ಶಿವಮೊಗ್ಗದ ಹಸಿರುಮಕ್ಕಿ ಲಾಂಚ್ ಸ್ಥಗಿತ; ಸಾಗರ-ಹೊಸನಗರ ಸಂಪರ್ಕ ಕಡಿತ

ರಾಜ್ಯದ ತೀವ್ರ ಬರಗಾಲದಿಂದ ಶರಾವತಿ ನದಿ ಹಿನ್ನೀರು ಸಂಪೂರ್ಣ ಬತ್ತಿ ಹೋಗಿದ್ದು, ಹಸಿರುಮಕ್ಕಿಯ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Shivamogga Hasirumakki launch service suspended and Sagara Hosanagara disconnection sat

ಶಿವಮೊಗ್ಗ (ಮೇ 11): ರಾಜ್ಯದ ಕಳೆದ ವರ್ ತಲೆದೋರಿದ ತೀವ್ರ ಬರಗಾಲದಿಂದಾಗಿ ಮಳೆಯಿಲ್ಲದೇ ರೈತರು ತತ್ತರಿಸಿ ಹೋಗಿದ್ದಾರೆ. ಇನ್ನು ಹೆಚ್ಚಾಗಿ ಮಳೆ ಸುರಿಯುವ ಮಲೆನಾಡಿನಲ್ಲಿಯೇ ನದಿ ಮೂಲಗಳು ಬತ್ತಿ ಹೋಗಿವೆ. ಶರಾವತಿ ನದಿಯ ಹಿನ್ನೀರು ಕೂಡ ಬತ್ತಿ ಹೋಗಿದ್ದು, ಸಾಗರ ಮತ್ತು ಹೊಸನಗರ ನಡುವೆ ಸಂಪರ್ಕ ಕೊಂಡಿಯಾಗಿದ್ದ ಹಸಿರುಮಕ್ಕಿ ಲಾಂಜ್ ಸಂಚಾರ ಕೂಡ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳು ಎಂದು ಕರೆಯುವ ಪಶ್ಚಿಮ ಘಟ್ಟ ಪ್ರದೇಶಗಳಿಗೂ ಬರಗಾಲದ ಬಿಸಿ ತಟ್ಟಿದೆ. ಮಳೆಗಾಲದಲ್ಲಿ ಭೋರ್ಗರೆದು ಹರಿದು ಉತ್ತರ ಕರ್ನಾಟಕದ ನದಿಗಳನ್ನು ಹಾದು ಬಂಗಾಳಕೊಲ್ಲಿ ನದಿ ಸೇರುತ್ತಿದ್ದ ಮಲೆನಾಡಿನ ನದಿಗಳು ಕೂಡ ಬತ್ತಿ ಹೋಗಿವೆ. ವರ್ಷಪೂರ್ತಿ ನೀರು ತುಂಬಿರುತ್ತಿದ್ದ ಶರಾವತಿ ನದಿಯ ಹಿನ್ನೀರು ಕೂಡ ಖಾಲಿಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಒಳನಾಡು ಜಲಸಾರಿಗೆಗೆ ಪ್ರಸಿದ್ಧಿಯಾಗಿದ್ದ ಶರಾವತಿ ನದಿ ಹಿನ್ನೀರಿನಲ್ಲಿದ್ದ ಹಸಿರುಮಕ್ಕಿ ಲಾಂಚ್ ಸಂಚಾರವೂ ಸ್ಥಗಿತಗೊಂಡಿದೆ. ಈ ಮೂಲಕ ಸಾಗರ ಮತ್ತು ಹೊಸನಗರ ಪಟ್ಟಣಗಳ ಸಂಪರ್ಕವೂ ಕಡಿತಗೊಂಡಿದೆ.

ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌ಗೆ ಮೂವರು ಬಲಿ; ರಕ್ಷಣೆ ಕೊಡಲಾಗದಿದ್ದರೆ ಜಾಗ ಖಾಲಿ ಮಾಡಿ: ಶಾಸಕ ಚನ್ನಬಸಪ್ಪ

ಹಸಿರುಮಕ್ಕಿ ಲಾಂಚ್‌ ಸಾಗರ ಮತ್ತು ಹೊಸನಗರ ತಾಲೂಕು ಸಂಪರ್ಕದ ಕೊಂಡಿಯಾಗಿತ್ತು. ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಲಾಂಚ್ ಸೇವೆಯನ್ನು ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ. ದಡದಲ್ಲಿ ಕೆಸರು ಹೆಚ್ಚಿರುವ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಲಾಂಚ್ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಆದರೂ, ಪ್ರಯಾಣಿಕರು ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ತುಸು ಕಷ್ಟದಿಂದಲೇ ಲಾಂಚ್ ನಡೆಸುತ್ತಿದ್ದರು. ಆದರೆ, ಈಗ ಲಾಂಚ್ ದಡ ಸೇರಲು ಸಾಧ್ಯವಾಗದಷ್ಟು ನೀರಿಲ್ಲದ ಕಾರಣ ಶನಿವಾರದಿಂದ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಹಸಿರುಮಕ್ಕಿ ಲಾಂಚ್‌ ಮೂಲಕ ಪ್ರತಿದಿನ ವಾಹನಗಳು ಸಂಚರಿಸುತ್ತಿದ್ದವು. ಆದರೆ, ಈಗ ಲಾಂಚ್‌ ಸೇವೆ ನಿಲುಗಡೆಗೊಂಡ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಕಡೆಗೆ ಬರುತ್ತಿದ್ದ ಬಸ್‌ಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಸಾಗರದಿಂದ ನಿಟ್ಟೂರು ಮಾರ್ಗವಾಗಿ ಕುಂದಾಪುರ ತಲುಪಲು ಹಸಿರುಮಕ್ಕಿ ಲಾಂಚ್ ಮೂಲಕ ಸಾಗುವುದು ಅತಿ ಸಮೀಪದ ಮಾರ್ಗವಾಗಿತ್ತು. ಆದರೆ, ಲಾಂಚ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 40 ಕಿ.ಮೀ. ಬಳಸಿ ಹೊಸನಗರ ಮಾರ್ಗವಾಗಿ ತೆರಳುವ ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ ಆರಂಭಗೊಂಡ ಸೇತುವೆ ನಿರ್ಮಾಣ ಕಾಮಗಾರಿ ಸಹ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ.

ದಕ್ಷಿಣ ಭಾರತ ಡ್ಯಾಂಗಳಲ್ಲಿ ಈಗ ಶೇ.15 ಮಾತ್ರ ನೀರು: 10 ವರ್ಷದ ಕನಿಷ್ಠ

ಇನ್ನು ನೀರಿನ ಆಳದ ಕೆಸರಿನಲ್ಲಿದ್ದ ದೊಡ್ಡ ದೊಡ್ಡ ಮರದ ಬೃಹತ್‌ ದಿಮ್ಮಿಗಳು ಕೆಸರಿನಿಂದ ಮೇಲೆ ಕಾಣಿಸುತ್ತಿವೆ. ಇವು ಲಾಂಚ್ ಸಂಚಾರಕ್ಕೆ ತೊಂದರೆಯಾಗಿದ್ದು, ಲಾಂಚ್‌ಗೆ ಹಾನಿ ಉಂಟುಮಾಡಲಿವೆ. ಜೊತೆಗೆ, ಲಾಂಚ್ ಸಾಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ ಸೇವೆ ಇರುವುದಿಲ್ಲ ಎಂದು ಲಾಂಚ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios