಳ್ಳುತ್ತಿದೆ. ಈ ಪೈಕ ಗೋವಾಗೆ ಫೆರಿ ಹಡಗು ಸೇವೆ ಆರಂಭಗೊಳ್ಳುತ್ತಿದೆ. ಕೇವಲ 6.5 ಗಂಟೆ ಅವಧಿಯಲ್ಲಿ ಗೋವಾ ತಲುಪಬಹುದು. ವಿಶೇಷ ಅಂದರೆ ಪ್ರಯಾಣಿಕರು ಮಾತ್ರವಲ್ಲ, ಗೋವಾಗೆ ತೆರಳಿ ಅಲ್ಲ ಟ್ಯಾಕ್ಸಿ ಬುಕ್ ಮಾಡುವ ಕಿರಿಕಿರಿ ತಪ್ಪಿಸಲು ನಿಮ್ಮ ಕಾರನ್ನು ಈ ಫೆರಿ ಬೋಟ್‌ನಲ್ಲಿ ಒಯ್ಯಲು ಅವಕಾಶವಿದೆ.
620 ಪ್ರಯಾಣಿಕರು ಹಾಗೂ 60 ಕಾರುಗಳ ಸಾಮರ್ಥ್ಯ ಈ ಫೆರಿ ಹಡಗು ಸೇವೆ ಆರಂಭಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಮುಂಬೈನಿಂದ ಗೋವಾಗೆ ಈ ಸೇವೆ ಆರಂಭಗೊಳ್ಳುತ್ತಿದೆ. ಮುಂಬೈ ಮಂಧ್ವಾ ರೋ ರೋ ಸರ್ವೀಸ್ ಕಂಪನಿ ಈ ಸೇವೆ ಆರಂಭಿಸುತ್ತಿದೆ. ಇದಕ್ಕಾಗಿ ಇಟಲಿಯಿಂದ ರೋ ಪ್ಯಾಕ್ಸ್ ಫೆರಿಯನ್ನು ಖರೀದಿಸಲಾಗಿದೆ. ಸದ್ಯ ಮುಂಬೈನ ಬಂದರಿನಲ್ಲಿ ಈ ಬೋಟಿನ ನಿರ್ವಹಣಾ ಕಾರ್ಯಗಳು ನಡೆಯುತ್ತಿದೆ. ಮುಂದಿನ ವಾರದಲ್ಲಿ ಮುಂಬೈ ಗೋವಾ ರೋಪ್ಯಾಕ್ಸ್ ಫೆರಿ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ.
ವಿಮಾನ ಪ್ಲಾನ್ ಫೇಲ್: ಕೊಲ್ಲಿ ರಾಷ್ಟ್ರಗಳಿಗೆ ಹಡಗು ಸೇವೆ ಆರಂಭಿಸಲು ಕೇರಳ ಚಿಂತನೆ
ಮುಂಬೈನ ಫೆರಿ ವಾರ್ಫ್ ಮಝ್‌ಗಾಂವ್‌ನಿಂದ ಈ ಫೆರಿ ಹೊರಡಲಿದೆ. ಕೇವಲ 6.5 ಗಂಟೆಯಲ್ಲಿ ಗೋವಾದ ಪಣಜಿ ಬಳಿ ಇರುವ ಮೊರ್ಮುಗೌ ಬಂದರಿಗೆ ತಲುಪಲಿದೆ. ಸದ್ಯ ಟಿಕೆಟ್ ಬೆಲೆ ಇನ್ನು ಘೋಷಣೆಯಾಗಿಲ್ಲ. ಸರ್ಕಾರ ತೆರಿಗೆ ಹಾಗೂ ನಿರ್ವಹಣೆಗೆ ಅನುಗುಣುವಾಗಿ ಟಿಕೆಟ್ ದರ ನಿಗಧಿಪಡಿಸಲಾಗುತ್ತಿದೆ. ಆದರೆ ಈ ಬೆಲೆ ರೈಲು ಮಾರ್ಗ, ರಸ್ತೆ ಮಾರ್ಗ ಹಾಗೂ ವಾಯು ಮಾರ್ಗಕ್ಕಿಂತ ಅಗ್ಗವಾಗಿರಲಿದೆ ಎಂದು ರೋರೋ ಸರ್ವೀಸ್ ಕಂಂಪನಿ ಹೇಳಿದೆ. ರಸ್ತೆ ಮಾರ್ಗದ ಮೂಲಕ ಮುಂಬೈನಿಂದ ಗೋವಾಗೆ ತೆರಲು ಕನಿಷ್ಠ12 ಗಂಟೆ ಸಮಯ ಬೇಕು. ಇನ್ನು ವಿಮಾನದಲ್ಲಿ 1.15 ಗಂಟೆ ಸಮಯದ ಅವಶ್ಯಕತೆ ಇದೆ. ಇನ್ನು ರೈಲಿನಲ್ಲೂ ಬಹುತೇಕ ಒಂದು ದಿನದ ಪ್ರಯಾಣವಿದೆ. ಸಮಯ, ಹಣ ಎಲ್ಲಾ ವಿಚಾರದಲ್ಲೂ ಫೆರಿ ಪ್ರಯಾಣ ಸುಲಭ ಹಾಗೂ ಅಗ್ಗವಾಗಲಿದೆ ಎಂದು ರೋ ರೋ ಸರ್ವೀಸ್ ಹೇಳಿದೆ.
ಪ್ರವಾಸೋದ್ಯಮಕ್ಕೆ ಈ ಫೆರಿ ಪ್ರಯಾಣ ಮತ್ತಷ್ಟು ಉತ್ತೇಜನ ನೀಡಲಿದೆ. ರಸ್ತೆ ಮಾರ್ಗದ ಮೂಲಕ ಟ್ರಾಫಿಕ್, ಸಿಗ್ನಲ್, ಸೇರಿದಂತೆ ಹಲವು ಅಡೆ ತಡೆಗಳನ್ನು ಸಾಗಬೇಕು. ಇನ್ನು ರಸ್ತೆ ಪ್ರಯಾಣದ ಅನುಭವ ಬಹುತೇಕರಿಗೆ ಇದೆ. ರಸ್ತೆ ಪ್ರಯಾಣದಲ್ಲಿ ಕೆಲವೇ ಕೆಲವು ಪ್ರದೇಶಗಳು ಉತ್ತಮ ತಾಣಗಳು, ಸುಂದರ ಪ್ರದೇಶಗಳು ಸಿಗಲಿದೆ. ಆದರೆ ಸಮುದ್ರ ಮಾರ್ಗದಲ್ಲಿ ಸಮುದ್ರದ ಸುಂದರ ದೃಶ್ಯ, ಜಲಚರಗಳು ಸೇರಿದಂತೆ ಹಲವು ತೀರ ಪ್ರದೇಶದಳ ಸಂದರ ದೃಶ್ಯ ಕಾವ್ಯ ಕಾಣಸಿಗಲಿದೆ ಎಂದು ರೋ ರೋ ಸರ್ವೀಸ್ ಹೇಳಿದೆ. ಇಷ್ಟೇ ಅಲ್ಲ ಪ್ರವಾಸಿಗರು ತಮ್ಮ ವಾಹನವನ್ನು ಫೆರಿ ಹಡಗಿನಲ್ಲಿ ತುಂಬಿಸಿ ಪ್ರಯಾಣ ಮಾಡಬಹುದು. ಇದರಿಂದ ಗೋವಾದಲ್ಲಿ ಇಳಿದು ಬೇರೆ ಟ್ಯಾಕ್ಸಿ, ಅಥವಾ ಬಾಡಿಗೆಗೆ ವಾಹನ ಪಡೆಯುವ ಅಗತ್ಯವಿಲ್ಲ. ಕಾರು ಹಾಗು ಪ್ರಯಾಣಿಕರ ಪ್ರಯಾಣಕ್ಕೆ ಹೆಚ್ಚಿನ ಟಿಕೆಟ್ ದರವಿಲ್ಲ. ಹೀಗಾಗಿ ಇದು ಸುಲಭ ಹಾಗೂ ಅಗ್ಗದ ಮಾರ್ಗವಾಗಲಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಮುಂಬೈನಿಂದ ಗೋವಾ ಫೆರಿ ಹಡಗು ಯಶಸ್ವಿಯಾದರೆ ಮಂಗಳೂರಿನಿಂದ ಗೋವಾಗೂ ಹಡಗು ಪ್ರಯಾಣದ ಕುರಿತು ಚಿಂತನೆ ನಡೆಸವು ಸಾಧ್ಯತೆ ಇದೆ. ಇದರಿಂದ ಗೋವಾ ಕರ್ನಾಟಕ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.
