Travel Tips : ಹ್ಯಾರಿ ಪಾಟರ್ ಫ್ಯಾನ್ಸ್ ನೀವಾಗಿದ್ರೆ ಈ ಸ್ಥಳ ನೋಡ್ಲೇಬೇಕು
ನಮ್ಮಿಷ್ಟದ ಸಿನಿಮಾ ನೋಡ್ತಿರುವಾಗ ನಾವೊಮ್ಮೆ ಅಲ್ಲಿಗೆ ಹೋಗಿ ಬರ್ಬೇಕು ಅನ್ನಿಸುತ್ತೆ. ಅನೇಕ ಪ್ರಸಿದ್ಧ ಚಿತ್ರಗಳು ಶೂಟ್ ಆದ ಸ್ಥಳಗಳು ಈಗ್ಲೂ ಹಾಗೇ ಇದೆ. ಅವುಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಲಾಗಿದೆ. ಅದ್ರಲ್ಲಿ ಹ್ಯಾರಿ ಪಾಟರ್ ಕೂಡ ಸೇರಿದ್ದಾನೆ.
ಹ್ಯಾರಿ ಪಾಟರ್ ಯಾರಿಗೆ ಗೊತ್ತಿಲ್ಲ ಹೇಳಿ. ಜಾದೂ ಜಗತ್ತು ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಹ್ಯಾರಿ ಪಾಟರ್. ಮ್ಯಾಜಿಕ್ ವಿದ್ಯೆಯನ್ನು ಕಲಿಯಲು ಮಾಯಾ ನಗರಕ್ಕೆ ಬರುವ ಮಕ್ಕಳ ಪತ್ತೆದಾರಿ ಕತೆ ಇದಾಗಿದೆ. ಮೊದಲು ಕಾದಂಬರಿ ರೂಪದಲ್ಲಿದ್ದ ಹ್ಯಾರಿ ಪಾಟರ್ ನಂತರದ ದಿನಗಳಲ್ಲಿ ಇಡೀ ವಿಶ್ವದಲ್ಲೇ ಚಮತ್ಕಾರ ಸೃಷ್ಟಿಸಿದ್ದು ಸುಳ್ಳಲ್ಲ. ಲೇಖಕಿ ಜೆ ಕೆ ರೌಲಿಂಗ್ ಅವರು ಜಾದೂ ಜಗತ್ತಿನೊಂದಿಗೆ ಜನರನ್ನು ವಿಭಿನ್ನ ಮತ್ತು ಅದ್ಭುತ ಜಗತ್ತಿಗೆ ಕರೆದೊಯ್ದರು.
ಅದ್ಭುತ ಅಪರೂಪದ ಮ್ಯಾಜಿಕ್ (Magic) : ಒಂದು ಸಮಯದಲ್ಲಿ ಹ್ಯಾರಿ ಪಾಟರ್ (Harry Potter) ಎಂಬ ಈ ಅದ್ಭುತ ಪುಸ್ತಕವನ್ನು ಪ್ರಕಟಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಯಾವಾಗ ಒಮ್ಮೆ ಇದು ಪ್ರಕಟಗೊಂಡಿತೋ ಇದೇ ಒಂದು ಅದ್ಭುತ ಇತಿಹಾಸವನ್ನು ಸೃಷ್ಠಿಸಿತು. ಹ್ಯಾರಿ ಪಾಟರ್ ಪುಸ್ತಕ (Book) ಮಾತ್ರವಲ್ಲ ಅದಕ್ಕೆ ಸಂಬಂಧಪಟ್ಟ ಎಲ್ಲ ವಸ್ತುಗಳೂ ಚರ್ಚೆಗೆ ಗ್ರಾಸವಾಯಿತು. ಹ್ಯಾರಿ ಪಾಟರ್ ನ ಎಲ್ಲ ಸರಣಿಗಳ ನಂತರ ನಿರ್ಮಾಪಕರು ಮತ್ತು ಫ್ರ್ಯಾಂಚೈಸಿಗಳು ಚಿತ್ರದ ಸೆಟ್ ಗಳನ್ನು ಪ್ರವಾಸಿ ತಾಣವನ್ನಾಗಿಸಿದ್ದಾರೆ. ಅವು ಇಂದು ಅನೇಕ ಅಭಿವೃದ್ಧಿಗಳನ್ನು ಕಂಡು ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಪ್ರವಾಸಿ ತಾಣವಾಗಿ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆ ಸೆಳೆಯುತ್ತಿವೆ. ನೀವು ಹ್ಯಾರಿ ಪಾಟರ್ ನ ಅಭಿಮಾನಿಯಾಗಿದ್ದಲ್ಲಿ ಈ ಸ್ಥಳಗಳಿಗೆ ಖಂಡಿತ ಭೇಟಿ ನೀಡಿ.
ಸ್ಕಾಟ್ ಲ್ಯಾಂಡ್ ನ ರೆಸ್ಟೋರೆಂಟ್ ಮತ್ತು ಹಾಗ್ ವರ್ಟ್ಸ್ ರೈಲು : ಸ್ಕಾಟ್ ಲ್ಯಾಂಡ್ ನ ಹಲವಾರು ಸ್ಥಳಗಳು ಹ್ಯಾರಿ ಪಾಟರ್ ನ ಜೀವನಕ್ಕೆ ಸಂಬಂಧಿಸಿದೆ. ಸ್ಕಾಟ್ ಲ್ಯಾಂಡ್ ನ ಸುಂದರವಾದ ಪರ್ವತಗಳಿಂದ ತುಂಬಿರುವ ರಾಜಧಾನಿ ಎಡಿನ್ ಬರ್ಗ್ ನಲ್ಲಿ, ಜೆ ಕೆ ರೌಲಿಂಗ್ ಅವರ ಮಾಂತ್ರಿಕ ಜಗತ್ತು ಜನ್ಮ ನೀಡಿತು ಎಂದರೆ ತಪ್ಪಾಗದು. ಲೇಖಕಿ ರೌಲಿಂಗ್ ಅವರು ತಮ್ಮ ಕಷ್ಟದ ಜೀವನದಲ್ಲಿ ಹ್ಯಾರಿ ಪಾಟರ್ ರಚಿಸಿದ್ದಾರೆ. ಹ್ಯಾರಿ ಪಾಟರ್ ಬರೆಯುವಾಗ ಅವರು ಅನೇಕ ಮನೆ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುತ್ತಿದ್ದರು. ಅವುಗಳ ಪೈಕಿ ಎಲಿಫಂಟ್ ಹೌಸ್ ಕೆಫೆ ಕೂಡ ಒಂದು. ಈ ಕೆಫೆ ಈಗ ಫೇಮಸ್ ಟೂರಿಸ್ಟ್ ಡೆಸ್ಟಿನೇಶನ್ ಆಗಿದೆ. ಇಲ್ಲಿಯೇ ನೀವು ಹಾಗ್ ವರ್ಟ್ಸ್ ರೈಲಿನ ಆನಂದವನ್ನು ಕೂಡ ಸವಿಯಬಹುದು. ಪ್ರತಿ ವ್ಯಕ್ತಿಗೆ 30-35 ಪೌಂಡ್ ಮತ್ತು ಫಸ್ಟ್ ಕ್ಲಾಸ್ ಸೀಟಿಗೆ ಸುಮಾರು 55 ಪೌಂಡ್ ವೆಚ್ಚ ತಗುಲುತ್ತದೆ.
ಭಾರತದ ಅತೀ ಸ್ವಚ್ಛ ಗ್ರಾಮವಿದು, ಊರೆಲ್ಲಾ ಹುಡುಕಿದರೂ ಒಂಚೂರು ಕಸವಿಲ್ಲ
ಲಂಡನ್ ನ ಛೂ ಮಂತರ್ ಸಿಟಿಯನ್ನೊಮ್ಮೆ ನೋಡಿ : ಇಂಗ್ಲೆಂಡಿನ ರಾಜಧಾನಿ ಲಂಡನ್ ಹಲವಾರು ಐತಿಹಾಸಿಕ ಮತ್ತು ರಾಜಕೀಯ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ವಾತಾವರಣ, ಭಾಷೆ ಮತ್ತು ಜೀವನ ಶೈಲಿಯನ್ನು ಆಧಾರವಾಗಿಟ್ಟುಕೊಂಡೇ ಹ್ಯಾರಿ ಪಾಟರ್ ರಚನೆಯಾಗಿದ್ದರಿಂದ ಈ ಸ್ಥಳದಲ್ಲಿ ನಿಮಗೆ ಅದೇ ಫೀಲ್ ಬರುತ್ತದೆ. ಹ್ಯಾರಿ ಅವನ ಮೊದಲ ಮಾಂತ್ರಿಕ ನಿಲುವಂಗಿ ಪಡೆದ ಸ್ಥಳವಾದ ಛೂ ಮಂತರ್ ಸ್ಟ್ರೀಟ್ ಅಥವಾ ಡೈಗೋನ್ ವ್ಯಾಲಿ, ಪ್ಲಾಟ್ ಫಾರ್ಮ್ ನಂ.10, ಆಕ್ಸ್ ಫರ್ಡ್ ಯುನಿವರ್ಸಿಟಿ, ಮಿಲೇನಿಯಮ್ ಬ್ರಿಜ್, ಲಂಡನ್ ಝೂ ನ ರೆಪ್ಟೈಲ್ ಹೌಸ್ ಮುಂತಾದವುಗಳನ್ನು ನೋಡಬಹುದು.
ಒಂದೇ ಒಂದು ದಿನ ಎಲ್ಲಿಗಾದರೂ ಹೋಗಿ ಬರ್ಬೇಕು ಅಂದ್ರೆ ಈ ಪ್ಲೇಸಸ್ ಬೆಸ್ಟ್!
ಸ್ಟುಡಿಯೋ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ : ಹ್ಯಾರಿ ಪಾಟರ್ ಸಿರೀಸ್ ಪ್ರಖ್ಯಾತಿ ಪಡೆದ ನಂತರ ಅದರ ಥೀಮ್ ಅನ್ನೇ ಬಳಸಿ ಜಗತ್ತಿನೆಲ್ಲೆಡೆ ಅನೇಕ ಸ್ಥಳಗಳಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಗಳು ತಲೆ ಎತ್ತಿದವು. ಅವುಗಳ ಪೈಕಿ ವಾರ್ನರ್ಸ್ ಬ್ರದರ್ಸ್ ಕೂಡ ಒಂದು. ಲಂಡನ್ನಿನಿಂದ ಸ್ವಲ್ಪ ದೂರದಲ್ಲಿರುವ ಲೆವೆಸ್ಡನ್ ಫಿಲ್ಮ್ ಸ್ಟುಡಿಯೋ, ಹೋಗ್ ವಾರ್ಟ್ಸ್ ನ ದೊಡ್ಡ ಹಾಲ್ ಮತ್ತು ಫೋರ್ಬಿಡನ್ ಕಾಡನ್ನು ನೋಡಬಹುದು. ಹ್ಯಾರಿ ಪಾಟರ್ ಶೂಟಿಂಗ್ ಸಮಯದಲ್ಲಿ ಬಳಸಲಾದ ಬಟ್ಟೆಗಳನ್ನು ಕೂಡ ನೋಡಬಹುದಾಗಿದೆ. ಇದರ ಹೊರತಾಗಿ ಒರ್ಲ್ಯಾಂಡೋ, ಲಾಸ್ ಎಂಜಲೀಸ್, ಜಪಾನ್, ಬೀಜಿಂಗ್, ಪೋಲೆಂಡ್ ನ ಚೌಹಾ ಕೋಟೆಗಳನ್ನು ಕೂಡ ನೋಡಬಹುದಾಗಿದೆ.