Traveling Tips : ಹೆಲ್ತ್ ಪಾಸ್ಪೋರ್ಟ್ ಅಂದ್ರೇನು? ಏನಿರುತ್ತೆ ಇದ್ರಲ್ಲಿ?
ಪಾಸ್ಪೋರ್ಟ್ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ವಿದೇಶಕ್ಕೆ ಹೋಗುವಾಗ ಅದು ನಮ್ಮ ಜೊತೆ ಇರಲೇಬೇಕು. ಸಾಮಾನ್ಯ ಪಾಸ್ಪೋರ್ಟ್ ಜೊತೆ ನಾವು ಹೆಲ್ತ್ ಪಾಸ್ಪೋರ್ಟ್ ಕೂಡ ಹೊಂದಿದ್ರೆ ಒಳ್ಳೆಯದು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.
ವಿದೇಶಕ್ಕೆ ಹೋಗ್ಬೇಕೆಂದ್ರೆ ಪಾಸ್ಪೋರ್ಟ್ ಬೇಕು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಕೊರೊನಾ ನಂತ್ರ ಮತ್ತೆ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಆ ಸಂದರ್ಭದಲ್ಲಿ ಲಾಕ್ ಡೌನ್ ಹೇರಿದ್ದ ಕಾರಣ ಜನರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಸಾಧ್ಯವಾಗ್ತಿರಲಿಲ್ಲ. ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ವಿದೇಶಕ್ಕೆ ಹೋಗಲು ಭಯಪಡ್ತಿದ್ದರು. ಆದ್ರೆ ಈಗ ಕೊರೊನಾ ಸಂಖ್ಯೆ ಕಡಿಮೆಯಾದ ಕಾರಣ ಹಾಗೂ ಎಲ್ಲರೂ ವ್ಯಾಕ್ಸಿನ್ ಹಾಕಿಕೊಂಡಿರುವ ಧೈರ್ಯದಲ್ಲಿ ವಿದೇಶ ಪ್ರಯಾಣಕ್ಕೆ ಪ್ಲಾನ್ ಮಾಡ್ತಿದ್ದಾರೆ. ಹಾಗಾಗಿಯೇ ಪಾಸ್ಪೋರ್ಟ್ ಕೇಂದ್ರಗಳು ಕೂಡ ಬ್ಯುಸಿಯಿವೆ. ಸಾಮಾನ್ಯ ಪಾಸ್ಪೋರ್ಟ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಆದ್ರೆ ಆರೋಗ್ಯ ಪಾಸ್ಪೋರ್ಟ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನಾವಿಂದು ಹೆಲ್ತ್ ಪಾಸ್ಪೋರ್ಟ್ ಅಂದ್ರೆ ಏನು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಹೆಲ್ತ್ (Health) ಪಾಸ್ಪೋರ್ಟ್ ಅಂದ್ರೆ ಏನು? : ಕೊರೊನಾ (Corona) ನಂತ್ರ ಜನರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊರೊನಾ (Corona) ಹರಡದಿರಲಿ ಎನ್ನುವ ಕಾರಣಕ್ಕೆ ಕೆಲ ದೇಶಗಳಲ್ಲಿ ಕಟ್ಟುನಿಟ್ಟಿನ ನಿಮಯಮಗಳನ್ನು ಕೂಡ ವಿಧಿಸಲಾಗಿದೆ. ಅದನ್ನು ಪಾಲಿಸಿದ್ರೆ ಮಾತ್ರ ನೀವು ಆರಾಮವಾಗಿ ವಿದೇಶವನ್ನು ಸುತ್ತಬಹುದು. ಇಲ್ಲವೆಂದ್ರೆ ಸಮಸ್ಯೆ ಎದುರಿಸಬೇಕಾಗುತ್ತೆ. ಅದ್ರಲ್ಲಿ ಕೊರೊನಾ ಪ್ರಮಾಣ ಪತ್ರ ಕೂಡ ಒಂದು. ಹಿಂದೆ ಕೊರೊನಾ ದಾಳಿ ಮಾಡಿಲ್ಲವೆಂದು ಪ್ರಮಾಣ ಪತ್ರ ನೀಡ್ಬೇಕಿತ್ತು. ಈಗ ಎಲ್ಲ ದೇಶಗಳಲ್ಲಿ ಅದ್ರ ಅಗತ್ಯವಿಲ್ಲ. ಆದ್ರೆ ಆರೋಗ್ಯ ಪಾಸ್ಪೋರ್ಟ್ ನಿಮ್ಮ ಬಳಿ ಇದ್ದರೆ ಒಳ್ಳೆಯದು. ಆರೋಗ್ಯ ಪಾಸ್ಪೋರ್ಟ್ ಹೊಂದಿದ್ದರೆ ಆ ದೇಶದಲ್ಲಿ ಆರಾಮವಾಗಿ ಸುತ್ತಾಡಬಹುದು.
ಹೆಲ್ತ್ ಪಾಸ್‌ಪೋರ್ಟ್ ಒಂದು ರೀತಿಯ ದಾಖಲೆ. ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ತೋರಿಸುವ ವೈದ್ಯಕೀಯ ಪ್ರಮಾಣಪತ್ರ ಅಂತಾ ಇದನ್ನು ಹೇಳಬಹುದು. ಕೊರೊನಾ, ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ನೀವು ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅದನ್ನು ಪಾಸ್ಪೋರ್ಟ್ ನಲ್ಲಿ ಬರೆದಿರಲಾಗುತ್ತದೆ. ಆಗ ಪ್ರಯಾಣದಲ್ಲಿ ವಿಶೇಷ ಗಮನವನ್ನು ನೀಡಲಾಗುತ್ತದೆ.
HOLI FESTIVAL : ಜೀವನದಲ್ಲಿ ಒಮ್ಮೆಯಾದ್ರೂ ಆ ಬಣ್ಣದೋಕುಳಿಯಲ್ಲಿ ಮಿಂದೇಳಿ..
ಆರೋಗ್ಯ ಪಾಸ್ಪೋರ್ಟ್ ನಿಂದಾಗುವ ಪ್ರಯೋಜನವೇನು? : ಆರೋಗ್ಯ ಪಾಸ್‌ಪೋರ್ಟ್ ಬಹುತೇಕ ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯ. ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ವಿದೇಶಕ್ಕೆ ಪ್ರಯಾಣಿಸುವ ಜನರಿಗೆ ಇದು ಬಹಳ ಮುಖ್ಯ. ಉದ್ಯಮಿಗಳಿಗೆ ಇದ್ರ ಅಗತ್ಯ ಹೆಚ್ಚಿದೆ. ನೀವು ಯಾರಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅದನ್ನು ಪಾಸ್ಪೋರ್ಟ್ ನಲ್ಲಿ ಬರೆಯಲಾಗುತ್ತದೆ. ನೀವು ವಿಮಾನ ಪ್ರಯಾಣದ ಸಮಯದಲ್ಲಿ ಅಸ್ವಸ್ಥರಾದ್ರೆ ಆಗ ನಿಮ್ಮ ಪಾಸ್ಪೋರ್ಟ್ ಸಹಾಯದಿಂದ ನಿಮಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷ ಕಾಳಜಿ ನಿಮಗೆ ಸಿಗುತ್ತದೆ. ಆರೋಗ್ಯ ಪಾಸ್‌ಪೋರ್ಟ್ ಹೊಂದಿದ್ರೆ ಯಾವುದೇ ಅಡೆತಡೆ ಇಲ್ಲದೆ ನೀವು ಪ್ರಯಾಣಿಸಬಹುದು. ತುರ್ತು ಸಂದರ್ಭದಲ್ಲಿ ಈ ಆರೋಗ್ಯ ಪಾಸ್ಪೋರ್ಟ್ ನಿಮ್ಮ ನೆರವಿಗೆ ಬರುತ್ತದೆ.
ಹೆಲ್ತ್ ಪಾಸ್ಪೋರ್ಟ್ ಪಡೆಯೋದು ಹೇಗೆ? : ಹೆಲ್ತ್ ಪಾಸ್ಪೋರ್ಟ್ ಪಡೆಯಲು ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಸಾಮಾನ್ಯ ಪಾಸ್ಪೋರ್ಟ್ ಪಡೆಯುವುದಕ್ಕಿಂತ ಇದು ಸುಲಭ. ವಿಮಾನ ಪ್ರಯಾಣದಲ್ಲಿ ವಿಶೇಷ ಕಾಳಜಿ ಬಯಸಿದ್ರೆ ಪಾಸ್‌ಪೋರ್ಟ್ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆರೋಗ್ಯ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಇದರ ಲಾಭವನ್ನು ಪಡೆಯಬಹುದು.
ಪಾಸ್ಪೋರ್ಟ್ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಆರೋಗ್ಯ ಪಾಸ್ಪೋರ್ಟ್ ಪಡೆಯಲು ಸಾಧ್ಯವಾಗಿಲ್ಲವೆಂದ್ರೆ ಚಿಂತೆ ಬೇಡ. ನೀವು ವಿಮಾನ ನಿಲ್ದಾಣದಲ್ಲಿಯೇ ಈ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣದಲ್ಲಿ ಇದಕ್ಕೆ ಸಂಬಂಧಿಸಿದಂತೆ ಫಾರ್ಮ್ ಸಿಗುತ್ತದೆ. ಅದರಲ್ಲಿ ನೀವು ನಿಮ್ಮ ಅನಾರೋಗ್ಯದ ಬಗ್ಗೆ ವಿವರಣೆಯನ್ನು ನೀಡಬೇಕಾಗುತ್ತದೆ. ಅದನ್ನು ವಿಮಾನ ನಿಲ್ದಾಣದ ಅಧಿಕಾರಿಯಿಂದ ಪ್ರಮಾಣೀಕರಿಸಬೇಕು. ನಂತ್ರ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ.
Travel Tips : ಹ್ಯಾರಿ ಪಾಟರ್ ಫ್ಯಾನ್ಸ್ ನೀವಾಗಿದ್ರೆ ಈ ಸ್ಥಳ ನೋಡ್ಲೇಬೇಕು
ಹೆಲ್ತ್ ಪಾಸ್ಪೋರ್ಟ್ ಹೇಗಿರುತ್ತದೆ? : ಹೆಲ್ತ್ ಪಾಸ್ಪೋರ್ಟ್ ನಿಮಗೆ ಬಹಳ ಮುಖ್ಯ. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಅಗತ್ಯವಾಗಿದೆ. ಆರೋಗ್ಯ ಪಾಸ್ಪೋರ್ಟ್ ಡಿಜಿಟಲ್ ಮತ್ತು ಪೇಪರ್ ಪ್ರೂಫ್ ಆಗಿರಬಹುದು. ಕೆಲವೊಮ್ಮೆ ಅದನ್ನು ಪಾಸ್‌ಪೋರ್ಟ್‌ನೊಂದಿಗೆ ನವೀಕರಿಸಲಾಗುತ್ತದೆ.