ನಮ್ಮ ದೇಶದಲ್ಲಿ ಜನರಿಗೆ ಪಿಂಚಣಿ ಸಿಗುತ್ತೋ ಗೊತ್ತಿಲ್ಲ…. ಆದ್ರೆ ಈ ಮರಕ್ಕೆ ಪೆನ್ಶನ್ ಸಿಗುತ್ತಂತೆ !
ನಮ್ಮ ದೇಶದಲ್ಲಿ ಜನರಿಗೆ ಸರಿಯಾಗಿ ಪಿಂಚಣಿ ಸಿಗುತ್ತೋ ಇಲ್ವೋ? ಗೊತ್ತಿಲ್ಲ, ಆದರೆ ಹರಿಯಾಣ ಸರ್ಕಾರವು ಪ್ರಾಣ ವಾಯು ದೇವತಾ ಯೋಜನೆಯಡಿ ಕೆಲವು ಮರಗಳಿಗೆ ಪಿಂಚಣಿ ನೀಡುತ್ತಿದೆ ಅನ್ನೋದು ನಿಜಾ.
ನಮ್ಮ ದೇಶದಲ್ಲಿ ಸರ್ಕಾರ ಹಲವಾರು ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದಕ್ಕಾಗಿಯೇ ವಿಧವಾ ವೇತನ, ವೃದ್ಧ್ಯಾಪ್ಯ ವೇತನ ಎನ್ನುವ ಪಿಂಚಣಿ (pension) ಸೇವೆ ಸಹ ನೀಡುತ್ತೆ. ಆದರೆ ಇಲ್ಲಿ ಮರಗಳಿಗೂ ಪಿಂಚಣಿ ಸಿಗುತ್ತೆ ಅನ್ನೋದು ಗೊತ್ತಾ?
ಮರಗಳಿಗೆ ಪಿಂಚಣಿ (pension for tree) ಸಿಗುತ್ತದೆ ಎಂದು ಕೇಳಲು ವಿಚಿತ್ರವೆನಿಸಬಹುದು, ಆದರೆ ಹರಿಯಾಣ ಸರ್ಕಾರ ಪ್ರಾಣ ವಾಯು ದೇವತಾ ಯೋಜನೆಯಡಿ ಮರಗಳಿಗೆ ಪಿಂಚಣಿ ನೀಡುತ್ತಿದೆ. ಆದಾಗ್ಯೂ, ಈ ಪಿಂಚಣಿ ಎಲ್ಲಾ ಮರಗಳಿಗೆ ಲಭ್ಯವಿಲ್ಲ. ಹಳೆಯ ಮರಗಳನ್ನು ರಕ್ಷಿಸಲು ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಯಾವ ಮರಗಳು ಪಿಂಚಣಿ ಪಡೆಯುತ್ತವೆ
ಈ ಯೋಜನೆಗಳು ಭಾರತದ ಹರಿಯಾಣ (Haryana) ರಾಜ್ಯದಲ್ಲಿ ಜಾರಿಯಲ್ಲಿವೆ. ಹರಿಯಾಣ ಸರ್ಕಾರವು ಪ್ರಾಣ ವಾಯು ದೇವತಾ ಯೋಜನೆಯಡಿ ಕೆಲವು ಮರಗಳಿಗೆ ಪಿಂಚಣಿ ನೀಡುತ್ತಿದೆ. ಹಳೆಯ ಮರಗಳು ಅಂದರೆ 75 ವರ್ಷಕ್ಕಿಂತ ಹೆಚ್ಚಿಗೆ ವಯಸ್ಸಾದ ಮರಗಳಿಗೆ ಈ ಸೇವೆ ಲಭ್ಯವಿದೆ. ಈ ಯೋಜನೆಯಡಿ, ಅರಳಿ, ಆಲದ ಮರಗಳಂತಹ ಹಳೆಯ ಮರಗಳಿಗೆ ವಾರ್ಷಿಕ ಪಿಂಚಣಿ ನೀಡಲಾಗುತ್ತದೆ.
ಯೋಜನೆಯಡಿ ಎಷ್ಟು ಹಣ ಸ್ವೀಕರಿಸಲಾಗಿದೆ
ಈ ಯೋಜನೆಗೆ ಸಂಬಂಧಿಸಿದಂತೆ, ಹರಿಯಾಣ ಸರ್ಕಾರವು ಸಣ್ಣ ಭೂರಹಿತ ರೈತರ ಆದಾಯವನ್ನು ಹೆಚ್ಚಿಸಲು ಈ ಯೋಜನೆಯನ್ನು ಯೋಜಿಸಿದೆ ಎಂದು ಹೇಳುತ್ತದೆ. ಈ ಮರಗಳನ್ನು ನೋಡಿಕೊಳ್ಳುವ ರೈತರಿಗೆ ವಾರ್ಷಿಕವಾಗಿ 2500 ರೂ.ಗಳ ಪಿಂಚಣಿ ನೀಡುತ್ತದೆ. ಇದು ಆ ರೈತರಿಗೆ ಸ್ವಲ್ಪ ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ ಈ ಒಂದು ಯೋಜನೆಯಿಂದಾಗಿ ಹರಿಯಾಣದ ಜನರು ಮರಗಳನ್ನು ಕಡಿಯುವುದನ್ನು ನಿಲ್ಲಿಸುತ್ತಾರೆ ಎಂಬ ನಂಬಿಕೆ ಕೂಡ ಸರ್ಕಾರಕ್ಕಿದೆ. ಇಲ್ಲಿನ ಜನ ಹೆಚ್ಚಿನ ಮರಗಳನ್ನು ಕಡಿಯುವುದರಿಂದ, ಇಂತಹ ಯೋಜನೆಯಿಂದಾಗಿಯಾದರೂ ಮರಗಳನ್ನು ಉಳಿಸಬಹುದು ಎನ್ನುವ ನಂಬಿಕೆ ಸರ್ಕಾರದ್ದು.
ಕಾಛವಾ ಗ್ರಾಮದ ಜನರು ಇದರ ಲಾಭವನ್ನು ಪಡೆಯುತ್ತಾರೆ
ಮರಗಳ ಸಂರಕ್ಷಣೆಯ ವಿಷಯದಲ್ಲಿ ಕಾಛವಾ ಅಥವಾ ಗೋಲಿ ಗ್ರಾಮಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಈ ಗ್ರಾಮಗಳಲ್ಲಿನ ಹೆಚ್ಚಿನ ಮರಗಳು ಪಿಂಚಣಿ ಯೋಜನೆಯ ಲಾಭ ಪಡೆಯುತ್ತಿವೆ. ಆಮ್ಲಜನಕದ ಗುಣಮಟ್ಟವು (quality of oxygen) ದಿನದಿಂದ ದಿನಕ್ಕೆ ಹದಗೆಡುತ್ತಿರುವ ಈ ಸಮಯದಲ್ಲಿ ಮರಗಳ ರಕ್ಷಣೆಗಾಗಿ ಈ ಯೋಜನೆಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ.