ಲಿವ್ ಇನ್ ಸಂಬಂಧ, ಮದುವೆಗೆ ಮುನ್ನ ಮಗು… ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಎಲ್ಲವೂ ನಡೆಯುತ್ತೆ
ಮದುವೆಗೆ ಮುಂಚಿನ ಗರ್ಭಧಾರಣೆ, ಲಿವ್-ಇನ್ ಸಂಬಂಧಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಭಾರತದ ಈ ಗ್ರಾಮದಲ್ಲಿ, ನಗರಗಳಿಂತ ಕೂಡ ಆಧುನಿಕ, ಈ ಬುಡಕಟ್ಟು ಜನಾಂಗದವರು. ಅಷ್ಟೇ ಯಾಕೆ ಸಂಗಾತಿ ಇಷ್ಟ ಆಗಿಲ್ಲಾಂದ್ರೆ ಅವರನ್ನು ಬದಲಾಯಿಸೋ ಸ್ವಾತಂತ್ರ್ಯವೂ ಅವರಿಗಿದೆ.
ನಮ್ಮ ಸಂಸ್ಕೃತಿಯಲ್ಲಿ, ವಿವಾಹವು ಜೀವನಕ್ಕೆ (married life) ತುಂಬಾನೆ ಪ್ರಾಮುಖ್ಯತೆ ಇದೆ,ಮದುವೆಯ ಜೊತೆಗೆ ಅನೇಕ ಪದ್ಧತಿ, ಸಂಪ್ರದಾಯಗಳು ಸಹ ಕನೆಕ್ಟ್ ಆಗುತ್ತವೆ. ಮದುವೆಗೆ ಸಂಬಂಧಿಸಿದ ಸಂಪ್ರದಾಯಗಳು ದೇಶದ ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನವಾಗಿದ್ದರೂ ಸಹ, ಇಂದು ನಾವು ಸಾಮಾನ್ಯ ಸಮಾಜದಿಂದ ಸಂಪೂರ್ಣವಾಗಿ ಭಿನ್ನವಾಗಿರುವ ಬುಡಕಟ್ಟು ಜನಾಂಗದ ಬಗ್ಗೆ ನಿಮಗೆ ಹೇಳುತ್ತೇವೆ. ಇಲ್ಲಿ ಮದುವೆ ಮತ್ತು ಮಕ್ಕಳ ಜನನದ ಸಂಪ್ರದಾಯವು ಸಾಕಷ್ಟು ವಿಭಿನ್ನ ಮತ್ತು ವಿಚಿತ್ರವಾಗಿದೆ.
ಹೌದು, ನಾವೀಗ ಗರಾಸಿಯಾ ಬುಡಕಟ್ಟು ಜನಾಂಗದ (Garasia trible community) ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಇಂದಿಗೂ ಲವ್ ಮ್ಯಾರೇಜ್, ಲಿವ್ ಇನ್ ರಿಲೇಶನ್ ಶಿಪ್, ಮದುವೆಗೂ ಮುನ್ನ ಮಗು ಹೊಂದುವ ಬಗ್ಗೆ ಮಾತನಾಡಲು ಸಹ ಹೆದರುತ್ತೇವೆ ಅಲ್ವಾ? ಆದರೆ ಈ ಬುಡಕಟ್ಟು ಸಮುದಾಯದಲ್ಲಿ ಆ ಲಿವ್-ಇನ್ ರಿಲೇಶನ್ ಶಿಪ್ ತುಂಬಾನೇ ಸಾಮಾನ್ಯವಾಗಿದೆ, ಇದರ ಬಗ್ಗೆ ನಗರಗಳಲ್ಲಿಯೂ ಇನ್ನೂ ಜನ ಬಾಯಿ ಬಿಡೋದೆ ಇಲ್ಲ. ಆದರೆ ಇಲ್ಲಿನ ಜನರು ಈ ಸಂಬಂಧದ ಮೂಲಕ ತಮಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ.
ಈ ಬುಡಕಟ್ಟಿನಲ್ಲಿ, ಪುರುಷರು ಮತ್ತು ಮಹಿಳೆಯರು ಮದುವೆಗೆ ಮುಂಚಿತವಾಗಿಯೇ ಒಟ್ಟಿಗೆ ವಾಸಿಸಲು ಪ್ರಾರಂಭಿಸುತ್ತಾರೆ. ಅಷ್ಟು ಮಾತ್ರವಲ್ಲ, ಅಂತಹ ಸಂಬಂಧದಲ್ಲಿ ವಾಸಿಸುವಾಗ, ಹುಡುಗಿ ಮದುವೆಗೆ ಮೊದಲು ಮಕ್ಕಳಿಗೆ ಜನ್ಮ (giving birth before marriage)ನೀಡುವುದಕ್ಕೆ ಸಹ ಇಲ್ಲಿ ಒಪ್ಪಿಗೆ ಇದೆ. ಬುಡಕಟ್ಟು ಸಮುದಾಯದಲ್ಲಿ ಇದನ್ನು ಕೆಟ್ಟದ್ದೆಂದು ಪರಿಗಣಿಸಲಾಗುವುದಿಲ್ಲ. ಅವರು ಈ ಸಂಬಂಧವನ್ನು ಮತ್ತಷ್ಟು ಕಾಪಾಡಿಕೊಳ್ಳಲು ಬಯಸಿದರೆ, ಪೋಷಕರು ತಮ್ಮ ಮಕ್ಕಳ ಮದುವೆಯನ್ನು ಸಂಭ್ರಮದಿಂದ ಮಾಡುತ್ತಾರೆ.
ಇನ್ನೂ ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ, ಇಲ್ಲಿ ಲಿವ್ ಇನ್ ರಿಲೇಶನ್ ಶಿಪ್ನಲ್ಲಿರಲು (live in relationship), ಮಗು ಮಾಡಿಕೊಳ್ಳಲು ಅಥವಾ ಕುಟುಂಬವನ್ನು ನಡೆಸಲು ಅವರಿಗೆ ಮದುವೆಯ ಸಾಮಾಜಿಕ ಅನುಮೋದನೆಯ ಅಗತ್ಯವಿಲ್ಲ. ಈ ಅಭ್ಯಾಸವು ಈ ಬುಡಕಟ್ಟು ಜನಾಂಗದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಮಕ್ಕಳ ಜನನದ ನಂತರ ಮಹಿಳೆ ತನ್ನ ಸಂಗಾತಿಯನ್ನು ಇಷ್ಟಪಡದಿದ್ದರೆ, ಸಂಗಾತಿಯನ್ನು ಬದಲಾಯಿಸೋದಕ್ಕೂ ಸಹ ಇಲ್ಲಿ ಒಪ್ಪಿಗೆ ಇದೆ.
ಈ ಸಮುದಾಯದಲ್ಲಿ ಮದುವೆಗಾಗಿ ಎರಡು ದಿನಗಳ ಜಾತ್ರೆಯನ್ನು ಆಚರಿಸಲಾಗುತ್ತದೆ. ಈ ಜಾತ್ರೆಯಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಹುಡುಗರು ಮತ್ತು ಹುಡುಗಿಯರು ಸೇರುತ್ತಾರೆ. ಈ ಸಂದರ್ಭದಲ್ಲಿ, ಯುವತಿಯು ಹುಡುಗನನ್ನು ಇಷ್ಟಪಟ್ಟರೆ, ಅವಳು ಅವನೊಂದಿಗೆ ವಾಸಿಸಲು ಪ್ರಾರಂಭಿಸುತ್ತಾಳೆ.
ಗರಾಸಿಯಾ ಬುಡಕಟ್ಟು ಜನಾಂಗದವರು ರಾಜಸ್ಥಾನ ಮತ್ತು ಗುಜರಾತ್ನ (Rajasthan and Gujrath) ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಬಹಳ ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ಕು ಸಹೋದರರಲ್ಲಿ ಮೂವರು ಮದುವೆಯಾಗುವ ಮೂಲಕ ಕುಟುಂಬವನ್ನು ಪ್ರಾರಂಭಿಸಿದರು ಆದರೆ ಅವರಿಗೆ ಮಕ್ಕಳಿರಲಿಲ್ಲವಂತೆ. ಅದೇ ಸಮಯದಲ್ಲಿ, ನಾಲ್ಕನೇ ಸಹೋದರನು ಮದುವೆಯಾಗದೇ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದನು ಮತ್ತು ಮಗುವನ್ನು ಹೊಂದಿದ್ದನು. ಅಂದಿನಿಂದ, ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಬರಲಾಯಿತು ಎನ್ನಲಾಗುತ್ತದೆ.
ಗ್ರೇಸಿಯಾ ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲ. ಅವರು ತಮ್ಮ ಸಂಗಾತಿ ಅಥವಾ ಗಂಡನನ್ನು ಬದಲಾಯಿಸಬಹುದು. ಮೊದಲ ಸಂಗಾತಿಯ ಮರಣದ ನಂತರವೂ, ಅವರು ಎರಡನೇ ಸಂಗಾತಿಯನ್ನು ಆಯ್ಕೆ ಮಾಡಬಹುದು. ಇದು ಒಂದು ರೀತಿಯ ವಿಧವಾ ವಿವಾಹದಂತೆ. ಸರಿಯಾಗಿ ನೋಡಿದರೆ, ಇಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಎಲ್ಲಾ ಹಕ್ಕುಗಳನ್ನು ನೀಡಲಾಗಿದೆ.