ಚಿತ್ರ-ವಿಚಿತ್ರ ಶುಲ್ಕ ವಿಧಿಸಿ ಜನರಿಂದ ಹಣ ವಸೂಲಿ ಮಾಡೋದನ್ನು ಏರ್‌ಲೈನ್ಸ್‌ಗಳಿಗೆ ಹೇಳಿಕೊಡಬೇಕಾಗಿಲ್ಲ. ಆದ್ರೆ ಇಂಡಿಗೋ ಏರ್‌ಲೈನ್ಸ್‌ ತನ್ನ ಪ್ರಯಾಣಿಕನಿಗೆ ಕ್ಯೂಟ್ ಚಾರ್ಜ್‌ ವಿಧಿಸಿರೋದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಏನಿದು ವಿಚಿತ್ರ ಚಾರ್ಜ್‌. ಇಲ್ಲಿದೆ ಮಾಹಿತಿ.

ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಹಂಚಿಕೊಂಡ ವಿಮಾನ ದರದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಸನ ಶುಲ್ಕಗಳು, ಅನುಕೂಲಕರ ಶುಲ್ಕಗಳು, ವಿಮಾನ ನಿಲ್ದಾಣದ ಭದ್ರತಾ ಶುಲ್ಕಗಳು ಮತ್ತು ಬಳಕೆದಾರರ ಅಭಿವೃದ್ಧಿ ಶುಲ್ಕಗಳ ಜೊತೆಗೆ, ಇಂಡಿಗೋ ಪ್ರಯಾಣಿಕರಿಗೆ 'ಕ್ಯೂಟ್ ಚಾರ್ಜ್‌' ಎಂಬ ಹೆಸರಿನಲ್ಲಿಯೂ ಶುಲ್ಕವನ್ನು ವಿಧಿಸಿದೆ. ಜುಲೈ 10ರಂದು, ಪ್ರಯಾಣಿಕರು ತಮ್ಮ ವಿಮಾನ ಟಿಕೆಟ್‌ನ ಬೆಲೆ ಸಾರಾಂಶದ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಯಾಣಿಕರು ಟ್ವೀಟ್‌ ಸಾರಾಂಶದಲ್ಲಿ, 'ಮುದ್ದಾದ ಚಾರ್ಜ್'ನ್ನು ಹೈಲೈಟ್ ಮಾಡಿದ್ದಾರೆ. ಇದಕ್ಕೆ ಪ್ರಯಾಣಿಕರು ಶೀರ್ಷಿಕೆಯಾಗಿ 'ನಾನು ವಯಸ್ಸಿಗೆ ತಕ್ಕಂತೆ ಮುದ್ದಾಗಿದ್ದೇನೆ ಎಂದು ನನಗೆ ತಿಳಿದಿದೆ. ಆದರೆ ಇಂಡಿಗೋ ನನಗೆ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ ಎಂದು ಎಂದಿಗೂ ಯೋಚಿಸಲಿಲ್ಲ' ಎಂದು ಹಾಸ್ಯವಾಗಿ ಬರೆದುಕೊಂಡಿದ್ದಾರೆ. 

ಇತಿಹಾಸದ ಅತಿದೊಡ್ಡ ವಿಮಾನ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್‌ಇಂಡಿಯಾ!

ಇಂಡಿಗೋ ಪ್ರಯಾಣಿಕನಿಗೆ ಕ್ಯೂಟ್ ಚಾರ್ಜ್‌
ಶಂತನು ತನ್ನ ಟ್ವೀಟ್ (Tweet) ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ತಿಳಿದಿರಲಿಲ್ಲ. ಚಾರ್ಜ್‌ ಹಾಕಿದ ಒಂದು ದಿನದ ನಂತರ, ಅವರು ಟ್ವೀಟ್ ಮಾಡಿದ್ದಾರೆ. ಈ ವಿಷಯ ರಾತ್ರೋರಾತ್ರಿ ಸಾಕಷ್ಟು ಗಮನ ಸೆಳೆದಿದೆ ಎಂದು ತೋರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಮುದ್ದಾದ ಚಾರ್ಜ್ (Cute charge) ಎಂದರೇನು ಎಂಬ ವಿಷಯದ ಬಗ್ಗೆ ಇಂಟರ್‌ನೆಟ್ ಬಳಕೆದಾರರಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿವೆ. ಸಾಮಾನ್ಯ ಬಳಕೆದಾರರ ಟರ್ಮಿನಲ್ ಸಲಕರಣೆಗಳನ್ನು ಕ್ಯೂಟ್ ಎಂದು ಉಲ್ಲೇಖಿಸಲಾಗುತ್ತದೆ. ಮೆಟಲ್ ಡಿಟೆಕ್ಟರ್‌ಗಳು, ಎಸ್ಕಲೇಟರ್‌ಗಳು ಮತ್ತು ಇತರ ವಿಮಾನ ನಿಲ್ದಾಣದ ಸೌಕರ್ಯಗಳನ್ನು ಬಳಸುವುದಕ್ಕಾಗಿ ಪ್ರಯಾಣಿಕರಿಗೆ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ವಿಧಿಸುವ ಸಾಮಾನ್ಯ ಶುಲ್ಕವಾಗಿದೆ. 

Scroll to load tweet…

ಇದೆಲ್ಲದರ ಹೊರತಾಗಿಯೂ, ಶಂತನು ಪೋಸ್ಟ್ ಮಾಡಿರುವ ಟ್ವೀಟ್ ಸಾಕಷ್ಟು ​​ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ಘಟಕವು ಏನೆಂದು ವಿವರಿಸಲು ಕೆಲವು ಜನರು ಪ್ರಯತ್ನಿಸಿದರು. ವೈರಲ್ ಆಗಿರುವ ಟ್ವಿಟರ್ ಪೋಸ್ಟ್‌ಗೆ ನೂರಾರು ರೀಟ್ವೀಟ್‌ಗಳು ಮತ್ತು 8900 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಬ್ಯಾಗ್‌ ಬದಲಾಗಿದ್ದಕ್ಕೆ ಇಂಡಿಗೋ ಏರ್‌ವೇಸ್‌ನ ವೆಬ್‌ಸೈಟ್‌ ಹ್ಯಾಕ್‌
ಪ್ರಯಾಣದ ವೇಳೆ ಅದಲು ಬದಲಾಗಿದ್ದ ಬ್ಯಾಗನ್ನು ಹಿಂಪಡೆದುಕೊಳ್ಳಲು ಪ್ರಯಾಣಿಕರೊಬ್ಬರು ಇಂಡಿಗೋ ವೆಬ್‌ಸೈಟನ್ನೇ ಹ್ಯಾಕ್‌ (Hack) ಮಾಡಿರುವ ಘಟನೆ ಕೆಲ ತಿಂಗಳ ಹಿಂದೆ ನಡೆದಿತ್ತು. .ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಬೆಂಗಳೂರಿನ ಕುಮಾರ್‌ ಎಂಬವರು ಪಟನಾದಿಂದ(Patna) ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಮನೆಗೆ ತೆರಳಿದ ನಂತರ ಬ್ಯಾಗ್‌ ಅದಲು ಬದಲಾಗಿದೆ. ಎರಡೂ ಬ್ಯಾಗುಗಳೂ ಒಂದೇ ತರ ಇದ್ದಿದ್ದುದ್ದರಿಂದ ಈ ಅಚಾತುರ್ಯ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ. ತಕ್ಷಣ ಇಂಡಿಗೋ ಕಸ್ಟಮರ್‌ ಕೇರ್‌ ಸಂಪರ್ಕಿಸಿ ಹಲವು ಬಾರಿ ಕರೆ ಮಾಡಿ, ಉದ್ದುದ್ದ ಸರತಿಯಲ್ಲಿ ನಿಂತು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪ್ರಯಾಣಿಕರ ಮಾಹಿತಿ ಒದಗಿಸಿ ಎಂದರೂ ವಿಮಾನಯಾನ ಸಂಸ್ಥೆ ಗೌಪ್ಯತೆ ಕಾರಣದಿಂದ ಒದಗಿಸಿಲ್ಲ.

150 ನಿಮಿಷದಲ್ಲಿ ಗುಜರಾತಿಂದ ಮುಂಬೈಗೆ ಜೀವಂತ ಹೃದಯ ರವಾನೆ: ಇಂಡಿಗೋ ಕಾರ್ಯಕ್ಕೆ ಶ್ಲಾಘನೆ

ಇದರಿಂದ ನಿರಾಶರಾದ ಕುಮಾರ್‌ ಸ್ವತಃ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಹ್ಯಾಕ್‌ ಮಾಡಿ, ಸಹ ಪ್ರಯಾಣಿಕರ ಪಿಎನ್‌ಆರ್‌ ನಂಬರ್‌ ಪತ್ತೆ ಹಚ್ಚಿ, ವಿಳಾಸ ಪಡೆದು ಬ್ಯಾಗ್‌ ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಕುಮಾರ್‌ ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಕಂಪ್ಯೂಟರ್‌ನ ಎಫ್‌12 ಬಟನ್‌ ಒತ್ತಿದೆ. ಕೂಡಲೇ ವೆಬ್‌ಸೈಟಿನ ಡೆವಲಪರ್‌ ಕನ್ಸೋಲ್‌ ತೆರೆಯಿತು.

ಬಳಿಕ ಚೆಕ್‌-ಇನ್‌, ಪ್ರಯಾಣಿಕರು ವಿಳಾಸ, ಫೋನ್‌ ನಂಬರ್‌, ಪಿಎನ್‌ಆರ್‌ ನಂಬರ್‌ ಸೇರಿದಂತೆ ಅನೇಕ ಮಾಹಿತಿಗಳು ಲಭ್ಯವಾಯಿತು ಎಂದು ತಿಳಿಸಿದ್ದರು. ಈ ಟ್ವೀಟ್‌ ಎಲ್ಲೆಡೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಡಿಗೋ, ‘ಡೇಟಾ ಗೌಪ್ಯತೆಗೆ(Data Privacy) ಸಂಸ್ಥೆಯು ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ತಿಳಿಸಿತ್ತು.