500 ವರ್ಷಗಳಿಂದಲೂ ಈ ಚರ್ಚಲ್ಲಿ ನೇತಾಡ್ತಿದೆ ಮೃತದೇಹ!
ಪ್ರಪಂಚದಾದ್ಯಂತ ಕುತೂಹಲ ಹುಟ್ಟಿಸುವ ಅನೇಕ ಪ್ರದೇಶಗಳಿವೆ. ಕೆಲ ದೇವಾಲಯ, ಚರ್ಚ್ ನಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಚಿತ್ರ ಪದ್ಧತಿಗಳ ಪಾಲನೆ ಆಗ್ತಿದ್ದರೆ, ಮತ್ತೆ ಕೆಲ ಜಾಗದಲ್ಲಿರುವ ವಸ್ತುಗಳು ಅಚ್ಚರಿ ಹುಟ್ಟಿಸುತ್ತವೆ.
ವಿಶ್ವದಲ್ಲಿ ಅನೇಕ ಜಾಗಗಳು ವಿಚಿತ್ರ ಕಾರಣಕ್ಕೆ ಚರ್ಚೆಯಲ್ಲಿರುತ್ತವೆ. ಅದ್ರಲ್ಲಿ ಇಟಲಿಯ ಚರ್ಚ್ ಒಂದು ಸೇರಿದೆ. ಅದ್ರ ಕಥೆ ಭಿನ್ನವಾಗಿದ್ದು, ಅಚ್ಚರಿ ಹುಟ್ಟಿಸುವಂತಿದೆ. ಸಾಮಾನ್ಯವಾಗಿ ಹಳೆಯ ಹಾಗೂ ಸುಂದರ ಚರ್ಚ್ ಒಳಗೆ ಹೋದಾಗ ನಮಗೆ ಶಾಂತತದೆ ಅನುಭವವಾಗುತ್ತದೆ. ಇದ್ರ ಜೊತೆ ಸುಂದರ ವಾಸ್ತುಶಿಲ್ಪಗಳು ನಮ್ಮ ಗಮನ ಸೆಳೆಯುತ್ತವೆ. ಆದ್ರೆ ಈಗ ನಾವು ಹೇಳ್ತಿರುವ ಚರ್ಚ್ ನಲ್ಲಿ ಶವವೊಂದು ನೇತಾಡುತ್ತಿದೆ. ಅದೂ ಒಂದಲ್ಲ ಎರಡಲ್ಲ ಸುಮಾರು 500 ವರ್ಷಗಳಿಂದ ಈ ಚರ್ಚ್‌ನ ಛಾವಣಿಯ ಮೇಲೆ ಮೃತದೇಹ ನೇತಾಡುತ್ತಿದೆ. ಯಾವುದೋ ಮನುಷ್ಯನ ಮೃತದೇಹ ಅಂತ ನೀವು ಭಯಗೊಳ್ಳಬೇಕಾಗಿಲ್ಲ. ಇಲ್ಲಿ ನೇತಾಡ್ತಿರೋದು ಮೊಸಳೆ ಮೃತದೇಹ. ಏನೇ ಆಗಿದ್ರೂ ಚರ್ಚ್ ನಲ್ಲಿ ಮೃತದೇಹ ನೇತಾಡೋದು ವಿಚಿತ್ರ.
ಇಟಲಿ (Italy) ಯ ಲೊಂಬಾರ್ಡಿಯಾ ಪ್ರದೇಶದಲ್ಲಿ ಸ್ಯಾಂಟುರಿಯೊ ಡೆಲ್ಲಾ ಬೀಟಾ ವರ್ಗಿನ್ ಮಾರಿಯಾ ಡೆಲ್ಲೆ ಗ್ರಾಜಿ ಹೆಸರಿನ ಚರ್ಚ್ (Church) ಇದೆ. ಈ ಚರ್ಚ್ ನಲ್ಲಿಯೇ ಅಸಲಿ ಮೊಸಳೆ (Crocodile) ಯ ಮೃತದೇಹ ನೇತಾಡುತ್ತಿದೆ. ಮೊಸಳೆ ಮೃತದೇಹ ಸ್ಯಾಂಟುರಿಯೊ ಡೆಲ್ಲಾ ಬೀಟಾ ವರ್ಗಿನ್ ಮಾರಿಯಾ ಡೆಲ್ಲೆ ಗ್ರಾಜಿ ಚರ್ಚ್ ಗೆ ಹೇಗೆ ಬಂತು ಎಂಬ ಕುತೂಹಲ ಅನೇಕರಿಗಿರಬಹುದು. ಆದ್ರೆ ಅದು ಹೇಗೆ ಬಂತು ಎಂಬುದು ಗೊತ್ತಿಲ್ಲ. ಇದನ್ನು ಧಾರ್ಮಿಕ (Religious) ಸಂಕೇತವೆಂದು ನಂಬಲಾಗುತ್ತದೆ.
ನಮ್ಮ ದೇಶದಲ್ಲಿ ಜನರಿಗೆ ಪಿಂಚಣಿ ಸಿಗುತ್ತೋ ಗೊತ್ತಿಲ್ಲ…. ಆದ್ರೆ ಈ ಮರಕ್ಕೆ ಪೆನ್ಶನ್ ಸಿಗುತ್ತಂತೆ !
ಪ್ರಾಚೀನ ಕಾಲದಲ್ಲಿ, ಕ್ರಿಶ್ಚಿಯನ್ ಧರ್ಮವು ಹಾವುಗಳು, ಡ್ರ್ಯಾಗನ್ಗಳು ಮತ್ತು ಮೊಸಳೆಗಳಂತಹ ಸರೀಸೃಪಗಳನ್ನು ದುಷ್ಟತನಕ್ಕೆ ಹೋಲಿಕೆ ಮಾಡ್ತಿತ್ತು. ಇದನ್ನು ಸೈತಾನನ ಅವತಾರ ಎಂದೂ ನಂಬಲಾಗ್ತಿತ್ತು. ಮನುಷ್ಯರನ್ನು ಪಾಪಕ್ಕೆ ಕರೆದೊಯ್ಯುವ ಪ್ರಾಣಿಗಳು ಇವು ಎಂದು ಹೇಳ್ತಿದ್ದರು. ಹಾಗಾಗಿಯೇ ಇದನ್ನು ಚರ್ಚ್ ಛಾವಣೆ ಮೇಲೆ ಮೊಸಳೆಯನ್ನನು ನೇತುಹಾಕಲಾಗಿತ್ತು. ಇದು ಚರ್ಚ್ ಗೆ ಬರುವ ಜನರಿಗೆ ಒಂದು ಎಚ್ಚರಿಕೆಯಾಗಿತ್ತು. ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯದ ಸಂಕೇತವಾಗಿತ್ತು.
ಚರ್ಚ್ ಮೇಲೆ ನೋಡ್ತಿದ್ದಂತೆ ನಿಮ್ಮ ಕಣ್ಣಿಗೆ ಕಾಣುವ ಈ ಮೊಸಳೆ ಕೃತಕ ಎನ್ನಿಸಬಹುದಾದ್ರೂ ಇದು ನಿಜವಾದ ಮೊಸಳೆಯಾಗಿದೆ. ಸುಮಾರು 500 ವರ್ಷಗಳ ಹಿಂದೆಯೇ ಇದನ್ನು ಹಾಕಲಾಗಿದೆ ಎಂದು ಹೇಳಲಾಗುತ್ತದೆ. ಈ ಚರ್ಚ್ 13 ನೇ ಶತಮಾನಕ್ಕೆ ಹಿಂದಿನದು.
ಈ ಮೊಸಳೆ ಮೂಲದ ಬಗ್ಗೆ ಹಲವಾರು ದಂತಕಥೆಗಳು ಲೊಂಬಾರ್ಡಿಯಾದ ಸುತ್ತಲೂ ಹರಡಿವೆ. ಅದ್ರಲ್ಲಿ ಎರಡು ಕಥೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಇಲ್ಲಿ ಇಬ್ಬರು ಸಹೋದರರು ಗಮನ ಸೆಳೆಯುತ್ತಾರೆ. ಫ್ರಾನ್ಸೆಸ್ಕೊ ಗೊನ್ಜಾಗಾದಲ್ಲಿನ ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡು ಬಂದ ನಂತರ ಮೊಸಳೆಯನ್ನು ಸೆರೆಹಿಡಿದು ಕೊಲ್ಲಲಾಯಿತು ಎಂದು ಕೆಲವರು ನಂಬುತ್ತಾರೆ. ಮತ್ತೆ ಕೆಲವರು, ಮಿನ್ಸಿಯೊ ನದಿಯ ದಡದಲ್ಲಿ ವಿಶ್ರಾಂತಿ ಮಾಡ್ತಿದ್ದ ಇಬ್ಬರು ಸಹೋದರರ ಮೇಲೆ ಮೊಸಳೆ ದಾಳಿ ನಡೆಸಿತ್ತು. ಅವರು ಪವಿತ್ರ ಕನ್ಯೆಯ ಸಹಾಯ ಪಡೆದು, ಆಕೆಯಿಂದ ಚಾಕು ಪಡೆದು, ಮೊಸಳೆಯನ್ನು ಕೊಂದರು ಎನ್ನಲಾಗುತ್ತದೆ. ಸರ್ಕಸ್ ಸಂದರ್ಭದಲ್ಲಿ ತಂದಿದ್ದ ಮೊಸಳೆಯನ್ನು ಅದರ ಪಂಜರದಿಂದ ಹೊರಕ್ಕೆ ಬಿಡಲಾಯ್ತು ಎನ್ನುವ ಕಥೆ ಕೂಡ ಇದೆ. ಇದ್ರಲ್ಲಿ ಯಾವುದು ಸತ್ಯ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಚರ್ಚ್ ನಲ್ಲಿರುವ ಈ ಮೊಸಳೆ ಆಕರ್ಷಕವಾಗಿರುವುದಂತೂ ಸತ್ಯ.
ಲಿವ್ ಇನ್ ಸಂಬಂಧ, ಮದುವೆಗೆ ಮುನ್ನ ಮಗು… ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಎಲ್ಲವೂ ನಡೆಯುತ್ತೆ
ಕೇವಲ ಇಟಲಿಯ ಈ ಚರ್ಚ್ ನಲ್ಲಿ ಮಾತ್ರ ಮೊಸಳೆ ಮೃತದೇಹ ಇಲ್ಲ. ಮ್ಯಾಸೆರಾಟಾದಲ್ಲಿನ ಸಾಂಟಾ ಮಾರಿಯಾ ಡೆಲ್ಲೆ ವರ್ಗಿನಿ ಚರ್ಚ್‌ನಲ್ಲಿ ಮತ್ತು ಪಾಂಟೆ ನೊಸ್ಸಾದಲ್ಲಿರುವ ಸಾಂಟುವಾರಿಯೊ ಡೆಲ್ಲಾ ಮಡೊನ್ನಾ ಡೆಲ್ಲೆ ಲ್ಯಾಕ್ರೈಮ್ ಚರ್ಚ್ ನಲ್ಲೂ ಮೊಸಳೆಯ ಮೃತದೇಹ ಚರ್ಚ್ ಛಾವಣಿ ಮೇಲೆ ನೇತಾಡುತ್ತಿರುವುದನ್ನು ನೀವು ನೋಡ್ಬಹುದು.