Travel Guide: ಭಾರತದ ಭಾಗವಾದ್ರೂ ಇಲ್ಲಿ ನಡೆಯಲ್ಲ ನಮ್ಮ ಕಾನೂನು!

ಭಾರತದಲ್ಲಿದ್ದೇವೆ ಅಂದ್ಮೇಲೆ ಇಲ್ಲಿನ ಕಾನೂನು, ನಿಯಮವನ್ನು ಪಾಲಿಸಬೇಕು. ಆದ್ರೆ ಇಲ್ಲಿಯೇ ಇದ್ದು, ಇಲ್ಲಿನ ರೂಲ್ಸ್ ಫಾಲೋ ಮಾಡದ ಊರೊಂದಿದೆ. ಅಲ್ಲಿ ಪ್ರವಾಸಿಗರು ಗೋಡೆ ಮುಟ್ಟಿದ್ರೂ ದಂಡ ತೆರಬೇಕಾಗುತ್ತದೆ.
 

Law Of India Does Not Work At Malana Village In Himachal Pradesh

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ವೈವಿಧ್ಯಮತ ದೇಶ. ಅಲ್ಲಿ ಅನೇಕ ರಾಜ್ಯಗಳು, ವಿವಿಧ ಭಾಷೆಗಳು, ಧರ್ಮಗಳು ಮತ್ತು ಜಾತಿ, ಸಂಸ್ಕೃತಿಯ ಜನರು ವಾಸಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಭಾರತೀಯ ಸಂವಿಧಾನವನ್ನು ಅನುಸರಿಸಬೇಕಾಗುತ್ತದೆ. ಆದ್ರೆ ಭಾರತದಲ್ಲಿದ್ದೇ ಭಾರತದ ಕಾನೂನುಗಳನ್ನು ಪಾಲಿಸದ, ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮಿಸದ ಹಳ್ಳಿಯೊಂದಿದೆ. 

ಆ ಗ್ರಾಮ ತನ್ನದೇ ಆದ ಸಂವಿಧಾನ (Constitution) ವನ್ನು ಹೊಂದಿದೆ. ಇಲ್ಲಿನ ಜನರೇ ನ್ಯಾಯಾಂಗ, ಆಡಳಿತ ಮತ್ತು ಕಾರ್ಯಾಂಗವಾಗಿದ್ದಾರೆ. ತಮ್ಮಲ್ಲಿಯೇ ಒಬ್ಬರನ್ನು ಆಯ್ಕೆ ಮಾಡುವ ಮೂಲಕ ಆಡಳಿತ ನಡೆಸುತ್ತಾರೆ. ಈ ಗ್ರಾಮದ ಇತಿಹಾಸ ಮತ್ತು ಜೀವನ ಶೈಲಿ ಸಾಕಷ್ಟು ಆಸಕ್ತಿದಾಯಕವಾಗಿವೆ. ಭಾರತದಲ್ಲಿದ್ರೂ ಭಾರತದ ಭಾಗವಲ್ಲದ ಈ ಗ್ರಾಮ ಎಲ್ಲಿದೆ ಎಂಬ ವಿವರವನ್ನು ನಾವಿಂದು ನೀಡ್ತೇವೆ.

ದೇಶದಲ್ಲಿದ್ರೂ ದೇಶದ ಭಾಗವಲ್ಲದ ಹಳ್ಳಿ (Village) ಯಾವುದು ಗೊತ್ತಾ? :ಈ ಗ್ರಾಮದ ಹೆಸರು ಮಲಾನಾ (Malana). ಹಿಮಾಚಲ (Himachal)  ಪ್ರದೇಶದಲ್ಲಿ ಈ ಹಳ್ಳಿ ಇದೆ. ಕುಲು ಜಿಲ್ಲೆಯ ದೂರದ ಪ್ರದೇಶದಲ್ಲಿ ಮಲಾನಾ ನೆಲೆಗೊಂಡಿದೆ. ಮಲಾನಾ ಗ್ರಾಮವು ತನ್ನ ಹಲವು ಚಟುವಟಿಕೆಗಳಿಂದಾಗಿ ಚರ್ಚೆಯಲ್ಲಿದೆ. ಈ ಗ್ರಾಮದಲ್ಲಿ ಭಾರತೀಯ ಕಾನೂನು ಇಲ್ಲ. ಗ್ರಾಮವು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಈ ಗ್ರಾಮವು ತನ್ನದೇ ಆದ ಸಂಸತ್ತನ್ನು ಹೊಂದಿದೆ.  

ಹಿಮಾಚಲ ಪ್ರದೇಶ ಭಾರತದ ಭಾಗವಾಗಿದ್ದರೂ ಮಲಾನಾ ಗ್ರಾಮ ಮಾತ್ರ ಭಾರತದ ಕಾನೂನುನ್ನು ಪಾಲನೆ ಮಾಡೋದಿಲ್ಲ. ಇಲ್ಲಿ ಅದರದೆ ಆದ ನ್ಯಾಯಾಂಗ ವ್ಯವಸ್ಥೆಯಿದೆ. ಗ್ರಾಮದಲ್ಲಿ ಎಡರು ಸದನವಿದೆ. ಒಂದು ಜ್ಯೋತಾಂಗ್ ಮೇಲ್ಮನೆಯಾದ್ರೆ ಇನ್ನೊಂದು  ಕನಿಷ್ಠಾಂಗ್ ಕೆಳಮನೆ. ಜ್ಯೇಷ್ಠಾಂಗದಲ್ಲಿ ಒಟ್ಟು 11 ಸದಸ್ಯರಿದ್ದು, ಅವರಲ್ಲಿ ಮೂವರು ಖಾಯಂ ಸದಸ್ಯರಾಗಿರುತ್ತಾರೆ. ಉಳಿದ ಎಂಟು ಸದಸ್ಯರನ್ನು ಗ್ರಾಮಸ್ಥರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಕಳೆಮನೆಯಲ್ಲಿ ಗ್ರಾಮದ ಪ್ರತಿ ಮನೆಯಿಂದ ಒಬ್ಬ ಸದಸ್ಯ ಪ್ರತಿನಿಧಿಯಾಗಿ ನೇಮಕವಾಗ್ತಾರೆ. ಸಂಸತ್ ಭವನದಂತೆ ಇಲ್ಲಿ ಐತಿಹಾಸಿಕ ಚೌಪಾಲ್ ಇದೆ. ಅಲ್ಲಿ ಎಲ್ಲಾ ವಿವಾದಗಳನ್ನು ಬಗೆಹರಿಸಲಾಗುತ್ತದೆ. 

ಈ ಗ್ರಾಮದಲ್ಲಿದೆ ವಿಚಿತ್ರ ನಿಯಮ : ಈ ಗ್ರಾಮದಲ್ಲಿ ವಿಚಿತ್ರ ನಿಯಮಗಳು ಜಾರಿಯಲ್ಲಿವೆ. ಈ ಗ್ರಾಮ ಗೋಡೆಯನ್ನು ಯಾರೂ ಮುಟ್ಟುವಂತಿಲ್ಲ. ಗೋಡೆಯನ್ನು ಮುಟ್ಟಿದ್ರೆ ದಂಡ ವಿಧಿಸಲಾಗುತ್ತದೆ. ಗ್ರಾಮಕ್ಕೆ ಬರುವ ಪ್ರವಾಸಿಗರು ಗೋಡೆಯನ್ನು ಮುಟ್ಟದೆ ಗ್ರಾಮದ ಹೊರಗೆ ತಂಗುತ್ತಾರೆ.

Paragliding in India: ಸಾಹಸ ಮಾಡಲು ನೀವು ರೆಡಿ ಇದ್ರೆ ಈ ತಾಣಗಳಿಗೆ ಭೇಟಿ ನೀಡಿ

ಮಲಾನಾ ಗ್ರಾಮದ ಬೆಳೆ ಯಾವುದು ಗೊತ್ತಾ? : ಮಲಾನಾ ಗ್ರಾಮದಲ್ಲಿ ಗಾಂಜಾ ಬೆಳೆಯಲಾಗುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಗಾಂಜಾ ಬೆಳೆಯುವ ಪ್ರದೇಶವಿದು. ಇಲ್ಲಿನ ಜನರು ಚರಸ್ ಬಿಟ್ಟು ಬೇರೆ ಯಾವುದೇ ಬೆಳೆಯನ್ನು ಬೆಳೆಯುವುದಿಲ್ಲ. ಇದಕ್ಕೆ ಕಪ್ಪು ಬಂಗಾರವೆಂದು ಪರಿಗಣಿಸಲಾಗುತ್ತದೆ. ಇದು ಇಲ್ಲಿನವರ ಜೀವನಾಧಾರವಾಗಿದೆ.

ಗ್ರಾಮದ ಒಳಗೆ ಪ್ರವೇಶವಿಲ್ಲ : ಈ ಗ್ರಾಮದ ಬಗ್ಗೆ ಕೇಳಿದ ಜನರು ಈ ಗ್ರಾಮಕ್ಕೆ ಹೋಗುವ ಮನಸ್ಸು ಮಾಡ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಸಾಕಷ್ಟಿದೆ. ಆದ್ರೆ ಪ್ರವಾಸಿಗರು ಗ್ರಾಮದ ಒಳಗೆ ಪ್ರವೇಶ ಮಾಡುವಂತಿಲ್ಲ. ಪ್ರವಾಸಿಗರು ಗ್ರಾಮದ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸಬಹುದಾಗಿದೆ. 

Traveling Tips: ವಿಮಾನ ರದ್ದಾದ್ರೆ ಮಕ್ಕಳನ್ನು ಹೀಗೆ ಸಂಭಾಳಿಸಿ

ಇಲ್ಲಿಗೆ ಹೋಗೋದು ಹೇಗೆ? : ಮಲಾನಾಕ್ಕೆ ಇರೋದು ಒಂದೇ ಒಂದು ಬಸ್. ಈ ಗ್ರಾಮ ಕುಲುವಿನಿಂದ ಕೇವಲ 45 ಕಿಲೋಮೀಟರ್ ದೂರದಲ್ಲಿದೆ. ಮಣಿಕರ್ಣಿ ಮಾರ್ಗದ ಮೂಲಕ ನಾವು ಪ್ರಯಾಣ ಬೆಳೆಸಬಹುದು. ಹಿಮಾಚಲ ಪ್ರದೇಶದ ಸರ್ಕಾರಿ ಬಸ್ ಕುಲುವಿನಿಂದ ಮಲಾನಾಗೆ ತೆರಳುತ್ತದೆ. ಒಂದೇ ಒಂದು ಬಸ್ ಇದ್ದು ಅದು  ಮಧ್ಯಾಹ್ನ 3 ಗಂಟೆಗೆ ಹೊರಡುತ್ತದೆ. 

Latest Videos
Follow Us:
Download App:
  • android
  • ios