Asianet Suvarna News Asianet Suvarna News

Traveling Tips: ವಿಮಾನ ರದ್ದಾದ್ರೆ ಮಕ್ಕಳನ್ನು ಹೀಗೆ ಸಂಭಾಳಿಸಿ

ಮಕ್ಕಳ ಜೊತೆ ಪ್ರಯಾಣ ಮಾಡ್ಬೇಕೆಂದ್ರೆ ಪಾಲಕರಿಗೆ ಪೂರ್ವತಯಾರಿ ಅಗತ್ಯವಾಗುತ್ತದೆ. ಬಟ್ಟೆ ತುಂಬಿಕೊಂಡು ಪ್ರಯಾಣ ಬೆಳೆಸೋದು ಅಸಾಧ್ಯ. ಅವರಿಗೆ ಬೇಕಾಗುವ ಇನ್ನೂ ಕೆಲ ವಸ್ತುಗಳನ್ನು ಪ್ಯಾಕ್ ಮಾಡದೆ ಹೋದ್ರೆ ಮುಂದೆ ತೊಂದರೆ ಎದುರಿಸಬೇಕಾಗುತ್ತದೆ.
 

Flying With Kids Things To Keep In Mind During Cancellation Of Flight
Author
First Published Jan 25, 2023, 3:08 PM IST

ಟ್ರಿಪ್ ಒಂದು ಆಹ್ಲಾದಕರ ಅನುಭವ. ಅದ್ರಲ್ಲೂ ಕುಟುಂಬದ ಜೊತೆ ಹೋದ್ರೆ ಅದ್ರ ಮಜವೇ ಬೇರೆ. ಕುಟುಂಬ ಎಂದಾಗ ಅಲ್ಲಿ ಮಕ್ಕಳು ಬರ್ತಾರೆ. ಮಕ್ಕಳು ದೊಡ್ಡವರಾಗಿದ್ರೆ ಅವರ ಜೊತೆ ಪ್ರಯಾಣ ಬೆಳೆಸೋದು ಕಷ್ಟವಾಗೋದಿಲ್ಲ. ಆದ್ರೆ ಸಣ್ಣ ಮಕ್ಕಳ ಜೊತೆ ಪ್ರಯಾಣ ಬೆಳೆಸುವಾಗ ಅನೇಕ ಸಮಸ್ಯೆ ಎದುರಾಗುತ್ತದೆ. ಮಕ್ಕಳಿಗೆ ಪ್ರಯಾಣದ ಸಮಯದಲ್ಲಿ ಹೇಗಿರಬೇಕು ಎಂಬುದು ತಿಳಿಯೋದಿಲ್ಲ. ಹಾಗೆ ಅವರು ಬಯಸಿದ ವಾತಾವರಣವನ್ನು ನಾವು ನೀಡಲು ಸಾಧ್ಯವಾಗೋದಿಲ್ಲ.

ಸರಿಯಾದ ಸಮಯಕ್ಕೆ ವಾಹನ (Vehicle) ಸಿಕ್ಕಿದ್ರೆ ಪ್ರಯಾಣ (Travel) ಹೆಚ್ಚು ಸುಖಕರವಾಗಿರುತ್ತದೆ. ಆದ್ರೆ ವಿಮಾನ (Plane) ಪ್ರಯಾಣದ ವೇಳೆ ವಿಮಾನದ ಹಾರಾಟ ತಡವಾದ್ರೆ ಅಥವಾ ವಿಮಾನ ರದ್ದಾದ್ರೆ ಆಗ ಚಿಕ್ಕ ಮಕ್ಕಳ ಪಾಲಕರಿಗೆ ಪ್ರಯಾಣ ಕಷ್ಟಕರವಾಗಿರುತ್ತದೆ. ಮಕ್ಕಳು ವಿಮಾನ ನಿಲ್ದಾಣದಲ್ಲಿ ತುಂಬಾ ಸಮಯ ಇರೋದಿಲ್ಲ. ಅವರ ನಿತ್ಯದ ಕೆಲಸ ಇಂದು ನಡೆಯದ ಕಾರಣ ಹಾಗೂ ಮನೆಯ ವಾತಾವರಣವಿಲ್ಲದ ಕಾರಣ ಅವರು ಕಿರಿಕಿರಿ ಅನುಭವಿಸುತ್ತಾರೆ. ಸಣ್ಣಪುಟ್ಟ ವಿಷ್ಯಕ್ಕೆ ಅಳು ಶುರು ಮಾಡ್ತಾರೆ. ಇದು ಇಡೀ ಪ್ರವಾಸದ ಮೋಜನ್ನು ಹಾಳು ಮಾಡುತ್ತದೆ. ನಿಮ್ಮ ಮಕ್ಕಳ ಜೊತೆ ಪ್ರಯಾಣ ಬೆಳೆಸುತ್ತಿದ್ದರೆ ಮೊದಲೇ ನಾವೆಲ್ಲದಕ್ಕೂ ಸಿದ್ಧರಾಗಿರಬೇಕು. ಆಗ ವಿಮಾನದ ಸಮಯ ಬದಲಾದ್ರೂ ಮಕ್ಕಳಿಂದ ಯಾವುದೇ ಸಮಸ್ಯೆ ಎದುರಾಗೋದಿಲ್ಲ.

ಈ ವಸ್ತುಗಳು ಜೊತೆಯಲ್ಲಿರಲಿ : ಸಾಮಾನ್ಯವಾಗಿ ನವಜಾತ ಶಿಶುವಿನ ಜೊತೆ ನೀವು ಪ್ರಯಾಣ ಬೆಳೆಸುತ್ತಿದ್ದರೆ ಹೆಚ್ಚು ತೊಂದರೆಯಾಗೋದಿಲ್ಲ. ಯಾಕೆಂದ್ರೆ ಆಹಾರ ನೀಡಿದ ತಕ್ಷಣ ಅವು ಪಾಲಕರ ಮಡಿಲಿನಲ್ಲಿ ಬೆಚ್ಚಗೆ ಮಲಗುತ್ತವೆ. ಆದ್ರೆ ನಡೆಯಲು ಬರುವ, ಈಗಷ್ಟೆ ಮಾತು ಕಲಿತ ಮಕ್ಕಳನ್ನು ನೋಡಿಕೊಳ್ಳೋದು ಸವಾಲು. ಅವರು ವಿಮಾನ ನಿಲ್ದಾಣದಲ್ಲಿ ಬೇಸರಕ್ಕೊಳಗಾಗ್ತಾರೆ. ಸುತ್ತಲಿನ ಪರಿಸರ ಅವರನ್ನು ಅಸಮಾಧಾನಗೊಳಿಸುತ್ತದೆ. ಇಂಥ ಮಕ್ಕಳ ಜೊತೆ ಪ್ರಯಾಣ ಬೆಳೆಸುತ್ತಿದ್ದರೆ ಯಾವಾಗಲೂ ಹೆಚ್ಚುವರಿ ವಸ್ತುಗಳನ್ನು ಜೊತೆಗಿಟ್ಟುಕೊಳ್ಳಿ. ಆಹಾರ ಪದಾರ್ಥಗಳು, ಮನರಂಜನೆ ವಸ್ತುಗಳು, ಆಟಿಕೆ, ಡೈಪರ್ ಹೀಗೆ ಅಗತ್ಯ ವಸ್ತು ಜೊತೆಗಿರಲಿ. ವಿಮಾನ ನಿಲ್ದಾಣದಲ್ಲಿ ಇದನ್ನು ಹುಡುಕುವುದು ಕಷ್ಟ. ಜೊತೆಗೆ ಅದರ ಬೆಲೆ ದುಬಾರಿಯಾಗಿರುತ್ತದೆ. 

Travel Tips : ರೈಲಿನಲ್ಲಿ ಹೋಗುವಾಗ ಸುಖಾಸುಮ್ಮನೆ ತಪ್ಪು ಮಾಡಿ, ದಂಡ ತುಂಬ್ಬೇಡಿ

ನಿದ್ರೆಗೆ ವ್ಯವಸ್ಥೆ ಮಾಡಿ : ರಾತ್ರಿ ಸಮಯದಲ್ಲಿ ವಿಮಾನ ರದ್ದಾದರೆ, ಅದಕ್ಕೆ ಏರ್ ಲೈನ್ ಕಾರಣವಾಗಿದ್ದರೆ ಕಂಪನಿಯೇ ಹೊಟೇಲ್ ವ್ಯವಸ್ಥೆ ಮಾಡುತ್ತದೆ. ವಿಮಾನ ನಿಲ್ದಾಣದಲ್ಲಿಯೂ ಮಲಗುವ ವ್ಯವಸ್ಥೆ ಮಾಡಲಾಗುತ್ತದೆ. ಇದ್ರ ಬಗ್ಗೆ ನೀವು ಸಿಬ್ಬಂದಿಯನ್ನು ವಿಚಾರಿಸಬೇಕು. ಹಗಲಿನಲ್ಲಾದ್ರೆ ನೀವು ಮಗುವನ್ನು ಮಲಗಿಸಲು ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಒಂದೆರಡು ಗಂಟೆ ಮಗು ಸರಿಯಾಗಿ ನಿದ್ರೆ ಮಾಡಿದ್ರೆ ಅದು ನಿಮಗೆ ತೊಂದರೆ ನೀಡುವುದಿಲ್ಲ. 

ಶಾಂತತೆಯನ್ನು ಕಾಪಾಡಿಕೊಳ್ಳಿ : ಪ್ರಯಾಣದಲ್ಲಿ ವಿಳಂಬವಾದಾಗ ಕೋಪಬರುವುದು ಸಹಜ. ಆದ್ರೆ ಅದನ್ನು ನಿಯಂತ್ರಿಸಿಕೊಳ್ಳಿ. ಕೋಪದಲ್ಲಿ ಮಕ್ಕಳಿಗೆ ಬೈದು, ಹೊಡೆದು ಮಾಡಿದ್ರೆ ಅವರು ಮತ್ತಷ್ಟು ಗಲಾಟೆ ಮಾಡ್ತಾರೆ. ಇದ್ರಿಂದ ಮನಸ್ಸು ಮತ್ತಷ್ಟು ಹದಗೆಡುತ್ತದೆ. 

ಸರಿಯಾದ ಮಾಹಿತಿ ತಿಳಿದು ಟಿಕೆಟ್ ಬುಕ್ ಮಾಡಿ : ವಿಮಾನ ರದ್ದಾದಲ್ಲಿ, ವಿಳಂಬವಾದಲ್ಲಿ ಬೇರೆ ಬೇರೆ ವಿಮಾನ ಕಂಪನಿಗಳ ನಿಯಮ ಬೇರೆ ಬೇರೆಯಿರುತ್ತದೆ. ಶೇಕಡಾ 50ರಷ್ಟು ಟಿಕೆಟ್ ಹಣವನ್ನು ಕೆಲ ಕಂಪನಿ ವಾಪಸ್ ಮಾಡುತ್ತದೆ. ನೀವು ಟಿಕೆಟ್ ಬುಕ್ ಮಾಡುವ ವೇಳೆ ಇದನ್ನು ತಿಳಿದಿರಿ. ಒಂದ್ವೇಳೆ ನಿಮ್ಮ ವಿಮಾನ ರದ್ದಾದಲ್ಲಿ ಅದ್ರ ಹಣದಲ್ಲಿ ನೀವು ಬೇರೆ ಟಿಕೆಟ್ ಬುಕ್ ಮಾಡಬಹುದು.  

ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ

ಮಕ್ಕಳಿಗೆ ಇದನ್ನು ಕಲಿಸಿ : ಪ್ರಯಾಣದ ವೇಳೆ ಮಾತ್ರವಲ್ಲ, ಯಾವುದೇ ಸಂದರ್ಭದಲ್ಲಿ ಕಷ್ಟ ಬಂದ್ರೂ ಅದನ್ನು ನಗ್ತಾ ಎದುರಿಸಬೇಕೆಂಬುದನ್ನು ನೀವು ಮಕ್ಕಳಿಗೆ ಕಲಿಸಬೇಕು. ಹಾಗೆಯೇ ಮಕ್ಕಳ ಜೊತೆ ನೀವು ಆಟವಾಡಿ. ತೆರೆದ ಗಾಳಿಯಲ್ಲಿ ಅವರನ್ನು ಬಿಡಿ. ಬಣ್ಣದ ಪೆನ್ಸಿಲ್‌, ಬುಕ್ ಜೊತೆಯಲ್ಲಿಟ್ಟುಕೊಂಡಿರಿ. 

Follow Us:
Download App:
  • android
  • ios